ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

2020ರ ಐಪಿಎಲ್‌ನ ಪ್ರಮುಖ ಸಂಗತಿಗಳು, ಇಣುಕು ನೋಟಗಳು

Yearender 2020: Here is some of the big highlights of IPL 2020 held in UAE

ಬೆಂಗಳೂರು: ಅನಿರೀಕ್ಷಿತವಾಗಿ ವಿಶ್ವಕ್ಕೆ ವಕ್ಕರಿಸಿಕೊಂಡ ಕೊರೊನಾವೈರಸ್ ಕಾಟದಿಂದಾಗಿ ಈ ವರ್ಷ ನಡೆಯಲಿದ್ದ ಇಂಡಿಯನ್ ಪ್ರೀಮಿಯರ್ ಲೀಗ್‌ಗೂ ತೊಂದರೆಯಾಯ್ತು. ಭಾರತದಲ್ಲಿ ನಡೆಸಲುದ್ದೇಶಿಸಿದ್ದ ಭಾರತದ ಅದ್ದೂರಿ ಕ್ರಿಕೆಟ್ ಟೂರ್ನಿ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಸಬೇಕಾಗಿ ಬಂತು. ಯಾವಾಗಲೂ ಮಾರ್ಚ್-ಏಪ್ರಿಲ್ ತಿಂಗಳಲ್ಲಿ ನಡೆಯುತ್ತಿದ್ದ ಐಪಿಎಲ್ ಈ ಬಾರಿ ಎರಡು ಸಾರಿ ಮುಂದೂಡಲ್ಪಟ್ಟು ಕೊನೆಗೆ ಸೆಪ್ಟೆಂಬರ್ 19ರಿಂದ ಆರಂಭಗೊಂಡಿತ್ತು.

2021ರ ಇಂಡಿಯನ್‌ ಪ್ರೀಮಿಯರ್ ಲೀಗ್‌ಗೆ ಹತ್ತಲ್ಲ, ಎಂಟೇ ತಂಡಗಳು!2021ರ ಇಂಡಿಯನ್‌ ಪ್ರೀಮಿಯರ್ ಲೀಗ್‌ಗೆ ಹತ್ತಲ್ಲ, ಎಂಟೇ ತಂಡಗಳು!

ಯುಎಇಯಲ್ಲಿ ನಡೆದಿದ್ದ ಐಪಿಎಲ್‌ ಖಾಲಿ ಮೈದಾನದಲ್ಲಿ ನಡೆದಿತ್ತು ಅನ್ನೋದೂ ವಿಶೇಷ. ಅಷ್ಟೇ ಅಲ್ಲ, 2020ರ ಐಪಿಎಲ್ ಇನ್ನೊಂದಿಷ್ಟು ಅಪರೂಪದ ಕ್ಷಣಗಳಿಗಾಗಿ ವಿಶೇಷ ಅನ್ನಿಸಿತ್ತು. 2020ರ ಐಪಿಎಲ್‌ನ ಪ್ರಮುಖ ಸಂಗತಿಗಳು, ಇಣುಕು ನೋಟಗಳು ಕೆಳಗಿವೆ ನೋಡಿ.

ಬಯೋ ಬಬಲ್‌ನಲ್ಲಿ ಐಪಿಎಲ್

ಬಯೋ ಬಬಲ್‌ನಲ್ಲಿ ಐಪಿಎಲ್

ಬಯೋಬಬಲ್ ಅನ್ನೋ ಪರಿಕಲ್ಪನೆ ಬಂದಿದ್ದೇ ಕೊರೊನಾವೈರಸ್‌ನಿಂದ. 2020ರ ಐಪಿಎಲ್ ನಡೆದಿದ್ದು ಬಯೋ ಬಬಲ ಒಳಗೆ. ಅಂದರೆ ಈ ಜೈವಿಕ ಪರದೆಯೊಳಗೆ ಹೋಗಿ ಬರೋದಕ್ಕೆ ನಿರ್ಬಂಧವಿರತ್ತೆ. ಅಲ್ಲದೆ ಬಯೋ ಬಬಲ್ ಪ್ರವೇಶಕ್ಕೂ ಮುನ್ನ ಪ್ರತ್ಯೇಕವಾಗಿದ್ದು ಕ್ವಾರಂಟೈನ್ ಪಾಲಿಸಬೇಕಿರುತ್ತದೆ.

ಚೆನ್ನೈ ಸೂಪರ್‌ ಕಿಂಗ್ಸ್‌ನಲ್ಲಿ ಕೊರೊನಾ

ಚೆನ್ನೈ ಸೂಪರ್‌ ಕಿಂಗ್ಸ್‌ನಲ್ಲಿ ಕೊರೊನಾ

2020ರ ಐಪಿಎಲ್ ಶುರುವಾಗೋಕೆ ಕೆಲವೇ ದಿನ ಇರುವಾಗ ಸಿಎಸ್‌ಕೆ ತಂಡದ ಆಟಗಾರರಿಗೆ ಕೊರೊನಾ ತಗುಲಿತ್ತು. ಬಳಿಕ ಎಲ್ಲಾ ಆಟಗಾರರು ಸೋಂಕಿನಿಂದ ಗುಣಮುಖರಾದರು. ಸಿಎಸ್‌ಕೆಯಿಂದ ಆಲ್ ರೌಂಡರ್ ಸುರೇಶ್ ರೈನಾ, ಹರ್ಭಜನ್ ಸಿಂಗ್‌ ಆಡದೆ ದೂರ ಉಳಿದರು.

ಸಿಎಸ್‌ಕೆ ಪ್ಲಾಪ್‌ ಶೋ

ಸಿಎಸ್‌ಕೆ ಪ್ಲಾಪ್‌ ಶೋ

ಐಪಿಎಲ್‌ ಬಲಿಷ್ಠ ತಂಡಗಳಲ್ಲಿ ಒಂದಾಗಿದ್ದ ಎಂಎಸ್ ಧೋನಿ ನಾಯಕತ್ವದ ಸಿಎಸ್‌ಕೆ, ಈ ಬಾರಿ ಅತೀ ಕೆಟ್ಟ ಪ್ರದರ್ಶನ ನೀಡಿ ಟೂರ್ನಿಯಲ್ಲಿ ಎಲ್ಲಾ ತಂಡಗಳಿಗಿಂತ ಮೊದಲು ಹೊರ ಬಿತ್ತು. ಸಿಎಸ್‌ಕೆ ತಂಡ ಪ್ಲೇ ಆಫ್‌ಗೆ ಪ್ರವೇಶಿಸದೆಯೂ ಐಪಿಎಲ್‌ನಿಂದ ಹೊರ ಬಿದ್ದಿದ್ದು ಇದೇ ಮೊದಲು.

ಡೆಲ್ಲಿ ಕ್ಯಾಪಿಟಲ್ಸ್ ಸಾಧನೆ

ಡೆಲ್ಲಿ ಕ್ಯಾಪಿಟಲ್ಸ್ ಸಾಧನೆ

ಒಂದು ಬಾರಿಯೂ ಫೈನಲ್‌ಗೆ ಪ್ರವೇಶಿಸದ ತಂಡವೆಂದು ಗುರುತಿಸಿಕೊಂಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಈ ಬಾರಿ ಫೈನಲ್‌ಗೆ ಪ್ರವೇಶಿಸಿ ದಾಖಲೆ ನಿರ್ಮಿಸಿತು. ಆದರೆ ಫೈನಲ್‌ನಲ್ಲಿ ಮುಂಬೈ ವಿರುದ್ಧ ಸೋತಿತು.

ಮುಂಬೈ ಮಡಿಲಿಗೆ 5ನೇ ಟ್ರೋಫಿ

ಮುಂಬೈ ಮಡಿಲಿಗೆ 5ನೇ ಟ್ರೋಫಿ

ಹಿಟ್‌ಮ್ಯಾನ್ ರೋಹಿತ್ ಶರ್ಮಾ ಮುಂದಾಳತ್ವದ ಐಪಿಎಲ್ ಮುಂಬೈ ಇಂಡಿಯನ್ಸ್ ತಂಡ 2020ರ ಫೈನಲ್‌ನಲ್ಲಿ ಗೆದ್ದು ಐದನೇ ಟ್ರೋಫಿ ಮುಡಿಗೇರಿಸಿಕೊಂಡಿತು. ಆ ಬಳಿಕ ರೋಹಿತ್ ಶರ್ಮಾ ಅವರ ಗಾಯದ ಸಮಸ್ಯೆ, ಭಾರತ-ಆಸ್ಟ್ರೇಲಿಯಾ ಸರಣಿಯಲ್ಲಿ ರೋಹಿತ್ ಅವರನ್ನು ಹೊರಗಿಟ್ಟ ಸಂಗತಿ ಸದ್ದು ಮಾಡಿತು.

Story first published: Tuesday, December 22, 2020, 9:53 [IST]
Other articles published on Dec 22, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X