WTC Final: ಇದು ನನ್ನ ಜೀವನದ ಪ್ರಮುಖ ಕ್ಷಣ ಎಂದ ರಾಸ್ ಟೇಲರ್

ನನ್ನ ಜೀವನದ ಮರೆಯಲಾಗದ ಕ್ಷಣ ಎಂದ ರಾಸ್ ಟೇಲರ್ | Oneindia Kannada

ಸೌಥಾಂಪ್ಟನ್, ಜೂನ್ 24: ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ಬಳಗ 8 ವಿಕೆಟ್‌ಗಳ ಭರ್ಜರಿಯಾಗಿ ಗೆಲುವು ಸಾಧಿಸಿದೆ. ಅನುಭವಿ ರಾಸ್ ಟೇಲರ್ ಹಾಗೂ ನಾಯಕ ಕೇನ್ ವಿಲಿಯಮ್ಸನ್ ತಂಡಕ್ಕೆ ಹಾನಿಯಾಗದಂತೆ ಗೆಲುವಿನ ದಡ ಮುಟ್ಟಿಸುವಲ್ಲಿ ಯಶಸ್ವಿಯಾದರು. ಈ ಮೂಲಕ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಪಟ್ಟ ನ್ಯೂಜಿಲೆಂಡ್ ಮುಡಿಗೇರಿದೆ.

ಈ ಗೆಲುವಿನ ನಂತರ 108 ಪಂದ್ಯಗಳ ಅನುಭವಿ ರಾಸ್ ಟೇಲರ್ ಟೆಸ್ಟ್ ಚಾಂಪಿಯನ್‌ಶಿಪ್‌ಅನ್ನು ಮುಡಿಗೇರಿಸಿಕೊಂಡ ಈ ಕ್ಷಣ ತನ್ನ ವೃತ್ತಿ ಜೀವನದ ಅತ್ಯಂತ ಮಹತ್ವದ ಕ್ಷಣ ಎಂದಿದ್ದಾರೆ. ರಾಸ್ ಟೇಲರ್ ಎರಡನೇ ಇನ್ನಿಂಗ್ಸ್‌ನಲ್ಲಿ ಅಜೇಯ 47 ರನ್‌ ಬಾರಿಸಿ ಗೆಲುವಿನಲ್ಲಿ ಮಹತ್ವದ ಕಾಣಿಕೆ ನೀಡಿದ್ದಾರೆ. ಈ ಗೆಲುವು 2019ರ ಏಕದಿನ ವಿಶ್ವಕಪ್‌ ಫೈನಲ್‌ನಲ್ಲಿಗೆ ಸೋಲನ್ನು ಮರೆಮಾಡುತ್ತದೆ ಎಂದಿದ್ದಾರೆ.

WTC Final: ನಗದು ಪುರಸ್ಕಾರ, ಕುತೂಹಲಕಾರಿ ದಾಖಲೆಗಳ ಸಂಪೂರ್ಣ ವಿವರWTC Final: ನಗದು ಪುರಸ್ಕಾರ, ಕುತೂಹಲಕಾರಿ ದಾಖಲೆಗಳ ಸಂಪೂರ್ಣ ವಿವರ

"ಭಾರೀ ಪ್ರಮಾಣದಲ್ಲಿ ಮಳೆಯಾಗಿತ್ತು. ಆದರೆ ಆರಂಭದ ದಿನದಿಂದಲೂ ನಾವು ಹೋರಾಡಿದ ರೀತಿ ಕೆಲ ಕಾಲ ನಿರ್ಣಾಯಕ ಸ್ಥಿತಿಯಲ್ಲಿರುವಂತೆ ಮಾಡಿದ್ದನ್ನು ನಾವು ಮರೆಯಲು ಸಾಧ್ಯವಿಲ್ಲ. ಇದು ನನ್ನ ವೃತ್ತಿ ಬದುಕಿನ ಮುಖ್ಯಾಂಶವಾಗಿರಲಿದೆ. ವೃತ್ತಿ ಜೀವನದ ಆರಂಭದಲ್ಲಿ ಇಂಥಾದೊದ್ದು ಸಾಧನೆ ನಮ್ಮಿಂದ ಮಾಡಲು ಸಾಧ್ಯವಿಲ್ಲ ಎಂದು ಭಾವಿಸಿದ್ದೆ. ಈ ಸಾಧನೆಗೆ ಕಿವೀಸ್ ಜನತೆ ಹೆಮ್ಮೆ ಪಡಲಿದೆ. ಸಾಕಷ್ಟು ಒತ್ತಡ ಇತ್ತು. ಆದರೆ ಆ ಒತ್ತಡ ಇದನ್ನು ಸಾಧ್ಯವಾಗಿಸಿದೆ" ಎಂದು ರಾಸ್ ಟೇಲರ್ ಹೇಳಿದ್ದಾರೆ.

ಈ ಪಂದ್ಯದಲ್ಲಿ ನ್ಯೂಜಿಲೆಂಡ್ ಪರವಾಗಿ ವೇಗಿ ಕೈಲ್ ಜೇಮಿಸನ್ ಅದ್ಭುತವಾದ ಪ್ರದರ್ಶನ ನೀಡಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್ ಪಡೆದ ಈ ಅವರು ಎರಡನೇ ಇನ್ನಿಂಗ್ಸ್‌ನಲ್ಲಿ ಎರಡು ವಿಕೆಟ್ ಕಬಳಿಸಿದರು. ಅದರಲ್ಲೂ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಎರಡು ಇನ್ನಿಂಗ್ಸ್‌ನಲ್ಲಿಯೂ ಔಟ್ ಮಾಡುವ ಮೂಲಕ ನ್ಯೂಜಿಲೆಂಡ್ ತಂಡಕ್ಕೆ ಮಹತ್ವದ ಮುನ್ನಡೆಗೆ ಕಾರಣರಾದರು.

For Quick Alerts
ALLOW NOTIFICATIONS
For Daily Alerts
Story first published: Thursday, June 24, 2021, 9:27 [IST]
Other articles published on Jun 24, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X