ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪೊಲೀಸರ ನಡೆಗೆ ಸೆಲ್ಯೂಟ್ ಹೊಡೆದ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್

Yuvraj Singh applauds policemen for sharing food with needy

ಪಂಜಾಬ್, ಏಪ್ರಿಲ್ 4: ಕೊರೊನಾವೈರಸ್‌ ಸೋಂಕಿಗೆ ಇಡೀ ಜಗತ್ತೇ ತತ್ತರಿಸಿದೆ. ಭಾರತದಲ್ಲೂ ಸೋಂಕಿತರ ಸಂಖ್ಯೆ, ಮೃತರ ಸಂಖ್ಯೆ ದಿನೇ ದಿನೇ ಏರುತ್ತಾ ಹೋಗುತ್ತಿದೆ. ಕರೊನಾವೈರಸ್ ಹತ್ತಿಕ್ಕುವುದಕ್ಕಾಗಿ ಭಾರತದಾದ್ಯಂತ ಸದ್ಯ 21 ದಿನಗಳ ನಿಷೇಧ ವಿಧಿಸಲಾಗಿದೆ. ನಿಷೇಧದ ಈ ಹೊತ್ತು ಬಡವರ, ದುರ್ಬಲ ಪಾಡು ಇನ್ನೂ ತೊಂದರೆಗೀಡಾಗಿದೆ.

ಕೊರೊನಾ: ಪ್ರಧಾನಿ ಮೋದಿ ನಡೆಯ ಪರ್ಫೆಕ್ಟ್ ಭವಿಷ್ಯ ನುಡಿಯುತ್ತಿರುವ ಕ್ರಿಕೆಟ್ ಆಟಗಾರಕೊರೊನಾ: ಪ್ರಧಾನಿ ಮೋದಿ ನಡೆಯ ಪರ್ಫೆಕ್ಟ್ ಭವಿಷ್ಯ ನುಡಿಯುತ್ತಿರುವ ಕ್ರಿಕೆಟ್ ಆಟಗಾರ

ಲಾಕ್‌ಡೌನ್ ಜಾರಿಯಲ್ಲಿರುವಾಗ ಸಂಕಷ್ಟಕ್ಕೀಡಾಗಿರುವ ಬಡವರಿಗೆ ನೆರವಾಗುತ್ತಿರುವ ಪೊಲೀಸರ ನಡೆಗೆ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಮೆಚ್ಚುಗೆ ಸೂಚಿಸಿದ್ದಾರೆ. ಬೀದಿ ಬದಿಯ ಬಡಪಾಯಿಗೆ ಪೊಲೀಸರು ಆಹಾರ ನೀಡುತ್ತಿರುವ ವೀಡಿಯೋವನ್ನು ಟ್ವಿಟರ್‌ನಲ್ಲಿ ಹಾಕಿಕೊಂಡಿರುವ ಯುವಿ, ಪೊಲೀಸರ ಕರ್ತವ್ಯವನ್ನು ಶ್ಲಾಘಿಸಿದ್ದಾರೆ.

ವಾಸಿಮ್ ಜಾಫರ್ ವಿಶ್ವಶ್ರೇಷ್ಠ ಏಕದಿನ ತಂಡದಲ್ಲಿ ನಾಲ್ವರು ಭಾರತೀಯರುವಾಸಿಮ್ ಜಾಫರ್ ವಿಶ್ವಶ್ರೇಷ್ಠ ಏಕದಿನ ತಂಡದಲ್ಲಿ ನಾಲ್ವರು ಭಾರತೀಯರು

'ಈ ಪೊಲೀಸರ ಮಾನವೀಯ ನಡೆ ನೋಡುವಾಗ ಹೃದಯ ಕರಗುತ್ತದೆ. ಇಂಥ ಕಷ್ಟದ ಸಂದರ್ಭದಲ್ಲಿ ತಮ್ಮ ಊಟವನ್ನೇ ಬಡವರೊಂದಿಗೆ ಹಂಚಿಕೊಳ್ಳುತ್ತಿರುವ ಈ ಪೊಲೀಸರ ಕೆಲಸವನ್ನು ಎಲ್ಲರೂ ಗೌರವಿಸಬೇಕಾದ್ದು,' ಎಂದು ಶೇರ್ ಮಾಡಿಕೊಂಡಿರುವ ವೀಡಿಯೋ ಜೊತೆ ಸಿಂಗ್ ಬರೆದುಕೊಂಡಿದ್ದಾರೆ.

ಭಾರತದಲ್ಲಿ ಶುಕ್ರವಾರ (ಏಪ್ರಿಲ್ 4) ಕೊರೊನಾ ಸೋಂಕಿತರ ಸಂಖ್ಯೆ 2547ಕ್ಕೆ ಏರಿತ್ತು. ಇದರಲ್ಲಿ 163 ಮಂದಿ ಗುಣಮುಖರಾಗಿದ್ದರೆ, 62 ಮಂದಿ ಸಾವನ್ನಪ್ಪಿದ್ದರು. ವಿಶ್ವದಲ್ಲಿ ಒಟ್ಟಿಗೆ 52172 ಮಂದಿ ಮಾರಕ ಸೋಂಕಿನಿಂದಾಗಿ ಸಾವಿಗೀಡಾಗಿದ್ದಾರೆ.

Story first published: Saturday, May 2, 2020, 22:08 [IST]
Other articles published on May 2, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X