ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾಕಿಸ್ತಾನ ಯು-19 ತಂಡ ಜೈಸ್ವಾಲ್ ನೋಡಿ ಕಲಿಯಬೇಕಿದೆ: ಶೋಯೆಬ್ ಅಖ್ತರ್

Yashasvi Jaiswal Has Passion, Pakistan Need To Learn From Him: Shoaib Akhtar

ಪಾಕಿಸ್ತಾನ ಅಂಡರ್‌-19 ತಂಡ ಭಾರತದ ವಿರುದ್ಧ ನಡೆದ ಸೆಮಿ ಫೈನಲ್‌ನಲ್ಲಿ ಹೀನಾಯ ಸೋಲು ಕಂಡು ವಿಶ್ವಕಪ್‌ನಿಂದ ಹೊರಬಿದ್ದಿದೆ. ಸೆಮಿ ಫೈನಲ್‌ನಲ್ಲಿ ಟೀಮ್ ಇಂಡಿಯಾ ಕಿರಿಯ ಆಟಗಾರರು ಒಂದೂ ವಿಕೆಟ್ ಕಳೆದುಕೊಳ್ಳದೆ ವಿಜಯವನ್ನು ಸಾಧಿಸಿದರು. ಕಿರಿಯರ ಈ ಸಾಧನೆಗೆ ಹೊಗಳಿಕೆಯ ಸುರಿಮಳೆಯೇ ಸುರಿಯುತ್ತಿದೆ. ಭಾರತದ ಕಿರಿಯರ ಆಟಕ್ಕೆ ಪಾಕಿಸ್ತಾನದ ಮಾಜಿ ಆಟಗಾರನೂ ಮನಸೋತಿದ್ದಾರೆ.

ಪಾಕಿಸ್ತಾನದ ಮಾಜಿ ಆಟಗಾರ ಶೋಯೆಬ್ ಅಖ್ತರ್ ಯಶಸ್ವಿ ಜೈಸ್ವಾಲ್ ಬದ್ಧತೆಯ ಬಗ್ಗೆ ಹೊಗಳಿಕೆಯ ಮಾತನಾಡಿದ್ದಾರೆ. ಪಾಕಿಸ್ತಾನದ ಕಿರಿಯರು ಆತನ ಬದ್ಧತೆಯನ್ನು ನೋಡಿ ಕಲಿಯಬೇಕಿದೆ ಎಂದು ಶೋಯೆಬ್ ಅಖ್ತರ್ ಹೇಳಿದ್ದಾರೆ. ಸೆಮಿ ಫೈನಲ್‌ ಪಂದ್ಯದ ಬಳಿಕ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಶೋಯೆಬ್ ಅಖ್ತರ್ ಈ ಹೇಳಿಕೆ ನೀಡಿದ್ದಾರೆ.

ಜೈ ಹೋ 'ಜೈಸ್ವಾಲ್': ಕಿರಿಯರ ಕ್ರಿಕೆಟ್‌ನಲ್ಲಿ 'ಯಶಸ್ವಿ' ಕಮಾಲ್ಜೈ ಹೋ 'ಜೈಸ್ವಾಲ್': ಕಿರಿಯರ ಕ್ರಿಕೆಟ್‌ನಲ್ಲಿ 'ಯಶಸ್ವಿ' ಕಮಾಲ್

ಪಾಕಿಸ್ತಾನ ತಂಡ ಸೆಮಿಫೈನಲ್ ಪ್ರವೇಶ ಪಡೆದುಕೊಂಡಿದ್ದಕ್ಕೆ ಶೋಯೆಬ್ ಅಖ್ತರ್ ಪಾಕ್ ಕಿರಿಯರ ತಂಡಕ್ಕೆ ಅಭಿನಂದನೆಯನ್ನು ಸಲ್ಲಿಸಿದ್ದು ಉತ್ತಮ ಪ್ರಯತ್ನ ಎಂದಿದ್ದಾರೆ. ಆದರೆ ಇಷ್ಟೇ ಒ್ರಯತ್ನ ಫೈನಲ್ ಪ್ರವೇಶಕ್ಕೆ ಸಾಕಾಗುವುದಿಲ್ಲ ಎಂಬುದನ್ನೂ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಭಾರತೀಯ ಕಿರಿಯ ಆಟಗಾರರನ್ನು ಅಭಿನಂದಿಸಿದ್ದಾರೆ ಶೋಯೆಬ್ ಅಖ್ತರ್.

ಭಾರತೀಯ ಕಿರಿಯ ಆಟಗಾರರಿ ಈ ಪಂದ್ಯವನ್ನು ಸಮಗ್ರವಾಗಿ ಗೆದ್ದುಕೊಂಡಿದ್ದಾರೆ. ಈ ನಿರ್ಣಾಯಕ ಪಂದ್ಯದ ಪ್ರದರ್ಶನಕ್ಕಾಗಿ ಭಾರತೀಯ ಅಂಡರ್‌19 ತಂಡದ ಆಟಗಾರರು ಪ್ರಶಂಸೆಗೆ ಅರ್ಹರಾಗಿದ್ದಾರೆ. ಕೆಲ ಆಟಗಾರರು ಭವಿಷ್ಯದಲ್ಲಿ ಭಾರತವನ್ನು ಖಂಡಿತಾ ಪ್ರತಿನಿಧಿಸಲಿದ್ದಾರೆ ಎಂಬ ಮಾತನ್ನು ಶೋಯೆಬ್ ಅಖ್ತರ್ ಹೇಳಿದ್ದಾರೆ.

ಯು 19 ವಿಶ್ವಕಪ್: ಪಾಕಿಸ್ತಾನ ಸದೆಬಡಿದು ಫೈನಲ್‌ಗೆ ಲಗ್ಗೆಯಿಟ್ಟ ಭಾರತ!ಯು 19 ವಿಶ್ವಕಪ್: ಪಾಕಿಸ್ತಾನ ಸದೆಬಡಿದು ಫೈನಲ್‌ಗೆ ಲಗ್ಗೆಯಿಟ್ಟ ಭಾರತ!

ಜೈಸ್ವಾಲ್ ಆಟದಲ್ಲಿ ಬದ್ಧತೆಯನ್ನು ಹೊಂದಿರುವ ಆಟಗಾರ. ಆತನಲ್ಲಿ ಶಕ್ತಿಯಿದೆ. ಟೀಮ್ ಇಂಡಿಯಾವನ್ನು ಆತ ಖಂಡಿತಾ ಪ್ರತಿನಿಧಿಸುತ್ತಾನೆ. ಭಾರತದ ಕ್ರಿಕೆಟ್ ಭವಿಷ್ಯ ಭಧ್ರವಾಗಿದೆ ಎಂದು ಹಾಡಿ ಹೊಗಳಿದ್ದಾರೆ ಶೋಯೆಬ್ ಅಖ್ತರ್.

Story first published: Wednesday, February 5, 2020, 16:10 [IST]
Other articles published on Feb 5, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X