ಯುವರಾಜ್ ಸಿಂಗ್ ಇನ್‌ಸ್ಟಾಗ್ರಾಂನಲ್ಲಿ ಹಾಕಿದ್ದ ವಿಡಿಯೋ ನೋಡಿ ಮನನೊಂದ ಸಾನಿಯಾ ಮಿರ್ಜಾ!

ಈ ಬಾರಿಯ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಮಹಿಳಾ ಡಬಲ್ಸ್ ಬ್ಯಾಡ್ಮಿಂಟನ್ ವಿಭಾಗದಲ್ಲಿ ಮೊದಲ ಸುತ್ತಿನಲ್ಲಿಯೇ ಕಳಪೆ ಪ್ರದರ್ಶನ ನೀಡುವುದರ ಮೂಲಕ ಹೊರಬಿದ್ದಿರುವ ಸಾನಿಯಾ ಮಿರ್ಜಾ ನಿರಾಸೆ ಮೂಡಿಸಿದ್ದಾರೆ. ಹೀಗೆ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನಿರಾಸೆ ಮೂಡಿಸಿರುವ ಸಾನಿಯಾ ಮಿರ್ಜಾ ಸದ್ಯ ಯುವರಾಜ್ ಸಿಂಗ್ ವಿಷಯದ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದ್ದಾರೆ.

ಭಾರತ vs ಇಂಗ್ಲೆಂಡ್: ಟೀಮ್ ಇಂಡಿಯಾದ ಒಂದು ನಿರ್ಧಾರಕ್ಕೆ ಅಚ್ಚರಿಗೊಂಡ ಕ್ರಿಕೆಟ್ ಪಂಡಿತರುಭಾರತ vs ಇಂಗ್ಲೆಂಡ್: ಟೀಮ್ ಇಂಡಿಯಾದ ಒಂದು ನಿರ್ಧಾರಕ್ಕೆ ಅಚ್ಚರಿಗೊಂಡ ಕ್ರಿಕೆಟ್ ಪಂಡಿತರು

ಹೌದು ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಮತ್ತು ಸಾನಿಯಾ ಮಿರ್ಜಾ ಈ ಹಿಂದಿನಿಂದಲೂ ಸಹ ಉತ್ತಮ ಸ್ನೇಹ ಬಾಂಧವ್ಯವನ್ನು ಹೊಂದಿದ್ದಾರೆ. ಇಬ್ಬರೂ ಸಹ ಒಳ್ಳೆಯ ಸ್ನೇಹಿತರಾಗಿದ್ದು ಈ ಹಿಂದಿನಿಂದಲೂ ಸಾಕಷ್ಟು ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇದೀಗ ಯುವರಾಜ್ ಸಿಂಗ್ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು ಆ ವಿಡಿಯೊ ಕುರಿತಾಗಿ ಬ್ಯಾಡ್ಮಿಂಟನ್ ತಾರೆ ಸಾನಿಯಾ ಮಿರ್ಜಾ ಮನನೊಂದಿದ್ದಾರೆ.

ಚೇತೇಶ್ವರ್ ಪೂಜಾರ ಕುರಿತ ಟೀಕೆಗಳಿಗೆ ತನ್ನದೇ ಶೈಲಿಯಲ್ಲಿ ಉತ್ತರ ನೀಡಿದ ವಿರಾಟ್ ಕೊಹ್ಲಿಚೇತೇಶ್ವರ್ ಪೂಜಾರ ಕುರಿತ ಟೀಕೆಗಳಿಗೆ ತನ್ನದೇ ಶೈಲಿಯಲ್ಲಿ ಉತ್ತರ ನೀಡಿದ ವಿರಾಟ್ ಕೊಹ್ಲಿ

ಇದೇ ಆಗಸ್ಟ್ 1ರಂದು ವಿಶ್ವದಾದ್ಯಂತ ಸ್ನೇಹಿತರ ದಿನಾಚರಣೆಯನ್ನು ಆಚರಿಸಲಾಯಿತು. ಈ ದಿನದಂದು ಯುವರಾಜ್ ಸಿಂಗ್ ಕೂಡ ತಮ್ಮ ನೆಚ್ಚಿನ ಸ್ನೇಹಿತರ ಜತೆಗಿನ ತಮ್ಮ ಫೋಟೋಗಳನ್ನೆಲ್ಲಾ ಸೇರಿಸಿ ವಿಡಿಯೋವೊಂದನ್ನು ಮಾಡಿ ಅದನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದರು. ಸುಮಾರು ಒಂದು ನಿಮಿಷ ಉದ್ದವಿರುವ ಈ ವಿಡಿಯೋದಲ್ಲಿ ಭಾರತದ ಮಾಜಿ ಕ್ರಿಕೆಟಿಗರಾದ ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ಅನಿಲ್ ಕುಂಬ್ಳೆ ಹಾಗೂ ಹರ್ಭಜನ್ ಸಿಂಗ್ ಸೇರಿದಂತೆ ಹಲವಾರು ಕ್ರಿಕೆಟಿಗರ ಜತೆಗಿನ ಯುವರಾಜ್ ಸಿಂಗ್ ಫೋಟೋಗಳಿದ್ದವು.

ಯುವರಾಜ್ ಸಿಂಗ್ ಸ್ನೇಹಿತರ ದಿನಾಚರಣೆಯಂದು ತಮ್ಮ 17 ವರ್ಷದ ಕ್ರಿಕೆಟ್ ಜೀವನದ ಹಲವಾರು ಸ್ನೇಹಿತರ ಫೋಟೋಗಳನ್ನೊಳಗೊಂಡಂತೆ ಎಡಿಟ್ ಮಾಡಿ ಹಾಕಲಾಗಿದ್ದ ಈ ವಿಡಿಯೋ ನೋಡಿದ ಸಾನಿಯಾ ಮಿರ್ಜಾ ಕೊಂಚ ಬೇಸರಕ್ಕೆ ಒಳಗಾಗಿ ಕಾಮೆಂಟ್ ಮಾಡಿದ್ದರು. 'ವಿಡಿಯೋ ಕ್ಯೂಟ್ ಆಗಿದೆ ಆದರೆ ವಿಡಿಯೊದಲ್ಲಿ ನಾನು ಇಲ್ಲದೇ ಇರುವುದು ಮನಸ್ಸಿಗೆ ನೋವನ್ನು ನೀಡಿದೆ ಮೋಟು' ಎಂದು ಯುವರಾಜ್ ಸಿಂಗ್ ಪೋಸ್ಟ್ ಮಾಡಿದ್ದ ವಿಡಿಯೋಗೆ ಸಾನಿಯಾ ಮಿರ್ಜಾ ಮನನೊಂದು ಕಾಮೆಂಟ್ ಹಾಕಿದ್ದರು. ಯುವರಾಜ್ ಸಿಂಗ್ ವಿಡಿಯೋಗೆ ಸಾನಿಯಾ ಮಿರ್ಜಾ ಮಾಡಿರುವ ಈ ಕಮೆಂಟ್ ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲ್ ಆಗಿದೆ.

ಇನ್ನು ಯುವರಾಜ್ ಸಿಂಗ್ ಪೋಸ್ಟ್ ಮಾಡಿರುವ ಈ ವಿಡಿಯೋದಲ್ಲಿ ಸಾನಿಯಾ ಮಿರ್ಜಾ ಮಾತ್ರವಲ್ಲದೆ ಮಹೇಂದ್ರ ಸಿಂಗ್ ಧೋನಿ ಮತ್ತು ವಿರಾಟ್ ಕೊಹ್ಲಿ ಫೋಟೋಗಳು ಕೂಡ ಇರಲಿಲ್ಲ. ವಿಡಿಯೋದಲ್ಲಿ ಧೋನಿ ಮತ್ತು ವಿರಾಟ್ ಕೊಹ್ಲಿ ಫೋಟೋಗಳು ಬರಲಿವೆ ಎಂದು ಕಾಯುತ್ತಿದ್ದ ಅಭಿಮಾನಿಗಳು ಬೇಸರಗೊಂಡರು ಮತ್ತು ಮಹೇಂದ್ರ ಸಿಂಗ್ ಧೋನಿ ಹಾಗೂ ವಿರಾಟ್ ಕೊಹ್ಲಿ ಫೋಟೋಗಳು ಯಾಕಿಲ್ಲ ಎಂದು ಸಾಲು ಸಾಲು ಕಾಮೆಂಟ್ ಮಾಡುವುದರ ಮೂಲಕ ಧೋನಿ ಮತ್ತು ಕೊಹ್ಲಿ ಅಭಿಮಾನಿಗಳು ಯುವರಾಜ್ ಸಿಂಗ್ ಪೋಸ್ಟ್ ಮಾಡಿದ್ದ ವಿಡಿಯೋ ಕುರಿತು ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಹೀಗೆ ಈ ವಿಡಿಯೋ ಕುರಿತು ಸಾಕಷ್ಟು ನೆಗೆಟಿವ್ ಕಾಮೆಂಟ್ ಬರಲು ಆರಂಭಿಸಿದ ಕೂಡಲೇ ಎಚ್ಚೆತ್ತ ಯುವರಾಜ್ ಸಿಂಗ್ ವಿಡಿಯೋದಿಂದ ಕಾಮೆಂಟ್ ಮಾಡುವ ಆಯ್ಕೆಯನ್ನೇ ತೆಗೆದುಹಾಕಿದ್ದಾರೆ.

ಇನ್ನು ಇತ್ತೀಚೆಗಷ್ಟೇ ಭಾರತ ಮತ್ತು ಇಂಗ್ಲೆಂಡ್ ನಡುವಿನ ಸರಣಿಯ ಕುರಿತು ಮಾತನಾಡಿರುವ ಯುವರಾಜ್ ಸಿಂಗ್ ತಂಡದಲ್ಲಿ ಭುವನೇಶ್ವರ್ ಕುಮಾರ್‌‌ಗೆ ಸ್ಥಾನ ನೀಡಬೇಕೆಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಇಂಗ್ಲೆಂಡ್ ಪಿಚ್‌ಗಳಲ್ಲಿ ಸ್ವಿಂಗ್ ಬೌಲಿಂಗ್ ಚೆನ್ನಾಗಿ ಕೆಲಸ ಮಾಡಲಿದ್ದು ಫಿಟ್ ಆಗಿರುವ ಭುವನೇಶ್ವರ್ ಕುಮಾರ್‌‌ಗೆ ತಂಡದಲ್ಲಿ ಸ್ಥಾನ ನೀಡುವುದು ಉತ್ತಮ ಎಂಬ ಅಭಿಪ್ರಾಯವನ್ನು ಇತ್ತೀಚೆಗಷ್ಟೇ ಯುವರಾಜ್ ಸಿಂಗ್ ವ್ಯಕ್ತಪಡಿಸಿದ್ದರು.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Wednesday, August 4, 2021, 20:32 [IST]
Other articles published on Aug 4, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X