ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದಾಖಲೆಗಳನ್ನು ಮುರಿಯಿರಿ ಪಾತ್ರೆಗಳನ್ನಲ್ಲ ಎಂದು ಸಚಿನ್‌ಗೆ ಪ್ರತಿ ಸವಾಲು ಹಾಕಿದ ಯುವಿ

Yuvraj Singh Accepts Sachin Tendulkars Juggle Challenge Using Blindfold In The Kitchen

ಕೊರೊನಾ ವೈರಸ್‌ ಕಾರಣದಿಂದ ಕ್ರಿಕೆಟ್ ಸ್ತಬ್ಧವಾಗಿರುವ ಕಾರಣ ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಕೆಟಿಗರು ಸಾಕಷ್ಟು ಚಟುವಟಿಕೆಯಿಂದಾಗಿದ್ದಾರೆ. ಟ್ವಿಟ್ಟರ್‌ನಲ್ಲಿ ಚಾಲೆಂಜ್ ಹಾಕುವುದು ಅದನ್ನು ಸ್ವೀಕರಿಸುವುದು ಎಲ್ಲವೂ ನಡೆಯುತ್ತಿದೆ. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಕೂಡ ಇದರಲ್ಲಿ ಭಾಗಿಯಾಗಿದ್ದಾರೆ.

ಟೀಮ್ ಇಂಡಿಯಾ ಮಾಜಿ ಆಟಗಾರ ಯುವರಾಜ್ ಸಿಂಗ್ ಸಚಿನ್ ತೆಂಡೂಲ್ಕರ್‌ಗೆ ಮತ್ತೊಂದು ಸವಾಲನ್ನು ಹಾಕಿದ್ದಾರೆ. ಯುವರಾಜ್‌ಸಿಂಗ್‌ಗೆ ಕಣ್ಣು ಮುಚ್ಚಿ ಬ್ಯಾಟ್ ಎಡ್ಜ್‌ನಲ್ಲಿ ಚೆಂಡು ಹೆಚ್ಚು ಬಾರಿ ಬಾರಿಸಲು ಸಚಿನ್ ಸವಾಲನ್ನು ಹಾಕಿದ್ದರು. ಇದಕ್ಕೆ ಯುವರಾಜ್ ಸಿಂಗ್ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಪ್ರತಿ ಸವಾಲನ್ನು ಹಾಕಿದ್ದಾರೆ.

ವಿರಾಟ್ ಕೊಹ್ಲಿ ಹೆಸರಿನಲ್ಲಿರುವ ಈ ಐದು ದಾಖಲೆಯನ್ನು ಮುರಿಯುವುದು ತುಂಬಾ ಕಠಿಣವಿರಾಟ್ ಕೊಹ್ಲಿ ಹೆಸರಿನಲ್ಲಿರುವ ಈ ಐದು ದಾಖಲೆಯನ್ನು ಮುರಿಯುವುದು ತುಂಬಾ ಕಠಿಣ

ಯುವರಾಜ್ ಸಿಂಗ್ ಈ ಬಾರಿ ತಮ್ಮ ಕಿಚನ್‌ನಲ್ಲಿ ಲಟ್ಟಣಿಗೆಯನ್ನು ಹಿಡಿದು ಕಣ್ಣಿಗೆ ಬಟ್ಟೆ ಮುಚ್ಚಿಕೊಂಡು ಚೆಂಡನ್ನು ಹಾರಿಸುತ್ತಾ ಸವಾಲು ಹಾಕಿದ್ದಾರೆ. ಈ ರೀತಿ ಸಚಿನ್ ತೆಂಡೂಲ್ಕರ್ ಶತಕವನ್ನು ಪೂರೈಸಬೇಕು ಎಂದು ಚಾಲೆಂಜ್ ಮಾಡಿದ್ದಾರೆ ಟೀಮ್ ಇಂಡಿಯಾದ ಮಾಜಿ ಸ್ಪೋಟಕ ಆಟಗಾರ ಯುವರಾಜ್ ಸಿಂಗ್.

ಈ ಸಂದರ್ಭದಲ್ಲಿ ಯುವಿ 'ದಾಖಲೆಗಳನ್ನು ಮುರಿಯಿರಿ ಆದರೆ ಅಡುಗೆ ಮನೆಯಲ್ಲಿರುವ ಪಾತ್ರೆಗಳನ್ನು ಮುರಿಯಬೇಡಿ' ಎಂದು ತಮಾಷೆಯಾಗಿಯೇ ಎಚ್ಚರಿಸಿದ್ದಾರೆ. ಈ ಸವಾಲನ್ನು ಸಚಿನ್ ಯಾವ ರೀತಿ ಪೂರೈಸುತ್ತಾರೆ ಎಂಬುದು ಅಭಿಮಾನಿಗಳಿಗೆ ಕುತೂಹಲ ಮೂಡಿಸಿದೆ.

ತನ್ನ ಮೂರು ಬೆಸ್ಟ್ ಆಯ್ಕೆಗಳನ್ನು ಹೆಸರಿಸಿದ ಮಾಜಿ ಆಯ್ಕೆದಾರ ಶ್ರೀಕಾಂತ್ತನ್ನ ಮೂರು ಬೆಸ್ಟ್ ಆಯ್ಕೆಗಳನ್ನು ಹೆಸರಿಸಿದ ಮಾಜಿ ಆಯ್ಕೆದಾರ ಶ್ರೀಕಾಂತ್

ಈ ಹಿಂದೆ ಯುವರಾಜ್ ಸಿಂಗ್ ಸಚಿನ್ ತೆಂಡೂಲ್ಕರ್‌ಗೆ ಬ್ಯಾಟ್‌ನ ಒಂದು ಬದಿಯಲ್ಲಿ ಚೆಂಡನ್ನು ಹಾರಿಸಲು ಚಾಲೆಂಜ್ ನೀಡಿದ್ದರು. ಇದನ್ನು ಸಚಿನ್ ತೆಂಡೂಲ್ಕರ್ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಪೂರೈಸಿದ್ದರು. ಜೊತೆಗೆ ಸುಲಭದ ಸವಾಲು ಬೇಡ ಹೀಗೆ ಕಠಿಣ ಸವಾಲು ನೀಡಿ ಎಂದು ಹಾಸ್ಯವಾಗಿ ಹೇಳಿ ಯುವಿಗೆ ಪ್ರತಿ ಸವಾಲು ಹಾಕಿದ್ದರು. ಈ ಸವಾಲನ್ನು ಯುವರಾಜ್ ಸಿಂಗ್‌ ಸ್ವೀಕರಿಸಿ ಮತ್ತೊಂದು ಚಾಲೆಂಜ್ ನೀಡಿದ್ದಾರೆ.

Story first published: Sunday, May 31, 2020, 16:15 [IST]
Other articles published on May 31, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X