'ಆತ ಕೊರೊನಾಗಿಂತ ಕೆಟ್ಟವ': ರಾಮ್‌ನರೇಶ್‌ ಮೇಲೆ ಕ್ರಿಸ್ ಗೇಲ್ ಕಿಡಿ!

ಪೋರ್ಟ್‌ ಆಫ್‌ ಸ್ಪೇನ್, ಏಪ್ರಿಲ್ 28: ವಿಶ್ವ ಟಿ20 ಕ್ರಿಕೆಟ್‌ನ ದೈತ್ಯ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್, ವೆಸ್ಟ್ ಇಂಡೀಸ್‌ನ ಮಾಜಿ ಬ್ಯಾಟ್ಸ್‌ಮನ್, ತನ್ನ ಜೊತೆ ಆಟಗಾರ ರಾಮ್‌ನರೇಶ್ ಸರವಣ್ ಬಗ್ಗೆ ಕಿಡಿಕಾರಿದ್ದಾರೆ. ತನ್ನ ಯೂ ಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿರುವ ಗೇಲ್, ರಾಮ್‌ನರೇಶ್ ಅವರನ್ನು ಕೊರೊನಾವೈರಸ್‌ಗಿಂತ ಕೆಟ್ಟ ವ್ಯಕ್ತಿ ಎಂದು ಕರೆದಿದ್ದಾರೆ.

ಕೈ ಬೆರಳು ಕಳೆದುಕೊಂಡ ಭಾವುಕ ಕ್ಷಣ ಸ್ಮರಿಸಿದ ಪಾರ್ಥಿವ್ ಪಟೇಲ್!

ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ತಂಡವಾದ ಜಮೈಕಾ ತಲೈವಾಸ್‌ನಲ್ಲಿದ್ದ ಕ್ರಿಸ್ ಗೇಲ್, ತಲೈವಾಸ್ ತೊರೆದು ಸೇಂಟ್ ಲೂಸಿಯಾ ತಂಡಕ್ಕೆ ಬದಲಾಗಿದ್ದಾರೆ. ತಾನು ತಂಡ ಬದಲಿಸಲು ಸರವಣ್ ಕಾರಣ, ಅವರಿಂದಲೇ ನನ್ನನ್ನು ತಲೈವಾಸ್ ಉಳಿಸಿಕೊಳ್ಳಲಿಲ್ಲ ಎಂದು ಗೇಲ್ ಆರೋಪಿಸಿದ್ದಾರೆ.

3 ವರ್ಷದ ಶಿಕ್ಷೆ ಕಠಿಣ, ಉಮರ್ ಇದನ್ನು ಪ್ರಶ್ನಿಸಲಿದ್ದಾನೆ: ಕಮ್ರಾಮ್ ಅಕ್ಮಲ್

ಜಮೈಕಾ ತಲೈವಾಸ್‌ನಿಂದ ತಾನು ಹೊರ ನಡೆಯಲು ರಾಮ್‌ನರೇಶ್ ಸರವಣ್ ಕಾರಣ ಎಂದಿರುವ ಆರಂಭಿಕ ಬ್ಯಾಟ್ಸ್‌ಮನ್ ಗೇಲ್, ಸರವಣ್ ಅವರು ಜಮೈಕಾ ತಲೈವಾಸ್‌ ಫ್ರಾಂಚೈಸಿಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ದೂರಿದ್ದಾರೆ.

ಯೂ ಟ್ಯೂಬ್‌ನಲ್ಲಿ ಮಾತನಾಡಿರುವ ಗೇಲ್, 'ಸರವಣ್ ನೀನೊಬ್ಬ ಈಗ ಕೊರೊನಾವೈರಸ್‌ಗಿಂತ ಕೆಟ್ಟ ವ್ಯಕ್ತಿ. ನೀನೊಂಥರಾ ವಿಷದ ಹಾವಿದ್ದಹಾಗೆ,' ಎಂದು ಹೇಳಿದ್ದಾರೆ. ಸರವಣ್‌ನಿಂದಾಗಿ ಹಲವಾರು ಆಟಗಾರರು ಆಘಾತಕ್ಕೊಳಗಾಗಬೇಕಾಗಿ ಬಂದಿದೆ ಎಂದು ಕ್ರಿಸ್ ಹೇಳಿದ್ದಾರೆ.

ಯುಎಸ್‌ಎ ಕ್ರಿಕೆಟ್‌ ಟೀಮ್‌ನ ಮುಖ್ಯ ಕೋಚ್‌ ಆಗಿ ಕನ್ನಡಿಗ ನೇಮಕ

'ನಾನು ತಲೈವಾಸ್‌ಗೆ ವಾಪಸ್ ಬಂದಿದ್ದಾಗ, ಸರವಣ್ ಸಹ ಕೋಚ್ ಆಗಿದ್ದರು. ನಾನು ಮತ್ತೆ ಸರವಣ್ ಆಗ ಮಾತನಾಡಿದ್ದೆವು. ಆತನಿಗೆ ಹೆಡ್‌ಕೋಚ್ ಆಗುವ ಆಸೆಯಿತ್ತು. ನಾನು ಜಮೈಕಾ ತಲೈವಾಸ್ ತೊರೆದಾಗ ಅದು ಉತ್ಸಾಹಭರಿತ ತಂಡವಾಗಿತ್ತು. ಆದರೆ ತಂಡದ ಬಗ್ಗೆ ಹೆಚ್ಚು ದೂರುಗಳು ಬರುತ್ತಿದ್ದವು. ಬಹುತೇಕ ಸಮಸ್ಯೆಗಳೆಲ್ಲ ಸರವಣ್‌ ಅವರನ್ನುದ್ದೇಶಿಸಿಯೇ ಇರುತ್ತಿತ್ತು,' ಎಂದು ಗೇಲ್ ಬೇಸರದಿಂದ ಹೇಳಿಕೊಂಡಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Tuesday, April 28, 2020, 19:56 [IST]
Other articles published on Apr 28, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X