ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಯುವರಾಜ್ ಮೇಲೆ ಜಾತಿ ನಿಂದನೆ ಆರೋಪ, ಪೊಲೀಸರಿಗೆ ದೂರು

Yuvraj singh is in trouble for making caste remarks against Chahal

ನವದೆಹಲಿ, ಜೂನ್ 4: ಮಾಜಿ ಕ್ರಿಕೆಟರ್ ಯುವರಾಜ್ ಸಿಂಗ್ ಭಾರಿ ಸಮಸ್ಯೆಯಲ್ಲಿ ಸಿಲುಕಿದ್ದಾರೆ. ಕ್ರಿಕೆಟರ್ ರೋಹಿತ್ ಶರ್ಮ ಹಾಗೂ ಯಜುವೇಂದ್ರ ಚಾಹಲ್ ಜೊತೆ ಇನ್ಸ್ಟಾಗ್ರಾಂ ನಲ್ಲಿ ಲೈವ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಯುವರಾಜ್ ಆಡಿದ ಮಾತು ಈಗ ಅವರನ್ನು ತೊಂದರೆಗೆ ಸಿಲುಕಿಸಿದೆ.

ಇನ್ಸ್ಟಾಗ್ರಾಂ ಲೈವ್ ಸಂವಾದಲ್ಲಿ ಯುವರಾಜ್ ಅವರು ಯಜುವೇಂದ್ರ ಚಾಹಲ್ ಹಾಗೂ ಕುಲದೀಪ್ ಯಾದವ್ ಅವರನ್ನು ''ಭಂಗಿ'' ಎಂದು ಕರೆದಿದ್ದರು. ಯುವರಾಜ್ ಅವರ ಈ ಹೇಳಿಕೆಗೆ ದಲಿತ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ. ಹರ್ಯಾಣದ ಸಂಘಟನೆಗಳು ಮಾಜಿ ಕ್ರಿಕೆಟರ್ ಯುವರಾಜ್ ಹೇಳಿಕೆಯನ್ನು ಖಂಡಿಸಿದ್ದಲ್ಲದೆ, ಹರ್ಯಾಣ ಪೊಲೀಸರಿಗೆ ದೂರು ನೀಡಿವೆ.

ರಜತ್ ಕಾಲ್ಸನ್ ಎಂಬ ವಕೀಲರು ಹಿಸಾರ್ ನ ಹಂಸಿ ಎಂಬಲ್ಲಿ ದೂರು ದಾಖಲಿಸಿದ್ದಾರೆ ಎಂದು ಜೀ ನ್ಯೂಸ್ ವರದಿ ಮಾಡಿದೆ. ಇನ್ಸ್ಟಾಗ್ರಾಂನ ಲೈವ್ ಸಂವಾದ ಮಾತುಕತೆ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಭಾರಿ ಚರ್ಚೆ ನಡೆದು ಸಂಘಟನೆಗೂ ತಲುಪಿದೆ. ಈ ಸಂವಾದದಲ್ಲಿ ರೋಹಿತ್ ಶರ್ಮ ಕೂಡಾ ಪಾಲ್ಗೊಂಡಿದ್ದರು.

ಸಾಮಾಜಿಕ ಜಾಲ ತಾಣಗಳಲ್ಲಿ ಚರ್ಚೆ

ಸಾಮಾಜಿಕ ಜಾಲ ತಾಣಗಳಲ್ಲಿ ಚರ್ಚೆ

ಸಾಮಾಜಿಕ ಜಾಲ ತಾಣಗಳಲ್ಲಿ ಅನೇಕರು, ಯುವರಾಜ್ ಸಿಂಗ್ ಕ್ಷಮೆಯಾಚನೆ ಮಾಡಬೇಕು ಎಂದು ಆಗ್ರಹಿಸಿದರು. ದಲಿತ ವಿರೋಧಿ ಹೇಳಿಕೆಯನ್ನು ಸಹಿಸಲು ಸಾಧ್ಯವಿಲ್ಲ, ಸಮುದಾಯದ ಭಾವನೆಗೆ ಧಕ್ಕೆ ಉಂಟಾಗಿದೆ ಎಂದು ರಜತ್ ಹೇಳಿದ್ದಾರೆ.

ರೋಹಿತ್ ಶರ್ಮ ವಿರುದ್ಧ ಕೂಡಾ ರಜತ್ ಕಿಡಿಕಾರಿದ್ದಾರೆ

ರೋಹಿತ್ ಶರ್ಮ ವಿರುದ್ಧ ಕೂಡಾ ರಜತ್ ಕಿಡಿಕಾರಿದ್ದಾರೆ

ಈ ಲೈವ್ ಸಂವಾದಲ್ಲಿ ಪಾಲ್ಗೊಂಡಿದ್ದ ರೋಹಿತ್ ಶರ್ಮ ವಿರುದ್ಧ ಕೂಡಾ ರಜತ್ ಕಿಡಿಕಾರಿದ್ದಾರೆ. ರೋಹಿತ್ ಅವರು ಈ ಘಟನೆ ನಡೆದಾಗ ಸುಮ್ಮನಿದ್ದರು. ಯಾವುದೇ ಪ್ರತಿರೋಧ ತೋರಲಿಲ್ಲ ಬದಲಿಗೆ ಸುಮ್ಮನೆ ನಗುತ್ತಿರುವುದು ಕಂಡು ಬಂದಿದೆ. ಸಮುದಾಯದ ಭಾವನೆಗೆ ಧಕ್ಕೆ ತಂದಿರುವ ಯುವರಾಜ್ ಬಂಧಿಸಬೇಕು ಹಾಗೂ ಬಹಿರಂಗ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಲಾಗಿದೆ.

ಹಾನ್ಸಿ ಎಸ್ಪಿ ಲೋಕೇಂದ್ರ ಸಿಂಗ್ ಪ್ರತಿಕ್ರಿಯೆ

ಹಾನ್ಸಿ ಎಸ್ಪಿ ಲೋಕೇಂದ್ರ ಸಿಂಗ್ ಪ್ರತಿಕ್ರಿಯೆ

ರಜತ್ ಕಾಲ್ಸನ್ ಎಂಬ ವಕೀಲರು ಹಿಸಾರ್ ನ ಹಂಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಾಜಿ ಕ್ರಿಕೆಟರ್ ಯುವರಾಜ್ ಸಿಂಗ್ ವಿರುದ್ಧ ಜಾತಿ ನಿಂದನೆ ಆರೋಪ ಮಾಡಲಾಗಿದೆ. ಈ ಪ್ರಕರಣವನ್ನು ಡಿಎಸ್ಪಿ ಶ್ರೇಣಿಯ ಅಧಿಕಾರಿಯೊಬ್ಬರು ತನಿಖೆ ನಡೆಸಲಿದ್ದಾರೆ, ಆರೋಪಕ್ಕೆ ಸೂಕ್ತ ಸಾಕ್ಷಿ ಒದಗಿಸುವುದಾಗಿ ರಜತ್ ಹೇಳಿದ್ದಾರೆ. ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹಾನ್ಸಿ ಎಸ್ಪಿ ಲೋಕೇಂದ್ರ ಸಿಂಗ್ ಪ್ರತಿಕ್ರಿಯಿಸಿದ್ದಾರೆ.

ಜಾತಿ ಸೂಚಕ ಪದ ಬಳಕೆ

ಜಾತಿ ಸೂಚಕ ಪದ ಬಳಕೆ

ಇನ್ಸ್ಟಗ್ರಾಂ ಲೈವ್ ಸಂವಾದಲ್ಲಿ ರೋಹಿತ್ ಶರ್ಮ, ಯುವರಾಜ್ ಸಿಂಗ್ ಜೊತೆಗೆ ಯುಜುವೇಂದ್ರ ಚಾಹಲ್ ಅಲ್ಲದೆ ಕುಲದೀಪ್ ಯಾದವ್ ಕೂಡಾ ಇದ್ದರು. ಉತ್ತರ ಭಾರತದ ಕಡೆ ಬಳಸುವ ಜಾತಿ ಸೂಚಕ ಪದವನ್ನು ಯುವರಾಜ್ ಸಿಂಗ್ ಬಳಸಿದ್ದರು. ಈ ಬಗ್ಗೆ ಟ್ವಿಟ್ಟರಲ್ಲಿ ಟ್ರೆಂಡ್ ಆಗಿದ್ದರಿಂದ ವಿಷಯ ಬೆಳಕಿಗೆ ಬಂದಿದ್ದು, ಸಂಘಟನೆಯವರಿಗೂ ತಿಳಿದು ಬಂದಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಕ್ಷಮೆಯಾಚಿಸಿದರೆ ಸಾಲದು, ಇಂಥ ಹೇಳಿಕೆ ನೀಡಿದ್ದಕ್ಕೆ ತಕ್ಕ ಶಾಸ್ತಿಯಾಗಬೇಕು ಎಂದು ಸಂಘತನೆ ಗುಡುಗಿದೆ.

Story first published: Thursday, June 4, 2020, 22:01 [IST]
Other articles published on Jun 4, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X