ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಿವೃತ್ತಿ ಹಿಂಪಡೆದು ಕ್ರಿಕೆಟ್‌ಗೆ ಮರಳುವಂತೆ ಯುವರಾಜ್ ಸಿಂಗ್‌ ಕರೆ!

Yuvraj Singh asked to come out of retirement for player-cum-mentor role

ನವದೆಹಲಿ: ಭಾರತೀಯ ಕ್ರಿಕೆಟ್ ಅಭಿಮಾನಿಗಳು ಹೆಚ್ಚು ಪ್ರೀತಿಸುವ ಆಟಗಾರರಲ್ಲಿ ಕೆಚ್ಚೆದೆಯ ಮಹಾರಾಜ ಯುವರಾಜ್ ಸಿಂಗ್ ಕೂಡ ಒಬ್ಬರು. 2007ರ ವಿಶ್ವ ಟಿ20 ಮತ್ತು 2011ರ ಕ್ರಿಕೆಟ್ ವಿಶ್ವಕಪ್‌ನಲ್ಲಿ ಯುವರಾಜ್ ನೀಡಿದ ವೀರೋಚಿತ ಆಟವನ್ನು ಕ್ರಿಕೆಟ್ ಪ್ರೇಮಿಗಳು ಯಾವಾಗಲೂ ನೆನಪಿಸಿಕೊಳ್ಳುತ್ತಾರೆ. ಕಳೆದ ವರ್ಷ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್‌ ಪರ ಆಡಿದ ಬಳಿಕ ಯುವಿ ನಿವೃತ್ತಿ ಘೋಷಿಸಿದ್ದರು.

ಸ್ವಾತಂತ್ರ್ಯೋತ್ಸವ: ಹೆಮ್ಮೆಯೆನಿಸುವ ಭಾರತದ 5 ಸಕ್ರಿಯ ಕ್ರೀಡಾಪಟುಗಳುಸ್ವಾತಂತ್ರ್ಯೋತ್ಸವ: ಹೆಮ್ಮೆಯೆನಿಸುವ ಭಾರತದ 5 ಸಕ್ರಿಯ ಕ್ರೀಡಾಪಟುಗಳು

38ರ ಹರೆಯದ ಯುವಿ 2019ರ ವಿಶ್ವಕಪ್‌ನಲ್ಲಿ ಭಾರತ ತಂಡದಲ್ಲಿ ಆಡುವ ಯೋಚನೆಯಲ್ಲಿದ್ದರೋ ಗೊತ್ತಿಲ್ಲ, ವಿಶ್ವಕಪ್‌ನಲ್ಲಿ ಯುವಿ ಆಡದಿದ್ದಾಗ ಅಭಿಮಾನಿಗಳಿಗಂತೂ ನಿರಾಸೆ ಕಾಡಿತ್ತು. ಅತ್ತ ಸಿಕ್ಸರ್ ಕಿಂಗ್ ಸಿಂಗ್ ವಿಶ್ವಕಪ್ ಮಧ್ಯದಲ್ಲೇ ನಿವೃತ್ತಿ ಘೋಷಿಸಿದಾಗ ಅನೇಕ ಅಭಿಮಾನಿಗಳು ಭಾವುಕರಾಗಿದ್ದರು.

ಟಿ20ಐ: ವಿಶ್ವದಾಖಲೆ ಬರೆದ ಭಾರತೀಯೆ ಅನುರಾಧಾ ದೊಡ್ಡಬಳ್ಳಾಪುರ!ಟಿ20ಐ: ವಿಶ್ವದಾಖಲೆ ಬರೆದ ಭಾರತೀಯೆ ಅನುರಾಧಾ ದೊಡ್ಡಬಳ್ಳಾಪುರ!

ಕ್ರಿಕೆಟ್ ಪ್ರೇಮಿಗಳಿಗೆ ಇಲ್ಲೊಂದು ಕುತೂಹಲಕಾರಿ ಸುದ್ದಿಯಿದೆ. ನಿವೃತ್ತಿ ವಾಪಸ್ ತೆಗೆದುಕೊಳ್ಳುವಂತೆ ಪ್ರಮುಖ ಸ್ಟೇಟ್ ಕ್ರಿಕೆಟ್ ಅಸೋಸಿಯೇಶನ್ ಒಂದು ಯುವರಾಜ್ ಅವರಲ್ಲಿ ಕೇಳಿಕೊಂಡಿರುವುದಾಗಿ ವರದಿಯಾಗಿದೆ.

ಪ್ಲೇಯರ್, ಮೆಂಟರ್ ಪಾತ್ರಕ್ಕೆ ವಿನಂತಿ

ಪ್ಲೇಯರ್, ಮೆಂಟರ್ ಪಾತ್ರಕ್ಕೆ ವಿನಂತಿ

2019ರ ಜೂನ್ 10ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ಯುವರಾಜ್ ಸಿಂಗ್‌ಗೆ ನಿವೃತ್ತಿ ವಾಪಸ್ ಪಡೆದು ಪ್ಲೇಯರ್ ಕಮ್ ಮೆಂಟರ್ ಆಗುವಂತೆ ವಿನಂತಿಯೊಂದು ಬಂದಿತ್ತು ಎನ್ನಲಾಗಿದೆ. ಪಂಜಾಬ್ ಪ್ರತಿಭೆ ಯುವಿ ಅವರಲ್ಲಿ ಪಂಜಾಬ್ ಸ್ಟೇಟ್ ಕ್ರಿಕೆಟ್ ಅಸೋಸಿಯೇಶನ್ ಹೀಗೆ ಕೋರಿಕೊಂಡಿದೆ ಎಂದು ತಿಳಿದುಬಂದಿದೆ.

ಕ್ರಿಕೆಟ್‌ಗೆ ಮರಳಲು ಕೋರಿದ ಪಂಜಾಬ್

ಕ್ರಿಕೆಟ್‌ಗೆ ಮರಳಲು ಕೋರಿದ ಪಂಜಾಬ್

ಈಗಾಗಲೇ ಶುಭ್‌ಮಾನ್ ಗಿಲ್ ಸೇರಿ ಇನ್ನೂ ಕೆಲವರಿಗೆ ಮಾರ್ಗದರ್ಶನ ನೀಡುತ್ತಿರುವ ಯುವಿ ಅವರಲ್ಲಿ ಕಮ್‌ಬ್ಯಾಕ್ ಮಾಡುವಂತೆ, ಆಟಗಾರರಾಗಿ-ಮೆಂಟರ್ ಆಗಿ ರಾಜ್ಯ ಕ್ರಿಕೆಟ್‌ನಲ್ಲಿ ಜವಾಬ್ದಾರಿ ವಹಿಸುವಂತೆ ವಿನಂತಿಸಿದ್ದೇವೆ ಎಂದು ಪಂಜಾಬ್ ಕ್ರಿಕೆಟ್ ಅಸೋಸಿಯೇಶನ್‌ನ ಕಾರ್ಯದರ್ಶಿ ಪುನೀತ್ ಬಲಿ ಶುಕ್ರವಾರ (ಆಗಸ್ಟ್ 14) ಹೇಳಿದ್ದಾರೆ.

'ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇವೆ'

'ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇವೆ'

'ನಿವೃತ್ತಿ ವಾಪಸ್ ಪಡೆಯುವಂತೆ 5-6 ದಿನಗಳ ಹಿಂದೆ ನಾವು ಯುವರಾಜ್ ಅವರಲ್ಲಿ ಕೋರಿಕೊಂಡಿದ್ದೇವೆ. ಅವರ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇವೆ. ಪಂಜಾಬ್‌ಗೆ ಆಟಗಾರರಾಗಿ ಮತ್ತು ಮೆಂಟರ್ ಆಗಿ ಅವರು ಕಾರ್ಯ ನಿರ್ವಹಿಸುವುದಾದರೆ ನಮಗೆಲ್ಲರಿಗೂ ತುಂಬಾ ಖುಷಿ,' ಎಂದು ಬಲಿ ಪಿಟಿಐ ಜೊತೆ ಹೇಳಿಕೊಂಡಿದ್ದಾರೆ.

ಯುವಕರಿಗೆ ಯುವಿ ಕೋಚಿಂಗ್

ಯುವಕರಿಗೆ ಯುವಿ ಕೋಚಿಂಗ್

ಯುಎಇಯಲ್ಲಿ ಸೆಪ್ಟೆಂಬರ್ 19ರಿಂದ ಆರಂಭವಾಗಲಿರುವ ಐಪಿಎಲ್‌ಗಾಗಿ ಸಿದ್ಧತೆ ನಡೆಸುತ್ತಿರುವ ಶುಭ್‌ಮಾನ್ ಗಿಲ್, ಅನ್ಮೋಲ್‌ಪ್ರೀತ್ ಸಿಂಗ್ ಮತ್ತು ಹರ್‌ಪ್ರೀತ್ ಬ್ರಾರ್ ಇಂಥ ಯುವಕರಿಗೆ ಯುವಿ ಸದ್ಯ ಮಾರ್ಗದರ್ಶನ ನೀಡುತ್ತಿದ್ದರೆ. 40 ಟೆಸ್ಟ್ ಪಂದ್ಯಗಳಲ್ಲಿ 1900 ರನ್, 304 ಏಕದಿನ ಪಂದ್ಯಗಳಲ್ಲಿ 8701 ರನ್, 14 ಶತಕ, 58 ಟಿ20ಐ ಪಂದ್ಯಗಳಲ್ಲಿ 1177 ರನ್, 8 ಅರ್ಧ ಶತಕಗಳ ದಾಖಲೆ ಯುವಿ ಹೆಸರಲ್ಲಿದೆ.

Story first published: Saturday, August 15, 2020, 16:52 [IST]
Other articles published on Aug 15, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X