ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಾಂಗ್ಲಾದೇಶದ ಯುವ ವೇಗಿ ಕಾಝಿ ಅನಿಕ್‌ಗೆ 2 ವರ್ಷಗಳ ನಿಷೇಧ

Young Bangladesh pacer Kazi Anik Islam handed 2 year ban

ಧಾಕಾ, ಜುಲೈ 27: ಬಾಂಗ್ಲಾದೇಶದ ಯುವ ವೇಗಿ ಕಾಝಿ ಅನಿಕ್ ಇಸ್ಲಾಮ್‌ಗೆ ಅಲ್ಲಿನ ರಾಷ್ಟ್ರೀಯ ಕ್ರಿಕೆಟ್ ಬೋರ್ಡ್ 2 ವರ್ಷಗಳ ನಿಷೇಧ ಶಿಕ್ಷೆ ವಿಧಿಸಿದೆ. 2018ರಲ್ಲಿ ನಡೆದಿದ್ದ ಉದ್ದೀಪನ ಪರೀಕ್ಷೆಯಲ್ಲಿ ಕಾಝಿ ಡೋಪಿಂಗ್ ನೀತಿ ಉಲ್ಲಂಘಿಸಿರುವುದು ಕಂಡು ಬಂದಿರುವುದರಿಂದ ಅವರ ಮೇಲೆ ನಿಷೇಧ ಹೇರಲಾಗಿದೆ.

2019ರ ವಿಶ್ವಕಪ್‌ನಲ್ಲಿ ಭಾರತದ ಸೋಲಿಗೆ ಸ್ವಾರಸ್ಯಕರ ಕಾರಣ ಹೇಳಿದ ಚೋಪ್ರಾ2019ರ ವಿಶ್ವಕಪ್‌ನಲ್ಲಿ ಭಾರತದ ಸೋಲಿಗೆ ಸ್ವಾರಸ್ಯಕರ ಕಾರಣ ಹೇಳಿದ ಚೋಪ್ರಾ

2018ರ ಅಂಡರ್-19 ವಿಶ್ವಕಪ್‌ನಲ್ಲಿ ಕಾಝಿ ಅನಿಕ್ ಇಸ್ಲಾಮ್‌ ಬಾಂಗ್ಲಾದ ಮುಂಚೂಣಿ ಬೌಲರ್ ಎನಿಸಿದ್ದರು, ಅತ್ಯಧಿಕ ವಿಕೆಟ್‌ಗಳನ್ನು ಪಡೆದಿದ್ದರು. ಆದರೆ ಆ ಬಳಿಕ ಅದೇ ವರ್ಷ ನಡೆದಿದ್ದ ರಾಷ್ಟ್ರೀಯ ಕ್ರಿಕೆಟ್ ಲೀಗ್‌ನಲ್ಲಿ ಕಾಝಿ ನಿಷೇಧಿತ ಮೆಥಾಂಫೆಟಮೈನ್ ಸೇವಿಸಿದ್ದು ಉದ್ದೀಪನ ಪರೀಕ್ಷೆಯಲ್ಲಿ ಕಂಡುಬಂದಿತ್ತು. ಹೀಗಾಗಿ 21ರ ಹರೆಯದ ಕಾಝಿ ಅವರನ್ನು ತಪ್ಪತಸ್ಥ ಎಂದು ಪರಿಗಣಿಸಲಾಗಿದೆ.

ಬಿಸಿಸಿಐ ವಿರುದ್ಧ ಅಸಮಾಧಾನ ಹೊರಹಾಕಿದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ಬಿಸಿಸಿಐ ವಿರುದ್ಧ ಅಸಮಾಧಾನ ಹೊರಹಾಕಿದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್

'ಅನಿಕ್ ಅವರ ದೋಷದ ಮಟ್ಟವನ್ನು ಪರಿಗಣಿಸುವಾಗ, ಬಿಸಿಬಿ ಆತನ ಯೌವನ ಮತ್ತು ಅನಾನುಭವವನ್ನು ಪರಿಗಣಿಸಿದೆ. ತನ್ನ ಕ್ರೀಡಾ ಪ್ರದರ್ಶನವನ್ನು ಹೆಚ್ಚಿಸುವ ಪ್ರಯತ್ನದಲ್ಲಿ ಅವನು ನಿಷೇಧಿತ ವಸ್ತುವನ್ನು ಸೇವಿಸಲಿಲ್ಲ. ಆತನಿಗೆ ಡೋಪಿಂಗ್ ವಿರೋಧಿ ನೀತಿಯ ಬಗ್ಗೆ ಹೆಚ್ಚಿನ ಜ್ಞಾನ ಇರಲಿಲ್ಲ. ಇದೇ ಆತನ ಡೋಪಿಂಗ್‌ಗೆ ಕಾರಣ ಎಂದು ಬಿಸಿಬಿ ಕಂಡುಕೊಂಡಿದೆ,' ಎಂದು ಬಾಂಗ್ಲಾ ಕ್ರಿಕೆಟ್ ಬೋರ್ಡ್ ಹೇಳಿದೆ.

ಐಸಿಸಿ ಟೆಸ್ಟ್ ಚಾಂಪಿಯನ್‌ಷಿಪ್‌: ಭಾರತ ನಂ.1 ತಂಡ, ಬ್ರಾಡ್ ನಂ.1 ಬೌಲರ್!

'ಈ ಎಲ್ಲಾ ವಿಚಾರಗಳನ್ನು ಪರಿಗಣಿಸಿ, ಅನಿಕ್ ಅವರನ್ನು 2 ವರ್ಷಗಳ ಕಾಲ ಅನರ್ಹರೆಂದು ಪರಿಗಣಿಸಲು ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ ನಿರ್ಧರಿಸಿದೆ,' ಎಂದು ಬಿಸಿಬಿ ಹೇಳಿಕೆ ಮೂಲಕ ತಿಳಿಸಿದೆ. ಒಟ್ಟು 4 ಪ್ರಥಮದರ್ಜೆ ಕ್ರಿಕೆಟ್ ಪಂದ್ಯಗಳನ್ನಾಡಿರುವ ಕಾಝಿ 15 ವಿಕೆಟ್‌ಗಳನ್ನು ಮುರಿಸಿದ್ದಾರೆ.

Story first published: Tuesday, July 28, 2020, 9:59 [IST]
Other articles published on Jul 28, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X