ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ಗುಡ್ ಬೈ

ICC World Cup 2019 : ಇನ್ಮುಂದೆ ಯುವಿ ಆಟ ನೋಡಲು ಸಿಗುವುದಿಲ್ಲ..? | Oneindia Kannada
Yuvraj Singh announces retirement from international cricket.

ಮುಂಬೈ, ಜೂನ್ 10: ಪ್ರಥಮದರ್ಜೆ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ಹಿರಿಯ ಕ್ರಿಕೆಟರ್ ಯುವರಾಜ್ ಸಿಂಗ್ ನಿರ್ಧರಿಸಿದ್ದಾರೆ. ಈ ಕುರಿತಂತೆ ವಿವರ ನೀಡಲು ಮುಂಬೈನ ಹೋಟೆಲ್ ವೊಂದರಲ್ಲಿ ಸೋಮವಾರ ಮಧ್ಯಾಹ್ನ ಸುದ್ದಿಗೋಷ್ಠಿ ನಡೆಸಿ ನಿವೃತ್ತಿ ಘೋಷಿಸಿದ್ದಾರೆ.

ನಿವೃತ್ತಿ ಬಳಿಕ ಜಿಟಿ20 (ಕೆನಾಡಾ), ಐರ್ಲೆಂಡ್ ಮತ್ತು ಹಾಲೆಂಡ್ ನಲ್ಲಿನ ಯೂರೋ ಟಿ20ಯಂತ ಟೂರ್ನಿಗಳಲ್ಲಿ ಪಾಲ್ಗೊಳ್ಳುವ ಬಗ್ಗೆ ಅವರು ಬಿಸಿಸಿಐ ಜೊತೆ ಚರ್ಚಿಸಿ, ಸ್ಪಷ್ಟ ನಿರ್ಧಾರಕ್ಕೆ ಬರಲಿದ್ದಾರೆ' ಎಂದು ತಿಳಿದು ಬಂದಿದೆ.

ಯುವರಾಜ್ ಸಿಂಗ್ ಸಿಕ್ಕಿದ್ದು ನನ್ನ ಪುಣ್ಯ ಎಂದ ಹಜೆಲ್ ಯುವರಾಜ್ ಸಿಂಗ್ ಸಿಕ್ಕಿದ್ದು ನನ್ನ ಪುಣ್ಯ ಎಂದ ಹಜೆಲ್

ಭಾರತದ ಹಿರಿಯ ಕ್ರಿಕೆಟರ್, ಆಲ್ ರೌಂಡರ್, ಟಿ20 ಸ್ಪೆಷಲಿಸ್ಟ್ ಯುವರಾಜ್ ಸಿಂಗ್ ಅವರು ಈ ಬಾರಿ ಐಪಿಎಲ್ ನಲ್ಲಿ ಆಡುವುದೇ ಅನುಮಾನ ಎನಿಸಿತ್ತು. ಆದರೆ, ಕೊನೆ ಹಂತದಲ್ಲಿ ಮುಂಬೈ ಇಂಡಿಯನ್ಸ್ ತಂಡ ಸೇರಿದ್ದರು.

ಯುವರಾಜ್ ಸಿಂಗ್ ಹೊಸ ಬ್ರ್ಯಾಂಡ್ ಭರ್ಜರಿ ಓಪನಿಂಗ್

1 ಕೋಟಿ ರು ಕೊಟ್ಟು ಯುವರಾಜ್ ರನ್ನು ಆಯ್ಕೆ ಮಾಡಿತ್ತು. ಜೈಪುರದಲ್ಲಿ ನಡೆದ ಐಪಿಎಲ್ ಹರಾಜಿನ ಮೊದಲ ಸುತ್ತಿನಲ್ಲಿ ಯುವರಾಜ್ ಸಿಂಗ್ ಅವರನ್ನು ಯಾವ ಫ್ರಾಂಚೈಸಿಗಳೂ ಖರೀದಿಸಲು ಮುಂದಾಗಲಿಲ್ಲ. ಒಂದು ಕಾಲಕ್ಕೆ ದೆಹಲಿ ತಂಡಕ್ಕೆ 16 ಕೋಟಿ ರೂ.ಗೆ ಮಾರಾಟವಾಗಿದ್ದರು.

ವಿಶ್ವಕಪ್ ಹೀರೋ ಆಗಿರುವ ಯುವರಾಜ್ ಸಿಂಗ್

ವಿಶ್ವಕಪ್ ಹೀರೋ ಆಗಿರುವ ಯುವರಾಜ್ ಸಿಂಗ್

1996ರಲ್ಲಿ ಅಂಡರ್ 15 ವಿಶ್ವಕಪ್, 2000ರಲ್ಲಿ ಅಂಡರ್ 19 ವಿಶ್ವಕಪ್, 2007ರಲ್ಲಿ ಟಿ20 ವಿಶ್ವಕಪ್, 2011ರ ವಿಶ್ವಕಪ್ ನಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದಿರುವ ಯುವರಾಜ್ ಸಿಂಗ್ ಅವರು ವಿಶ್ವಕಪ್ ಹೀರೋ ಆಗಿ, 2007ರಲ್ಲಿ ಇಂಗ್ಲೆಂಡಿನಲ್ಲಿ 6 ಎಸೆತಗಳಲ್ಲಿ 6 ಸಿಕ್ಸರ್ ಬಾರಿಸಿದ ಕ್ರಿಕೆಟರ್ ಆಗಿ ಅಭಿಮಾನಿಗಳ ಅಚ್ಚು ಮೆಚ್ಚಿನ ಆಟಗಾರರಾಗಿ ಗುರುತಿಸಲ್ಪಟ್ಟಿದ್ದಾರೆ.

ಯುವರಾಜ್ ಸಿಂಗ್ ವೃತ್ತಿ ಬದುಕು

ಯುವರಾಜ್ ಸಿಂಗ್ ವೃತ್ತಿ ಬದುಕು

* 12 ಡಿಸೆಂಬರ್ 1981 ಜನನ
* ಯುವಿ, ಸಿಕ್ಸರ್ ಕಿಂಗ್ ಎಂದು ಪ್ರೀತಿಯಿಂದ ಕರೆಸಿಕೊಳ್ಳುತ್ತಾರೆ
* ಎಡಗೈ ಬ್ಯಾಟ್ಸ್ ಮನ್, ಎಡಗೈ ಸಾಂಪ್ರದಾಯಿಕ ಸಿಕ್ಸರ್
* 12 ನಂಬರ್ ಜರ್ಸಿ, ಆಲ್ ರೌಂಡರ್ 2000 ರಿಂದ 2017

* ಮೊದಲ ಟೆಸ್ಟ್ ಪಂದ್ಯ ನ್ಯೂಜಿಲೆಂಡ್ ವಿರುದ್ಧ 2009ರ ಅಕ್ಟೋಬರ್ 16
* ಕೊನೆ ಟೆಸ್ಟ್ ಪಂದ್ಯ ಇಂಗ್ಲೆಂಡ್ ವಿರುದ್ಧ 9 ಡಿಸೆಂಬರ್ 2012

* ಮೊದಲ ಏಕದಿನ ಪಂದ್ಯ(ಒಡಿಐ) ಕೀನ್ಯಾ ವಿರುದ್ಧ 3 ಅಕ್ಟೋಬರ್ 2000.
* ಕೊನೆ ಏಕದಿನ ಪಂದ್ಯ (ಒಡಿಐ) ವೆಸ್ಟ್ ಇಂಡೀಸ್ ವಿರುದ್ಧ 30 ಜೂನ್ 2017.

1996ರಿಂದ ಪಂಜಾಬ್ ಪರ ರಣಜಿ

1996ರಿಂದ ಪಂಜಾಬ್ ಪರ ರಣಜಿ

* ಟಿ20ಐ : ಸ್ಕಾಟ್ಲೆಂಡ್ 13 ಸೆಪ್ಟೆಂಬರ್ 2017, ಇಂಗ್ಲೆಂಡ್ ವಿರುದ್ಧ 1 ಫೆಬ್ರವರಿ 2017ರಂದು ಕೊನೆ ಪಂದ್ಯ.

* 1996ರಿಂದ ಪಂಜಾಬ್ ಪರ ರಣಜಿ, 2003ರಲ್ಲಿ ಯಾರ್ಕ್ ಷೈರ್, 2008-2010ರ ತನಕ ಕಿಂಗ್ಸ್ ಎಲೆವನ್ ಪಂಜಾಬ್, 2011-2013ರ ತನಕ ಪುಣೆ ವಾರಿಯರ್ಸ್ ಇಂಡಿಯಾ, 2014ರಲ್ಲಿ ಆರ್ ಸಿಬಿ, 2015ರಲ್ಲಿ ಡೆಲ್ಲಿ ಡೇರ್ ಡೆವಿಲ್ಸ್, 2016-17ರಲ್ಲಿ ಸನ್ ರೈಸರ್ಸ್ ಹೈದರಾಬಾದ್, 2018 ಕಿಂಗ್ಸ್ ಎಲೆವನ್ ಪಂಜಾಬ್, 2019ರಲ್ಲಿ ಮುಂಬೈ ಇಂಡಿಯನ್ಸ್

ಭಾರತ ಪರ ಟೆಸ್ಟ್, ಏಕದಿನ ಹಾಗೂ ಟಿ20ನಲ್ಲಿ ಆಡಿದ್ದಾರೆ

ಭಾರತ ಪರ ಟೆಸ್ಟ್, ಏಕದಿನ ಹಾಗೂ ಟಿ20ನಲ್ಲಿ ಆಡಿದ್ದಾರೆ

ಭಾರತ ಪರ
* ಟೆಸ್ಟ್ : 40 ಪಂದ್ಯ, 1900ರನ್, 33.92ರನ್ ಸರಾಸರಿ, 3 ಶತಕ, 11 ಅರ್ಧಶತಕ, 169 ಗರಿಷ್ಠ ರನ್ ಗಳಿಕೆ, 9ವಿಕೆಟ್
* ಏಕದಿನ ಕ್ರಿಕೆಟ್ : 304 ಪಂದ್ಯ, 8,701 ರನ್, 36.55 ರನ್ ಸರಾಸರಿ, 14 ಶತಕ, 52 ಅರ್ಧ ಶತಕ, 150 ಗರಿಷ್ಠ ಮೊತ್ತ, 111 ವಿಕೆಟ್
* ಟಿ20ಐ: 58 ಪಂದ್ಯ, 1177 ರನ್, 28.02 ರನ್ ಸರಾಸರಿ, 77ಅಜೇಯ ಗರಿಷ್ಠ ಮೊತ್ತ, 28 ವಿಕೆಟ್

* ಪ್ರಥಮ ದರ್ಜೆ: 139 ಪಂದ್ಯ, 8965ರನ್, 44.16ರನ್ ಸರಾಸರಿ, 26ಶತಕ, 36 ಅರ್ಧಶತಕ, 260ಗರಿಷ್ಠ ಮೊತ್ತ, 41 ವಿಕೆಟ್.
ಮಾಹಿತಿ ಕೃಪೆ: ಇಎಸ್ ಪಿಎನ್ ಕ್ರಿಕ್ ಇನ್ಫೋ

Story first published: Monday, June 10, 2019, 14:14 [IST]
Other articles published on Jun 10, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X