ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್‌: ಸಹ ಆಟಗಾರರಿಗೆ ಎಚ್ಚರಿಕೆ ರವಾನಿಸಿದ ರಾಸ್‌ ಟೇಲರ್‌!

You have got to be prepared for anything: Ross Taylor

ಆಕ್ಲೆಂಡ್‌, ಮೇ 23: ಮುಂಬರುವ ವಿಶ್ವಕಪ್‌ನಲ್ಲಿ ಯಾವುದೇ ರೀತಿಯ ಸ್ಥಿತಿಗಳಲ್ಲೂ ಆಡಲು ಸಿದ್ಧರಿರಬೇಕು ಎಂದು ನ್ಯೂಜಿಲೆಂಡ್‌ ತಂಡದ ಮಧ್ಯಮ ಕ್ರಮಾಂಕದ ಅನುಭವಿ ಬ್ಯಾಟ್ಸ್‌ಮನ್‌ ರಾಸ್‌ ಟೇಲರ್‌ ಸಹ ಆಟಗಾರರನ್ನು ಎಚ್ಚರಿಸಿದ್ದು, ತಂಡವು ಸ್ಥಿತಿಗತಿಗಳಿಗೆ ತಕ್ಕಂತೆ ಹೊ೦ದಿಕೊಳ್ಳಬೇಕು ಎಂದಿದ್ದಾರೆ.

ವಿಶ್ವಕಪ್‌ನಲ್ಲಿ ಭಾರತದ ಪರ ಈ ಆಲ್‌ರೌಂಡ್‌ ಆಡುವುದು ನಿಶ್ಚಿತ!ವಿಶ್ವಕಪ್‌ನಲ್ಲಿ ಭಾರತದ ಪರ ಈ ಆಲ್‌ರೌಂಡ್‌ ಆಡುವುದು ನಿಶ್ಚಿತ!

ಇದೇ ವೇಳೆ 2017ರ ಚಾಂಪಿಯನ್ಸ್‌ ಟ್ರೋಫಿ ಕುರಿತಾಗಿಯೂ ಮಾತನಾಡಿರುವ ಕಿವೀಸ್‌ ಬ್ಯಾಟ್ಸ್‌ಮನ್‌, ಚಾಂಪಿಯನ್ಸ್‌ ಟ್ರೋಫಿಯಲ್ಲಿ ದೊಡ್ಡ ಮೊತ್ತಗಳೇನೂ ದಾಖಲಾಗಲಿಲ್ಲ. ಜಾಗತಿಕ ಮಟ್ಟದ ಬಹುದೊಡ್ಡ ಟೂರ್ನಿಗಳಲ್ಲಿ ಎಲ್ಲವೂ ನಮ್ಮ ಮಾನಸಿಕ ಸ್ಥಿತಿಗತಿಯನ್ನು ಆಧರಿಸಿರುತ್ತದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಅರ್ಧಶತಕಗಳನ್ನು ಸಿಡಿಸಿದ ಬ್ಯಾಟ್ಸ್‌ಮನ್‌ಗಳುವಿಶ್ವಕಪ್‌ನಲ್ಲಿ ಅತಿ ಹೆಚ್ಚು ಅರ್ಧಶತಕಗಳನ್ನು ಸಿಡಿಸಿದ ಬ್ಯಾಟ್ಸ್‌ಮನ್‌ಗಳು

"ಹೆಚ್ಚೇನು ಹಿಂದೆ ಹೋಗಬೇಕಿಲ್ಲ. 2017ರ ಚಾಂಪಿಯನ್ಸ್‌ ಟ್ರೋಫಿಯನ್ನು ಗಮನಿಸಿ. ಬಹುತೇಕರೆಲ್ಲರೂ ದೊಡ್ಡ ಮೊತ್ತಗಳು ದಾಖಲಾಗುವ ಕುರಿತಾಗಿ ಮಾತನಾಡುತ್ತಿದ್ದರು. ಆದರೆ ಟೂರ್ನಿಯಲ್ಲಿ ಅಂಥದ್ದೇನೂ ನಡೆಯಲಿಲ್ಲ. ಹೀಗಾಗಿ ಎಲ್ಲದಕ್ಕೂ ಹೊಂದಿಕೊಳ್ಳುವಂತಿರಬೇಕು. ಕೆಲ ಸಂದರ್ಭಗಳಲ್ಲಿ ಬೌಲರ್‌ಗಳು ಮತ್ತೂ ಕೆಲ ಸಂದರ್ಭಗಳಲ್ಲಿ ಬ್ಯಾಟ್ಸ್‌ಮನ್‌ಗಳು ಅಬ್ಬರಿಸಬಹುದು. ಹೀಗೆ ಎಲ್ಲದಕ್ಕೂ ತಂಡ ಸಿದ್ಧವಾಗಿರಬೇಕು," ಎಂದು ಟೇಲರ್‌ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಒಡಿಐ ವಿಶ್ವಕಪ್‌ನಲ್ಲಿ ಅಬ್ಬರಿಸಿದ 5 ಅಗ್ರಮಾನ್ಯ ಬೌಲರ್‌ಗಳಿವರು!ಒಡಿಐ ವಿಶ್ವಕಪ್‌ನಲ್ಲಿ ಅಬ್ಬರಿಸಿದ 5 ಅಗ್ರಮಾನ್ಯ ಬೌಲರ್‌ಗಳಿವರು!

ಇನ್ನು ವಿಶ್ವಕಪ್‌ಗೂ ಮುನ್ನ ನಡೆಯುವ ಅಭ್ಯಾಸ ಪಂದ್ಯಗಳ ಮಹತ್ವದ ಕುರಿತಾಗಿಯೂ 35 ವರ್ಷದ ಅನುಭವಿ ಆಟಗಾರ ಮಾತನಬಾಡಿದ್ದು, ಈ ಬಾರಿಯ ವಿಶ್ವಕಪ್‌ನಲ್ಲಿ ಪರಿಚಯಿಸಲಾಗುತ್ತಿರುವ ಹೊಸ ಮಾದರಿಯನ್ನು ಪ್ರಶಂಶಿಸಿದ್ದಾರೆ.

ಈ ಬಾರಿಯ ವಿಶ್ವಕಪ್‌ನಲ್ಲಿ ಮಿಂಚಬಲ್ಲ ಟಾಪ್‌ 5 ಫೀಲ್ಡರ್ಸ್‌ ಇವರು!ಈ ಬಾರಿಯ ವಿಶ್ವಕಪ್‌ನಲ್ಲಿ ಮಿಂಚಬಲ್ಲ ಟಾಪ್‌ 5 ಫೀಲ್ಡರ್ಸ್‌ ಇವರು!

"25ರಂದು ಭಾರತ ವಿರುದ್ಧ ಅಭ್ಯಾಸ ಪಂದ್ಯವನ್ನಾಡುಯತ್ತಿರುವುದು ವಿಶ್ವಕಪ್‌ ಪೂರ್ವ ಸಿದ್ಧತೆಗೆ ಅದ್ಭುತ ವೇದಿಕೆಯಾಗಲಿದೆ. ಟೀಮ್‌ ಇಂಡಿಯ ಪ್ರಶಸ್ತಿ ಗೆಲ್ಲುವ ಫೇವರಿಟ್‌ ಆಗಿದ್ದು, ಟೂರ್ನಿಯಲ್ಲಿ ಆಡುತ್ತಿರುವ ಬಲಿಷ್ಠ ತಂಡಗಳಲ್ಲಿ ಒಂದಾಗಿದೆ. ಹೀಗಾಗಿ ಒಂದು ತಂಡವಾಗಿ ಒಗ್ಗಟ್ಟಿನ ಆಟವಾಡಿ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ನೆರವಾಗಲಿದೆ. ಇನ್ನು ಈ ಬಾರಿ ಪರಿಚಯಿಸಲಾಗುತ್ತಿರುವ ಹೊಸ ಮಾದರಿ, 1992ರ ವಿಶ್ವಕಪ್‌ನಂತಿದೆ. ಇದು ಉತ್ಸುಕತೆ ಹೆಚ್ಚಿಸಿದ್ದು, ಸೂಕ್ತ ಮಾದರಿ ಕೂಡ,'' ಎಂದು ಟೇಲರ್‌ ಹೇಳಿದ್ದಾರೆ.

ವಿಶ್ವಕಪ್‌ನಲ್ಲಿ ಆರ್ಭಟಿಸಬಲ್ಲ TOP 5 ಆಲ್‌ರೌಂಡರ್‌ಗಳಿವರು!ವಿಶ್ವಕಪ್‌ನಲ್ಲಿ ಆರ್ಭಟಿಸಬಲ್ಲ TOP 5 ಆಲ್‌ರೌಂಡರ್‌ಗಳಿವರು!

ನ್ಯೂಜಿಲೆಂಡ್‌ ತಂಡ ಭಾರತ ಮತ್ತು ವೆಸ್ಟ್‌ ಇಂಡೀಸ್‌ ವಿರುದ್ಧ ಕ್ರಮವಾಗಿ ಮೇ 25 ಮತ್ತು 28ರಂದು ಅಭ್ಯಾಸ ಪಂದ್ಯಗಳನ್ನಾಡಲಿದ್ದು, ಜೂನ್‌ 1ರಂದು ಶ್ರೀಲಂಕಾ ವಿರುದ್ಧ ಕಾರ್ಡಿಫ್‌ನಲ್ಲಿ ತನ್ನ ವಿಶ್ವಕಪ್‌ ಅಭಿಯಾನ ಆರಂಭಿಸಲಿದೆ.

ವಿಶ್ವಕಪ್‌ಗೆ ನ್ಯೂಜಿಲೆಂಡ್‌ ಪ್ರಕಟಿಸಿರುವ 15 ಆಟಗಾರರ ತಂಡ
ಕೇನ್‌ ವಿಲಿಯಮ್ಸನ್‌ (ನಾಯಕ), ರಾಸ್‌ ಟೇಲರ್‌, ಟಾಮ್‌ ಲೇಥಮ್‌ (ವಿಕೆಟ್‌ಕೀಪರ್‌), ಟಾಮ್‌ ಬ್ಲಂಡಲ್‌, ಮಿಚೆಲ್‌ ಸ್ಯಾಂಟ್ನರ್‌, ಕಾಲಿನ್‌ ಡಿ'ಗ್ರ್ಯಾಂಡ್‌ಹೋಮ್‌, ಲಾಕಿ ಫಗ್ರ್ಯೂಸನ್‌, ಟಿಮ್‌ ಸೌಥೀ, ಟ್ರೆಂಟ್‌ ಬೌಲ್ಟ್‌, ಕಾಲಿನ್‌ ಮನ್ರೊ, ಇಶ್‌ ಸೋಧಿ, ಹೆನ್ರಿ ನಿಕೋಲ್ಸ್‌, ಮಾರ್ಟಿನ್‌ ಗಪ್ಟಿಲ್‌, ಮ್ಯಾಟ್‌ ಹೆನ್ರಿ, ಜಿಮ್ಮಿ ನೀಶಮ್‌.

Story first published: Tuesday, May 21, 2019, 17:34 [IST]
Other articles published on May 21, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X