ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ಗೂ ಪಿಎಸ್‌ಎಲ್‌ಗೂ ಹೋಲಿಕೆ ಮಾಡ್ಬೇಡಿ: ಪಾಕ್ ಕ್ರಿಕೆಟರ್ ರಿಯಾಝ್

You can’t compare IPL with PSL, I don’t think any league can compete with the IPL, says Wahab Riaz

ಕರಾಚಿ: ಇಂಡಿಯನ್ ಪ್ರೀಮಿಯರ್ ಲೀಗ್‌ಗೂ ಪಾಕಿಸ್ತಾನ್ ಸೂಪರ್ ಲೀಗ್‌ಗೂ ಹೋಲಿಕೆ ಮಾಡಬೇಡಿ ಎಂದು ಪಾಕಿಸ್ತಾನ ವೇಗಿ ವಹಾಬ್ ರಿಯಾಝ್ ಹೇಳಿದ್ದಾರೆ. ಪಿಎಸ್‌ಎಲ್‌ಗಿಂತ ಐಪಿಎಲ್ ಎಷ್ಟೋ ಮೇಲಿದೆ ಎಂದು ರಿಯಾಝ್ ಅಭಿಪ್ರಾಯಪಟ್ಟಿದ್ದಾರೆ.

ಪಾಕಿಸ್ತಾನ ಲೀಗನ್ನು (PSL) IPL ಗೆ ಹೋಲಿಸಬೇಡಿ | Oneindia Kannada

ಇಂಗ್ಲೆಂಡ್ ಪ್ರವಾಸಕ್ಕೆ ಭಾರತೀಯ ವನಿತಾ ತಂಡಗಳು ಪ್ರಕಟಇಂಗ್ಲೆಂಡ್ ಪ್ರವಾಸಕ್ಕೆ ಭಾರತೀಯ ವನಿತಾ ತಂಡಗಳು ಪ್ರಕಟ

35ರ ಹರೆಯದ ವಹಾಬ್ ರಿಯಾಝ್, ಪಿಎಸ್‌ಎಲ್ ಆರಂಭವಾದಾಗಿನಿಂದಲೂ ಆಡುತ್ತಿದ್ದಾರೆ. ಅಲ್ಲದೆ ಲೀಗ್‌ ಇತಿಹಾಸದಲ್ಲಿ ಆಲ್ ಟೈಮ್ ಅತ್ಯಧಿಕ ವಿಕೆಟ್ ಸರದಾರರಲ್ಲಿ ರಿಯಾಝ್ ಮೊದಲ ಸ್ಥಾನದಲ್ಲಿದ್ದಾರೆ. ಐಪಿಎಲ್ ಮತ್ತು ಪಿಎಸ್‌ಎಲ್ ಬಗ್ಗೆ ಮಾತನಾಡಿದ ವಹಾಬ್, ಪಿಎಸ್‌ಎಲ್‌ಗಿಂತ ಐಪಿಎಲ್ ಯಾಕೆ ಭಿನ್ನ ಅನ್ನೋದನ್ನು ವಿವರಿಸಿದ್ದಾರೆ.

ಐಪಿಎಲ್ ಮತ್ತು ಪಿಎಸ್‌ಎಲ್‌ಗೆ ಇರುವ ಭಿನ್ನತೆಯ ಬಗ್ಗೆ ಮಾತನಾಡಿದ ರಿಯಾಝ್, ಬಿಸಿಸಿಐ ವಿಶ್ವದ ಪ್ರಮುಖ ಆಟಗಾರರಿಗೆ ದಾರಿ ಮಾಡಿಕೊಂಡು ವೇಳಾಪಟ್ಟಿ ಸಿದ್ಧಗೊಳಿಸುತ್ತದೆ. ಆದರೆ ಪಿಎಸ್‌ಎಲ್‌ನಲ್ಲಿ ಆಟಗಾರರು ಅವರವರ ರಾಷ್ಟ್ರೀಯ ತಂಡಗಳಲ್ಲಿ ಸಾಮಾನ್ಯವಾಗಿ ಆಡದ ಆಟಗಾರರಾಗಿರುತ್ತಾರೆ ಎಂದಿದ್ದಾರೆ.

ತಪ್ಪು ಸರಿಪಡಿಸದಿದ್ದರೆ ಭಾರತೀಯ ಮಹಿಳಾ ತಂಡಕ್ಕೆ ಕಂಟಕ ಪಕ್ಕ!ತಪ್ಪು ಸರಿಪಡಿಸದಿದ್ದರೆ ಭಾರತೀಯ ಮಹಿಳಾ ತಂಡಕ್ಕೆ ಕಂಟಕ ಪಕ್ಕ!

'ಐಪಿಎಲ್‌ನಲ್ಲಿ ವಿಶ್ವದ ಟಾಪ್ ಆಟಗಾರರು ಬಂದು ಆಡುತ್ತಾರೆ. ನೀವು ಐಪಿಎಲ್ ಅನ್ನು ಪಿಎಸ್‌ಎಲ್‌ಗೆ ಹೋಲಿಸಲಾಗೋಲ್ಲ. ಐಪಿಎಲ್ ಒಂದು ಎತ್ತರದ ಮಟ್ಟದಲ್ಲಿದೆ ಎಂದು ನನಗನ್ನಿಸುತ್ತದೆ. ಐಪಿಎಲ್ ಆಯೋಜಕರ ಬದ್ಧತೆ, ಸಂವಹನದ ರೀತಿ, ಆಯೋಜನೆಯ ವೈಖರಿ, ಅವರು ತಂಡಗಳನ್ನು ರಚಿಸುವ ರೀತಿ ಎಲ್ಲವೂ ವಿಭಿನ್ನವಾಗಿದೆ. ಯಾವುದೇ ಕ್ರಿಕೆಟ್ ಲೀಗ್‌ಗಳು ಐಪಿಎಲ್‌ಗೆ ಸ್ಪರ್ಧಿಸಲಾರವು,' ಎಂದು ರಿಯಾಝ್ ಹೇಳಿದ್ದಾರೆ.

Story first published: Saturday, May 15, 2021, 15:48 [IST]
Other articles published on May 15, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X