ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ತನ್ನ ವಿಶ್ವದಾಖಲೆ ಮುರಿಯಬಲ್ಲ ಆಟಗಾರರ ಹೆಸರು ಹೇಳಿದ ಯುವರಾಜ್ ಸಿಂಗ್

Yuvraj Singh Picks Two Indian Batsmen Who Can Break His Fastest Half Century Record

ಟೀಮ್ ಇಂಡಿಯಾದ ಮಾಜಿ ಸ್ಪೋಟಕ ಆಟಗಾರ ಯುವರಾಜ್ ಸಿಂಗ್ ಒಂದೂವರೆ ದಶಕಕ್ಕೂ ಹೆಚ್ಚು ಕಾಲ ಟೀಮ್ ಇಂಡಿಯಾದ ಭಾಗವಾಗಿದ್ದವರು. ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಯುವಿ ಅದ್ಭುತ ಸಾಧನೆಯನ್ನು ಮಾಡಿದ್ದಾರೆ. ಅದರಲ್ಲೂ ಮೊದಲ ಟಿ20 ವಿಶ್ವಕಪ್‌ನಲ್ಲಿ ಯುವಿ ಆರು ಎಸೆತಕ್ಕೆ ಆರು ಸಿಕ್ಸರ್ ಸಿಡಿಸಿ ಕ್ರಿಕೆಟ್ ಜಗತ್ತನ್ನು ನಿಬ್ಬೆರಗಾಗಿಸಿದ್ದರು.

ಈ ವಿಶ್ವದಾಖಲೆಯ ಪಂದ್ಯದಲ್ಲಿ ಯುವರಾಜ್ ಮತ್ತೊಂದು ದಾಖಲೆಯನ್ನು ಬರೆದಿದ್ದರು. ಆ ದಾಖಲೆ ನಿರ್ಮಾಣವಾಗಿ ಹದಿಮೂರು ವರ್ಷವಾಗಿದೆ. ಕ್ರಿಕೆಟ್‌ ಲೋಕದಲ್ಲಿ ಆ ದಾಖಲೆಯನ್ನು ಮುರಿಯಲು ಯಾರಿಂದಲೂ ಸಾಧ್ಯವಾಗಲಿಲ್ಲ. ಈ ಬಗ್ಗೆ ಯುವರಾಜ್ ಸಿಂಗ್ ಮಾತನಾಡಿದ್ದು ಈ ದಾಖಲೆ ಮುರಿಯಬಲ್ಲ ಆಟಗಾರರ ಹೆಸರನ್ನು ಅವರು ಹೇಳಿದ್ದಾರೆ.

ಜೊತೆಯಾಟಕ್ಕೆ ವಿಶ್ವದಾಖಲೆ ಬರೆದಿರೋ ಅಪರೂಪದ ಜೋಡಿ ಸಚಿನ್-ಗಂಗೂಲಿಜೊತೆಯಾಟಕ್ಕೆ ವಿಶ್ವದಾಖಲೆ ಬರೆದಿರೋ ಅಪರೂಪದ ಜೋಡಿ ಸಚಿನ್-ಗಂಗೂಲಿ

ಯುವರಾಜ್ ಸಿಂಗ್ ಅಂದು ನಿರ್ಮಾಣ ಮಾಡಿದ ಆ ದಾಖಲೆ ಯಾವುದು? ಯಾವ ಆಟಗಾರರಿಂದ ಆ ದಾಖಲೆಯನ್ನು ಮುರಿಯಲು ಸಾಧ್ಯ ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ. ಮುಂದೆ ಓದಿ

ಐತಿಹಾಸಿಕ ಪಂದ್ಯ

ಐತಿಹಾಸಿಕ ಪಂದ್ಯ

ಯುವರಾಜ್ ಈ ದಾಖಲೆಯನ್ನು ಬರೆದದ್ದು 2007ರ ಟಿ20 ವಿಶ್ವಕಪ್‌ನ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ. ಈ ಪಂದ್ಯದಲ್ಲಿ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಅವರ ಒಂದು ಓವರ್‌ನ ಎಲ್ಲಾ ಎಸೆತಗಳನ್ನೂ ಸಿಕ್ಸರ್‌ಗೆ ಅಟ್ಟಿದ್ದರು. ಇದೇ ಪಂದ್ಯದಲ್ಲಿ ಯುವರಾಜ್ ಸಿಂಗ್ ಅತ್ಯಂತ ವೇಗದ ಅರ್ಧ ಶತಕವನ್ನು ದಾಖಲಿಸಿದ್ದಾರೆ. ಈ ದಾಖಲೆಯನ್ನೂ ಮುರಿಯಲು ಯಾರಿಂದಲೂ ಸಾಧ್ಯವಾಗಿರಲಿಲ್ಲ.

12 ಎಸೆತಕ್ಕೆ 50 ರನ್

12 ಎಸೆತಕ್ಕೆ 50 ರನ್

ಈ ಪಂದ್ಯದಲ್ಲಿ ಯುವರಾಜ್ ಸಿಂಗ್ ಅರ್ಧ ಶತಕದ ಗಡಿಯನ್ನು ಮುಟ್ಟಲು ತೆಗದುಕೊಂಡಿದ್ದು ಕೇವಲ 12 ಎಸೆತಗಳನ್ನು ಮಾತ್ರ. ಇಷ್ಟು ಕಡಿಮೆ ಎಸೆತಗಳಲ್ಲಿ ಈ ಸಾಧೆನೆಯನ್ನು ಮತ್ತೆ ಇನ್ನು ಯಾರಿಂದಲೂ ಸಾಧ್ಯವಾಗಲಿಲ್ಲ. ವೆಸ್ಟ್ ಇಂಡೀಸ್‌ನ ಕ್ರಿಕೆಟ್‌ ಗೇಲ್ ಕೂಡ 12 ಎಸೆತಗಳಲ್ಲಿ ಅರ್ಧ ಶತಕವನ್ನು ದಾಖಲಿಸಿದರಾದರೂ ಕೂಡ ಅದು ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್‌ನಲ್ಲಿ. ಹಾಗಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ಸಾಧನೆಯನ್ನು ಮುರಿಯಲು ಯಾರಿಂದಲೂ ಸಾಧ್ಯವಾಗಿಲ್ಲ.

ಇಬ್ಬರು ಮುರಿಯಬಲ್ಲರು ಎಂದ ಯುವಿ

ಇಬ್ಬರು ಮುರಿಯಬಲ್ಲರು ಎಂದ ಯುವಿ

ಅತ್ಯಂತ ವೇಗ್ ಅರ್ಧಶತಕದ ದಾಖಲೆಯನ್ನು ಇಬ್ಬರು ಆಟಗಾರರು ಮುರಿಯಬಲ್ಲರು ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ. ಅದರಲ್ಲಿ ಒಬ್ಬರು ಈಗಾಗಲೇ ಬಿಗ್ ಬ್ಯಾಷ್ ಲೀಗ್‌ನಲ್ಲಿ ಈ ಸಾಧನೆಯನ್ನು ಸರಿಗಟ್ಟಿದ ಕ್ರಿಸ್ ಗೇಲ್. ಇನ್ನೊಬ್ಬರು ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಎಬಿ ಡಿ ವಿಲಿಯರ್ಸ್. ಈ ಇಬ್ಬರ ಹೆಸರನ್ನು ಸ್ವತಃ ಯುವರಾಜ್ ಸಿಂಗ್ ತೆಗೆದುಕೊಂಡಿದ್ದಾರೆ.

ಇಬ್ಬರು ಭಾರತೀಯ ಕ್ರಿಕೆಟಿಗರಿಗೂ ಸಾಮರ್ಥ್ಯವಿದೆ

ಇಬ್ಬರು ಭಾರತೀಯ ಕ್ರಿಕೆಟಿಗರಿಗೂ ಸಾಮರ್ಥ್ಯವಿದೆ

ಇದೇ ಸಂದರ್ಭದಲ್ಲಿ ಯುವರಾಜ್ ಸಿಂಗ್ ಇಬ್ರು ಭಾರತೀಯ ಕ್ರಿಕೆಟಿಗರ ಹೆಸರನ್ನೂ ತೆಗೆದುಕೊಂಡಿದ್ದಾರೆ. ಅದರಲ್ಲಿ ಒಂದು ಹೆಮ್ಮೆಯ ಕನ್ನಡಿಗ ಕೆಎಲ್ ರಾಹುಲ್. ಇನ್ನೋರ್ವ ಆಟಗಾರ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ. ಇಬ್ಬರೂ ಕ್ರಿಕೆಟಿಗರಿಗೆ ಈ ದಾಖಲೆಯನ್ನು ಮುರಿಯಬಲ್ಲ ಸಾಮರ್ಥ್ಯವಿದೆ ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.

ಐಪಿಎಲ್‌ನಲ್ಲಿ ರಾಹುಲ್ ದಾಖಲೆ

ಐಪಿಎಲ್‌ನಲ್ಲಿ ರಾಹುಲ್ ದಾಖಲೆ

ಐಪಿಎಲ್‌ನಲ್ಲಿ ವೇಗದ ಅರ್ಧ ಶತಕದ ದಾಖಲೆಯನ್ನು ಕೆಎಲ್ ರಾಹುಲ್ ತಮ್ಮ ಹೆಸರಿನಲ್ಲಿ ಬರೆದುಕೊಂಡಿದ್ದಾರೆ. 14 ಎಸೆತಗಳಲ್ಲಿ ಕೆಎಲ್ ಈ ಗಡಿಯನ್ನು ಮುಟ್ಟಿದ್ದರು. "ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿನ ಗುಣಮಟ್ಟದ ಬೌಲರ್‌ಗಳು ಮತ್ತು ಐಪಿಎಲ್‌ನಲ್ಲಿನ ಬೌಲರ್‌ಗಳಿಗೂ ವ್ಯತ್ಯಾಸಗಳಿವೆ. ಆದರೆ ಕೆಎಲ್ ರಾಹುಲ್‌ಗೆ ಅದನ್ನು ಸಾಧಿಸುವ ಸಾಮರ್ಥ್ಯವಿದೆ ಎಂದು ಯುವರಾಜ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

Story first published: Friday, May 15, 2020, 10:35 [IST]
Other articles published on May 15, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X