ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೋವಿಡ್ ಸೋಂಕಿತರ ನೆರವಿಗೆ 'ಮಿಶನ್ 1000 ಬೆಡ್ಸ್‌' ಆರಂಭಿಸಿದ ಯುವರಾಜ್ ಸಿಂಗ್

Yuvraj Singh launches Mission 1000 Beds to help Covid-19 patients across India

ನವದೆಹಲಿ: ಕೋವಿಡ್-19 ದ್ವಿತೀಯ ಅಲೆ ಭಾರತದಾದ್ಯಂತ ಜನರಿಗೆ ಸಾಕಷ್ಟು ಸಂಕಷ್ಟ ಸೃಷ್ಠಿಸಿದೆ. ಆಸ್ಪತ್ರೆಗಳಲ್ಲಿ ಬೆಡ್‌ಗಳ ಕೊರತೆ, ಆಮ್ಲನಜಕದ ಸಿಲಿಂಡರ್‌ಗಳ ಕೊರತೆ ಎದುರಾಗುತ್ತಿದೆ. ತೊಂದರೆಯಲ್ಲಿರುವ ಜನರ ನೆರವಿಗೆ ಅನೇಕ ಕ್ರೀಡಾಪಟುಗಳು ನೆರವು ನೀಡುತ್ತಿದ್ದಾರೆ. ಭಾರತದ ಮಾಜಿ ಆಲ್ ರೌಂಡರ್ ಯುವರಾಜ್‌ ಸಿಂಗ್‌ ಕೂಡ ಕೋವಿಡ್-19 ವಿರುದ್ಧದ ಪರಿಹಾರಕ್ಕೆ ಕೈ ಸೇರಿಸಿದ್ದಾರೆ.

ಒಂದೇ ಪಂದ್ಯದಲ್ಲಿ ಎರಡೆರಡು ಸಾರಿ ದುರ್ವರ್ತನೆ ತೋರಿದ ಶಕೀಬ್: ಶಾಕಿಂಗ್ ವಿಡಿಯೋಒಂದೇ ಪಂದ್ಯದಲ್ಲಿ ಎರಡೆರಡು ಸಾರಿ ದುರ್ವರ್ತನೆ ತೋರಿದ ಶಕೀಬ್: ಶಾಕಿಂಗ್ ವಿಡಿಯೋ

ಟೀಮ್ ಇಂಡಿಯಾ ಒಂದು ಏಕದಿನ ವಿಶ್ವಕಪ್‌ ಮತ್ತು ಒಂದು ಟಿ20 ವಿಶ್ವಕಪ್‌ ಗೆಲ್ಲಲು ಪ್ರಮುಖ ಕಾರಣರಾಗಿದ್ದ ಯುವರಾಜ್ ಸಿಂಗ್ ದೇಶದ ಜನ ಸಂಕಷ್ಟಕ್ಕೆ ಸಿಲುಕಿದಾಗ ಕೈಲಾದ ನೆರವು ನೀಡುತ್ತಾ ಬಂದಿದ್ದಾರೆ. ತನ್ನದೇ ಚಾರಿಟಿಗಳ ಮೂಲಕ ಯುವಿ ನೆರವಿನ ಹಸ್ತ ಚಾಚುತ್ತಲೇ ಇದ್ದಾರೆ. ಈ ಬಾರಿ ಯುವಿ ಮತ್ತೊಂದು ಕಾರ್ಯಕ್ರಮದೊಂದಿಗೆ ಬಂದಿದ್ದಾರೆ.

ಶ್ರೀಲಂಕಾ ಪ್ರವಾಸಕ್ಕೆ ಆಯ್ಕೆ ಮಾಡಿದ್ದಷ್ಟೇ ಅಲ್ಲ ಒಳ್ಳೆಯ ಅವಕಾಶ ಕೊಡಿ; ಮನೀಷ್ ಪಾಂಡೆಯ ಕೋಚ್ ಮನವಿಶ್ರೀಲಂಕಾ ಪ್ರವಾಸಕ್ಕೆ ಆಯ್ಕೆ ಮಾಡಿದ್ದಷ್ಟೇ ಅಲ್ಲ ಒಳ್ಳೆಯ ಅವಕಾಶ ಕೊಡಿ; ಮನೀಷ್ ಪಾಂಡೆಯ ಕೋಚ್ ಮನವಿ

ಯುವರಾಜ್ ಅವರ ಯುವಿಕ್ಯಾನ್ (YouWeCan) ಹೆಸರಿನ ಚಾರಿಟಿ ಸಂಸ್ಥೆಯ ಮೂಲಕ ಸಿಂಗ್ ಅವರು #Mission1000Beds ಹೆಸರಿನ ಕಾರ್ಯಕ್ರಮ ಆರಂಭಿಸಿದ್ದಾರೆ. ಭಾರತದಾದ್ಯಂತ ಆಸ್ಪತ್ರೆಗಳಲ್ಲಿ ಕ್ರಿಟಿಕಲ್ ಕೇರ್ ಸೌಲಭ್ಯಗಳನ್ನು ಹೆಚ್ಚಿಸುವ ಉದ್ದೇಶವನ್ನು ಈ ಕಾರ್ಯಕ್ರಮ ಹೊಂದಿದೆ.

ಯುವಿ ಈ ವಿಚಾರವನ್ನು ಟ್ವಿಟರ್ ಮೂಲಕ ತಿಳಿಸಿದ್ದಾರೆ. 'ಕ್ರಿಟಿಕಲ್ ಕೇರ್ ಬೆಡ್‌ ಮತ್ತು ಸಲಕರಣೆಗಳೊಂದಿಗೆ ಕಳೆದ ಸಂಜೆ ದೆಹಲಿಯಿಂದ ಟ್ರಕ್ ಹಿಮಾಚಲ ಪ್ರದೇಶಕ್ಕೆ ಹೊರಟಿದೆ. ಭಾರತದಾದ್ಯಂತ ಆರೋಗ್ಯ ಸೌಲಭ್ಯ ಹೆಚ್ಚಿಸುವ ನಮ್ಮ ಪಯಣಕ್ಕೆ ಬೆಂಬಲಿಸಿ' ಎಂದು ಯುವಿ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

Story first published: Friday, June 11, 2021, 22:27 [IST]
Other articles published on Jun 11, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X