ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮನಮುಟ್ಟುವ ಹಾಗೆ ಸ್ಟುವರ್ಟ್ ಬ್ರಾಡ್‌ಗೆ ಸಂದೇಶ ಬರೆದ ಯುವರಾಜ್ ಸಿಂಗ್!

Yuvraj Singh Appreciates Stuart Broads 500 Test Wicket Haul

ನವದೆಹಲಿ: ಇಂಗ್ಲೆಂಡ್‌ ವೇಗಿ ಸ್ಟುವರ್ಟ್ ಬ್ರಾಡ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅಪರೂಪದ ದಾಖಲೆ ನಿರ್ಮಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 500 ವಿಕೆಟ್ ಪಡೆದ ವಿಶ್ವದ ಕೆಲವೇ ಕೆಲವು ಬೌಲರ್‌ಗಳಲ್ಲಿ ಒಬ್ಬರಾಗಿ ಬ್ರಾಡ್ ಗುರುತಿಸಿಕೊಂಡಿದ್ದಾರೆ. ಈ ವಿಶೇಷ ಸಾಧನೆ ಮೆರೆದಿರುವ ಬ್ರಾಡ್‌ಗೆ ಭಾರತದ ಮಾಜಿ ಸ್ಫೋಟಕ ಬ್ಯಾಟ್ಸ್‌ಮನ್, ಕೆಚ್ಚೆದೆಯ ಮಹಾರಾಜ ಯುವರಾಜ್ ಸಿಂಗ್ ಮನ ಮುಟ್ಟುವ ರೀತೀಲಿ ಸಂದೇಶ ಬರೆದು ಅಭಿನಂದಿಸಿದ್ದಾರೆ.

'ಅವನ ಕ್ರಿಕೆಟ್ ಎಲ್ಲೀವರೆಗೆ ಹೋಗುತ್ತೆ ನೋಡೋಣ': ರೋಹಿತ್ ಟೆಸ್ಟ್ ಭವಿಷ್ಯಕ್ಕೆ ಗಂಭೀರ್ ಹೇಳಿಕೆ'ಅವನ ಕ್ರಿಕೆಟ್ ಎಲ್ಲೀವರೆಗೆ ಹೋಗುತ್ತೆ ನೋಡೋಣ': ರೋಹಿತ್ ಟೆಸ್ಟ್ ಭವಿಷ್ಯಕ್ಕೆ ಗಂಭೀರ್ ಹೇಳಿಕೆ

ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್‌ ಸರಣಿಯ ಎರಡು ಪಂದ್ಯಗಳಲ್ಲಿ ಆಡಿದ್ದ ಸ್ಟುವರ್ಟ್ ಬ್ರಾಡ್ ಭರ್ಜರಿ 16 ವಿಕೆಟ್‌ಗಳನ್ನು ಪಡೆದರಲ್ಲದೆ, 140 ಟೆಸ್ಟ್ ಪಂದ್ಯಗಳಲ್ಲಿ 501 ವಿಕೆಟ್ ಸಾಧನೆಯ ಮೂಲಕ, ಈ ದಾಖಲೆ ನಿರ್ಮಿಸಿದ ವಿಶ್ವದ 4ನೇ ವೇಗಿಯಾಗಿ, ವಿಶ್ವದ 7ನೇ ಬೌಲರ್ ಆಗಿ ಮತ್ತು ಇಂಗ್ಲೆಂಡ್‌ನ 2ನೇ ಆಟಗಾರ (ಜೇಮ್ಸ್ ಆ್ಯಂಡರ್ಸನ್ ಮೊದಲನೆಯವ) ಆಗಿ ಗುರುತಿಸಿಕೊಂಡಿದ್ದರು.

ರೊನಾಲ್ಡೋ, ಮೆಸ್ಸಿ, ನೇಮರ್‌ನಂತೆ ವಿಶಿಷ್ಠ ದಾಖಲೆ ಬರೆದ ವಿರಾಟ್ ಕೊಹ್ಲಿ!ರೊನಾಲ್ಡೋ, ಮೆಸ್ಸಿ, ನೇಮರ್‌ನಂತೆ ವಿಶಿಷ್ಠ ದಾಖಲೆ ಬರೆದ ವಿರಾಟ್ ಕೊಹ್ಲಿ!

ಸ್ಟುವರ್ಟ್ 500 ವಿಕೆಟ್ ದಾಖಲೆ ಪೂರೈಸಿಕೊಂಡಿದ್ದು ವಿಂಡೀಸ್ ವಿರುದ್ಧದ ಮೂರನೇ ಮತ್ತು ಕೊನೆಯ ಟೆಸ್ಟ್‌ನಲ್ಲಿ. ಇದರಲ್ಲಿ ಇಂಗ್ಲೆಂಡ್‌ 269 ರನ್ ಜಯ ಸಾಧಿಸಿದೆ.

ಯುವಿಯ 6 ಸಿಕ್ಸ್ ಬಲಿಪಶು ಬ್ರಾಡ್

ಯುವಿಯ 6 ಸಿಕ್ಸ್ ಬಲಿಪಶು ಬ್ರಾಡ್

ಅಪರೂಪದ ಸಾಧನೆ ತೋರಿದ ಬ್ರಾಡ್‌ಗೆ ಯುವರಾಜ್ ಟ್ವಿಟರ್‌ನಲ್ಲಿ ಅಭಿನಂದಿಸಿದ್ದಾರೆ. ಯುವಿ ಹೀಗೆ ವಿಶೇಷವಾಗಿ ಅಭಿನಂದಿಸಿರುವುದಕ್ಕೆ ಕಾರಣವೂ ಇದೆ. ಅದೇನೆಂದರೆ; ಡರ್ಬನ್‌ನ ಕಿಂಗ್ಸ್‌ಮೀಡ್‌ನಲ್ಲಿ 2007ರಲ್ಲಿ ನಡೆದಿದ್ದ ಐಸಿಸಿಟಿ20 ವಿಶ್ವಕಪ್ 21ನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಯುವರಾಜ್‌ ಸಿಂಗ್ ಓವರ್ ಒಂದರಲ್ಲಿ 6 ಸಿಕ್ಸರ್‌ಗಳನ್ನು ಬಾರಿಸಿದ್ದರು. ಆವತ್ತು ಆ ಓವರ್ ಎಸೆದಿದ್ದು ಇದೇ ಸ್ಟುವರ್ಟ್ ಬ್ರಾಡ್.

ಟೆಸ್ಟ್‌ನಲ್ಲಿ 500+ ವಿಕೆಟ್ ಸಾಧಕರು

ಟೆಸ್ಟ್‌ನಲ್ಲಿ 500+ ವಿಕೆಟ್ ಸಾಧಕರು

ಟೆಸ್ಟ್‌ ಕ್ರಿಕೆಟ್‌ನಲ್ಲಿ 500+ ವಿಕೆಟ್ ದಾಖಲೆ ಈಗ ವಿಶ್ವದ 7 ಬೌಲರ್‌ಗಳ ಹೆಸರಿನಲ್ಲಿದೆ. ಅವೆಂದರೆ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ (87 ಪಂದ್ಯಗಳು), ಭಾರತದ ಅನಿಲ್ ಕುಂಬ್ಳೆ (105), ಆಸ್ಟ್ರೇಲಿಯಾದ ಶೇನ್ ವಾರ್ನ್ (108), ಗ್ಲೆನ್ ಮೆಗ್ರಾತ್ (110), ವೆಸ್ಟ್ ಇಂಡೀಸ್‌ನ ಕರ್ಟ್ನಿ ವಾಲ್ಷ್ (129), ಇಂಗ್ಲೆಂಡ್‌ನ ಜೇಮ್ಸ್ ಆ್ಯಂಡರ್ಸನ್, ಸ್ಟುವರ್ಟ್ ಬ್ರಾಡ್ (140).

ಬ್ರಾಡ್‌, ನಿಂಗೆ ಹ್ಯಾಟ್ಸ್‌ ಆಫ್

ಬ್ರಾಡ್‌ಗೆ ಅಭಿನಂದಿಸಿ ಟ್ವೀಟ್‌ ಮಾಡಿರುವ ಯುವಿ, 'ಸ್ಟುವರ್ಟ್ ಬ್ರಾಡ್ ಬಗ್ಗೆ ನಾನು ಬರೆಯುವಾಗ ಪ್ರತೀ ಸಾರಿಯೂ ಜನ ಅವನನ್ನು 6 ಸಿಕ್ಸ್‌ಗೆ ಸಂಬಂಧ ಕಲ್ಪಿಸುತ್ತಾರೆ ಅನ್ನೋದು ನನಗೆ ಗೊತ್ತಿದೆ. ಇವತ್ತು ನಾನು ನನ್ನೆಲ್ಲಾ ಅಭಿಮಾನಿಗಳಲ್ಲಿ ಕೇಳಿಕೊಳ್ಳುತ್ತೇವೆ, ಆತನ ಸಾಧನೆಗೆ ಅಭಿನಂದಿಸಿ. 500 ಟೆಸ್ಟ್ ವಿಕೆಟ್ ಪಡೆಯೋದೆಂದರೆ ಅದು ಜೋಕಲ್ಲ. ಅದಕ್ಕೆ ಪರಿಶ್ರಮ, ಸಮರ್ಪಣಾ ಭಾವ ಬೇಕು. ಬ್ರಾಡಿ, ನೀನು ದಂತಕತೆ ಕಣೊ. ನಿಂಗೆ ಹ್ಯಾಟ್ಸ್‌ ಆಫ್' ಎಂದು ಬರೆದುಕೊಂಡಿದ್ದಾರೆ.

ಇಂಗ್ಲೆಂಡ್‌ಗೆ ಸರಣಿ ಜಯ

ಇಂಗ್ಲೆಂಡ್‌ಗೆ ಸರಣಿ ಜಯ

ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಬ್ರಾಡ್ ಅವರನ್ನು ಇಂಗ್ಲೆಂಡ್ ಆಡಿಸಿರಲಿಲ್ಲ. ಈ ಪಂದ್ಯದಲ್ಲಿ ಇಂಗ್ಲೆಂಡ್ 4 ವಿಕೆಟ್ ಸೋಲನುಭವಿಸಿತ್ತು. ದ್ವಿತೀಯ ಮತ್ತು ತೃತೀಯ ಟೆಸ್ಟ್‌ನಲ್ಲಿ ಬ್ರಾಡ್ ಮೈದಾನಕ್ಕಿಳಿದಿದ್ದರು. ಇದರಲ್ಲಿ ಇಂಗ್ಲೆಂಡ್ ಕ್ರಮವಾಗಿ 113 ರನ್, 269 ರನ್ ಜಯಭೇರಿ ಬಾರಿಸಿದೆ. ಮೂರು ಪಂದ್ಯಗಳ ಟೆಸ್ಟ್ ಸರಣಿಯೂ 2-1ರಿಂದ ಆಂಗ್ಲರ ವಶವಾಗಿದೆ.

Story first published: Friday, August 14, 2020, 16:03 [IST]
Other articles published on Aug 14, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X