ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

2019ರಲ್ಲಿ ಕ್ರಿಕೆಟ್ ಜಗತ್ತಿನಲ್ಲಿ ಹೆಚ್ಚು ಸದ್ದು ಮಾಡಿದ ವಿಷಯಗಳು

Year Ender 2019: World Cricket: Steve Smith, Warner, Archer and England headline the year

ಕ್ರಿಕೆಟ್ ಜಗತ್ತಿನ ಪಾಲಿಗೆ 2019 ನೇ ವರ್ಷವು ಅತ್ಯಂತ ಮಹತ್ವದ ವರ್ಷವಾಗಿ ಇತಿಹಾಸದಲ್ಲಿ ದಾಖಲಾಗಲಿದೆ. ಬದಲಿ ಆಟಗಾರನ ಆಯ್ಕೆ (ಕನ್ಕಶನ್ ಸಬ್‌ಸ್ಟಿಟ್ಯೂಟ್), ಫ್ರಂಟ್ ಫುಟ್ ನೋಬಾಲ್ ನಿರ್ಧರಿಸಲು ಟಿವಿ ಅಂಪೈರ್ ಮುಂತಾದುವುಗಳು ಇದೇ ವರ್ಷ ಜಾರಿಗೆ ಬಂದಿರುವುದನ್ನು ಗಮನಿಸಬಹುದು.

ಇನ್ನು 2019 ರಲ್ಲಿ ಐಸಿಸಿ ವಿಶ್ವಕಪ್ ನಡೆದಿದ್ದು ಹಾಗೂ ಅದರಲ್ಲಿ ಇಂಗ್ಲೆಂಡ್ ತಂಡ ಚಾಂಪಿಯನ್ ಆಗಿದ್ದು ಕೂಡ ಸ್ಮರಣೀಯ ಸಂಗತಿಗಳಾಗಿವೆ. ಇನ್ನೇನು 2019 ನೇ ವರ್ಷಕ್ಕೆ ವಿದಾಯ ಹೇಳಲು ಕೆಲವೇ ದಿನಗಳು ಬಾಕಿ ಇರುವ ಈ ಸಂದರ್ಭದಲ್ಲಿ, 2019 ರಲ್ಲಿ ಕ್ರಿಕೆಟ್ ಜಗತ್ತಿನಲ್ಲಿ ನಡೆದ ಇನ್ನೂ ಹಲವಾರು ಸ್ಮರಣೀಯ ಘಟನೆಗಳನ್ನು ಮೈಖೇಲ್ ನಿಮಗಾಗಿ ತಂದಿದೆ.

ಬಾಂಗ್ಲಾ ಆಲ್ ರೌಂಡರ್ ಶಕೀಬ್ ಅಲ್ ಹಸನ್ ಅವರನ್ನು ಬುಕ್ಕಿಯೊಬ್ಬ ಸಂಪರ್ಕಿಸಿದ್ದನ್ನು ಐಸಿಸಿಗೆ ತಿಳಿಸದ ಆರೋಪದಲ್ಲಿ ಅವರನ್ನು ಕ್ರಿಕೆಟ್‌ನಿಂದ ಬ್ಯಾನ್ ಮಾಡಿದ್ದು, ಪಾಕಿಸ್ತಾನದಲ್ಲಿ ಮರುಕಳಿಸಿದ ಟೆಸ್ಟ್ ಕ್ರಿಕೆಟ್ ವೈಭವ , ಸ್ಮಿತ್-ವಾರ್ನರ್ ಜೋಡಿ ಮಾಡಿದ್ದು, ಎಲ್ಲವೂ ಸೇರಿದೆ.

ಏಕದಿನ ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡದ ಪರಾಕಾಷ್ಠೆ

ಏಕದಿನ ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡದ ಪರಾಕಾಷ್ಠೆ

2019 ನೇ ವರ್ಷದವರೆಗೂ ಇಂಗ್ಲೆಂಡ್ ತಂಡವು ಒಂದು ಬಾರಿ ಟಿ-20 ವಿಶ್ವಕಪ್ ಬಿಟ್ಟರೆ ಇನ್ನಾವುದೇ ಮಹತ್ವದ ಚಾಂಪಿಯನ್‌ಶಿಪ್ ಗೆದ್ದುಕೊಂಡಿರಲಿಲ್ಲ. ಜಗತ್ತಿಗೆ ಕ್ರಿಕೆಟ್ ಆಟವನ್ನು ಕಲಿಸಿಕೊಟ್ಟ ಇಂಗ್ಲೆಂಡ್ ಒಮ್ಮೆಯೂ ಐಸಿಸಿ ವಿಶ್ವಕಪ್ ಚಾಂಪಿಯನ್ ಆಗಿರಲೇ ಇಲ್ಲ. 2015 ರಲ್ಲಿ ವಿಶ್ವಕಪ್ ಪಂದ್ಯಾವಳಿಯಿಂದ ಹೊರಬಿದ್ದ ನಂತರ ಇಂಗ್ಲೆಂಡ್ ತಂಡವು ಏಕದಿನ ಪಂದ್ಯಗಳನ್ನು ಆಡುವ ತನ್ನ ಶೈಲಿಯಲ್ಲಿ ಗಮನಾರ್ಹ ಬದಲಾವಣೆ ಮಾಡಿಕೊಂಡಿತು. ರಕ್ಷಣಾತ್ಮಕ ಆಟದಿಂದ ಬಿರುಸಾದ ಗೆಲುವಿನ ಗುರಿಯ ಆಟವನ್ನು ತಂಡ ಆಡಲಾರಂಭಿಸಿತು. ಅಂತೆಯೇ 2019 ರಲ್ಲಿ ಕೊನೆಗೂ ಇಂಗ್ಲೆಂಡ್ ವಿಶ್ವಕಪ್ ಚಾಂಪಿಯನ್ ಆಗಿ ಪ್ರಥಮ ಬಾರಿಗೆ ಬೀಗುವಂತಾಯಿತು. ಈ ವಿಶ್ವಕಪ್‌ನಲ್ಲಿ ಬೌಂಡರಿ ನಿಯಮದ ಬಗ್ಗೆ ಕೆಲ ಅಪಸ್ವರಗಳು ಕೇಳಿಬಂದವಾದರೂ ಇಂಗ್ಲೆಂಡ್ ತಂಡ ಮಾತ್ರ ಚಾಂಪಿಯನ್ ಆಗುವ ಎಲ್ಲ ಅರ್ಹತೆಗಳನ್ನು ಹೊಂದಿತ್ತು ಎಂಬುದು ಸತ್ಯ.

 ಮುನ್ನೆಲೆಗೆ ಬಂದ ಸ್ಮಿತ್-ವಾರ್ನರ್ ಜೋಡಿ

ಮುನ್ನೆಲೆಗೆ ಬಂದ ಸ್ಮಿತ್-ವಾರ್ನರ್ ಜೋಡಿ

ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಜೋಡಿಯು ಮತ್ತೆ ಹೆಸರು ಮಾಡಿದ್ದು 2019ರ ಪ್ರಮುಖ ಘಟನಾವಳಿಗಳಲ್ಲೊಂದಾಗಿದೆ. ಆಶಸ್ ಸರಣಿಯಾದ್ಯಂತ ಶ್ರೇಷ್ಠ ಆಟ ಪ್ರದರ್ಶಿಸಿದ ಸ್ಮಿತ್. ಈ ಸರಣಿಯಲ್ಲಿ ಒಟ್ಟಾರೆ 700 ರನ್‌ಗಳನ್ನು ಕಲೆ ಹಾಕಿದರು. ಬಹು ವರ್ಷಗಳ ನಂತರ ಆಸ್ಟ್ರೇಲಿಯಾ ಆಶಸ್ ಸರಣಿ ಗೆಲ್ಲುವಲ್ಲಿ ಸ್ಮಿತ್ ಪಾತ್ರ ಗಮನಾರ್ಹವಾಗಿದೆ.

ಇನ್ನು ವಾರ್ನರ್ ಬಗ್ಗೆ ಹೇಳುವುದಾದರೆ, ಇಂಗ್ಲೆಂಡಿನ ವೇಗಿ ಬೌಲರ್‌ಗಳನ್ನು ಎದುರಿಸುವಲ್ಲಿ ಅವರು ಅಷ್ಟೊಂದು ಸಫಲರಾಗಲಿಲ್ಲ. ಅದರಲ್ಲೂ ಸ್ಟುವರ್ಟ್ ಬ್ರಾಡ್ ಅವರ ಎದುರು ಮಂಕಾದಂತೆ ಕಂಡರು. ಆದಾಗ್ಯೂ ತವರುನೆಲದಲ್ಲಿ ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮಾತ್ರ ವಾರ್ನರ್ ಸ್ಫೋಟಕ ಆಟವಾಡಿದ್ದನ್ನು ಮರೆಯುವಂತಿಲ್ಲ. ಹಾಗೆಯೇ ಇಂಗ್ಲೆಂಡಿನ ವೇಗಿ ಬೌಲರ್ ಜೋಫ್ರಾ ಅರ್ಚರ್ ತಮ್ಮ ಸಾಧನೆಯಿಂದಲೇ ಕ್ರಿಕೆಟ್ ಜಗತ್ತಿನ ಗಮನವನ್ನು ತಮ್ಮತ್ತ ಸೆಳೆದುಕೊಂಡರು. ಕರಾರುವಾಕ್ ದಾಳಿಗೆ ಹೆಸರಾದ ಆರ್ಚರ್ ಅವರ ಬೌಲಿಂಗ್‌ನಲ್ಲಿ ಸ್ಮಿತ್ ಅವರ ತಲೆಗೆ ಬಾಲ್ ತಾಗಿ, ಅವರು ಒಂದು ಪಂದ್ಯದಿಂದ ದೂರ ಉಳಿಯುವಂತಾಗಿದ್ದು ಸಹ ನೆನಪಿನಲ್ಲಿ ಉಳಿಯುವ ಸಂಗತಿಯೇ ಆಗಿದೆ.

ಪಾಕಿಸ್ತಾನದಲ್ಲಿ ಮರುಕಳಿಸಿದ ಟೆಸ್ಟ್ ಕ್ರಿಕೆಟ್ ವೈಭವ

ಪಾಕಿಸ್ತಾನದಲ್ಲಿ ಮರುಕಳಿಸಿದ ಟೆಸ್ಟ್ ಕ್ರಿಕೆಟ್ ವೈಭವ

2009 ರಲ್ಲಿ ಪಾಕಿಸ್ತಾನದಲ್ಲಿ ಶ್ರೀಲಂಕಾ ಆಟಗಾರರ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ ನಂತರ ಆ ದೇಶದಲ್ಲಿ ಒಂದೇ ಒಂದು ಟೆಸ್ಟ್ ಮ್ಯಾಚ್ ಸರಣಿ ನಡೆದಿರಲಿಲ್ಲ. ಆದರೆ ಈಗ 2019ರ ಡಿಸೆಂಬರ್‌ನಲ್ಲಿ ಎರಡು ಪಂದ್ಯಗಳ ಟೆಸ್ಟ್ ಸರಣಿ ಆಡಲು ಶ್ರೀಲಂಕಾ ಆಟಗಾರರು ಪಾಕಿಸ್ತಾನಕ್ಕೆ ಬಂದಿರುವುದರಿಂದ ಅಲ್ಲೀಗ ಮತ್ತೆ ಟೆಸ್ಟ್ ಕ್ರಿಕೆಟ್ ವೈಭವ ಮರಳಬಹುದೆಂದು ನಿರೀಕ್ಷಿಸಲಾಗಿದೆ. ಸದ್ಯೋ ಭವಿಷ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಪಾಕಿಸ್ತಾನಕ್ಕೆ ಆಮಂತ್ರಿಸಿ ಟೆಸ್ಟ್ ಸರಣಿಯೊಂದನ್ನು ಏರ್ಪಡಿಸುವತ್ತ ಪಾಕಿಸ್ತಾನ ಸಿದ್ಧತೆಗಳನ್ನು ಈಗಾಗಲೇ ಮಾಡಿಕೊಳ್ಳತೊಡಗಿದೆ. ಕಳೆದ ಹಲವಾರು ವರ್ಷಗಳಿಂದ ಅಬುಧಾಬಿಯಲ್ಲೇ ಪಂದ್ಯಗಳನ್ನು ಆಯೋಜಿಸುತ್ತಿದ್ದ ಪಾಕಿಸ್ತಾನ ಈಗ ಕೊನೆಗೂ ತನ್ನ ನೆಲದಲ್ಲೇ ಟೆಸ್ಟ್ ಸರಣಿ ಆಯೋಜಿಸುವುದು ಸಕಾರಾತ್ಮಕ ಬೆಳವಣಿಗೆಯಾಗಿದೆ.

ಕ್ರಿಕೆಟ್ ಜಗತ್ತಿನ ಒಟ್ಟಾರೆ ಚಿತ್ರಣ

ಕ್ರಿಕೆಟ್ ಜಗತ್ತಿನ ಒಟ್ಟಾರೆ ಚಿತ್ರಣ

ಕ್ರಿಕೆಟ್ ಜಗತ್ತಿನಲ್ಲಿ ಮುಂಚೂಣಿಯಲ್ಲಿರುವ ಭಾರತ, ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳನ್ನು ಹೊರತುಪಡಿಸಿದರೆ ಬೇರಾವ ತಂಡಳಿಗೆ ಅಂಥ ಖುಷಿಯಾಗಿರುವುದು ಏನೂ ಘಟಿಸಲಿಲ್ಲ. ವಿಚಿತ್ರ ಎಂದರೆ ದಕ್ಷಿಣ ಆಫ್ರಿಕಾ ತಂಡ ಮುಂಚೂಣಿಯ ಸ್ಥಾನದಿಂದ ತೀರಾ ಕೆಳಮಟ್ಟಕ್ಕೆ ಕುಸಿದಿದ್ದು ವಿಚಿತ್ರವಾಗಿತ್ತು. ಪ್ರಖ್ಯಾತ ಆಟಗಾರರಾದ ಹಶೀಮ್ ಆಮ್ಲಾ ಹಾಗೂ ಡೇಲ್ ಸ್ಟೇನ್ ಅವರು ನಿವೃತ್ತಿ ಪಡೆದ ಕಾರಣದಿಂದ ದಕ್ಷಿಣ ಆಫ್ರಿಕಾ ತಂಡವು ಭಾರತದ ವಿರುದ್ಧದ ಸರಣಿಯಲ್ಲಿ ಹೀನಾಯವಾಗಿ ಸೋಲುವಂತಾಯಿತು.

ಇನ್ನು ಆಟಗಾರರ ಸಂಘ ಹಾಗೂ ಸೌತ್ ಆಫ್ರಿಕಾ ಕ್ರಿಕೆಟ್ ಮಂಡಳಿಯ ಮಧ್ಯದ ಕಿತ್ತಾಟವೂ ದಕ್ಷಿಣ ಆಫ್ರಿಕಾ ಕ್ರಿಕೆಟ್‌ಗೆ ಸಾಕಷ್ಟು ಹಾನಿಯನ್ನುಂಟುಮಾಡಿತು. ಬಾಂಗ್ಲಾದೇಶ ಕೂಡ ಈ ವರ್ಷದಲ್ಲಿ ಸಾಕಷ್ಟು ಸೋಲುಗಳನ್ನು ಅನುಭವಿಸಬೇಕಾಯಿತು. ಕ್ರಿಕೆಟ್ ಜಗತ್ತಿಗೆ ಹೊಸಬರಾದ ಅಫ್ಘಾನಿಸ್ತಾನ ಎದುರು ತನ್ನ ನೆಲದಲ್ಲಿಯೇ ಬಾಂಗ್ಲಾದೇಶ ಸೋತು ಸುಣ್ಣವಾಯಿತು. ಇದರ ಜೊತೆಗೆ ಭಾರತದ ವಿರುದ್ಧದ ಸರಣಿಯಲ್ಲೂ ಸೋಲಾಯಿತು.

ಬಾಂಗ್ಲಾ ಆಲ್ ರೌಂಡರ್ ಶಕೀಬ್ ಅಲ್ ಹಸನ್ ಅವರನ್ನು ಬುಕ್ಕಿಯೊಬ್ಬ ಸಂಪರ್ಕಿಸಿದ್ದನ್ನು ಐಸಿಸಿಗೆ ತಿಳಿಸದ ಆರೋಪದಲ್ಲಿ ಅವರನ್ನು ಕ್ರಿಕೆಟ್‌ನಿಂದ ಬ್ಯಾನ್ ಮಾಡಿದ್ದು ಸಹ ಬಾಂಗ್ಲಾ ತಂಡಕ್ಕೆ ದೊಡ್ಡ ಹೊಡೆತ ನೀಡಿತು. ಇನ್ನು ಅಫ್ಘಾನಿಸ್ತಾನವನ್ನು ಸೋಲಿಸಿದ ವೆಸ್ಟ್ ಇಂಡೀಸ್ ತುಸು ಚೇತರಿಕೆಯನ್ನು ಕಂಡಿತು. ಜೊತೆಗೆ ಏಕದಿನ ಪಂದ್ಯಾವಳಿಯಲ್ಲಿ ಭಾರತದ ವಿರುದ್ಧ ಉತ್ತಮ ಆಟ ಪ್ರದರ್ಶಿಸಿದ ವೆಸ್ಟ್ ಇಂಡೀಸ್ ಇರುವುದರಲ್ಲೇ ತೃಪ್ತಿ ಕಂಡುಕೊಂಡಿತು.

Story first published: Wednesday, December 18, 2019, 18:31 [IST]
Other articles published on Dec 18, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X