ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಭಾರತೀಯರಿಗೆ ಹೋಲಿಸಿದರೆ ಯುವ ಆಸೀಸ್ ಇನ್ನೂ ಪ್ರೈಮರಿ ಶಾಲೆಯಲ್ಲಿದೆ'

Young Aussies still in primary school compared to Indians, says Greg Chappell

ಮೆಲ್ಬರ್ನ್: ಎದುರಾಳಿ ಭಾರತೀಯರಿಗೆ ಹೋಲಿಸಿದರೆ ಆಸ್ಟ್ರೇಲಿಯಾದ ಯುವ ಕ್ರಿಕೆಟರ್‌ಗಳು ಇನ್ನೂ ಪ್ರೈಮರಿ ಶಾಲೆಯಲ್ಲಿದ್ದಾರೆ ಎಂದು ಭಾರತದ ಮಾಜಿ ಕೋಚ್, ಆಸ್ಟ್ರೇಲಿಯಾನ್ ಮಾಜಿ ಕ್ರಿಕೆಟರ್ ಗ್ರೆಗ್ ಚಾಪೆಲ್ ಹೇಳಿದ್ದಾರೆ. ಮುಂದೊಂದು ದಿನ ಮತ್ತೆ ಮುಖಭಂಗ ತಪ್ಪಿಸಬೇಕಾದರೆ ಆಸ್ಟ್ರೇಲಿಯಾನ್ ಕ್ರಿಕೆಟ್ ಬೋರ್ಡ್ ಯುವ ಪ್ರತಿಭೆಗಳ ಮೇಲೆ ಹೂಡಿಕೆ ಮಾಡಬೇಕು ಎಂದು ಚಾಪೆಲ್ ಹೇಳಿದ್ದಾರೆ.

ಭಾರತ vs ಆಸೀಸ್: ಕಾಕತಾಳೀಯ, ಕುತೂಹಲಕಾರಿ ಅಂಕಿ-ಅಂಶಗಳು!ಭಾರತ vs ಆಸೀಸ್: ಕಾಕತಾಳೀಯ, ಕುತೂಹಲಕಾರಿ ಅಂಕಿ-ಅಂಶಗಳು!

ಆಸ್ಟ್ರೇಲಿಯಾಕ್ಕೆ ಪ್ರವಾಸ ಹೋಗಿದ್ದ ಭಾರತ ತಂಡದ ಅನೇಕ ಪ್ರಮುಖ ಆಟಗಾರರು ಗಾಯಕ್ಕೀಡಾಗಿ ತಂಡದಿಂದ ಹೊರ ಬಿದ್ದಿದ್ದರು. 1-1ರಿಂದ ಸಮಬಲಗೊಂಡಿದ್ದ ಟೆಸ್ಟ್‌ ಸರಣಿ ಗೆಲ್ಲಲು ಪ್ರಮುಖವೆನಿಸಿದ್ದ ನಾಲ್ಕನೇ ಟೆಸ್ಟ್ ಪಂದ್ಯದ ವೇಳೆ ಭಾರತ ಪ್ಲೇಯಿಂಗ್‌ XIನಲ್ಲಿ ಅನುಭವಿ ಆಟಗಾರರೇ ಇರಲಿಲ್ಲ.

ಆದರೆ ಆಸ್ಟ್ರೇಲಿಯಾದ ಬಲಿಷ್ಠ ಪ್ಲೇಯಿಂಗ್ XI ವಿರುದ್ಧ ಭಾರತದ ದುರ್ಬಲ ಪ್ಲೇಯಿಂಗ್‌ XI 4ನೇ ಟೆಸ್ಟ್‌ನಲ್ಲಿ ರೋಚಕ ರೀತಿಯಲ್ಲಿ ಆಡಿ ಗೆದ್ದಿತು. ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯೂ 2-1ರಿಂದ ಭಾರತ ಗೆದ್ದಿತ್ತು. ನಾಲ್ಕನೇ ಟೆಸ್ಟ್‌ನಲ್ಲಿ ಸುಲಭವಾಗಿ ಗೆಲ್ಲುತ್ತೇವೆ ಎಂದು ಭಾವಿಸಿದ್ದ ಆಸ್ಟ್ರೇಲಿಯಾಕ್ಕೆ ಆಘಾತವಾಗಿತ್ತು. ಭಾರತೀಯ ಯುವ ತಂಡ ಅಂಥ ವಿರೋಚಿತ ಪ್ರದರ್ಶನ ನೀಡಿತ್ತು.

ಟೀಮ್ ಇಂಡಿಯಾ ಗೆಲುವಿಗೆ WWE ದಂತಕತೆ ಟ್ರಿಪಲ್ ಎಚ್‌ ಶ್ಲಾಘನೆಟೀಮ್ ಇಂಡಿಯಾ ಗೆಲುವಿಗೆ WWE ದಂತಕತೆ ಟ್ರಿಪಲ್ ಎಚ್‌ ಶ್ಲಾಘನೆ

'ಭಾರತೀಯ ಎದುರಾಳಿಗಳಿಗೆ ಹೋಲಿಸಿದರೆ ನಮ್ಮ ಯುವ ಕ್ರಿಕೆಟಿಗರು ಇನ್ನೂ ದುರ್ಬಲ ಯೋಧರು. ಈ ತಂಡ ಅಂಡರ್-16 ನಿಂದಲೂ ಸವಾಲಿನ ಆಟ ಕಾಣುತ್ತಾ ಬಂದಿದೆ,' ಎಂದು ಸಿಡ್ನಿ ಮಾರ್ನಿಂಗ್ ಹೆರಾಲ್ಡ್‌ನಲ್ಲಿ ಅಂಕಣ ಬರೆದಿರುವ ಚಾಪೆಲ್ ಹೇಳಿದ್ದಾರೆ.

Story first published: Saturday, January 23, 2021, 9:31 [IST]
Other articles published on Jan 23, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X