ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಯುವರಾಜ್ ಸಿಂಗ್ ದಂಪತಿ ಮುದ್ದು ಮಗುವಿಗೆ ತಂದೆ - ತಾಯಿಯಾದ ಖುಷಿ ಹಂಚಿಕೊಂಡಿದ್ದು ಹೀಗೆ

Yuvraj Singh and his wife Hazel Keech blessed with baby boy

ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಮತ್ತು ಪತ್ನಿ ಹೇಜಲ್ ಕೀಚ್ ತಂದೆ ತಾಯಿಯಾದ ಖುಷಿಯನ್ನು ಹಂಚಿಕೊಂಡಿದ್ದಾರೆ. ನವೆಂಬರ್‌ 30, 2016ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಯುವರಾಜ್ ಸಿಂಗ್ ಮತ್ತು ಹೇಜೆಲ್ ಕೀಚ್ 5ಕ್ಕೂ ಹೆಚ್ಚು ವರ್ಷಗಳ ಕಾಲ ಅನ್ಯೋನ್ಯವಾಗಿ ಜೀವನ ಸಾಗಿಸುತ್ತಾ ಬಂದಿದ್ದಾರೆ. ಚಂಡೀಗರ್ ಸಮೀಪದ ಫತೇಘರ್ ಸಾಹಿಬ್‌ನಲ್ಲಿ ಮದುವೆಯಾಗಿದ್ದ ಈ ಜೋಡಿ ನಂತರ ಗೋವಾದಲ್ಲಿ ವಿಶೇಷ ಪಾರ್ಟಿಯೊಂದನ್ನು ಕೂಡ ಆಯೋಜಿಸಿತ್ತು ಹಾಗೂ ಈ ಕಾರ್ಯಕ್ರಮದಲ್ಲಿ ಹಲವಾರು ಸೆಲೆಬ್ರಿಟಿಗಳು ಹಾಗೂ ದಿಗ್ಗಜ ಕ್ರಿಕೆಟಿಗರು ಕೂಡ ಭಾಗವಹಿಸಿದ್ದರು.

ವಿಂಡೀಸ್ ಸರಣಿ: ಈ ಆಟಗಾರರ ಮೇಲೆ ನೇತಾಡುತ್ತಿದೆ ತೂಗುಗತ್ತಿ: ರೋಹಿತ್ ನಾಯಕತ್ವ ಬಹುತೇಕ ಫಿಕ್ಸ್: ವರದಿವಿಂಡೀಸ್ ಸರಣಿ: ಈ ಆಟಗಾರರ ಮೇಲೆ ನೇತಾಡುತ್ತಿದೆ ತೂಗುಗತ್ತಿ: ರೋಹಿತ್ ನಾಯಕತ್ವ ಬಹುತೇಕ ಫಿಕ್ಸ್: ವರದಿ

ಹೀಗೆ ಸುಖಕರ ಜೀವನ ಸಾಗಿಸುತ್ತಿರುವ ಯುವರಾಜ್ ಸಿಂಗ್ ಮತ್ತು ಹೇಜೆಲ್ ಕೀಚ್ ಕುಟುಂಬಕ್ಕೆ ಇದೀಗ ನೂತನ ಸದಸ್ಯನ ಆಗಮನವಾಗಿದ್ದು, ಯುವರಾಜ್ ಸಿಂಗ್ ಪತ್ನಿ ಹೇಜಲ್ ಕೀಚ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಷಯವನ್ನು ಯುವರಾಜ್ ಸಿಂಗ್ ಸಾಮಾಜಿಕ ಜಾಲತಾಣಗಳಲ್ಲಿನ ತಮ್ಮ ಅಧಿಕೃತ ಖಾತೆಗಳ ಮೂಲಕ ತಿಳಿಸಿದ್ದು, "ನಮ್ಮ ಎಲ್ಲಾ ಅಭಿಮಾನಿಗಳು, ಕುಟುಂಬ ಮತ್ತು ಸ್ನೇಹಿತರಿಗೆ, ಇಂದು ದೇವರು ನಮಗೆ ಗಂಡು ಮಗುವನ್ನು ಕರುಣಿಸಿದ್ದಾನೆ ಎಂದು ಹಂಚಿಕೊಳ್ಳಲು ನಾವು ಹರ್ಷಿಸುತ್ತೇವೆ. ಈ ಆಶೀರ್ವಾದಕ್ಕಾಗಿ ನಾವು ದೇವರಿಗೆ ಧನ್ಯವಾದ ಹೇಳುತ್ತೇವೆ ಮತ್ತು ನಾವು ಚಿಕ್ಕವರನ್ನು ಜಗತ್ತಿಗೆ ಸ್ವಾಗತಿಸುವಾಗ ನೀವು ನಮ್ಮ ಗೌಪ್ಯತೆಯನ್ನು ಗೌರವಿಸಬೇಕೆಂದು ಬಯಸುತ್ತೇವೆ. ಪ್ರೀತಿಯಿಂದ, ಹೇಜಲ್ ಮತ್ತು ಯುವರಾಜ್" ಎಂದು ಬರೆದುಕೊಂಡಿದ್ದಾರೆ.

ವಿರಾಟ್ ಕೊಹ್ಲಿ ರೀತಿ ಗೌಪ್ಯತೆ ಕಾಪಾಡಿ ಎಂದ ಯುವರಾಜ್ ಸಿಂಗ್

ವಿರಾಟ್ ಕೊಹ್ಲಿ ರೀತಿ ಗೌಪ್ಯತೆ ಕಾಪಾಡಿ ಎಂದ ಯುವರಾಜ್ ಸಿಂಗ್

ಹೀಗೆ ತಾವು ಗಂಡು ಮಗುವಿಗೆ ತಂದೆಯಾಗಿರುವ ಖುಷಿಯನ್ನು ಹಂಚಿಕೊಂಡಿರುವ ಯುವರಾಜ್ ಸಿಂಗ್ ಈ ವಿಷಯವನ್ನು ತಿಳಿಸುವಾಗ ಗೌಪ್ಯತೆಯನ್ನು ಕಾಪಾಡಿ ಎಂದು ಬರೆದುಕೊಂಡಿದ್ದಾರೆ. ಇನ್ನು ಈ ಹಿಂದೆ ವಿರಾಟ್ ಕೊಹ್ಲಿ ಕೂಡ ಇದೇ ರೀತಿ ತಮ್ಮ ಮಗಳಾದ ವಾಮಿಕ ವಿಚಾರದಲ್ಲಿ ಗೌಪ್ಯತೆ ಕಾಪಾಡಿ, ಅವಳ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡಬೇಡಿ ಎಂದು ಮನವಿಯನ್ನೂ ಮಾಡಿಕೊಂಡಿದ್ದರು. ಅದೇ ರೀತಿ ಇದೀಗ ಯುವರಾಜ್ ಸಿಂಗ್ ಕೂಡ ತಮ್ಮ ಮಗುವನ್ನು ಸ್ವಾಗತಿಸುವಾಗ ಗೌಪ್ಯತೆಯನ್ನು ಕಾಪಾಡಿ ಎಂದು ಬರೆದುಕೊಂಡಿದ್ದಾರೆ.

ಪ್ರಸ್ತುತ ನಡೆಯುತ್ತಿರುವ ಲೆಜೆಂಡ್ಸ್ ಲೀಗ್ ಟೂರ್ನಿಗೆ ಯುವರಾಜ್ ಸಿಂಗ್ ಗೈರು

ಪ್ರಸ್ತುತ ನಡೆಯುತ್ತಿರುವ ಲೆಜೆಂಡ್ಸ್ ಲೀಗ್ ಟೂರ್ನಿಗೆ ಯುವರಾಜ್ ಸಿಂಗ್ ಗೈರು

ಇನ್ನು ಸದ್ಯ ಯುಎಇಯಲ್ಲಿ ವಿಶ್ವದ ಹಲವಾರು ಮಾಜಿ ಕ್ರಿಕೆಟಿಗರು ಕಣಕ್ಕಿಳಿದು ಕ್ರಿಕೆಟ್ ಟೂರ್ನಿಯೊಂದರಲ್ಲಿ ಭಾಗವಹಿಸುತ್ತಿದ್ದು ಇದಕ್ಕೆ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಮೆಂಟ್ ಎಂದು ಹೆಸರಿಡಲಾಗಿದೆ. ಈ ಟೂರ್ನಿಯಲ್ಲಿ ಭಾರತ ತಂಡವಾದ ಇಂಡಿಯಾ ಮಹಾರಾಜಾಸ್ ಕೂಡ ಭಾಗವಹಿಸುತ್ತಿದ್ದು ಯುವರಾಜ್ ಸಿಂಗ್ ಈ ತಂಡಕ್ಕೆ ಆಟಗಾರನಾಗಿ ಆಯ್ಕೆಯಾಗಿದ್ದರು. ಆದರೆ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದ ಯುವರಾಜ್ ಸಿಂಗ್ ಟೂರ್ನಿಯಲ್ಲಿ ಇಲ್ಲಿಯವರೆಗೂ ನಡೆದಿರುವ ಇಂಡಿಯಾ ಮಹಾರಾಜಾಸ್ ತಂಡದ 3 ಪಂದ್ಯಗಳಲ್ಲಿ ಯಾವುದೇ ಪಂದ್ಯದಲ್ಲಿಯೂ ಕೂಡ ಭಾಗವಹಿಸಿಲ್ಲ.

ಅಂಕಪಟ್ಟಿಯಲ್ಲಿ ಇಂಡಿಯಾ ಮಹಾರಾಜಾಸ್ ತಂಡಕ್ಕೆ ಕೊನೆಯ ಸ್ಥಾನ

ಅಂಕಪಟ್ಟಿಯಲ್ಲಿ ಇಂಡಿಯಾ ಮಹಾರಾಜಾಸ್ ತಂಡಕ್ಕೆ ಕೊನೆಯ ಸ್ಥಾನ

ಇನ್ನು ಈ ವೇಳೆಗೆ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಮೆಂಟ್ ಅಂಕಪಟ್ಟಿಯಲ್ಲಿ ಇಂಡಿಯಾ ಮಹಾರಾಜಾಸ್ ತಂಡ ಕೊನೆಯ ಸ್ಥಾನದಲ್ಲಿದೆ. ಇಲ್ಲಿಯವರೆಗೂ ಒಟ್ಟು 3 ಪಂದ್ಯಗಳನ್ನಾಡಿರುವ ಇಂಡಿಯಾ ಮಹಾರಾಜಾಸ್ ಮೊದಲನೇ ಪಂದ್ಯದಲ್ಲಿ ಏಷ್ಯಾ ಲಯನ್ಸ್ ವಿರುದ್ಧ ಜಯ ಸಾಧಿಸಿತ್ತು ಆದರೆ, ನಂತರ ನಡೆದ ವರ್ಲ್ಡ್ ಜಯಂಟ್ಸ್ ವಿರುದ್ಧದ ಪಂದ್ಯದಲ್ಲಿ ಸೋಲುಂಡ ಇಂಡಿಯಾ ಮಹಾರಾಜಾಸ್ ಮತ್ತೊಮ್ಮೆ ತೃತೀಯ ಪಂದ್ಯದಲ್ಲಿ ಏಷ್ಯ ಲಯನ್ಸ್ ವಿರುದ್ಧ ಸೆಣಸಾಟ ನಡೆಸಿ ಸೋಲುಂಡಿತು. ಹೀಗೆ ಟೂರ್ನಿಯಲ್ಲಿ ಇಲ್ಲಿಯವರೆಗೂ ಆಡಿರುವ ಇಂಡಿಯಾ ಮಹಾರಾಜಾಸ್ ಒಟ್ಟು 3 ಪಂದ್ಯಗಳಲ್ಲಿ ಕೇವಲ ಒಂದೇ ಒಂದು ಪಂದ್ಯದಲ್ಲಿ ಜಯ ಸಾಧಿಸಿ, 2 ಪಂದ್ಯಗಳಲ್ಲಿ ಸೋತು, 2 ಅಂಕಗಳನ್ನು ಪಡೆದುಕೊಂಡು ಅಂಕಪಟ್ಟಿಯಲ್ಲಿ ತೃತೀಯ ಸ್ಥಾನದಲ್ಲಿದೆ. ಹಾಗೂ 3 ಪಂದ್ಯಗಳನ್ನಾಡಿ ಎರಡರಲ್ಲಿ ಜಯ ಸಾಧಿಸಿರುವ ಏಷ್ಯಾ ಲಯನ್ಸ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, 2 ಪಂದ್ಯಗಳನ್ನಾಡಿ ಒಂದರಲ್ಲಿ ಗೆದ್ದು ಮತ್ತೊಂದರಲ್ಲಿ ಸೋತಿರುವ ವರ್ಲ್ಡ್ ಜಯಂಟ್ಸ್ ದ್ವಿತೀಯ ಸ್ಥಾನದಲ್ಲಿದೆ.

Virat Kohli ಈಗಲೂ ಎಷ್ಟು ವರ್ಷ ಕ್ರಿಕೆಟ್ ಆಡಬಹುದು | Oneindia Kannada

Story first published: Wednesday, January 26, 2022, 8:39 [IST]
Other articles published on Jan 26, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X