ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬ್ರಿಟನ್‌ನ ಕೆಂಪು ಪಟ್ಟಿಗೆ ಭಾರತ ಸೇರ್ಪಡೆ, WTC ಫೈನಲ್‌ಗೆ ತೊಡಕು?!

WTC Final will go ahead as planned in June in the UK, says ICC

ದುಬೈ: ಕೋವಿಡ್-19 ವಿಚಾರದಲ್ಲಿ ಭಾರತ 'ಕೆಂಪುಪಟ್ಟಿ'ಯಲ್ಲಿದೆ. ಭಾರತದಿಂದ ಹೊರ ದೇಶಕ್ಕೆ ಪ್ರಯಾಣ ಬಹುತೇಕ ನಿಷೇಧಿಸಲಾಗಿದೆ. ಭಾರತದಿಂದ ಬರುವ ಯುನೈಟೆಡ್ ಕಿಂಗ್ಡಮ್ ನಿವಾಸಿಗಳಿಗೆ ದೇಶ ಪ್ರವೇಶಿಸಿದ ಕೂಡಲೇ 10 ದಿನಗಳ ಕಡ್ಡಾಯ ಕ್ವಾರಂಟೈನ್ ವಿಧಿಸಲಾಗಿದೆ. ಈ ಎಲ್ಲಾ ಬೆಳವಣಿಗೆಗಳಿಂದ ಇಂಟರ್ ನ್ಯಾಷನಲ್ ಕ್ರಿಕೆಟ್‌ ಕೌನ್ಸಿಲ್ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯಕ್ಕೆ ತೊಡಕಾಗಲಿದೆಯಾ?

 ಐಪಿಎಲ್: ಕೆಟ್ಟ ದಾಖಲೆಗೆ ಗಮನ ಎಸೆದ ಋತುರಾಜ್ ಗಾಯಕ್ವಾಡ್ ಐಪಿಎಲ್: ಕೆಟ್ಟ ದಾಖಲೆಗೆ ಗಮನ ಎಸೆದ ಋತುರಾಜ್ ಗಾಯಕ್ವಾಡ್

ಇಲ್ಲ ಎನ್ನುತಿದೆ ಐಸಿಸಿ. ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯಕ್ಕೆ ಯಾವುದೇ ಸಮಸ್ಯೆಯಾಗುವುದಿಲ್ಲ. ಅದು ಹಿಂದಿನ ಯೋಜನೆಯಂತೆ ಜೂನ್‌ನಲ್ಲಿ ಯುನೈಟೆಡ್ ಕಿಂಗ್ಡಮ್‌ನಲ್ಲಿ ನಡೆಯಲಿದೆ ಎಂದು ಐಸಿಸಿ ಹೇಳಿದೆ. WTC ಫೈನಲ್‌ಗೆ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಆಯ್ಕೆಯಾಗಿವೆ.

'ದೇಶವೊಂದು ರೆಡ್‌ ಲಿಸ್ಟ್‌ನಲ್ಲಿ ಇದ್ದಾಗ ಅದರ ಪರಿಣಾಮಗಳು ಏನೇನು ಎಂಬುದನ್ನು ನಾವು ಯುಕೆ ಜೊತೆ ಚರ್ಚಿಸುತ್ತಿದ್ದೇವೆ,' ಎಂದು ಐಸಿಸಿ ತಿಳಿಸಿದೆ. ಭಾರತೀಯ ವನಿತಾ ತಂಡಕ್ಕೂ ಇಂಗ್ಲೆಂಡ್‌ನಲ್ಲಿ ಜೂನ್‌ನಲ್ಲಿ ಪ್ರವಾಸ ಸರಣಿ ನಡೆಯಲಿದೆ. ಭಾರತದ ಪುರುಷರ ತಂಡಕ್ಕೆ ಕೂಡ ಆಗಸ್ಟ್ 4ರಿಂದ 5 ಪಂದ್ಯಗಳ ಟೆಸ್ಟ್‌ ಸರಣಿ ನಡೆಯುವುದರಲ್ಲಿದೆ. WTC ಫೈನಲ್‌ ಜೂನ್ 18ರಿಂದ 22ರ ವರೆಗೆ ನಡೆಯಲಿದೆ.

ಐಪಿಎಲ್ 2021: ಟಿ20 ಕ್ರಿಕೆಟ್‌ ವಿಶ್ವ ದಾಖಲೆ ಬರೆದ ಸಿಎಸ್‌ಕೆ ನಾಯಕ ಎಂಎಸ್ ಧೋನಿಐಪಿಎಲ್ 2021: ಟಿ20 ಕ್ರಿಕೆಟ್‌ ವಿಶ್ವ ದಾಖಲೆ ಬರೆದ ಸಿಎಸ್‌ಕೆ ನಾಯಕ ಎಂಎಸ್ ಧೋನಿ

ಭಾರತದಲ್ಲಿ ದಿನೇ ದಿನೇ ಕೊರೊನಾವೈರಸ್ ಪ್ರಕರಣಗಳು ಆತಂಕಕಾರಿಯಾಗಿ ಹೆಚ್ಚುತ್ತಿದೆ. ಇದರಿಂದಾಗಿ ಸದ್ಯ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಪಾಲ್ಗೊಂಡಿರುವ ವಿದೇಶಿ ಆಟಗಾರರು ತಮ್ಮ ದೇಶಕ್ಕೆ ವಾಪಸ್ಸಾಗುವಾಗ ತೊಡಕಾಗುವ ಸಾಧ್ಯತೆಯಿದೆ. ಆದರೆ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೆ ಸಂಬಂಧಿಸಿ ಸಮಸ್ಯೆ ಬಗೆ ಹರಿಸುವ ವಿಶ್ವಾಸವನ್ನು ಐಸಿಸಿ ವ್ಯಕ್ತಪಡಿಸಿದೆ.

Story first published: Tuesday, April 20, 2021, 14:50 [IST]
Other articles published on Apr 20, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X