ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನೀನು ಎಷ್ಟೇ ದೊಡ್ಡ ಬ್ಯಾಟ್ಸ್‌ಮನ್‌ ಆದರೂ ಇಲ್ಲಿ ಅಹಂಕಾರ ಬಿಟ್ಟು ಆಡಲೇಬೇಕು ಎಂದ ಕೊಹ್ಲಿ!

You have to put your ego aside as a batsman while you are playing in england says Virat Kohli
ನೀನೆಷ್ಟೇ ದೊಡ್ಡ ಬ್ಯಾಟ್ಸ್‌ಮನ್‌ ಆದ್ರೂ ಅಹಂಕಾರ ಬಿಟ್ಟು ಆಡ್ಲೇಬೇಕು ಅಂದ್ರು ಕೊಹ್ಲಿ | Oneindia Kannada

ವಿರಾಟ್ ಕೊಹ್ಲಿ, ಅನಿಸಿದ್ದನ್ನು ಯಾವುದೇ ಯೋಚನೆಯಿಲ್ಲದೇ ನೇರವಾಗಿ ಹೇಳುವಂತಹ ಸ್ವಭಾವವಿರುವ ವ್ಯಕ್ತಿ. ಮೈದಾನದಲ್ಲಿ ಆಗಲಿ ಅಥವಾ ಪತ್ರಿಕಾಗೋಷ್ಠಿಗಳಲ್ಲಾಗಲಿ ನೇರ ಉತ್ತರಗಳನ್ನು ನೀಡುವ ವಿರಾಟ್ ಕೊಹ್ಲಿ ಸಾಕಷ್ಟು ಬಾರಿ ತಮ್ಮ ಉತ್ತರಗಳಿಂದ ಸದ್ದು ಮಾಡಿದ್ದಾರೆ. ಇದೀಗ ಇಂಗ್ಲೆಂಡ್ ಪ್ರವಾಸದಲ್ಲಿ ನಿರತರಾಗಿರುವ ವಿರಾಟ್ ಕೊಹ್ಲಿ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯಕ್ಕೂ ಮುನ್ನ ನಡೆಸಿದ ಪತ್ರಿಕಾಗೋಷ್ಠಿಯೊಂದರಲ್ಲಿ ನೇರವಾದ ಉತ್ತರವನ್ನು ನೀಡುವುದರ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

ಭಾರತ vs ಇಂಗ್ಲೆಂಡ್ ತೃತೀಯ ಟೆಸ್ಟ್: ಈ ದಾಖಲೆಗಳ ಮೇಲೆ ಕೊಹ್ಲಿ, ರೋಹಿತ್ ಮತ್ತು ಜೋ ರೂಟ್ ಕಣ್ಣುಭಾರತ vs ಇಂಗ್ಲೆಂಡ್ ತೃತೀಯ ಟೆಸ್ಟ್: ಈ ದಾಖಲೆಗಳ ಮೇಲೆ ಕೊಹ್ಲಿ, ರೋಹಿತ್ ಮತ್ತು ಜೋ ರೂಟ್ ಕಣ್ಣು

ಹೌದು, ಭಾರತ ತಂಡ ಇಂಗ್ಲೆಂಡ್ ಪ್ರವಾಸವನ್ನು ಕೈಗೊಂಡಿರುವ ವಿಷಯ ನಿಮಗೆಲ್ಲಾ ತಿಳಿದೇ ಇದೆ. 5 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲು ಟೀಮ್ ಇಂಡಿಯಾ ಇಂಗ್ಲೆಂಡ್ ಪ್ರವಾಸವನ್ನು ಕೈಗೊಂಡಿದ್ದು ಈಗಾಗಲೇ 2 ಪಂದ್ಯಗಳು ಮುಗಿದಿವೆ. ಈ 2 ಪಂದ್ಯಗಳ ಪೈಕಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಪಂದ್ಯ ನಾಟಿಂಗ್ಹ್ಯಾಮ್ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ನಡೆದಿದ್ದು, ಯಾವುದೇ ಫಲಿತಾಂಶವಿಲ್ಲದೆ ಈ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತ್ತು. ನಂತರ ಭಾರತ ಮತ್ತು ಇಂಗ್ಲೆಂಡ್ ನಡುವೆ ದ್ವಿತೀಯ ಟೆಸ್ಟ್ ಪಂದ್ಯ ಕ್ರಿಕೆಟ್ ಕಾಶಿ ಎಂದೇ ಹೆಸರು ಮಾಡಿರುವ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯಿತು, ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ 151 ರನ್‌ಗಳ ಜಯ ಸಾಧಿಸುವುದರ ಮೂಲಕ ಸರಣಿಯಲ್ಲಿ 1-0 ಅಂತರದ ಮುನ್ನಡೆಯನ್ನು ಸಾಧಿಸಿದೆ.

ಭಾರತ vs ಇಂಗ್ಲೆಂಡ್: ತೃತೀಯ ಟೆಸ್ಟ್‌ನಲ್ಲಿ ಅಶ್ವಿನ್‌ಗೆ ಸ್ಥಾನ ನೀಡುವುದರ ಬಗ್ಗೆ ಮೌನ ಮುರಿದ ಕೊಹ್ಲಿಭಾರತ vs ಇಂಗ್ಲೆಂಡ್: ತೃತೀಯ ಟೆಸ್ಟ್‌ನಲ್ಲಿ ಅಶ್ವಿನ್‌ಗೆ ಸ್ಥಾನ ನೀಡುವುದರ ಬಗ್ಗೆ ಮೌನ ಮುರಿದ ಕೊಹ್ಲಿ

ಹೀಗೆ ಸರಣಿಯಲ್ಲಿ ಮುನ್ನಡೆಯನ್ನು ಸಾಧಿಸಿರುವ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯವನ್ನಾಡಲು ಸಜ್ಜಾಗಿದ್ದು, ಪಂದ್ಯದ ಹಿಂದಿನ ದಿನ ( ಮಂಗಳವಾರ, ಆಗಸ್ಟ್ 25 ) ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡು ಪತ್ರಕರ್ತರು ಕೇಳಿದ ವಿವಿಧ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಹಾಗೂ ಹೆಡಿಂಗ್ಲೆಯಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಕುರಿತು ಮಾತನಾಡಿರುವ ವಿರಾಟ್ ಕೊಹ್ಲಿ ಇಂಗ್ಲೆಂಡ್ ಪಿಚ್‌ಗಳ ಕುರಿತು ಸಹ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ನೀನು ಎಷ್ಟೇ ದೊಡ್ಡ ಬ್ಯಾಟ್ಸ್‌ಮನ್‌ ಆದರೂ ಇಲ್ಲಿ ಅಹಂ ಮುಚ್ಚಿಟ್ಟು ಆಡಬೇಕು ಎಂದ ಕೊಹ್ಲಿ!ನೀನು ಎಷ್ಟೇ ದೊಡ್ಡ ಬ್ಯಾಟ್ಸ್‌ಮನ್‌ ಆದರೂ ಇಲ್ಲಿ ಅಹಂ ಮುಚ್ಚಿಟ್ಟು ಆಡಬೇಕು ಎಂದ ಕೊಹ್ಲಿ!

ಹೀಗೆ ಇಂಗ್ಲೆಂಡ್ ವಿರುದ್ಧ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯದ ಕುರಿತು ಮಾತನಾಡಿದ ವಿರಾಟ್ ಕೊಹ್ಲಿ ಈ ಕೆಳಕಂಡ ಅಂಶಗಳ ಕುರಿತು ಚರ್ಚೆಗಳನ್ನು ನಡೆಸಿದ್ದಾರೆ..

ಇಂಗ್ಲೆಂಡ್ ಪಿಚ್‌ಗಳಲ್ಲಿ ಸರಾಗವಾಗಿ ಬ್ಯಾಟ್ ಬೀಸುವುದು ಸುಲಭದ ಮಾತಲ್ಲ

ಇಂಗ್ಲೆಂಡ್ ಪಿಚ್‌ಗಳಲ್ಲಿ ಸರಾಗವಾಗಿ ಬ್ಯಾಟ್ ಬೀಸುವುದು ಸುಲಭದ ಮಾತಲ್ಲ

ಲೀಡ್ಸ್ ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ ಇಂಗ್ಲೆಂಡ್ ದೇಶದ ಪಿಚ್‌ಗಳ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಇಂಗ್ಲೆಂಡ್ ದೇಶದ ಪಿಚ್‌ಗಳಲ್ಲಿ ಆಡುವಾಗ ತುಂಬಾ ಎಚ್ಚರಿಕೆಯಿಂದ ಬ್ಯಾಟ್ ಬೀಸಬೇಕು, 30 ರನ್ ದಾಟಿದ ನಂತರ ನಾನು ಈ ಪಿಚ್‌ನಲ್ಲಿ ಸರಾಗವಾಗಿ ಬ್ಯಾಟ್ ಬೀಸಬಲ್ಲೆ ಎಂದು ದೊಡ್ಡ ಹೊಡೆತಗಳಿಗೆ ಕೈ ಹಾಕಿದರೆ ಔಟ್ ಆಗುವುದು ಖಚಿತ ಎಂದು ವಿರಾಟ್ ಕೊಹ್ಲಿ ಹೇಳಿಕೆ ನೀಡಿದರು.

ಅಹಂಕಾರವನ್ನು ಜೇಬಿನೊಳಗಿಟ್ಟು ಆಟವಾಡಬೇಕು ಎಂದ ಕೊಹ್ಲಿ

ಅಹಂಕಾರವನ್ನು ಜೇಬಿನೊಳಗಿಟ್ಟು ಆಟವಾಡಬೇಕು ಎಂದ ಕೊಹ್ಲಿ

ಇನ್ನೂ ಮುಂದುವರೆದು ಇಂಗ್ಲೆಂಡ್ ಪಿಚ್‌ಗಳ ಕಠಿಣತೆಯ ಕುರಿತು ಮಾತನಾಡಿದ ವಿರಾಟ್ ಕೊಹ್ಲಿ ಎಂತಹದ್ದೇ ದೊಡ್ಡ ಬ್ಯಾಟ್ಸ್‌ಮನ್‌ಗಳಾದರೂ ಸಹ ಇಂಗ್ಲೆಂಡ್ ನೆಲದಲ್ಲಿ ಆಟವನ್ನು ಆಡುವಾಗ ತಾನೊಬ್ಬ ಸ್ಟಾರ್ ಆಟಗಾರ, ಸ್ಫೋಟಕ ಆಟಗಾರ ಎಂಬ ಅಹಂಕಾರವನ್ನು ಜೇಬಿನೊಳಗಿಟ್ಟು ಆಟವಾಡಬೇಕು ಎಂದು ಹೇಳುವುದರ ಮೂಲಕ ಇಂಗ್ಲೆಂಡ್ ಪಿಚ್‌ಗಳು ಎಷ್ಟು ಅಪಾಯಕಾರಿ ಎಂಬುದನ್ನು ತಿಳಿಸಿದರು.

ಸರಿಯಾದ ನಿರ್ಧಾರದೊಂದಿಗೆ ಬ್ಯಾಟ್ ಬೀಸುವ ನಿಪುಣತೆ ಇರಬೇಕು

ಸರಿಯಾದ ನಿರ್ಧಾರದೊಂದಿಗೆ ಬ್ಯಾಟ್ ಬೀಸುವ ನಿಪುಣತೆ ಇರಬೇಕು

ಇಂಗ್ಲೆಂಡ್ ನೆಲದಲ್ಲಿ ಬ್ಯಾಟಿಂಗ್ ಮಾಡುವಾಗ ಆಟಗಾರನಿಗೆ ಯಾವ ಸಮಯದಲ್ಲಿ ಯಾವ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂಬ ನಿಪುಣತೆ ಇರಲೇಬೇಕು ಎಂದು ವಿರಾಟ್ ಕೊಹ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆಟಗಾರ ತನ್ನ ವೃತ್ತಿ ಜೀವನದಲ್ಲಿ ಎಷ್ಟೇ ರನ್ ಕಲೆಹಾಕಿದ್ದರೂ, ದೊಡ್ಡ ಮಟ್ಟದ ಅನುಭವವಿದ್ದರೂ ಇಂಗ್ಲೆಂಡ್ ನೆಲದಲ್ಲಿ ಬ್ಯಾಟ್ ಬೀಸುವಾಗ ಜಾಗರೂಕತೆಯಿಂದ ನಿರ್ಧಾರವನ್ನು ಕೈಗೊಂಡು ಆಟವನ್ನು ಆಡಬೇಕು ಎಂದು ವಿರಾಟ್ ಕೊಹ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

Story first published: Wednesday, August 25, 2021, 3:41 [IST]
Other articles published on Aug 25, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X