ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಧೋನಿಯ ಹೆಲಿಕಾಪ್ಟರ್ ಶಾಟ್‌ಗಳನ್ನು ಯುಎಇನಲ್ಲಿ ನೀವು ನೋಡಲಿದ್ದೀರಿ: ಸುರೇಶ್ ರೈನಾ

You’ll See His Helicopter Shots in Uae’: Suresh Raina

ಸುದೀರ್ಘ ಲಾಕ್‌ಡೌನ್‌ನ ನಂತರ ಐಪಿಎಲ್‌ಗೆ ಎಲ್ಲಾ ಕ್ರಿಕೆಟಿಗರು ಸಜ್ಜಾಗುತ್ತಿದ್ದಾರೆ. ಭಾರತದ ಅನುಭವಿ ಕ್ರಿಕೆಟಿಗ ಸುರೇಶ್ ರೈನಾ ಕೂಡ ಫಿಟ್‌ನೆಸ್ ತಾಲೀಮಿನ ಜೊತೆಗೆ ಅಮ್ರೋಹಾದಲ್ಲಿ ವೇಗಿ ಮೊಹಮ್ಮದ್ ಶಮಿ ಫಾರ್ಮ್‌ಹೌಸ್‌ನ ಮೈದಾನದಲ್ಲಿ ಅಭ್ಯಾಸವನ್ನು ನಡೆಸುತ್ತಾ ಬಂದಿದ್ದಾರೆ. ಈ ಋತುವಿನ ಐಪಿಎಲ್ ಆರಂಭಕ್ಕೆ ನಾವೆಲ್ಲರೂ ಉತ್ಸುಕರಾಗಿದ್ದೇವೆ ಎಂದಿದ್ದಾರೆ ಸುರೇಶ್ ರೈನಾ.

ಈ ಬಾರಿಯ ಐಪಿಎಲ್‌ಗಾಗಿ ನಾವೆಲ್ಲಾ ಕಠಿಣ ಅಭ್ಯಾಸವನ್ನು ನಡೆಸುತ್ತಿದ್ದೇವೆ. ಈ ಆವೃತ್ತಿಯನ್ನು ಎಲ್ಲರೂ ಚೆನ್ನಾಗಿ ಆಸ್ವಾದಿಸುತ್ತಾರೆ ಎಂಬ ವಿಶ್ವಾಸ ನನಗಿದೆ. ಕೊರೊನಾ ವೈರಸ್ ಈ ಬಾರಿ ಸಾಕಷ್ಟು ಬದಲಾವಣೆಗೆ ಕಾರಣವಾಗದೆ. ಹೀಗಾಗಿ 2020 ಅತ್ಯಂತ ಕೆಟ್ಟ ವರ್ಷ ಎನಿಸಿದೆ. ಆದರೆ ನಾವು ಭಾರತೀಯರು ಈ ವೈರಸ್‌ನ ವಿರುದ್ಧದ ಹೋರಾಟದಲ್ಲಿ ಗೆಲ್ಲಲಿದ್ದೇವೆ ಎಂದು ಸುರೇಶ್ ರೈನಾ ಹೇಳಿದ್ದಾರೆ.

ವಿಶ್ವದ ಶ್ರೇಷ್ಠ ಟೆಸ್ಟ್ ತಂಡ ಪ್ರಕಟಿಸಿದ ಚೇತೇಶ್ವರ್ ಪೂಜಾರ: ತಂಡದಲ್ಲಿ ನಾಲ್ವರು ಭಾರತೀಯರುವಿಶ್ವದ ಶ್ರೇಷ್ಠ ಟೆಸ್ಟ್ ತಂಡ ಪ್ರಕಟಿಸಿದ ಚೇತೇಶ್ವರ್ ಪೂಜಾರ: ತಂಡದಲ್ಲಿ ನಾಲ್ವರು ಭಾರತೀಯರು

ಇದೇ ಸಂದರ್ಭದಲ್ಲಿ ಮಹೇಂದ್ರ ಸಿಂಗ್ ಧೋನಿ ವರ್ಷಗಳ ಬಳಿಕ ಕ್ರಿಕೆಟ್‌ಗೆ ಮರಳುತ್ತಿರುವ ಬಗ್ಗೆ ಸುರೇಶ್ ರೈನಾ ಪ್ರತಿಕ್ರಿಯಿಸಿದರು. ಕೊರೊನಾ ವೈರಸ್‌ನ ಭೀತಿಯಿಂದಾಗಿ ಟೂರ್ನಿ ಮುಂದೂಡುವ ಮುನ್ನ ನಾನು ಅವರೊಂದಿಗೆ ಸಾಕಷ್ಟು ಕಾಲ ಇದ್ದು ಅಭ್ಯಾಸವನ್ನು ನಡೆಸಿದ್ದೆ. ಆದಷ್ಟು ಶೀಘ್ರದಲ್ಲಿ ನೀವು ಮರಳಿ ಹೆಲಿಕಾಪ್ಟರ್ ಶಾಟ್‌ಗಳನ್ನು ವೀಕ್ಷಿಸಲಿದ್ದೀರಿ. ಆತನೋರ್ವ ಐಪಿಎಲ್ ಶ್ರೇಷ್ಠ ರಾಯಭಾರಿ ಹಾಗಿ ಶ್ರೇಷ್ಠ ಕ್ರಿಕೆಟಿಗ ಎಂದು ರೈನಾ ಹೇಳಿದ್ದಾರೆ.

ಕನ್ನಡದಲ್ಲಿ ಕ್ರಿಕೆಟ್ ಕಾನೂನು: ಇಂಗ್ಲೀಷ್ ನಂತರ ಕನ್ನಡ ಭಾಷೆಗೆ ಮೊದಲ ಸ್ಥಾನದ ಗೌರವಕನ್ನಡದಲ್ಲಿ ಕ್ರಿಕೆಟ್ ಕಾನೂನು: ಇಂಗ್ಲೀಷ್ ನಂತರ ಕನ್ನಡ ಭಾಷೆಗೆ ಮೊದಲ ಸ್ಥಾನದ ಗೌರವ

ಯುಎಇನಲ್ಲಿ ಐಪಿಎಲ್ ನಡೆಯುತ್ತಿರುವ ಬಗ್ಗೆ ಮಾತನಾಡಿ, ಯುಎಇನಲ್ಲಿ ಬೃಹತ್ ಕ್ರೀಡಾಂಗಣಗಳಿವೆ. ಹಾಗೆಯೇ ನಮ್ಮ ತಂಡದಲ್ಲಿ ಸಾಕಷ್ಟು ಉತ್ಕೃಷ್ಠ ದರ್ಜೆಯ ಆಟಗಾರರಿದ್ದಾರೆ. ಎಂಎಸ್ ಧೋನಿಯಂತಾ ಶ್ರೇಷ್ಠ ಆಟಗಾರರ ಜೊತೆಗೆ ಅಲ್ಲಿನ ಸವಾಲುಗಳನ್ನು ಮೆಟ್ಟಿ ನಿಲ್ಲುತ್ತೇವೆ. ಈಗಾಗಲೇ ಅಲ್ಲಿನ ಕ್ರೀಡಾಂಗಣದಲ್ಲಿ ಒಂದು ಬಾರಿ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಂಡ ಅನುಭವ ಇರುವುದರಿಂದ ಅದು ಸಹಕಾರಿಯಾಗಲಿದೆ ಎಂದು ಭಾವಿಸುತ್ತೇನೆ ಎಂದು ಸುರೇಶ್ ರೈನಾ ಹೇಳಿದ್ದಾರೆ.

ಕಳೆದ ನಾಲ್ಕೈದು ತಿಂಗಳಿನಿಂದ ನಾವು ಕ್ರಿಕೆಟ್‌ನಿಂದ ದೂರವಿದ್ದೇವೆ. ಐಪಿಎಲ್‌ನಲ್ಲಿ ಎಲ್ಲಾ ತಮಡಗಳೂ ಉತ್ತಮವಾಗಿದೆ. ಇದು ತಂಡಗಳಲ್ಲಿ ಮಾನಸಿಕವಾಗಿ ಯಾರು ಬಲಿಷ್ಠರು ಎಂಬ ಹೋರಾಟವೂ ಆಗಿರಲಿದೆ ಎಂದು ಸುರೇಶ್ ರೈನಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Story first published: Thursday, August 6, 2020, 15:52 [IST]
Other articles published on Aug 6, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X