ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

WTC Final: ವೀರೇಂದ್ರ ಸೆಹ್ವಾಗ್ 'ಮೂಡ್ ಸ್ವಿಂಗ್' ಆಗಲು ಕಾರಣ?

WTC Final: Virender Sehwags funny comment on Indian bowlers lack of swing in Southampton

ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿದೆ. ಸದ್ಯ ನ್ಯೂಜಿಲೆಂಡ್ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ನಡೆಸುತ್ತಿದೆ. ಈ ಸಂದರ್ಭದಲ್ಲಿ ಭಾರತೀಯ ಬೌಲರ್‌ಗಳು ನಿರೀಕ್ಷಿತ ಪ್ರಮಾಣದ ಪರಿಣಾಮವನ್ನು ನ್ಯೂಜಿಲೆಂಡ್ ದಾಮಡಿಗರ ಮೇಲೆ ಬೀರಲು ವಿಫಲರಾಗಿದ್ದರೆ. ಆದರಲ್ಲೂ ಸೌಥಾಂಪ್ಟನ್‌ನ ಪಿಚ್‌ನಲ್ಲಿ ಭಾರತೀಯ ವೇಗಿಗಳಿಂದ ಸ್ವಿಂಗ್ ಎಸೆತಗಳ ಕೊರತೆ ನ್ಯೂಜಿಲೆಂಡ್ ದಾಂಡಿಗರಿಗೆ ಕ್ರೀಸ್‌ನಲ್ಲಿ ತಳವೂರಲು ಅವಕಾಶ ಮಾಡಿಕೊಟ್ಟಿದೆ.

ಈ ಹಿನ್ನೆಲೆಯಲ್ಲಿ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಟ್ವೀಟ್‌ನಲ್ಲಿ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. ಭಾರತೀಯ ವೇಗಿಗಳ ಕುರಿತು ಮಾಡಿದ ಈ ಟ್ವೀಟ್ ಸಾಕಷ್ಟು ವೈರಲ್ ಆಗಿದ್ದು ಸಾಕಷ್ಟು ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ.

WTC Final: ನ್ಯೂಜಿಲೆಂಡ್ ಪರ 8 ದಶಕಗಳ ಹಿಂದಿನ ದಾಖಲೆ ಮುರಿದ ಕೈಲ್ ಜ್ಯಾಮಿಸನ್WTC Final: ನ್ಯೂಜಿಲೆಂಡ್ ಪರ 8 ದಶಕಗಳ ಹಿಂದಿನ ದಾಖಲೆ ಮುರಿದ ಕೈಲ್ ಜ್ಯಾಮಿಸನ್

ಮಾಜಿ ಕ್ರಿಕೆಟಿಗ ಕೇವಲ ಒಂದೇ ಸಾಲಿನ ಟ್ವೀಟ್‌ನಲ್ಲಿ ತಮ್ಮ ಅಭಿಪ್ರಾಯವನ್ನು ತಮಾಷೆಯಾಗಿ ವ್ಯಕ್ತಪಡಿಸಿದ್ದಾರೆ. "ಮೂಡ್ ಸ್ವಿಂಗ್ ಆಗುತ್ತಿದೆ, ಆದರೆ ಚೆಂಡು ಆಗುತ್ತಿಲ್ಲ" ಎಂದು ವೀರೇಂದ್ರ ಸೆಹ್ವಾಗ್ ತಮ್ಮ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

ಶುಕ್ರವಾರ ಮಳೆಯಿಂದಾಗಿ ಪಂದ್ಯ ಸಂಪೂರ್ಣ ವ್ಯರ್ಥವಾದ ನಂತರ ಶನಿವಾರ ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ನ್ಯೂಜಿಲೆಂಡ್ ಬೌಲರ್‌ಗಳು ತೀಕ್ಷ್ಣ ದಾಳಿಯನ್ನು ನಡೆಸಿದ್ದರು. ಅದರಲ್ಲೂ ಪಿಚ್‌ಅನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಸಾಕಷ್ಟು ಸ್ವಿಂಗ್ ಎಸೆತಗಳನ್ನು ಎಸೆಯುವ ಮೂಲಕ ಭಾರತೀಯ ಬ್ಯಾಟ್ಸ್‌ಮನ್‌ಗಳು ಕಂಗೆಡುವಂತೆ ಮಾಡಿದರು. ಆದರೆ ಭಾರತೀಯ ಬೌಲರ್‌ಗಳಿಗೆ ಈ ಅವಕಾಶ ಇದ್ದರೂ ಸ್ವಿಂಗ್ ವಿಚಾರದಲ್ಲಿ ಪರಿಣಾಮಕಾರಿಯಾಗಿರಲಿಲ್ಲ. ಇದಕ್ಕೆ ಭಾರತೀಯ ಅಭಿಮಾನಿಗಳು ಹಾಗೂ ಕ್ರಿಕೆಟ್ ಪಂಡಿತರು ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ.

ಸದ್ಯ ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ನಡೆಸಲು ನ್ಯೂಜಿಲೆಂಡ್ ತಂಡ ಆರಂಭಿಸಿದ್ದು ಉತ್ತಮ ಆರಂಭವನ್ನು ಪಡೆದಿದೆ. ಆರಂಭಿಕರಿಬ್ಬರು ವಿಕೆಟ್ ಕಳೆದುಕೊಂಡಿದ್ದು 101 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿದೆ. ನಾಯಕ ಕೇನ್ ವಿಲಿಯಮ್ಸನ್ ಹಾಗೂ ರಾಸ್ ಟೇಲರ್ ಕ್ರೀಸ್ ಕಾಯ್ದುಕೊಂಡಿದ್ದಾರೆ.

Story first published: Monday, June 21, 2021, 9:56 [IST]
Other articles published on Jun 21, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X