ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'12 ಗಂಟೆಗಳು ಉಳಿದಿವೆ, ಪ್ರತೀ ಕ್ಷಣವನ್ನೂ ಎಂಜಾಯ್ ಮಾಡಬೇಕಿದೆ'

You have 12 painful hours left in IPL but got to enjoy every moment: MS Dhoni

ದುಬೈ: ಮುಂದಿನ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಗೆದ್ದರೆ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮಾಜಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್‌ನ ಸ್ಪರ್ಧೆ ಸೋಮವಾರ ಕೊನೆಗೊಳ್ಳಲಿದೆ. ಐಪಿಎಲ್‌ನಲ್ಲಿ ಸಿಎಸ್‌ಕೆ ತಂಡ ಪ್ಲೇ ಆಫ್‌ಗೆ ಪ್ರವೇಶಿಸದೆ ಟೂರ್ನಿಯಿಂದ ಹೊರ ಬೀಳುತ್ತಿರುವುದು ಇದೇ ಮೊದಲು.

ಐಪಿಎಲ್ 2020: ಹಸಿರು ಜರ್ಸಿಯಲ್ಲಿ ಆರ್‌ಸಿಬಿಗೆ ಗೆಲುವಿಗಿಂತ ಸೋಲೇ ಹೆಚ್ಚು!ಐಪಿಎಲ್ 2020: ಹಸಿರು ಜರ್ಸಿಯಲ್ಲಿ ಆರ್‌ಸಿಬಿಗೆ ಗೆಲುವಿಗಿಂತ ಸೋಲೇ ಹೆಚ್ಚು!

ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಕಿಂಗ್ಸ್ 11 ಪಂಜಾಬ್ ನಡುವಿನ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಗೆದ್ದರೆ ಅದು ಸುಲಭವಾಗಿ ಪ್ಲೇ ಆಫ್‌ಗೆ ಪ್ರವೇಶ ಗಿಟ್ಟಿಕೊಳ್ಳಲಿದೆ. ಕೆಕೆಆರ್‌ಗೆ ಇನ್ನೂ 3 ಪಂದ್ಯಗಳು ಬಾಕಿ ಉಳಿದಿರುವುದರಿಂದ ಅದು ಗೆಲ್ಲುವ ಸಾಧ್ಯತೆ ಹೆಚ್ಚಿದೆ.

ಟೂರ್ನಿಯಲ್ಲಿ ಹೊರ ಬೀಳೋದು ಖಚಿತವಾಗಿರುವುದರಿಂದ ಉಳಿದಿರುವ ಮುಂದಿನ 12 ಗಂಟೆಯ ಪ್ರತೀ ಕ್ಷಣಗಳನ್ನು ನಾವು ಎಂಜಾಯ್ ಮಾಡಬೇಕು ಎಂದು ಸಿಎಸ್‌ಕೆ ನಾಯಕ ಎಂಎಸ್ ಧೋನಿ ಹೇಳಿದ್ದಾರೆ. ಚೆನ್ನೈಗೆ ಇನ್ನೂ 2 ಪಂದ್ಯಗಳು ಬಾಕಿ ಉಳಿದಿವೆ. ಸಿಎಸ್‌ಕೆ ಈಗಾಗಲೇ ಆಡಿರುವ 12 ಪಂದ್ಯಗಳಲ್ಲಿ 4ರಲ್ಲಿ ಗೆದ್ದಿದೆ.

'ಎಲ್ಲಾ ಪತ್ರಿಕೆಗಳಲ್ಲೂ ನಿನ್ನ ಚಿತ್ರವಿದೆ': ಅನಾರೋಗ್ಯ ಪೀಡಿತ ಅಪ್ಪನ ನೆನೆದ ಸಿರಾಜ್'ಎಲ್ಲಾ ಪತ್ರಿಕೆಗಳಲ್ಲೂ ನಿನ್ನ ಚಿತ್ರವಿದೆ': ಅನಾರೋಗ್ಯ ಪೀಡಿತ ಅಪ್ಪನ ನೆನೆದ ಸಿರಾಜ್

ಭಾನುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಚೆನ್ನೈ ಗೆದ್ದಿತ್ತು. ಈ ಪಂದ್ಯದ ಬಳಿಕ ಮಾತನಾಡಿದ ಧೋನಿ, 'ನೀವು ಚೆನ್ನಾಗಿ ಆಡಿಲ್ಲದಿದ್ದರೆ ಒಬ್ಬ ನಾಯಕನಾಗಿ ನಿಮಗೆ ಎಷ್ಟು ನೋವಾಗುತ್ತದೆ ಎಂದು ನಿಮಗೆ ಗೊತ್ತಾಗಬಹುದು. ಆದರೆ ನೀವು ಆಟವನ್ನು ಬಿಟ್ಟುಕೊಡಬೇಡಿ. ಟೂರ್ನಿಯಲ್ಲಿ ಇನ್ನು 12 ಗಂಟೆಗಳು ಉಳಿದಿವೆ. ನೀವು ಟೇಬಲ್‌ನಲ್ಲಿ ಎಲ್ಲಿದ್ದೀರಿ ಅನ್ನೋದನ್ನು ಚಿಂತೆ ಮಾಡಬೇಡಿ. ಮುಂದಿನ ಪ್ರತೀ ಕ್ಷಣವನ್ನು ಎಂಜಾಯ್ ಮಾಡಿ ಆಡಿ,' ಎಂದಿದ್ದಾರೆ.

Story first published: Monday, October 26, 2020, 8:56 [IST]
Other articles published on Oct 26, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X