ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆತನಂತಾ ನಾಯಕನಿಂದ ಮಾತ್ರ ತಂಡ ಚಾಂಪಿಯನ್ ಆಗಲು ಸಾಧ್ಯ: ಯೂಸುಫ್ ಪಠಾಣ್

Yusuf Pathan Picks Ipl Skipper Who Can Win League Even Without Big Players

ಟೀಮ್ ಇಂಡಿಯಾದಲ್ಲಿ ಯೂಸುಫ್ ಪಠಾಣ್ ತುಂಬಾ ಕಾಲ ಸ್ಥಾನ ಉಳಿಸಿಕೊಳ್ಳಲು ಸಾಧ್ಯವಾಗದಿದ್ದರೂ ಐಪಿಎಲ್‌ನಲ್ಲಿ ಸಾಕಷ್ಟು ಯಶಸ್ಸು ಗಳಿಸಿದ್ದಾರೆ. ಅದರಲ್ಲೂ ಮೊದಲ ಐಪಿಎಲ್ ಋತುವಿನಲ್ಲಿ ರಾಜಸ್ಥಾನ ರಾಯಲ್ಸ್ ದೊಡ್ಡ ತಂಡಗಳಿಗೆ ಆಘಾತ ನೀಡಿ ಚಾಂಪಿಯನ್ ಎನಿಸಲು ಪಠಾಣ್ ಪಾತ್ರ ಬಹಳ ದೊಡ್ಡದಿತ್ತು ಎನ್ನುವುದು ನಿಸ್ಸಂಶಯ.

ಈಗ ಯೂಸುಫ್ ಪಠಾಣ್ ತನ್ನ ನೆಚ್ಚಿನ ನಾಯಕನ ಬಗ್ಗೆ ಮಾತುಗಳನ್ನಾಡಿದ್ದಾರೆ. ಸೀನಿಯರ್ ಪಠಾಣ್‌ಗೆ ಆಪ್ತವಾದ ನಾಯಕ ಆಸ್ಟ್ರೇಲಿಯಾದ ಸ್ಪಿನ್ ದಿಗ್ಗಜ ರಾಜಸ್ಥಾನ್ ರಾಯಲ್ಸ್ ತಂಡದ ಮಾಜಿ ನಾಯಕ ಶೇನ್ ವಾರ್ನ್. ಆತನೋರ್ವ ಅದ್ಭುತ ನಾಯಕ ಎಂದು ಪಠಾಣ್ ಮನಸಾರೆ ಹೊಗಳಿದ್ದಾರೆ.

ಕೊರೊನಾ ವೈರಸ್‌ಗೆ ತುತ್ತಾದ ಕತಾರ್ ವಿಶ್ವಕಪ್ ಫುಟ್ಬಾಲ್ ರಾಯಭಾರಿಕೊರೊನಾ ವೈರಸ್‌ಗೆ ತುತ್ತಾದ ಕತಾರ್ ವಿಶ್ವಕಪ್ ಫುಟ್ಬಾಲ್ ರಾಯಭಾರಿ

ಪಂದ್ಯ ಆಟಂಭವಾಗುವುದಕ್ಕಿಂತಲೂ ಮೊದಲು ಎದುರಾಳಿ ಆಟಗಾರನನ್ನು ಯಾವ ರೀತಿ ವಿಕೆಟ್ ಪಡೆಯಬಹುದೆಂದು ವಾರ್ನ್ ವಿವರಿಸುತ್ತಿದ್ದರು, ಮತ್ತು ಅದನ್ನು ಅವರು ಆಟದಲ್ಲಿ ಕಾರ್ಯಗತಗೊಳಿಸಿ ಯಶಸ್ಸು ಗಳಿಸಿದರು ಎಂದು ಎಂದು ಪಠಾಣ್ ಹೇಳಿದ್ದಾರೆ. ಆತನ ಜೊತೆಗೆ ಕೇವಲ ಮೂರು ಅವೃತ್ತಿಗಳಲ್ಲಿ ಮಾತ್ರವೇ ಆಡಲು ಸಾಧ್ಯವಾಯಿತು ಎಂದು ಯುಸೂಫ್ ಪಠಾಣ್ ಹೇಳಿದ್ದಾರೆ.

ದುರದೃಷ್ಟವಶಾತ್ ನಾನು ಕೇವಲ ಮೂರು ವರ್ಷ ಮಾತ್ರವೇ ಆತನ ಜೊತೆಗೆ ಆಟಲು ಸಾಧ್ಯವಾಯಿತು. ಯಾವುದೇ ದೊಡ್ಡ ಆಟಗಾರರಿಲ್ಲದೇ ನಮ್ಮ ತಂಡ ಫೈನಲ್ ಪ್ರವೇಶ ಪಡೆಯುವಂತೆ ಶೇನ್ ವಾರ್ನ್ ಮಾಡಿದರು ಮತ್ತು ಫೈನಲ್ ಪಂದ್ಯವನ್ನು ಗೆದ್ದು ಚಾಂಪಿಯನ್ ಎನಿಸಿತು. ರಾಜಸ್ತಾನ ರಾಯಲ್ಸ್ ತಂಡದಲ್ಲಿ ಆಗ ಅಂತಾರಾಷ್ಟ್ರೀಯ ಆಟಗಾರರಿಗಿಂತ ಹೆಚ್ಚಾಗಿ ಸ್ಥಳೀಯ ಆಟಗಾರರೇ ಇದ್ದರು. ಆತನಂತಾ ನಾಯಕನಿಂದ ಮಾತ್ರವೇ ತನ್ನಲ್ಲಿರುವ ಸೀಮಿತ ಮೂಲಗಳಿಂದ ಕಪ್‌ ಗೆಲ್ಲಲು ಸಾಧ್ಯವಾಯಿತು ಎಂದು ಪಠಾಣ್ ಹೇಳಿದರು.

ಕ್ರಿಕೆಟರ್ ಮನೋಜ್ ತಿವಾರಿಗೆ ಒಲಿಂಪಿಕ್ಸ್‌ ಶೂಟರ್ ಆಗುವಾಸೆ!ಕ್ರಿಕೆಟರ್ ಮನೋಜ್ ತಿವಾರಿಗೆ ಒಲಿಂಪಿಕ್ಸ್‌ ಶೂಟರ್ ಆಗುವಾಸೆ!

37 ವರ್ಷದ ಯೂಸುಫ್ ಪಠಾಣ್ 2008-2010ರ ವರೆಗೆ ರಾಜಸ್ತಾನ ರಾಯಲ್ಸ್ ತಂಡದ ಪ್ರಮುಖ ಆಟಗಾರನಾಗಿದ್ದರು. ಬಳಿಕ ಕೊಲ್ಕತ್ತಾ ತಂಡ ಯೂಸುಫ್ ಪಠಾಣ್ ಅವರನ್ನು ಖರೀದಿಸಿತು. ಅದಾದ ನಂತರ ಸನ್ ರೈಸರ್ಸ್ ಹೈದರಾಬಾದ್ ತಂಡದ ಪಾಲಾಗಿದ್ದರು ಯೂಸುಫ್.

Story first published: Friday, May 1, 2020, 11:46 [IST]
Other articles published on May 1, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X