ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತೀಯ ಕ್ರಿಕೆಟ್‌ಗೆ ಕಮ್‌ಬ್ಯಾಕ್‌ ಖಾತರಿಪಡಿಸಿದ ಯುವರಾಜ್ ಸಿಂಗ್!

Yuvraj Singh confirms cricket comeback plans

ನವದೆಹಲಿ: ಭಾರತದ ಮಾಜಿ ಆಲ್ ರೌಂಡರ್ ಯುವರಾಜ್ ಸಿಂಗ್ ಅವರ ಆಟವನ್ನು ಮತ್ತೆ ಅಭಿಮಾನಿಗಳು ಕಣ್ತುಂಬಿಕೊಳ್ಳುವ ಸಾಧ್ಯತೆಯಿದೆ. ಸಿಕ್ಸರ್ ಕಿಂಗ್ ಯುವಿ ಮತ್ತೆ ಭಾರತೀಯ ಕ್ರಿಕೆಟ್‌ಗೆ ಮರಳುವ ಬಗ್ಗೆ ಮಾತನಾಡಿದ್ದಾರೆ. ಎಲ್ಲಾ ಯೋಜನೆಯಂತೆ ನಡೆದರೆ ಸಿಂಗ್ ಮತ್ತೆ ಬ್ಯಾಟ್‌ ಕೈಗೆತ್ತಿಕೊಳ್ಳಲಿದ್ದಾರೆ. ಅಂತಾರಾಷ್ಟ್ರೀಯ ನಿವೃತ್ತಿ ಘೋಷಿಸಿದ್ದ ಯುವಿ ಆ ವೇಳೆ ತಾನಿನ್ನು ವಿದೇಶಿ ಲೀಗ್‌ಗಳಲ್ಲಷ್ಟೇ ಆಡುವುದಾಗಿ ಹೇಳಿಕೊಂಡಿದ್ದರು. ಆದರೆ ಈಗಿನ ಬೆಳವಣಿಗೆಯ ಪ್ರಕಾರ ಯುವಿ ನಿವೃತ್ತಿ ಹಿಂದೆ ಪಡೆಯುವುದರಲ್ಲಿದ್ದಾರೆ.

ಐಪಿಎಲ್‌ನಿಂದ ಹಿಂದೆ ಸರಿದ 7 ಪ್ಲೇಯರ್ಸ್ & ಬದಲಿ ಆಟಗಾರರ ಪೂರ್ಣ ಪಟ್ಟಿಐಪಿಎಲ್‌ನಿಂದ ಹಿಂದೆ ಸರಿದ 7 ಪ್ಲೇಯರ್ಸ್ & ಬದಲಿ ಆಟಗಾರರ ಪೂರ್ಣ ಪಟ್ಟಿ

ಭಾರತದ ಬೆಸ್ಟ್ ಆಲ್ ರೌಂಡರ್ ಯುವಿಯ ಪಂದ್ಯ ನೋಡುವ ಅವಕಾಶ ಅಭಿಮಾನಿಗಳಿಗೆ ಸಿಗುವುದರಲ್ಲಿದೆ. ಎಲ್ಲಾ ಎಣಿಕೆಯಂತೆ ನಡೆದರೆ ಯುವಿ ಮತ್ತೆ ದೇಸಿ ಕ್ರಿಕೆಟ್‌ನಲ್ಲಿ ಪಂಜಾಬ್‌ ಪರ ಆಡಲಿದ್ದಾರೆ. ಆಸ್ಟ್ರೇಲಿಯಾದ ಬಿಗ್‌ ಬ್ಯಾಷ್‌ ಲೀಗ್‌ನಲ್ಲೂ ಯುವಿ ಆಡುವುದರಲ್ಲಿದ್ದಾರೆ.

'ಈ ಸಲ ಕಪ್ ನಮ್ದೆ': ಆರ್‌ಸಿಬಿ ತಂಡಕ್ಕೆ ಅಭಿಮಾನಿ ದಿವ್ಯಶ್ರೀ ಶುಭ ಹಾರೈಕೆ'ಈ ಸಲ ಕಪ್ ನಮ್ದೆ': ಆರ್‌ಸಿಬಿ ತಂಡಕ್ಕೆ ಅಭಿಮಾನಿ ದಿವ್ಯಶ್ರೀ ಶುಭ ಹಾರೈಕೆ

ಇತ್ತೀಚೆಗೆ ಪಂಜಾಬ್‌ ಕ್ರಿಕೆಟ್ ಅಸೋಸಿಯೇಶನ್ ಯುವಿಯಲ್ಲಿ ನಿವೃತ್ತಿ ವಾಪಸ್ ಪಡೆಯುವಂತೆ ಕೇಳಿಕೊಂಡಿತ್ತು. ಅದಕ್ಕೆ ಪ್ರತಿಕ್ರಿಯೆಯಾಗಿ ಯುವಿ ಈಗ ಗ್ರೀನ್ ಸಿಗ್ನಲ್ ನೀಡಿದ್ದಾರೆ.

ಕಳೆದ ವರ್ಷ ನಿವೃತ್ತಿ

ಕಳೆದ ವರ್ಷ ನಿವೃತ್ತಿ

ಯುವರಾಜ್ ಸಿಂಗ್ ಅವರು ಕಳೆದ ವರ್ಷ ಅಂದರೆ ಜೂನ್ 2019ಕ್ಕೆ ಅಂತಾರಾಷ್ಟ್ರೀಯ ನಿವೃತ್ತಿ ಘೋಷಿಸಿದ್ದರು. ಕಳೆದ ಬಾರಿ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ್ದ ಯುವಿ ಒಂದೆರಡು ಪಂದ್ಯಗಳಲ್ಲಿ ಕಣಕ್ಕಿಳಿದು ರಂಜಿಸಿದ್ದರು. ಆದರೆ ಅದ್ಯಾಕೋ ಎಂಐ ತಂಡ ಕೂಡ ಯುವಿಗೆ ಹೆಚ್ಚಿನ ಆದ್ಯತೆ-ಅವಕಾಶ ನೀಡಿದ್ದು ಕಾಣಿಸಿರಲಿಲ್ಲ.

ನಿವೃತ್ತಿ ವಾಪಸ್‌ಗೆ ವಿನಂತಿ

ನಿವೃತ್ತಿ ವಾಪಸ್‌ಗೆ ವಿನಂತಿ

ಈಗಾಗಲೇ ಶುಭ್‌ಮಾನ್ ಗಿಲ್, ಅಭಿಷೇಕ್ ಶರ್ಮಾ, ಪ್ರಭ್‌ಸಿಮ್ರನ್ ಮತ್ತು ಅನ್ಮೋಲ್ಪ್ರೀತ್ ಸಿಂಗ್ ಸೇರಿ ಇನ್ನೂ ಕೆಲವರಿಗೆ ಮಾರ್ಗದರ್ಶನ ನೀಡುತ್ತಿರುವ ಯುವಿ ಅವರಲ್ಲಿ ಕಮ್‌ಬ್ಯಾಕ್ ಮಾಡುವಂತೆ, ಆಟಗಾರರಾಗಿ-ಮೆಂಟರ್ ಆಗಿ ರಾಜ್ಯ ಕ್ರಿಕೆಟ್‌ನಲ್ಲಿ ಜವಾಬ್ದಾರಿ ವಹಿಸುವಂತೆ ವಿನಂತಿಸಿದ್ದೇವೆ ಎಂದು ಪಂಜಾಬ್ ಕ್ರಿಕೆಟ್ ಅಸೋಸಿಯೇಶನ್‌ನ ಕಾರ್ಯದರ್ಶಿ ಪುನೀತ್ ಬಲಿ ಅವರು ಆಗಸ್ಟ್ 14ರಂದು ಹೇಳಿದ್ದರು.

ಯುವಕರು ಕಲಿಯುತ್ತಿದ್ದಾರೆ

ಯುವಕರು ಕಲಿಯುತ್ತಿದ್ದಾರೆ

38ರ ಹರೆಯದ ಯುವಿ ಕ್ರಿಕ್‌ಬಝ್‌ ಜೊತೆ ಮಾತನಾಡಿ, 'ಯುವ ಆಟಗಾರರ ಜೊತೆ ಖುಷಿಯ ಕ್ಷಣಗಳನ್ನು ಕಳೆಯುತ್ತಿದ್ದೇನೆ. ಅವರ ಜೊತೆ ಆಟದ ಬೇರೆ ಬೇರೆ ಆಯಾಮಗಳ ಬಗ್ಗೆ ಮಾತನಾಡುತ್ತಿದ್ದೇನೆ. ನಾನು ಹೇಳುವ ಹಲವಾರು ವಿಚಾರಗಳನ್ನು ಅವರು ಅಳವಡಿಕೊಳ್ಳುತ್ತಿರುವುದನ್ನು ನಾನು ಗಮನಿಸುತ್ತಿದ್ದೇನೆ,' ಎಂದರು.

ಕಮ್‌ಬ್ಯಾಕ್‌ ಖಾತರಿ

ಕಮ್‌ಬ್ಯಾಕ್‌ ಖಾತರಿ

'ನಾನು ಪಂಜಾಬ್ ಪರ ಆಡಬೇಕೆನ್ನುವ ಪುನೀತ್ ಬಲಿ ಅವರ ಆಫರ್ ನಿಜಕ್ಕೂ ತೆಗೆದುಕೊಳ್ಳುತ್ತೇನೋ ಗೊತ್ತಿಲ್ಲ. ನಾನು ಈಗಾಗಲೇ ಸಾಕಷ್ಟು ದೇಸಿ ಕ್ರಿಕೆಟ್‌ಗಳನ್ನು ಆಡಿದ್ದೇನೆ. ಇನ್ನು ವಿದೇಶಿ ಲೀಗ್‌ಗಳಲ್ಲಿ ಆಡಲು ಯೋಚಿಸಿದ್ದೆ. ಆದರೆ ಒಂದು ವೇಳೆ ಬಿಸಿಸಿಐ ಅವಕಾಶ ನೀಡಿದರೆ, ನಾನು ಬಲಿ ಅವರ ವಿನಂತಿಯನ್ನು ಕಡೆಗಣಿಸಲಾರೆ,' ಎಂದು ಯುವಿ ಹೇಳಿದ್ದಾರೆ. ದೊರೆತಿರುವ ಮಾಹಿತಿಯ ಪ್ರಕಾರ ಯುವಿ ಏನಿಲ್ಲವೆಂದರೂ ಪಂಜಾಬ್‌ ಪರ ಟಿ20 ಪಂದ್ಯವಾಡುವ ನಿರೀಕ್ಷೆಯಿದೆ.

Story first published: Thursday, September 10, 2020, 10:02 [IST]
Other articles published on Sep 10, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X