ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಗ್ರೇಟ್‌ವಾಲ್‌-2' ಪೂಜಾರಗೆ ಮುಂದೆ ಭಾರತ ತಂಡದಲ್ಲಿ ಜಾಗ ಇಲ್ವಾ?!

WTC Final: Will Cheteshwar Pujara Dropped From No.3 Batting Position?

ಸೌಥಾಂಪ್ಟನ್: ಟೀಮ್ ಇಂಡಿಯಾದ ಮಾಜಿ ನಾಯಕ, ಕನ್ನಡಿಗ ರಾಹುಲ್ ದ್ರಾವಿಡ್‌ಗೆ 'ಗ್ರೇಟ್‌ವಾಲ್' ಹೆಸರಿತ್ತು. ಗೋಡೆಯ ಹಾಗೆ ನಿಂತು ದ್ರಾವಿಡ್ ಎಷ್ಟೋ ಸಾರಿ ಭಾರತ ತಂಡವನ್ನು ಸೋಲಿನ ದವಡೆಯಿಂದ ಪಾರು ಮಾಡಿದ್ದರು. ದ್ರಾವಿಡ್ ಯುಗ ಮುಗಿದ ಬಳಿಕ ಭಾರತದ ಟೆಸ್ಟ್ ಸ್ಪೆಷಾಲಿಸ್ಟ್ ಚೇತೇಶ್ವರ್ ಪೂಜಾರ ಅವರನ್ನು ಅಭಿಮಾನಿಗಳು ಗ್ರೇಟ್‌ವಾಲ್-2 ಎಂದು ಕರೆದಿದ್ದರು. ಆದರೆ ಮುಂದೆ ಭಾರತ ತಂಡದಲ್ಲಿ ಗೋಡೆ-2ಕ್ಕೆ ಜಾಗ ಸಿಗುವುದೇ ಅನುಮಾನ ಎಂಬಂತಾಗಿದೆ.

ವಿರಾಟ್ ಕೊಹ್ಲಿ ಶತಕ ಬಾರಿಸದೆ ಎಷ್ಟು ವರ್ಷಗಳಾಗಿವೆ? ಅಂಕಿ-ಅಂಶಗಳು ಹೇಗಿವೆ ನೋಡಿ!ವಿರಾಟ್ ಕೊಹ್ಲಿ ಶತಕ ಬಾರಿಸದೆ ಎಷ್ಟು ವರ್ಷಗಳಾಗಿವೆ? ಅಂಕಿ-ಅಂಶಗಳು ಹೇಗಿವೆ ನೋಡಿ!

ರಾಹುಲ್ ದ್ರಾವಿಡ್‌ನಂತೆ ಚೇತೇಶ್ವರ್ ಪೂಜಾರ ಕೂಡ ಒಂದಿಷ್ಟು ಪಂದ್ಯಗಳಲ್ಲಿ ತಂಡದ ಬಲವಾಗಿ ನಿಂತಿದ್ದಿದೆ. ಆದರೆ ಇತ್ತೀಚೆಗೆ ಗ್ರೇಟ್‌ವಾಲ್-2 ಶಕ್ತಿಗುಂದಿದಂತಿದೆ. ಪೂಜಾರ ಬ್ಯಾಟಿಂಗ್‌ ಫಾರ್ಮ್ ನಲ್ಲಿ ಇದ್ದಂತೆ ಕಾಣುತ್ತಿಲ್ಲ. ಇತ್ತೀಚೆಗಷ್ಟೇ ಮುಕ್ತಾಯಗೊಂಡು ವಿಶ್ವಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯದಲ್ಲೂ ಪೂಜಾರ ನೀರಸ ಬ್ಯಾಟಿಂಗ್ ಪ್ರದರ್ಶಿಸಿದ್ದರು.

ಅಜಿಂಕ್ಯ ರಹಾನೆಗೂ ಪರೀಕ್ಷೆ

ಅಜಿಂಕ್ಯ ರಹಾನೆಗೂ ಪರೀಕ್ಷೆ

ಭಾರತ ತಂಡದಲ್ಲಿ 3ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ 33ರ ಹರೆಯದ ಪೂಜಾರ ಕ್ರಮವಾಗಿ 8, 15 ರನ್ ಗಳಿಸಿದ್ದರು. ಹೀಗಾಗಿ ಭಾರತ ತಂಡದ ಮಧ್ಯಮ ಕ್ರಮಾಂಕದ ಬಗ್ಗೆ ಅಸಮಾಧಾನ ಕೇಳಿ ಬರತೊಡಗಿದೆ. ಕಳೆದ 18 ಟೆಸ್ಟ್ ಪಂದ್ಯಗಳಲ್ಲಿ ಪೂಜಾರ ಒಂದು ಶತಕ ಕೂಡ ಬಾರಿಸಿಲ್ಲ. ಹೀಗಾಗಿ ಆಯ್ಕೆ ಸಮಿತಿಯಯಲ್ಲಿ ಪೂಜಾರ ಹೆಚ್ಚು ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಜೊತೆಗೆ ರಹಾನೆ ಕೂಡ ಪರೀಕ್ಷೆಗೊಳಗಾಗಲಿದ್ದಾರೆ.

'ಸರಿಯಾದವರನ್ನು ತಂಡಕ್ಕೆ ತರಬೇಕು'

'ಸರಿಯಾದವರನ್ನು ತಂಡಕ್ಕೆ ತರಬೇಕು'

WTC ಫೈನಲ್ ಪಂದ್ಯದ ಬಳಿಕ ಮಾತನಾಡಿದ ಕೊಹ್ಲಿ, "ನಮ್ಮ ತಂಡ ಬಲಪಡಿಸಲು ಅಗತ್ಯವಾದ ವಿಷಯಗಳ ಬಗ್ಗೆ ನಾವು ಮರು ಮೌಲ್ಯಮಾಪನ ಮಾಡುವುದನ್ನು ಮುಂದುವರಿಸುತ್ತೇವೆ ಮತ್ತು ಈ ಬಗ್ಗೆ ಮಾತುಕತೆ ನಡೆಸುತ್ತೇವೆ. ಯಾವ ಡೈನಮಿಕ್ ಆಟ ತಂಡಕ್ಕೆ ಶಕ್ತಿ ತುಂಬಲಿದೆ ಅನ್ನೋದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಸರಿಯಾದ ಮನಸ್ಥಿತಿ ಇರುವವರನ್ನು ನಾವು ತಂಡಕ್ಕೆ ತರಬೇಕಾಗಿದೆ," ಎಂದಿದ್ದಾರೆ.

Shubman Gill ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ ಗಗನ್ | Oneindia Kannada
ತಂಡದಲ್ಲಿ ಪ್ರಮುಖ ಬದಲಾವಣೆ

ತಂಡದಲ್ಲಿ ಪ್ರಮುಖ ಬದಲಾವಣೆ

WTC ಫೈನಲ್‌ ಸೋಲಿನ ಬಳಿಕ ಮುಂದೆ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯ ಟೆಸ್ಟ್‌ ಸರಣಿಯಲ್ಲಿ ಭಾರತ ತಂಡದಲ್ಲಿ ಪ್ರಮುಖ ಬದಲಾವಣೆಗಳಾಗುವ ಸಾಧ್ಯತೆಯಿದೆ. ಇಂಗ್ಲೆಂಡ್-ಭಾರತ ಟೆಸ್ಟ್‌ ಸರಣಿ ಆಗಸ್ಟ್ 4ರಿಂದ ಸೆಪ್ಟೆಂಬರ್‌ 14ರ ವರಗೆ ನಡೆಯಲಿದೆ. ಈ ಟೆಸ್ಟ್‌ ಸರಣಿಯಲ್ಲಿ ಭಾರತದಲ್ಲಿ ಪೂಜಾರಗೆ ಸ್ಥಾನ ಸಿಗುವ ಸಾಧ್ಯತೆ ಕಡಿಮೆಯಿದೆ. ಯಾಕೆಂದರೆ ಸಾಧ್ಯವಾದಷ್ಟು ಯುವ ಆಟಗಾರರಿಗೆ ಹೆಚ್ಚು ಅವಕಾಶ ನೀಡಲು ಭಾರತೀಯ ತಂಡ ನಿರ್ವಹಣಾ ಸಮಿತಿ ಯೋಚಿಸುತ್ತಿದೆ. ಮುಖ್ಯವಾಗಿ ಭಾರತದ ಮಧ್ಯಮ ಕ್ರಮಾಂಕದಲ್ಲಿ ಬದಲಾವಣೆ ನಿರೀಕ್ಷಿತ.

Story first published: Saturday, June 26, 2021, 12:07 [IST]
Other articles published on Jun 26, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X