ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸತ್ಯ ಮಾತನಾಡಿದ್ದಕ್ಕೆ ಹುಚ್ಚನೆನಿಸಿಕೊಂಡಿದ್ದೆ: ಪಾಕ್ ಮಾಜಿ ನಾಯಕ

Younis Khan Says He Was Considered A Madman For Speaking The Truth

ಪಾಕಿಸ್ತಾನದ ಕ್ರಿಕೆಟ್ ಕಂಡ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳ ಪೈಕಿ ಯೂನಿಸ್ ಖಾನ್ ಕೂಡ ಒಬ್ಬರು. ಟೆಸ್ಟ್ ಕ್ರಿಕೆಟ್‌ನಲ್ಲಿ ಪಾಕಿಸ್ತಾನದ ಪರವಾಗಿ ಆತಿ ಹೆಚ್ಚು ರನ್ ಗಳಿಸಿದ ಹೆಗ್ಗಳಿಕೆಯೂ ಯೂನಿಸ್ ಖಾನ್ ಹೆಸರಿನಲ್ಲೇ ಇದೆ. ನಾಯಕನಾಗಿಯೂ ಯೂನಿಸ್ ಖಾನ್ ಪಾಕಿಸ್ತಾನ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ.

ಕುಂಬ್ಳೆಗೆ 'ಹತ್ತು ವಿಕೆಟ್' ದಾಖಲೆ ತಪ್ಪಿಸಲು ಮಾಡಿದ ತಂತ್ರ ಬಹಿರಂಗ ಪಡಿಸಿದ ವಾಸಿಮ್ ಅಕ್ರಮ್ಕುಂಬ್ಳೆಗೆ 'ಹತ್ತು ವಿಕೆಟ್' ದಾಖಲೆ ತಪ್ಪಿಸಲು ಮಾಡಿದ ತಂತ್ರ ಬಹಿರಂಗ ಪಡಿಸಿದ ವಾಸಿಮ್ ಅಕ್ರಮ್

ಆದರೆ ಈಗ ತಮ್ಮ ನಾಯಕತ್ವದಲ್ಲಿ ಅನುಭವಿಸಿದ ಕೆಲ ಅಹಿತಕರ ವಿಚಾರಗಳ ಬಗ್ಗೆ ಯೂನಿಸ್ ಖಾನ್ ಹೇಳಿಕೊಂಡಿದ್ದಾರೆ. ನಾಯಕನಾಗಿದ್ದ ಸಂದರ್ಭದಲ್ಲಿ ಕೆಲ ಆಟಗಾರರು ಸಹಕರಿಸದೆ ವರ್ತಿಸುತ್ತಿದ್ದ ರೀತಿಯನ್ನು ಯೂನಿಸ್ ಖಾನ್ ಹೇಳಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಪಾಕಿಸ್ತಾನದ ಯುವ ಕ್ರಿಕೆಟಿಗ ಬಾಬರ್ ಅಜಂ ಬಗ್ಗೆಯೂ ಮಾತುಗಳನ್ನಾಡಿದ್ದಾರೆ.

ನೇರವಾಗಿ ಹೇಳುತ್ತಿದ್ದೆ

ನೇರವಾಗಿ ಹೇಳುತ್ತಿದ್ದೆ

ನಾಯಕನಾಗಿದ್ದ ಸಂದರ್ಭದಲ್ಲಿಕೆಲ ಆಟಗಾರರು ನಮ್ಮ ತಂಡಕ್ಕೆ ತಮ್ಮ ಸಂಪೂರ್ಣ ಆಟವನ್ನು ನೀಡುತ್ತಿರಲಿಲ್ಲ. ಅದಕ್ಕಾಗಿ ಕೆಲ ಆಟಗಾರರನ್ನು ಬೊಟ್ಟುಮಾಡಿ ಹೇಳುತ್ತಿದ್ದೆ. ಆದರೆ ಅದನ್ನು ಅವರು ಸ್ವೀಕರಿಸಲು ಸಿದ್ದರಿರಲಿಲ್ಲ. ಇದರಿಂದಾಗಿ ಕಷ್ಟವೆನಿಸುತ್ತಿತ್ತು ಎಂದು ಹೇಳಿಕೊಂಡಿದ್ದಾರೆ.

ಸತ್ಯವನ್ನು ನೇರವಾಗಿ ಹೇಳುತ್ತಿದ್ದೆ

ಸತ್ಯವನ್ನು ನೇರವಾಗಿ ಹೇಳುತ್ತಿದ್ದೆ

ತಂಡಕ್ಕಾಗಿ ನಾನು ಸತ್ಯವನ್ನು ನೇರವಾಗಿ ಹೇಳುತ್ತಿದ್ದೆ. ಆದರೆ ಪರಿಸ್ಥಿತಿ ಹೇಗಿರುತ್ತದೆ ಎಂದರೆ ಸತ್ಯವನ್ನು ಹೇಳಿದರೆ ನಾವು ಹುಚ್ಚರು ಎನಿಸಿಕೊಳ್ಳಬೇಕಾಗುತ್ತದೆ. ಆದರೆ ನನಗೆ ಗೊತ್ತಿತ್ತು, ನಾನು ತಪ್ಪು ಮಾಡುತ್ತಿಲ್ಲವೆಂದು. ಅದಕ್ಕಾಗಿ ನಾನು ಮಾಡುತ್ತಿದ್ದಕ್ಕೆ ನನಗೆ ಹಿಂಜರಿಕೆಯಿರಲಿಲ್ಲ ಎಂದು ಯೂನುಸ್ ಖಾನ್ ಹೇಳಿದ್ದಾರೆ.

ಆಟಗಾರರ ಗುಂಪಿನ ಮೇಲೆ ಬೊಟ್ಟು ಮಾಡಿದ್ದೆ

ಆಟಗಾರರ ಗುಂಪಿನ ಮೇಲೆ ಬೊಟ್ಟು ಮಾಡಿದ್ದೆ

ನಾನು ಒಂದು ಆಟಗಾರರ ಗುಂಪಿನ ಮೇಲೆ ಬೊಟ್ಟು ಮಾಡಿದ್ದೆ. ಅವರಿಂದ ತಂಡಕ್ಕಾಗಿ ಸಂಪೂರ್ಣ ಪ್ರಮಾಣದ ಕೊಡುಗೆ ಸಿಕುತ್ತಿರಲಿಲ್ಲ. ಆದರೆ ತಡವಾಗಿ ಅವರು ಇದನ್ನು ಅರ್ಥಮಾಡಿಕೊಂಡಿದ್ದರು. ಬಳಿಕ ನಾವು ತಂಡವಾಗಿ ಬಹಳ ಕಾಲ ಆಡಿದ್ದೆವು ಎಂದು ಪಾಕಿಸ್ತಾನ ಕ್ರಿಕೆಟ್ ತಮಡದ ಮಾಜಿ ನಾಯಕ ಯೂನಿಸ್ ಖಾನ್ ಹೇಳಿಕೊಂಡಿದ್ದಾರೆ.

ವಿರಾಟ್ ಕೊಹ್ಲಿ ಜೊತೆಗೆ ಬಾಬರ್ ಅಜಂ ಹೋಲಿಕೆ

ವಿರಾಟ್ ಕೊಹ್ಲಿ ಜೊತೆಗೆ ಬಾಬರ್ ಅಜಂ ಹೋಲಿಕೆ

ಇದೇ ಸಂದರ್ಭದಲ್ಲಿ ಪಾಕಿಸ್ತಾನದ ಯುವ ಕ್ರಿಕೆಟಿಗ ಸೀಮಿತ ಓವರ್‌ಗಳ ನಾಯಕ ಬಾಬರ್ ಅಜಂ ಬಗ್ಗೆಯೂ ಯೂನಿಸ್ ಖಾನ್ ಮಾತನಾಡಿದ್ದಾರೆ. ಬಾಬರ್ ಅಜಂ ಅದ್ಭುತ ಆಟಗಾರ. ಆದರೆ ಆತನನ್ನು ಈಗಲೇ ವಿರಾಟ್ ಕೊಹ್ಲಿ ಜೊತೆಗೆ ಹೋಲಿಕೆ ಮಾಡುವುದು ಸರಿಯಲ್ಲ. ಮುಂದಿನ ಐದು ವರ್ಷಗಳ ನಂತರ ಬಾಬರ್ ಸಾಧನೆಯನ್ನು ಕೊಹ್ಲಿ ಜೊತೆಗೆ ಹೋಲಿಕೆ ನಾಡಿಕೊಳ್ಳಲು ಅವಕಾಶವಿದೆ ಎಂದು ಹೇಳಿದ್ದಾರೆ.

Story first published: Monday, May 25, 2020, 17:06 [IST]
Other articles published on May 25, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X