ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

WTC Final: ನಾಲ್ಕನೇ ದಿನದಾಟಕ್ಕೆ ಮಳೆಯಿಂದ ಅಡ್ಡಿ ಸಾಧ್ಯತೆ

WTC Final: weather Update, Southampton rain update, June 21
Ind vs NZ ನಾಲ್ಕನೇ ದಿನದಾಟ ಸಂಪೂರ್ಣವಾಗಿ ಮಳೆಯಿಂದ ಕೊಚ್ಚಿಹೋಗಲಿದೆ | Oneindia Kannada

ಸೌಥಾಂಪ್ಟನ್ ಜೂನ್ 21: ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದ ನಾಲ್ಕನೇ ದಿನ ಮಳೆಯಿಂದ ಕೊಚ್ಚಿ ಹೋಗುವ ಆತಂಕ ಕಾಣಿಸುತ್ತಿದೆ. ಹವಾಮಾನ ಮುನ್ಸೂಚನೆಯ ಪ್ರಕಾರ ಜೂನ್ 21ರಂದು ಸೌಥಾಂಪ್ಟನ್‌ನಲ್ಲಿ ದಿನವಿಡೀ ಮಳೆ ಸುರಿಯುವ ಸಾಧ್ಯತೆಯಿದೆ.

ಶುಕ್ರವಾರದಿಂದ ಆರಂಭವಾದ ಈ ಐತಿಹಾಸಿಕ ಪಂದ್ಯಕ್ಕೆ ಆರಂಭಿಕ ದಿನದಿಂದಲೂ ಭಾರೀ ಹಿನ್ನಡೆಯುಂಟು ಮಾಡಿದೆ. ಮೊದಲ ದಿನ ಸಂಪೂರ್ಣ ಮಳೆಯಿಂದ ವ್ಯರ್ಥವಾಗಿತ್ತು. ಈ ಮೂಲಕ ಶನಿವಾರ ಪಂದ್ಯಕ್ಕೆ ಚಾಲನೆ ದೊರೆಯಿತು. ಶನಿವಾರವೂ ಪೂರ್ಣ ಪ್ರಮಾಣದಲ್ಲಿ ಪಂದ್ಯಕ್ಕೆ ಮಳೆ ಹಾಗೂ ಮಂದಬೆಳಕು ಅವಕಾಶವನ್ನು ನೀಡಿರಲಿಲ್ಲ.

WTC Final: ನ್ಯೂಜಿಲೆಂಡ್ ಪರ 8 ದಶಕಗಳ ಹಿಂದಿನ ದಾಖಲೆ ಮುರಿದ ಕೈಲ್ ಜ್ಯಾಮಿಸನ್WTC Final: ನ್ಯೂಜಿಲೆಂಡ್ ಪರ 8 ದಶಕಗಳ ಹಿಂದಿನ ದಾಖಲೆ ಮುರಿದ ಕೈಲ್ ಜ್ಯಾಮಿಸನ್

ಇನ್ನು ಭಾನುವಾರವೂ ಮಳೆಯ ಕಾರಣದಿಂದಾಗಿ ಅರ್ಧ ಗಂಟೆ ತಡವಾಗಿ ಪಂದ್ಯ ಆರಂಭವಾಗಿತ್ತು. ಪಂದ್ಯದ ನಡುವೆ ಕೆಲ ಕಾಲ ಮಳೆ ಸುರಿಯಿತಾದರೂ ಅದರಿಂದ ಹೆಚ್ಚಿನ ಅಡ್ಡಿಯಾಗಲಿಲ್ಲ. ಆದರೆ ಅಂತಿಮ ಹಂತದಲ್ಲಿ ಮಂದಬೆಳಕಿನ ಕಾರಣ ಮತ್ತೆ ಪೂರ್ಣ ಪ್ರಮಾಣದ ದಿನದಾಟ ಸಾಧ್ಯವಾಗಿರಲಿಲ್ಲ. ಆದರೆ ಭಾನುವಾರ 80 ಓವರ್‌ಗಳಷ್ಟು ಪಂದ್ಯ ನಡೆಯಲು ಅವಕಾಶ ದೊರೆತಿತ್ತು.

ಭಾನುವಾರ ರಾತ್ರಿಯಿಡೀ ಸೌಥಾಂಪ್ಟನ್ ನಗರದಲ್ಲಿ ಭಾರೀ ಮಳೆಯಾಗಿರುವ ಕಾರಣ ಔಟ್‌ಫೀಲ್ಡ್ ಸಂಪೂರ್ಣ ನೀರಿನಿಂದ ಕೂಡಿದೆ. ಹೀಗಾಗಿ ನಾಲ್ಕನೇ ದಿನದಾಟ ಕೂಡ ಕನಿಷ್ಟ ಅರ್ಧಗಂಟೆಗಳ ಕಾಲ ತಡವಾಗಿ ಆರಂಭವಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಸೋಮವಾರದ ಆಟಕ್ಕೂ ದಿನವಿಡೀ ಸಂಪೂರ್ಣ ಮೋಡದಿಂದ ಕೂಡಿರಲಿದೆ. ಹೀಗಾಗಿ ಮಂದ ಬೆಳಕು ಕೂಡ ಪಂದ್ಯಕ್ಕೆ ಅಡ್ಡಿಪಡಿಸುವ ಸಾಧ್ಯತೆಯಿದೆ. ಪಂದ್ಯದ ಫಲಿತಾಂಶವನ್ನು ಪಡೆಯುವ ದೃಷ್ಟಿಯಿಂದ ನಾಲ್ಕನೇ ದಿನದಾಟ ಬಹಳ ಮುಖ್ಯ ಪಾತ್ರವಹಿಸಲಿದೆ. ಮಳೆಯಿಂದಾಗಿ ಅಡ್ಡಿಯಾದಲ್ಲಿ ಪಂದ್ಯ ಫಲಿತಾಂಶವನ್ನು ಪಡೆಯುವುದು ಬಹುತೇಕ ಅಸಾಧ್ಯವಾಗಲಿದೆ. ಹೆಚ್ಚುವರಿ ದಿನವನ್ನು ಮೀಸಲಿಟ್ಟಿದ್ದರೂ ದೊಡ್ಡ ಪ್ರಮಾಣದ ಸಮಯವನ್ನು ಮಳೆ ಈಗಾಗಲೇ ವ್ಯರ್ಥಗೊಳಿಸಿರುವುದರಿಂದ ಐತಿಹಾಸಿಕ ಪಂದ್ಯ ನೀರಸ ಡ್ರಾ ಆಗುವ ಆತಂಕ ಕಾಡುತ್ತಿದೆ.

Story first published: Monday, June 21, 2021, 11:49 [IST]
Other articles published on Jun 21, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X