ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

WTC final: ಕಪ್ಪು ಪಟ್ಟಿ ಧರಿಸಿ ಮೈದಾನಕ್ಕಿಳಿದ ಟೀಮ್ ಇಂಡಿಯಾ

WTC final: Virat Kohli and Team dons black armbands to honour late Milkha Singh
ಕಪ್ಪು ಪಟ್ಟಿ ಧರಿಸಿ ಮೈದಾನಕ್ಕಿಳಿದ Team India | Oneindia Kannada

ಸೌತಾಂಪ್ಟನ್: ಇಂಗ್ಲೆಂಡ್‌ನ ಸೌತಾಂಪ್ಟನ್‌ನಲ್ಲಿರುವ ಏಜಸ್ ಬೌಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ-ನ್ಯೂಜಿಲೆಂಡ್‌ ನಡುವಿನ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪಡೆ ಕಪ್ಪು ಪಟ್ಟಿ ಧರಿಸಿ ಮೈದಾನಕ್ಕಿಳಿದಿದೆ. ನಿಧನರಾಗಿರುವ ಭಾರತದ ದಿಗ್ಗಜ ಅಥ್ಲೀಟ್ ಮಿಲ್ಖಾ ಸಿಂಗ್‌ಗೆ ಗೌರವ ಸೂಚಿಸಿ ಭಾರತೀಯ ಕ್ರಿಕೆಟ್ ತಂಡ ಕಪ್ಪು ಪಟ್ಟಿ ಧರಿಸಿದೆ.

WTC Final: ಟಾಸ್‌ಗೆ ಮುನ್ನ ತಂಡವನ್ನು ಬದಲಾಯಿಸಿ: ಸುನಿಲ್ ಗವಾಸ್ಕರ್ ನೀಡಿದ ಈ ಸಲಹೆಗೆ ಕಾರಣವೇನು?WTC Final: ಟಾಸ್‌ಗೆ ಮುನ್ನ ತಂಡವನ್ನು ಬದಲಾಯಿಸಿ: ಸುನಿಲ್ ಗವಾಸ್ಕರ್ ನೀಡಿದ ಈ ಸಲಹೆಗೆ ಕಾರಣವೇನು?

ಜೂನ್ 18ರಿಂದ ಜೂನ್ 22ರ ವರೆಗೆ ಈ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯ ನಡೆಯಲಿದೆ. ಮೊದಲ ದಿನ ಶುಕ್ರವಾರ ಸೌತಾಂಪ್ಟನ್‌ನಲ್ಲಿ ವಿಪರೀತ ಮಳೆ ಸುರಿದಿದ್ದರಿಂದ ಟಾಸ್ ಕೂಡ ನಡೆಯದೆ ಮೊದಲ ದಿನದ ಆಟ ಕೊನೆಗೊಂಡಿತ್ತು. ಶನಿವಾರ ಎಂದಿನಂತೆ 3 PMಗೆ ಪಂದ್ಯ ಆರಂಭಗೊಂಡಿದೆ.

WTC Final, ಭಾರತ vs ನ್ಯೂಜಿಲೆಂಡ್, Live ಸ್ಕೋರ್‌

1
50883

91 ವರ್ಷ ವಯಸ್ಸಾಗಿದ್ದ ಮಿಲ್ಖಾ ಸಿಂಗ್ ಚಂಡೀಗಢದ ಆಸ್ಪತ್ರೆಯಲ್ಲಿ ಕೋವಿಡ್‌-19ನಿಂದಾಗಿ ಕೊನೆಯುಸಿರೆಳೆದಿದ್ದರು. ಅಗಲಿದ ಅಥ್ಲೀಟ್‌ಗೆ ಭಾರತೀಯ ಕ್ರೀಡಾಪಟುಗಳು, ರಾಜಕಾರಣಿಗಳು, ಸಿನಿಮಾ ತಾರೆಯರು ಸಂತಾಪ ಸೂಚಿಸಿದ್ದಾರೆ. ಸದ್ಯ ಇಂಗ್ಲೆಂಡ್‌ನಲ್ಲಿರುವ ಭಾರತೀಯ ಮಹಿಳಾ ಮತ್ತು ಪುರುಷರ ತಂಡ ಕೂಡ ಕಪ್ಪು ಪಟ್ಟಿ ಧರಿಸಿ ಮೈದಾನಕ್ಕಿಳಿದಿದೆ.

ಫ್ಲೈಯಿಂಗ್ ಸಿಖ್ ಮಿಲ್ಖಾ ಸಿಂಗ್ ರೋಮ್ ಒಲಿಂಪಿಕ್ಸ್‌ನಲ್ಲಿ ಓಡಿರುವ ರೋಚಕ ವಿಡಿಯೋಫ್ಲೈಯಿಂಗ್ ಸಿಖ್ ಮಿಲ್ಖಾ ಸಿಂಗ್ ರೋಮ್ ಒಲಿಂಪಿಕ್ಸ್‌ನಲ್ಲಿ ಓಡಿರುವ ರೋಚಕ ವಿಡಿಯೋ

ಇಂಗ್ಲೆಂಡ್‌ನಲ್ಲಿರುವ ಭಾರತದ ಪುರುಷರು ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್ ಬಳಿಕ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್‌ ಸರಣಿ ಆಡಲಿದೆ. ಮಹಿಳಾ ಕ್ರಿಕೆಟ್ ತಂಡ ಸದ್ಯ ಇಂಗ್ಲೆಂಡ್ ವಿರುದ್ಧ ಏಕಮಾತ್ರ ಟೆಸ್ಟ್‌ ಪಂದ್ಯ ಆಡುತ್ತಿದೆ. ಅದಾಗಿ ಮೂರು ಟಿ20ಐ ಮತ್ತು ಮೂರು ಏಕದಿನ ಪಂದ್ಯಗಳನ್ನು ಆಡಲಿದೆ. ಟಾಸ್ ಗೆದ್ದಿರುವ ನ್ಯೂಜಿಲೆಂಡ್ ಬೌಲಿಂಗ್ ಆಯ್ದುಕೊಂಡಿದೆ.

Story first published: Saturday, June 19, 2021, 16:19 [IST]
Other articles published on Jun 19, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X