ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

"ವ್ಹಾ.. ಇದು ಆತನೆ..": ತೆಂಡುಲ್ಕರ್ ಅವರ ಮೊದಲ ಭೇಟಿಯನ್ನು ವಿವರಿಸಿದ ಯುವಿ

Yuvraj Singh explains how he was left starstruck after seeing Sachin Tendulkar

ವಿಶ್ವಕ್ರಿಕೆಟ್‌ನ ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ ಹಾಗೂ ಭಾರತ ಕಂಡ ಶ್ರೇಷ್ಠ ಆಲ್‌ರೌಂಡರ್‌ಗಳಲ್ಲಿ ಒಬ್ಬರಾಗಿರುವ ಯುವರಾಜ್ ಸಿಂಗ್ ದಶಕಗಳಿಗೂ ಅಧಿಕಕಾಲ ತಂಡದಲ್ಲಿ ಜೊತೆಯಾಗಿ ಕ್ರಿಕೆಟ್ ಆಡಿದ್ದಾರೆ. ವಿಶ್ವಕಪ್‌ನಂತಾ ಮಹತ್ವದ ಟೂರ್ನಿಗಳನ್ನು ಗೆದ್ದತಂಡದಲ್ಲಿ ಜೊತೆಯಾಗಿ ಆಡಿದ್ದಾರೆ. ಆದರೆ ಯುವಿ ಪ್ರಥಮ ಭಾರಿಗೆ ಟೀಮ್ ಇಂಡಿಯಾಗೆ ಆಯ್ಕೆಯಾದಾಗ ಬಾಲ್ಯದ ಹೀರೋ ಸಚಿನ್ ತೆಂಡೂಲ್ಕರ್ ಅವರನ್ನು ಮೊದಲ ಬಾರಿಗೆ ಕಂಡಾಗ ಆದ ಅನುಭವವನ್ನು ಸ್ವತಃ ಯುವರಾಜ್ ಸಿಂಗ್ ಹಂಚಿಕೊಂಡಿದ್ದಾರೆ.

ಯುವರಾಜ್ ಸಿಂಗ್ ಅಂಡರ್‌ 19 ವಿಶ್ವಕಪ್‌ ಗೆದ್ದ ಬಳಿಕ ಕೆಲವೇ ಸಮಯಗಳಲ್ಲಿ ಟೀಮ್ ಇಂಡಿಯಾದಲ್ಲಿ ಅವಕಾಶವನ್ನು ಪಡೆದಿದ್ದರು. ಹೀಗಾಗಿ ಸೂಪರ್‌ ಸ್ಟಾರ್‌ಗಳನ್ನೇ ತುಂಬಿದ್ದ ಟೀಮ್ ಇಂಡಿಯಾದ ಡ್ರೆಸ್ಸಿಂಗ್‌ರೂಮ್ ಹಂಚಿಕೊಂಡಿದ್ದರು. ಈ ಸಂದರ್ಭದಲ್ಲಿ ಮೊದಲ ಬಾರಿಗೆ ಸಚಿನ್ ತೆಂಡೂಲ್ಕರ್ ಅವರನ್ನು ಭೇಟಿಯಾದ ಕ್ಷಣವನ್ನು ಯುವರಾಜ್ ಸಿಂಗ್ ರಸವತ್ತಾಗಿ ವಿವರಿಸಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ಟಿ20 ಕ್ರಿಕೆಟ್‌ ಸೇರ್ಪಡೆಗೆ ರಾಹುಲ್ ದ್ರಾವಿಡ್ ಬ್ಯಾಟಿಂಗ್ಒಲಿಂಪಿಕ್ಸ್‌ನಲ್ಲಿ ಟಿ20 ಕ್ರಿಕೆಟ್‌ ಸೇರ್ಪಡೆಗೆ ರಾಹುಲ್ ದ್ರಾವಿಡ್ ಬ್ಯಾಟಿಂಗ್

ಸಚಿನ್ ಕಂಡು ಯುವಿ ಮೂಕವಿಸ್ಮಿತ

ಸಚಿನ್ ಕಂಡು ಯುವಿ ಮೂಕವಿಸ್ಮಿತ

2000ನೇ ಇಸವಿಯ ಐಸಿಸಿ ನಾಕ್‌ಔಟ್ ಟ್ರೋಫಿಯ ಸಂದರ್ಭದಲ್ಲಿ ಈ ಅವಕಾಶ ಗಿಟ್ಟಿಸಿಕೊಂಡಿದ್ದ ಯುವರಾಜ್ ಸಿಂಗ್ ಬಾಲ್ಯದ ಹೀರೋ ಸಚಿನ್ ತೆಂಡೂಲ್ಕರ್ ಅವರನ್ನು ಮೊದಲ ಬಾರಿಗೆ ಟೀಮ್ ಇಂಡಿಯಾದ ಬಸ್‌ನಲ್ಲಿ ಕಂಡು ಮೂಕವಿಸ್ಮಿತರಾಗಿದ್ದರಂತೆ.

ಆ ಕ್ಷಣದಲ್ಲಿ ನಾನು ಚಂದ್ರನ ಮೇಲಿದ್ದೆ

ಆ ಕ್ಷಣದಲ್ಲಿ ನಾನು ಚಂದ್ರನ ಮೇಲಿದ್ದೆ

"ನಾನು ಮೊದಲ ಬಾರಿಗೆ ನನ್ನ ಬಾಲ್ಯದ ಹೀರೋನನ್ನು ಭೇಟಿಯಾದ ಕ್ಷಣವನ್ನು ವಿವರಿಸಲು ಸಾಧ್ಯವಿಲ್ಲ. ನಾನು ಆ ಕ್ಷಣ ಚಂದ್ರನ ಮೇಲಿದ್ದಂತೆ ಭಾಸವಾಗಿತ್ತು. ನಮ್ಮ ಶಿಬಿರ ಆರಂಭಕ್ಕೂ ಮುನ್ನ ನಾನು ಡ್ರೆಸ್ಸಿಂಗ್ ರೂಮ್‌ಗೆ ತೆರಳುತ್ತಿದ್ದಾಗ ನಡೆದ ಘಟನೆಯಾಗಿದೆ" ಎಂದು ಯುವರಾಜ್ ಸಿಂಗ್ ವಿವರಿಸಿದ್ದಾರೆ. ನೆಟ್‌ಫ್ಲಿಕ್ಸ್‌ನ ಸ್ಟೋರೀಸ್ ಬಿಹೈಂಡ್‌ದಿ ಸ್ಟೋರಿ ಕಾರ್ಯಕ್ರಮದಲ್ಲಿ ಈ ವಿಚಾರವನ್ನು ಯುವಿ ಹೇಳಿಕೊಂಡಿದ್ದಾರೆ.

ವ್ಹಾಹ್ ಇದು ಆತನೆ..

ವ್ಹಾಹ್ ಇದು ಆತನೆ..

"ಅಲ್ಲಿ ಒಂದೇ ಸೀಟ್ ಬಾಕಿಯಿತ್ತು. ಅದು ಸಚಿನ್ ತೆಂಡೂಲ್ಕರ್ ಅವರ ನಂತರದ ಸೀಟ್ ಆಗಿತ್ತು. ನಾನು ನನ್ನ ಮ್ಯಾನೇಜರ್ ಬಳಿ 'ನಾನು ಅಲ್ಲಿ ಕುಳಿತುಕೊಳ್ಳಬಾರದೆಂದು ಭಾವಿಸಿದ್ದೇನೆ.' ಅದಕ್ಕೆ ಅವರು 'ಇಲ್ಲ, ಇನ್ನು ಮುಂದು ಅವರು ನಿನ್ನ ಟೀಮ್‌ಮೇಟ್. ಹಾಗಾಗಿ ನೀನು ಅವರೊಂದಿಗೆ ಮಾತನಾಬೇಕು' ಎಂದರು. ಹಾಗಾಗಿ ನಿಧಾನಕ್ಕೆ ಅವರತ್ತ ತೆರಳಿದ್ದೆ. ಅವರತ್ತ ನೋಡುತ್ತಲೇ ನಾನು 'ವಾವ್ ಇದು ಆತನೇ..' ಎಂದು ಉದ್ಘರಿಸಿದ್ದೆ" ಎಂದು ಯುವರಾಜ್ ಸಿಂಗ್ ವಿವರಿಸಿದ್ದಾರೆ.

ಯಾರಿದು ಬ್ಯಾಟ್ಸ್‌ಮನ್

ಯಾರಿದು ಬ್ಯಾಟ್ಸ್‌ಮನ್

ಇದೇ ಸಂದರ್ಭದಲ್ಲಿ ಯುವರಾಜ್ ಸಿಂಗ್ ಅವರ ಬ್ಯಾಗ್‌ನಲ್ಲಿ ಸಚಿನ್ ತೆಂಡೂಲ್ಕರ್ ಅವರ ಪೋಟೋ ಅರುವುದನ್ನು ನೋಡಿ ಸ್ವತಃ ಸಚಿನ್ ಹೇಗೆ ಪ್ರತಿಕ್ರಿಯಿಸಿದರು ಎಂದು ಹೇಳಿದ್ದಾರೆ. "ನಾನು ನನ್ನ ಕಿಟ್‌ಬ್ಯಾಗ್‌ಅನ್ನು ಓಪನ್ ಮಾಡಿದ್ದೆ. ಅದರಲ್ಲಿ ಸಚಿನ್ ಅವರ ಫೋಟವನ್ನು ಹೊಂದಿದ್ದೆ. ಅದರತ್ತ ನೋಡಿದ ಸಚಿನ್ 'ಫೋಟೋ ತುಂಬಾ ಚೆನ್ನಾಗಿದೆ. ಯಾರು ಅದು ಬ್ಯಾಟ್ಸ್‌ಮನ್?' ಎಂದು ಪ್ರಶ್ನಿಸಿದರು ಹಾಗೂ ಬಳಿಕ ನಗೆ ಬೀರಿದರು. ಬಳಿಕ ನನ್ನ ಜೊತೆಗೆ ಮಾತು ಆರಂಭಿಸಿ ನನಗೆ ಅರಾಮದಾಯಕವಾಗುವಂತೆ ಮಾಡಿದರು" ಎಂದು ಯುವಿ ಕುತೂಹಲಕಾರಿ ಘಟನೆಯನ್ನು ವಿವರಿಸಿದರು.

Story first published: Sunday, November 15, 2020, 10:05 [IST]
Other articles published on Nov 15, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X