ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಕೆಚ್ಚೆದೆಯ ಬ್ಯಾಟ್ಸ್ಮನ್ ಯುವರಾಜ್ ನಿವೃತ್ತಿ!?

Yuvraj mulls retirement, may seek BCCI nod to compete in private T20 leagues

ನವದೆಹಲಿ, ಮೇ 20: ಚುಟುಕು ಓವರ್‌ ಕ್ರಿಕೆಟ್‌ನಲ್ಲಿ ಭಾರತದ ಶ್ರೇಷ್ಠ ಬ್ಯಾಟ್ಸ್ಮನ್‌ ಆಗಿರುವ ಯುವರಾಜ್ ಸಿಂಗ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಗೆ ಗಂಭೀರ ಚಿಂತನೆ ನಡೆಸುತ್ತಿದ್ದಾರೆ. ನಿವೃತ್ತಿ ಬಳಿಕ ಐಸಿಸಿ ಅನುಮೋದಿತ ಟಿ20 ಲೀಗ್‌ಗಳಲ್ಲಿ ಸ್ವತಂತ್ರ ವೃತ್ತಿಜೀವನ ಆರಂಭಿಸುವತ್ತ ಅವರು ಯೋಚಿಸುತ್ತಿದ್ದಾರೆ ಎನ್ನಲಾಗುತ್ತಿದೆ.

ಎಂ.ಎಸ್‌ ಧೋನಿ ಕುರಿತಾಗಿ ಬ್ರೆಂಡನ್‌ ಮೆಕಲಮ್‌ ಹೇಳಿದ್ದೇನು?ಎಂ.ಎಸ್‌ ಧೋನಿ ಕುರಿತಾಗಿ ಬ್ರೆಂಡನ್‌ ಮೆಕಲಮ್‌ ಹೇಳಿದ್ದೇನು?

ಬಿಸಿಸಿಐನಿಂದ ಅನುಮತಿ ದೊರೆತರೆ ಐಸಿಸಿ ಅನುಮೋದಿತ ವಿದೇಶಿ ಟಿ20 ಲೀಗ್‌ಗಳಲ್ಲಷ್ಟೇ ಕಾಣಿಸಿಕೊಳ್ಳುವ ಬಗ್ಗೆ ಪಂಜಾಬ್ ಎಡಗೈ ಬ್ಯಾಟ್ಸ್ಮನ್ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಇದರರ್ಥ ಯುವಿ ಇನ್ಮುಂದೆ ಭಾರತ ಪರ ಆಡದ ಒಪ್ಪಂದಕ್ಕೆ ಒಳಗಾಗುವುದರಲ್ಲಿದ್ದಾರೆ.

ನಿವೃತ್ತಿ ಹೊಂದಿದ್ದರೂ ವೆಸ್ಟ್‌ ಇಂಡೀಸ್‌ ತಂಡಕ್ಕೆ ರಿಸರ್ವ್‌ ಪ್ಲೇಯರ್‌ ಈತ!ನಿವೃತ್ತಿ ಹೊಂದಿದ್ದರೂ ವೆಸ್ಟ್‌ ಇಂಡೀಸ್‌ ತಂಡಕ್ಕೆ ರಿಸರ್ವ್‌ ಪ್ಲೇಯರ್‌ ಈತ!

'ಪ್ರಥಮದರ್ಜೆ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುವತ್ತ ಯುವರಾಜ್ ಸಿಂಗ್ ಯೋಚಿಸುತ್ತಿದ್ದಾರೆ. ಜಿಟಿ20 (ಕೆನಾಡಾ), ಐರ್ಲೆಂಡ್ ಮತ್ತು ಹಾಲೆಂಡ್ ನಲ್ಲಿನ ಯೂರೋ ಟಿ20ಯಂತ ಟೂರ್ನಿಗಳಲ್ಲಿ ಪಾಲ್ಗೊಳ್ಳುವ ಬಗ್ಗೆ ಅವರು ಬಿಸಿಸಿಐ ಜೊತೆ ಮಾತನಾಡಿ ಬಳಿಕ ಸ್ಪಷ್ಟ ನಿರ್ಧಾರಕ್ಕೆ ಬರಲಿದ್ದಾರೆ' ಎಂದು ಬಿಸಿಸಿಐ ಮೂಲವೊಂದು ಪಿಟಿಐಗೆ ತಿಳಿಸಿದೆ.

ಇತ್ತೀಚೆಗೆ ಭಾರತದ ವೇಗಿ ಇರ್ಫಾನ್ ಪಠಾಣ್ ಅವರು ಕೆರಿಬಿಯನ್ ಪ್ರೀಮಿಯರ್ ಲೀಗ್‌ಗೆ ಹೆಸರು ನೋಂದಾಯಿಸಿದ್ದರು. ಆದರೆ ಪಠಾಣ್ ಈಗಲೂ ಪ್ರಥಮದರ್ಜೆ ಕ್ರಿಕೆಟ್‌ನಲ್ಲಿ ಸಕ್ರಿಯವಾಗಿರುವುದರಿಂದ ಅವರಿಗೆ ಬಿಸಿಸಿಐನಿಂದ ಅನುಮತಿ ದೊರೆತಿಲ್ಲ.

ಕೋಚ್‌ ಲ್ಯಾಂಗರ್‌, ಸ್ಟೀವ್‌ ಸ್ಮಿತ್‌ ಅವರನ್ನು ಹೋಲಿಸಿದ್ದು ಯಾರಿಗೆ ಗೊತ್ತಾ?ಕೋಚ್‌ ಲ್ಯಾಂಗರ್‌, ಸ್ಟೀವ್‌ ಸ್ಮಿತ್‌ ಅವರನ್ನು ಹೋಲಿಸಿದ್ದು ಯಾರಿಗೆ ಗೊತ್ತಾ?

ಪಠಾಣ್‌ಗೆ ಅನುಮತಿ ಸಿಗದಿರುವುದರಿಂದ ಯುವಿ, ನಿವೃತ್ತಿ ನೀಡಿ ಆ ಬಳಿಕ ಸ್ವತಂತ್ರ ವೃತ್ತಿಜೀವನ ಆರಂಭಿಸುವತ್ತ ಯೋಚನೆಯಲ್ಲಿದ್ದಾರೆ. ಯುವರಾಜ್ ಸಿಂಗ್, 278 ಏಕದಿನ ಇನ್ನಿಂಗ್ಸ್‌ಗಳಲ್ಲಿ 36.56 ಸರಾಸರಿಯಂತೆ 8701 ರನ್ ಮತ್ತು 51 ಅಂತಾರಾಷ್ಟ್ರೀಯ ಟಿ20ಗಳಲ್ಲಿ 28.02 ಸರಾಸರಿಯಲ್ಲಿ 1177 ರನ್ ಗಳಿಸಿದ್ದರು.

Story first published: Monday, May 20, 2019, 9:22 [IST]
Other articles published on May 20, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X