ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಜಿಂಕ್ಯ ರಹಾನೆ ಇಷ್ಟವಾಗೋದು ಇಂಥ ಒಳ್ಳೆಯತನಗಳಿಗಾಗಿಯೇ!

Your attitude was really good, your time will come: Ajinkya Rahane to Kuldeep Yadav

ನವದೆಹಲಿ: ಆಸ್ಟ್ರೇಲಿಯಾದಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯನ್ನು 2-1ರಿಂದ ಗೆದ್ದಿರುವ ಟೀಮ್ ಇಂಡಿಯಾ ಸದ್ಯ ಭಾರತದಲ್ಲಿದೆ. ಆದರೆ ಗಬ್ಬಾ ಡ್ರೆಸಿಂಗ್ ರೂಮ್‌ನಲ್ಲಿ ಭಾರತ ತಂಡದ ಆಟಗಾರರ ಜೊತೆಗೆ ತಂಡದ ನಾಯಕ ಅಜಿಂಕ್ಯ ರಹಾನೆ ನಡೆಸಿರುವ ಪೆಪ್ ಟಾಕ್ ಈಗ ವೈರಲ್ ಆಗಿದೆ. ಬಿಸಿಸಿಐ ಪ್ರಕಟಿಸಿರುವ ವಿಡಿಯೋದಲ್ಲಿ ರಹಾನೆ, ಮೈದಾನದಲ್ಲಿ ಅದ್ಭುತ ಪ್ರದರ್ಶನ ನೀಡಿದ ಆಟಗಾರರನ್ನು ಶ್ಲಾಘಿಸಿದ್ದಾರೆ. ಈ ವೇಳೆ ತಂಡದ ಜೊತೆಗಿದ್ದ ಕುಲದೀಪ್ ಯಾದವ್, ಕಾರ್ತಿಕ್ ತ್ಯಾಗಿ ಅವರನ್ನೂ ಉಲ್ಲೇಖಿಸಲು ರಹಾನೆ ಮರೆಯಲಿಲ್ಲ.

ಭಾರತ vs ಆಸೀಸ್: ಕಾಕತಾಳೀಯ, ಕುತೂಹಲಕಾರಿ ಅಂಕಿ-ಅಂಶಗಳು!ಭಾರತ vs ಆಸೀಸ್: ಕಾಕತಾಳೀಯ, ಕುತೂಹಲಕಾರಿ ಅಂಕಿ-ಅಂಶಗಳು!

ಅಜಿಂಕ್ಯ ರಹಾನೆ ಅಂದರೆ ಖುಷಿಯಾಗೋದು ಇದೇ ಕಾರಣಕ್ಕೆ. ನಾಯಕತ್ವ ನಿರ್ವಹಣೆ ಸಂದರ್ಭದಲ್ಲಿ ಪಕ್ಕಾ ನಾಯಕನಾಗಿ ಜವಾಬ್ದಾರಿ ಮುಗಿಸುವ ರಹಾನೆ, ಸರಳತೆ, ಕ್ರೀಡಾ ಸ್ಫೂರ್ತಿ, ಒಳ್ಳೆಯತನಕ್ಕೂ ಗಮನಸೆಳೆಯುತ್ತಿರುತ್ತಾರೆ.

ಯುವರಾಜ್ ಸಿಂಗ್ ಕೋಚಿಂಗ್ ಬಹಳ ಉಪಯೋಗಕ್ಕೆ ಬಂತು: ಗಿಲ್‌ಯುವರಾಜ್ ಸಿಂಗ್ ಕೋಚಿಂಗ್ ಬಹಳ ಉಪಯೋಗಕ್ಕೆ ಬಂತು: ಗಿಲ್‌

ರಹಾನೆ ಉತ್ತಮ ನಡೆ, ಕ್ರೀಡಾಸ್ಫೂರ್ತಿಗೆ ಅತ್ಯುತ್ತಮ ಉದಾಹರಣೆಯೆಂದರೆ ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಟೆಸ್ಟ್ ಪಂದ್ಯ.

ಭಾರತ vs ಅಫ್ಘಾನ್ ಟೆಸ್ಟ್ ಪಂದ್ಯ

2018ರಲ್ಲಿ ಭಾರತಕ್ಕೆ ಪ್ರವಾಸ ಬಂದಿದ್ದ ಅಫ್ಘಾನಿಸ್ತಾನ ತಂಡ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾರತದ ವಿರುದ್ಧ ಏಕಮಾತ್ರ ಟೆಸ್ಟ್ ಪಂದ್ಯವಾಡಿತ್ತು. ಟೆಸ್ಟ್ ಕ್ರಿಕೆಟ್‌ಗೆ ಹೊಸ ತಂಡವಾಗಿದ್ದ ಅಫ್ಘಾನ್ ಆವತ್ತು ಭಾರತದ ವಿರುದ್ಧ ಸೌಹಾರ್ದ ಪಂದ್ಯ ಆಡಿ ಇನ್ನಿಂಗ್ಸ್‌ ಸಹಿತ 262 ರನ್ ಹೀನಾಯ ಸೋಲನುಭವಿಸಿತ್ತು. ಆದರೆ ವಿಜೇತರಿಗಾಗಿ ನಡೆಸುವ ಫೋಟೋ ಸೆಶನ್ ವೇಳೆ ನಾಯಕ ಅಜಿಂಕ್ಯ ರಹಾನೆ ಅಫ್ಘಾನ್ ತಂಡದವರನ್ನೂ ಜೊತೆಗೆ ಕರೆದು ಫೋಟೋಗೆ ಪೋಸ್ ನೀಡುವಂತೆ ಕೋರಿಕೊಂಡಿದ್ದರು. ಸೋತ ತಂಡವನ್ನು ಕೇವಲವಾಗಿ ಕಾಣದೆ ಗೆದ್ದ ತಂಡವೆಂಬಂತೆ ಗೌರವಿಸಿದ ಅಜಿಂಕ್ಯ ರಹಾನೆಯ ಈ ನಡೆ, ಕ್ರೀಡಾಸ್ಫೂರ್ತಿ ಕ್ರಿಕೆಟ್ ಪ್ರೇಮಿಗಳ ಮನ ಗೆದ್ದಿತ್ತು.

'ನಿಮ್ಮ ಕಾಲ ಬರುತ್ತದೆ'

ಆಸ್ಟ್ರೇಲಿಯಾ ಪ್ರವಾಸ ಸರಣಿಯ ಬಳಿಕವೂ ರಹಾನೆ ಇಂಥ ಉತ್ತಮ ನಡೆಗಾಗಿ ಗಮನ ಸೆಳೆದಿದ್ದಾರೆ. ಆಟಗಾರರ ಬಗ್ಗೆ ಮಾತನಾಡುವಾಗ, 'ಸರಣಿ ಗೆಲುವಿಗೆ ಪ್ರತಿಯೊಬ್ಬರೂ ಅವರದ್ದೇ ಕೊಡುಗೆ ನೀಡಿದ್ದಾರೆ. ಕುಲದೀಪ್ ಯಾದವ್ ಮತ್ತು ಕಾರ್ತಿಕ್ ತ್ಯಾಗಿ ಅವರನ್ನೂ ಇಲ್ಲಿ ಉಲ್ಲೇಖಿಸಲು ಬಯಸುತ್ತೇನೆ. ನಿಮ್ಮ ವರ್ತನೆ ನಿಜಕ್ಕೂ ಚೆನ್ನಾಗಿದೆ. ನಿಮ್ಮ ಸಮಯ ಬರುತ್ತದೆ. ಅಲ್ಲೀವರೆಗೂ ಪರಿಶ್ರಮ ಪಡುವುದನ್ನು ಮುಂದುವರೆಸಿ. ಕಾರ್ತಿಕ್ ತ್ಯಾಗಿ ನೀವೂ ಅದ್ಭುತ ಆಟಗಾರ,' ಎಂದು ರಹಾನೆ ಆಟಗಾರರಿಗೆ ಸ್ಫೂರ್ತಿ ತುಂಬಿದ್ದಾರೆ.

ಪ್ಲೇಯಿಂಗ್‌ XIನಲ್ಲಿ ಆಡಿರಲಿಲ್ಲ

ಪ್ಲೇಯಿಂಗ್‌ XIನಲ್ಲಿ ಆಡಿರಲಿಲ್ಲ

ಕಾರ್ತಿಕ್ ತ್ಯಾಗಿ ಮತ್ತು ಕುಲದೀಪ್ ಯಾದವ್ ಇಬ್ಬರೂ ಆಸ್ಟ್ರೇಲಿಯಾ ಪ್ರವಾಸ ಸರಣಿಯಲ್ಲಿ ಪಾಲ್ಗೊಂಡಿದ್ದರಾದರೂ ಇಬ್ಬರಿಗೂ ಭಾರತ ಪ್ಲೇಯಿಂಗ್‌ XIನಲ್ಲಿ ಕಾಣಿಸಿಕೊಳ್ಳುವ ಅವಕಾಶ ಸಿಕ್ಕಿರಲಿಲ್ಲ. ಆದರೆ ನೆಟ್ ಅಭ್ಯಾಸದ ವೇಳೆ ಮತ್ತು ಸಹಾಯಕರಾಗಿ ತಂಡದ ಜೊತೆಗಿದ್ದು ತಂಡಕ್ಕೆ ಬಲ ತುಂಬಿದ ಚೈನಾಮನ್ ಬೌಲರ್ ಕುಲದೀಪ್ ಮತ್ತು ಯುವ ಬೌಲರ್ ಕಾರ್ತಿಕ್‌ಗೆ ರಹಾನೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಂಡದ ಎಲ್ಲಾ ಆಟಗಾರರನ್ನೂ ಆತ್ಮೀಯವಾಗಿ ಕಾಣುವ, ಎಲ್ಲರಿಗೂ ಹುರುಪು-ಧೈರ್ಯ ತುಂಬುವ ಅಜಿಂಕ್ಯ ರಹಾನೆ ಅದ್ಭುತ ನಾಯಕ ಅಲ್ಲವೆ? (ಚಿತ್ರದಲ್ಲಿ ಕಾರ್ತಿಕ್ ತ್ಯಾಗಿ).

Story first published: Saturday, January 23, 2021, 21:41 [IST]
Other articles published on Jan 23, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X