ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಿಸಿಸಿಐ ಮತ್ತು ಆಯ್ಕೆ ಸಮಿತಿಯ ವಿರುದ್ದ ಯುವರಾಜ್ ಸಿಂಗ್ ವಾಗ್ದಾಳಿ

Yuvaraj Singh criticised Team India management selection committee | BCCI | Oneindia Kannada
Yuvaraj Singh Criticised Team India Management And Selection Committee Over World Cup Lost

ವಿಶ್ವದ ಶ್ರೀಮಂತ ಕ್ರೀಡಾ ಸಂಸ್ಥೆ ಬಿಸಿಸಿಐ ವಿರುದ್ದ ಮಾಜಿ, ರಾಷ್ಟ್ರೀಯ ತಂಡದ ಆಟಗಾರ, ಎಡಗೈ ಬ್ಯಾಟ್ಸ್ ಮ್ಯಾನ್ ಯುವರಾಜ್ ಸಿಂಗ್ ಕಿಡಿಕಾರಿದ್ದಾರೆ. ಯುವರಾಜ್, ಬಿಸಿಸಿಐ ವಿರುದ್ದ ಹರಿಹಾಯುವುದು ಇದೇನು ಮೊದಲಲ್ಲ.

ಈ ಹಿಂದೆ, ಎಂ.ಎಸ್.ಧೋನಿಯವರ ಮುಂದಿನ ಭವಿಷ್ಯದ ಬಗ್ಗೆ ಕೇಳಿದಾಗ, "ಗೊತ್ತಿಲ್ಲ ಬಾಸ್, ಬಿಸಿಸಿಐ ಆಯ್ಕೆ ಮಂಡಳಿಯಲ್ಲಿರುವ ಮಹಾನ್ ಸದಸ್ಯರನ್ನೇ ಕೇಳಿ" ಎಂದು ಯುವರಾಜ್ ಸಿಂಗ್ ವ್ಯಂಗ್ಯವಾಡಿದ್ದರು.

ಶತಕ ಸಿಡಿಸಿ ಗೆಲ್ಲಿಸಿದ ರಾಸ್ ಟೇಯ್ಲರನ್ನು ಹರ್ಭಜನ್ ಪ್ರಶ್ನೆ ಮಾಡಿದ್ದು ಈ 'ವಿಚಿತ್ರ' ಕಾರಣಕ್ಕೆ!!ಶತಕ ಸಿಡಿಸಿ ಗೆಲ್ಲಿಸಿದ ರಾಸ್ ಟೇಯ್ಲರನ್ನು ಹರ್ಭಜನ್ ಪ್ರಶ್ನೆ ಮಾಡಿದ್ದು ಈ 'ವಿಚಿತ್ರ' ಕಾರಣಕ್ಕೆ!!

"ಯೋಯೋ ಟೆಸ್ಟ್ ನಲ್ಲಿ ವಿಫಲರಾದರೆ, ನಿಮಗೆ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ವಿದಾಯದ ಪಂದ್ಯವನ್ನು ಆಡಿಸಲಾಗುವುದು ಎಂದು ಬಿಸಿಸಿಐ ಹೇಳಿತ್ತು" ಎನ್ನುವ ಇವರ ಹೇಳಿಕೆಗೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಮೆಚ್ಚಿದ ಆಸಿಸ್ ಯುವ ಆಟಗಾರ !ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಮೆಚ್ಚಿದ ಆಸಿಸ್ ಯುವ ಆಟಗಾರ !

ಈಗ, ಮತ್ತೆ ಯುವರಾಜ್ ಸಿಂಗ್, ಬಿಸಿಸಿಐ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಕಳೆದ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ, ಭಾರತದ ಸೋಲಿನ ಬಗ್ಗೆ ಯುವಿ ಮಾತನಾಡಿದ್ದಾರೆ. ಮುಂದೆ ಓದಿ..

ಭಾರತ ಸೆಮಿಫೈನಲ್ ನಲ್ಲಿ ನ್ಯೂಜಿಲ್ಯಾಂಡ್ ವಿರುದ್ದ ಸೋತಿತ್ತು

ಭಾರತ ಸೆಮಿಫೈನಲ್ ನಲ್ಲಿ ನ್ಯೂಜಿಲ್ಯಾಂಡ್ ವಿರುದ್ದ ಸೋತಿತ್ತು

2019ರಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್ ನಲ್ಲಿ ಭಾರತ ಸೆಮಿಫೈನಲ್ ನಲ್ಲಿ ನ್ಯೂಜಿಲ್ಯಾಂಡ್ ವಿರುದ್ದ ಸೋತಿತ್ತು. ಭಾರತದ ಬೌಲರ್ ಗಳು ಉತ್ತಮವಾಗಿ ನ್ಯೂಜಿಲ್ಯಾಂಡ್ ತಂಡವನ್ನು ನಿಯಂತ್ರಿಸಿ 239/8 ರನ್ನುಗಳನ್ನಷ್ಟೇ ಬಿಟ್ಟುಕೊಟ್ಟಿದ್ದರು. ಆದರೆ, ಈ ಸಾಧಾರಣ ಮೊತ್ತವನ್ನು ಟೀಂ ಇಂಡಿಯಾಗೆ ಚೇಸ್ ಮಾಡಲಾಗಲಿಲ್ಲ.

ಭಾರತದಲ್ಲಿರುವ ಪ್ರತಿಭಾವಂತ ಕ್ರಿಕೆಟಿಗರು

ಭಾರತದಲ್ಲಿರುವ ಪ್ರತಿಭಾವಂತ ಕ್ರಿಕೆಟಿಗರು

ದುಬೈ ಎಕ್ಸ್ ಪೋ 2020ರಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಯುವರಾಜ್ ಸಿಂಗ್, "ಭಾರತದಲ್ಲಿರುವ ಪ್ರತಿಭಾವಂತ ಕ್ರಿಕೆಟಿಗರನ್ನು ನೋಡಿದರೆ, ಎಲ್ಲಾ ಅಂತರಾಷ್ಟ್ರೀಯ ಪ್ರಶಸ್ತಿಯನ್ನು ನಮ್ಮ ದೇಶವೇ ಗೆಲ್ಲಬೇಕು. ಆದರೆ, ಆರೀತಿ ಆಗದೇ ಇರುವುದು ವಿಷಾದನೀಯ" ಎಂದು ಹೇಳಿದ್ದಾರೆ.

ಬಿಸಿಸಿಐ ವಿರುದ್ದ ಕಿಡಿಕಾರಿದ ಯುವರಾಜ್ ಸಿಂಗ್

ಬಿಸಿಸಿಐ ವಿರುದ್ದ ಕಿಡಿಕಾರಿದ ಯುವರಾಜ್ ಸಿಂಗ್

2019ರಲ್ಲಿ ವಿಶ್ವಕಪ್ ಗಾಗಿ ಭಾರತ ತಂಡದ ಪೂರ್ವತಯಾರಿ ಸ್ವಲ್ಪವೂ ಸರಿಯಿರಲಿಲ್ಲ ಎನ್ನುವುದು ನನ್ನ ಅಭಿಪ್ರಾಯ. ಬಿಸಿಸಿಐ ಮತ್ತು ಆಯ್ಕೆ ಸಮಿತಿ, ಕೆಲವೊಂದು ತಪ್ಪು ನಿರ್ಧಾರವನ್ನು ತೆಗೆದುಕೊಂಡಿತು. ಅದರ ಪ್ರತಿಫಲವೇ ವಿಶ್ವಕಪ್ ನಲ್ಲಿನ ಸೋಲು" ಎಂದು ಯುವರಾಜ್ ಸಿಂಗ್, ಬಿಸಿಸಿಐ ವಿರುದ್ದ ಕಿಡಿಕಾರಿದ್ದಾರೆ.

ಸೌರವ್ ದಾದಾ, ಬಿಸಿಸಿಐ ಅಧ್ಯಕ್ಷ

ಸೌರವ್ ದಾದಾ, ಬಿಸಿಸಿಐ ಅಧ್ಯಕ್ಷ

"ಆದರೆ ಈಗ ಪರಿಸ್ಥಿತಿ ಹಿಂದಿನಂತಿಲ್ಲ. ಸೌರವ್ ದಾದಾ, ಬಿಸಿಸಿಐ ಅಧ್ಯಕ್ಷರಾಗಿದ್ದಾರೆ. ಇವರ ಅವಧಿಯಲ್ಲಿ ಟೀಂ ಇಂಡಿಯಾದ ಸಾಧನೆ ಇನ್ನಷ್ಟು ಎತ್ತರಕ್ಕೆ ಏರಲಿದೆ. ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಟೀಂ ಇಂಡಿಯಾ ಉತ್ತಮ ಸಾಧನೆಯನ್ನು ಮಾಡಲಿದೆ ಎನ್ನುವ ವಿಶ್ವಾಸ ನನಗಿದೆ" ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.

Story first published: Friday, February 7, 2020, 18:44 [IST]
Other articles published on Feb 7, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X