ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಯುವ ಆಟಗಾರರು ಅವರ ಐಪಿಎಲ್ ಆತ್ಮವಿಶ್ವಾಸವನ್ನು ಶ್ರೀಲಂಕಾ ಸರಣಿಗೆ ತಂದುಕೊಳ್ತಾರೆ'

Youngsters will carry their IPL confidence into Sri Lanka series, says Bhuvneshwar Kumar

ಕೊಲಂಬೋ: ಶ್ರೀಲಂಕಾ ಪ್ರವಾಸದಲ್ಲಿರುವ ಭಾರತೀಯ ತಂಡದಲ್ಲಿ ಆರು ಮಂದಿ ಅನ್‌ಕ್ಯಾಪ್ಡ್ ಆಟಗಾರರಿದ್ದಾರೆ. ಲಂಕಾ ಪ್ರವಾಸದಲ್ಲಿರುವ ಈ ತಂಡ ಅನಾನುಭವಿಗಳ ತಂಡವೋ ಅಂತ ಮೇಲ್ನೋಟಕ್ಕೆ ಕಾಣಿಸುತ್ತದೆ. ಆದರೆ ಲಂಕಾ ಪ್ರವಾಸದಲ್ಲಿರುವ ತಂಡದ ಉಪನಾಯಕ ಭುವನೇಶ್ವರ್ ಕುಮಾರ್, ಟೀಮ್ ಇಂಡಿಯಾದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶೆಫಾಲಿ ವರ್ಮಾ, ದೀಪ್ತಿ ಶರ್ಮಾ ಭರ್ಜರಿ ಆಟ, ಇಂಗ್ಲೆಂಡ್ ಎದುರು ಭಾರತಕ್ಕೆ ರೋಚಕ ಜಯಶೆಫಾಲಿ ವರ್ಮಾ, ದೀಪ್ತಿ ಶರ್ಮಾ ಭರ್ಜರಿ ಆಟ, ಇಂಗ್ಲೆಂಡ್ ಎದುರು ಭಾರತಕ್ಕೆ ರೋಚಕ ಜಯ

ಶ್ರೀಲಂಕಾ ಪ್ರವಾಸದಲ್ಲಿರುವ ಭಾರತೀಯ ಸೀಮಿತ ಓವರ್‌ಗಳ ಕ್ರಿಕೆಟ್ ತಂಡದಲ್ಲಿ ಭಾರತದ ಎಂದಿನ ನಾಯಕ ವಿರಾಟ್ ಕೊಹ್ಲಿಯಿಲ್ಲ. ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ. ರವೀಂದ್ರ ಜಡೇಜಾ, ರಿಷಭ್ ಪಂತ್, ಯಾರೂ ಇಲ್ಲ. ಇದೇ ಕಾರಣಕ್ಕೆ ತಂಡದ ನಾಯಕತ್ವ ಶಿಖರ್ ಧವನ್ ಹೆಗಲ ಮೇಲಿದೆ. ಉಪನಾಯಕರಾಗಿ ವೇಗಿ ಭುನನೇಶ್ವರ್ ಕುಮಾರ್ ಹೆಸರಿಸಲ್ಪಟ್ಟಿದ್ದಾರೆ.

ಭಾರತ ತಂಡದಲ್ಲಿ 6 ಮಂದಿ ಅನ್‌ಕ್ಯಾಪ್ಡ್ ಆಟಗಾರರು ಇದ್ದಾರಾದರೂ ಅವರಲ್ಲಿ ಹೆಚ್ಚಿನವರು ಅಮಾನತಾಗಿರುವ 2021ರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದವರೇ. ಹೀಗಾಗಿ ಐಪಿಎಲ್ ವೇಳೆಯ ಆತ್ಮವಿಶ್ವಾಸವನ್ನು ಯುವ ಆಟಗಾರರು ಶ್ರೀಲಂಕಾ ಪ್ರವಾಸದ ವೇಳೆಯೂ ತಂದುಕೊಂಡು ಆಡಲಿದ್ದಾರೆ ಎಂದು ಭುವಿ ಭರವಸೆ ವ್ಯಕ್ತಪಡಿಸಿದ್ದಾರೆ.

ಕೌಂಟಿ ಕ್ರಿಕೆಟ್‌ನಲ್ಲಿ 11 ವರ್ಷಗಳ ಬಳಿಕ ವಿಶೇಷ ದಾಖಲೆ ಬರೆದ ಆರ್ ಅಶ್ವಿನ್ಕೌಂಟಿ ಕ್ರಿಕೆಟ್‌ನಲ್ಲಿ 11 ವರ್ಷಗಳ ಬಳಿಕ ವಿಶೇಷ ದಾಖಲೆ ಬರೆದ ಆರ್ ಅಶ್ವಿನ್

ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನಸೆಳೆದ ಪೃಥ್ವಿ ಶಾ | Oneindia Kannada

"ನಮ್ಮಲ್ಲಿ ಒಳ್ಳೆಯ ಆಟಗಾರರಿದ್ದಾರೆ. ಅವರಿಗೆ ಐಪಿಎಲ್‌ನಲ್ಲಿ ಆಡಿದ ಅನುಭವಿವಿದೆ. ಅವರೆಲ್ಲೂ ಯುವಕರು. ಆದರೆ ಎಲ್ಲರಿಗೂ ಐಪಿಎಲ್‌ನಲ್ಲಿ ಅಥವಾ ಟಿ20 ಕ್ರಿಕೆಟ್‌ನಲ್ಲಿ ಒಂದಷ್ಟು ವರ್ಷಗಳಿಂದ ಆಡಿದ ಅನುಭವವಿದೆ. ಐಪಿಎಲ್‌ನಲ್ಲಿ ಅವರವರ ತಂಡದ ಪರ ಆತ್ಮವಿಶ್ವಾದಿಂದ ಆಡಿದಂತೆ ಇಲ್ಲೂ ಅವರು ಆಡ್ತಾರೆ," ಎಂದು ಸ್ಟಾರ್ ಸ್ಪೋರ್ಟ್ಸ್‌ ಜೊತೆ ಭುವನೇಶ್ವರ್ ಹೇಳಿದ್ದಾರೆ. ಜುಲೈ 18ರಿಂದ ಭಾರತ-ಶ್ರೀಲಂಕಾ ಸರಣಿ ಏಕದಿನ ಪಂದ್ಯದೊಂದಿಗೆ ಆರಂಭಗೊಳ್ಳಲಿದೆ.

Story first published: Monday, July 12, 2021, 15:37 [IST]
Other articles published on Jul 12, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X