ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಎಂಎಸ್ ಧೋನಿ ಹೆಸರಿನಲ್ಲಿದ್ದ ದಾಖಲೆ ಸರಿಗಟ್ಟಿದ ವಿರಾಟ್ ಕೊಹ್ಲಿ

WTC Final: Virat Kohli surpass MS Dhoni to lead India for record 61st time in Test Cricket
Dhoni ದಾಖಲೆ ಮುರಿದುಹಾಕಿದ Kohli | Oneindia Kannada

ಸೌತಾಂಪ್ಟನ್: ಭಾರತದ ಮಾಜಿ ನಾಯಕ, ಕೂಲ್ ಕ್ಯಾಪ್ಟನ್ ಖ್ಯಾತಿಯ ಎಂಎಸ್ ಧೋನಿ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಭಾರತದ ಈಗಿನ ನಾಯಕ ವಿರಾಟ್ ಕೊಹ್ಲಿ ಸರಿಗಟ್ಟಿದ್ದಾರೆ. ಸೌತಾಂಪ್ಟನ್‌ನ ಏಜಸ್‌ಬೌಲ್ ಸ್ಟೇಡಿಯಂನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಮಧ್ಯೆ ನಡೆಯುತ್ತಿರುವ ಐಸಿಸಿ ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯದಲ್ಲಿ ರನ್ ಮಷೀನ್ ಕೊಹ್ಲಿ ಈ ವಿಶಿಷ್ಠ ಸಾಧನೆಗೆ ಕಾರಣರಾಗಿದ್ದಾರೆ.

ಡಾನ್ ಬ್ರಾಡ್ಮನ್ ಬಗ್ಗೆ ತಿಳಿಯಬೇಕಾದ 5 ಕುತೂಹಲಕಾರಿ ಸಂಗತಿಗಳು!ಡಾನ್ ಬ್ರಾಡ್ಮನ್ ಬಗ್ಗೆ ತಿಳಿಯಬೇಕಾದ 5 ಕುತೂಹಲಕಾರಿ ಸಂಗತಿಗಳು!

ಸೌತಾಂಪ್ಟನ್‌ನಲ್ಲಿ ಶನಿವಾರ (ಜೂನ್ 19) ಆರಂಭಗೊಂಡ ಭಾರತ-ನ್ಯೂಜಿಲೆಂಡ್ ನಡುವಿನ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮೈದಾನಕ್ಕೆ ಕಾಲಿಡುತ್ತಲೇ ಅವರ ಹೆಸರಿನಲ್ಲಿ ದಾಖಲೆ ನಿರ್ಮಾಣವಾಗಿದೆ.

1
50883
ಧೋನಿ ದಾಖಲೆ ಬದಿಗೆ

ಧೋನಿ ದಾಖಲೆ ಬದಿಗೆ

ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತೀಯ ತಂಡವನ್ನು ಅತೀ ಹೆಚ್ಚು ಬಾರಿ ಮುನ್ನಡೆಸಿದ ಅಪರೂಪದ ದಾಖಲೆ ಎಂಎಸ್ ಧೋನಿ ಹೆಸರಿನಲ್ಲಿತ್ತು. ಒಟ್ಟು 60 ಸಾರಿ ಟೆಸ್ಟ್ ತಂಡದ ನಾಯಕತ್ವ ವಹಿಸಿದ್ದ ಧೋನಿ ಈ ದಾಖಲೆ ನಿರ್ಮಿಸಿದ್ದರು. ಆದರೆ ವಿರಾಟ್ ಕೊಹ್ಲಿ ಶನಿವಾರ ಮೈದಾನಕ್ಕಿಳಿಯುತ್ತಲೇ ಅವರು ಭಾರತೀಯ ಟೆಸ್ಟ್ ತಂಡಕ್ಕೆ 61 ಬಾರಿ ನಾಯಕತ್ವ ವಹಿಸಿಕೊಂಡಂತಾಗಿದೆ. ಹೀಗಾಗಿ ಧೋನಿ ದಾಖಲೆ ಬದಿಗೆ ಸರಿದಿದೆ. 2014ರಲ್ಲಿ ಧೋನಿ ಟೆಸ್ಟ್‌ನಿಂದ ನಿವೃತ್ತಿಯಾಗುವಾಗ 60 ಪಂದ್ಯಗಳಲ್ಲಿ ತಂಡ ಮುನ್ನಡೆಸಿದ್ದರು.

ಸ್ಮಿತ್ ಹೆಸರಲ್ಲಿ ವಿಶ್ವ ದಾಖಲೆ

ಸ್ಮಿತ್ ಹೆಸರಲ್ಲಿ ವಿಶ್ವ ದಾಖಲೆ

ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಸಾರಿ ತಂಡವನ್ನು ಮುನ್ನಡೆಸಿದ ವಿಶ್ವ ದಾಖಲೆ ದಕ್ಷಿಣ ಆಫ್ರಿಕಾದ ದಂತಕತೆ ಗ್ರೇಮ್‌ ಸ್ಮಿತ್ ಹೆಸರಿನಲ್ಲಿದೆ. ಸ್ಮಿತ್ ದಕ್ಷಿಣ ಆಫ್ರಿಕಾ ಟೆಸ್ಟ್ ತಂಡವನ್ನು ಒಟ್ಟು 109 ಸಾರಿ ಮುನ್ನಡೆಸಿದ್ದರು. ಟೆಸ್ಟ್‌ ತಂಡವೊಂದಕ್ಕೆ 100ಕ್ಕೂ ಸಾರಿ ನಾಯಕತ್ವ ವಹಿಸಿದ ಒಬ್ಬನೇ ಒಬ್ಬ ಆಟಗಾರ ಸ್ಮಿತ್. ಅದು ಬಿಟ್ಟರೆ ಆಸ್ಟ್ರೇಲಿಯಾದ ಅಲನ್ ಬಾರ್ಡರ್ 93 ಸಾರಿ, ಕೊಹ್ಲಿ 61 ಸಾರಿ, ಧೋನಿ 60 ಸಾರಿ, ಪಾಕಿಸ್ತಾನ ಮಿಸ್ಬಾ ಉಲ್ ಹಕ್ ಮತ್ತು ಶ್ರೀಲಂಕಾದ ಅರ್ಜುನ ರಣತುಂಗ 56 ಬಾರಿ ನಾಯಕತ್ವ ವಹಿಸಿಕೊಂಡಿದ್ದರು.

ಭಾರತದ ಪ್ರಮುಖ ವಿಕೆಟ್‌ಗಳು ಪತನ

ಭಾರತದ ಪ್ರಮುಖ ವಿಕೆಟ್‌ಗಳು ಪತನ

ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯ ಅಸಲಿಗೆ ಜೂನ್ 18ರ ಶುಕ್ರವಾರ ಆರಂಭವಾಗಬೇಕಿತ್ತು. ಆದರೆ ಆ ದಿನ ಸೌತಾಂಪ್ಟನ್‌ನಲ್ಲಿ ವಿಪರೀತ ಮಳೆಯಾಗಿದ್ದರಿಂದ ಪಂದ್ಯ ಶುರುವಾಗಿರಲಿಲ್ಲ. ಶನಿವಾರ ಪಂದ್ಯ ಶುರುವಾಗಿದ್ದು, ಟಾಸ್ ಗೆದ್ದಿರುವ ನ್ಯೂಜಿಲೆಂಡ್ ಬೌಲಿಂಗ್ ಆಯ್ದುಕೊಂಡಿದೆ. ಭಾರತ 56 ಓವರ್‌ ಮುಕ್ತಾಯದ ವೇಳೆಗೆ ಪ್ರಮುಖ ಮೂರು ವಿಕೆಟ್‌ಗಳನ್ನು ಕಳೆದು ಆಡುತ್ತಿತ್ತು.

Story first published: Saturday, June 19, 2021, 20:07 [IST]
Other articles published on Jun 19, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X