ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಪ್ರೈಸ್ ಟ್ಯಾಗ್' ವಿಷಯವಲ್ಲ, ನೀವು ಪ್ರದರ್ಶನ ನೀಡಬೇಕಷ್ಟೆ: ಮೋರಿಸ್

‘You need to perform, no matter what the price tag is’, says Chris Morris

ನವದೆಹಲಿ: ಹಿಂದಿನ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್)ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದ ದಕ್ಷಿಣ ಆಫ್ರಿಕಾದ ಆಲ್ ರೌಂಡರ್ ಕ್ರಿಸ್ ಮೋರಿಸ್, ಈ ಬಾರಿ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿದ್ದಾರೆ. ಈ ಬಾರಿಯ ಆಟಗಾರರ ಹರಾಜಿನಲ್ಲಿ ಆರ್‌ಆರ್‌ ಫ್ರಾಂಚೈಸಿ ಮೋರಿಸ್ ಅವರನ್ನು ದೊಡ್ಡ ಮೊತ್ತಕ್ಕೆ ಖರೀದಿಸತ್ತು.

ಕ್ರಿಕೆಟ್‌ನಲ್ಲಿ 'ಸಾಫ್ಟ್‌ ಸಿಗ್ನಲ್' ಅಂದ್ರೇನು?, ಇಲ್ಲಿದೆ ಸಂಪೂರ್ಣ ಮಾಹಿತಿಕ್ರಿಕೆಟ್‌ನಲ್ಲಿ 'ಸಾಫ್ಟ್‌ ಸಿಗ್ನಲ್' ಅಂದ್ರೇನು?, ಇಲ್ಲಿದೆ ಸಂಪೂರ್ಣ ಮಾಹಿತಿ

ಆರ್‌ಸಿಬಿ ರಿಲೀಸ್ ಮಾಡಿದ್ದ ಕ್ರಿಸ್ ಮೋರಿಸ್ ಅವರನ್ನು ಕಳೆದ ಫೆಬ್ರವರಿಯಲ್ಲಿ ನಡೆದಿದ್ದ ಆಟಗಾರರ ಹರಾಜಿನ ವೇಳೆ ರಾಜಸ್ಥಾನ್ ರಾಯಲ್ಸ್ ಭರ್ಜರಿ 16.25 ಕೋ.ರೂ.ಗೆ ಖರೀದಿಸಿತ್ತು. ಹೀಗಾಗಿ ಮೋರಿಸ್ ಮೇಲೆ ಈ ಬಾರಿ ಉತ್ತಮ ಪ್ರದರ್ಶನ ನೀಡಲೇಬೇಕಾದ ಒತ್ತಡವಿದೆ.

ಈ ಸೀಸನ್‌ನಲ್ಲೀ ಅತೀ ದುಬಾರಿ ಆಟಗಾರರಾಗಿ ಮೋರಿಸ್ ಗುರುತಿಸಿಕೊಂಡಿದ್ದರು. ಈ ಬಾರಿ ಗಾಯಗೊಂಡಿರುವ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಕೂಡ ಐಪಿಎಲ್ ಆರಂಭಿಕ ಪಂದ್ಯಗಳಲ್ಲಿ ಆಡೋದು ಅನುಮಾನವೆನಿಸಿದೆ. ಹೀಗಾಗಿ ತಂಡದಲ್ಲಿ ವೇಗಿಯ ಜವಾಬ್ದಾರಿಯನ್ನು ಮೋರಿಸ್ ವಹಿಸಿಕೊಳ್ಳಬೇಕಾಗಿ ಬಂದಿದೆ.

ಐಪಿಎಲ್: ಅಭ್ಯಾಸ ಆರಂಭಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರುಐಪಿಎಲ್: ಅಭ್ಯಾಸ ಆರಂಭಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು

'ನಾನು ಆಡಿದ ಪ್ರತೀ ಐಪಿಎಲ್ ತಂಡಗಳಲ್ಲೂ ನನಗೆ ನ್ಯೂ ಬಾಲ್ ಅಥವಾ ಡೆತ್‌ನ ಜವಾಬ್ದಾರಿ ಇರುತ್ತದೆ. ಅದು ನಿಜಕ್ಕೂ ಬದಲಾಗಿಲ್ಲ. ನನ್ನ ತಂಡದಲ್ಲಿ ಯಾವಾಗಲೂ ವೇಗಿಗಳಿರುತ್ತಾರೆ. ನಾನಲ್ಲಿ ಬೆಂಬಲಿಸುವ ಪಾತ್ರ ವಹಿಸುತ್ತೇನೆ. ನಾನು ಮುಂಚೂಣಿ ವೇಗಿಗಳಲ್ಲಿ ಕಾಣಿಸಿಕೊಂಡರೆ ಅದೇನೂ ಹೊಸ ಜವಾಬ್ದಾರಿಯಲ್ಲ. ಪ್ರೈಸ್ ಟ್ಯಾಗ್ ವಿಷಯವಲ್ಲ,' ಎಂದು ಮೋರಿಸ್ ಹೇಳಿಕೊಂಡಿದ್ದಾರೆ.

Story first published: Tuesday, March 30, 2021, 23:10 [IST]
Other articles published on Mar 30, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X