ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ನೀನು ನನ್ನ ಮಗನ ವೃತ್ತಿಬದುಕನ್ನೇ ಮುಗಿಸಿಬಿಟ್ಟೆ!': ಮಾತು ನೆನೆದ ಯುವಿ

Yuvraj Singh recalls 2007 six sixes, reveals chat with Chris Broad

ಬೆಂಗಳೂರು, ಏಪ್ರಿಲ್ 27: ಸಿಕ್ಸರ್‌ ಕಿಂಗ್ ಯುವರಾಜ್ ಸಿಂಗ್ ಅವರು 2007ರ ಟಿ20 ವಿಶ್ವಕಪ್‌ನಲ್ಲಿ ಚಚ್ಚಿದ್ದ ಸಿಕ್ಸ್‌ ಸಿಕ್ಸರ್ ಕ್ರಿಕೆಟ್ ಇತಿಹಾಸದಲ್ಲೇ ಅಪ್ರತಿಮ ಕ್ಷಣವಾಗಿ ಗುರುತಿಸಿಕೊಂಡಿದೆ. ಆವತ್ತಿನ ಪಂದ್ಯದಲ್ಲಿ ಭಾರತ ಗೆಲ್ಲುವುದು ಕಷ್ಟವಿತ್ತು. ಆದರೆ ಒಂದೇ ಓವರ್‌ನಲ್ಲಿ ಸತತ ಆರು ಸಿಕ್ಸರ್‌ಗಳನ್ನು ಚಚ್ಚಿದ್ದ ಯುವಿ ತಂಡಕ್ಕೆ ರೋಮಾಂಚಕ ಗೆಲುವು ತಂದಿದ್ದರು. ಈ ಅಪೂರ್ವ ಸಂಗತಿ ನಡೆದಿದ್ದು ಸುಮಾರು 13 ವರ್ಷಗಳ ಹಿಂದೆಯಾದರೂ ಈಗಲೂ ಭಾರತೀಯ ಅಭಿಮಾನಿಗಳು ಆ ಪಂದ್ಯದ ವೀಡಿಯೋ ನೋಡುತ್ತ ರೋಮಾಂಚನಗೊಳ್ಳುತ್ತಿರುತ್ತಾರೆ.

ಮೊದಲ ಟೆಸ್ಟ್‌ನ ಭಯಾನಕ ಅನುಭವ ಬಿಚ್ಚಿಟ್ಟ ತೆಂಡೂಲ್ಕರ್: ಕಣ್ಣೀರಿಟ್ಟ ಸಚಿನ್‌ಗೆ ರವಿ ಶಾಸ್ತ್ರಿ ಅಭಯಮೊದಲ ಟೆಸ್ಟ್‌ನ ಭಯಾನಕ ಅನುಭವ ಬಿಚ್ಚಿಟ್ಟ ತೆಂಡೂಲ್ಕರ್: ಕಣ್ಣೀರಿಟ್ಟ ಸಚಿನ್‌ಗೆ ರವಿ ಶಾಸ್ತ್ರಿ ಅಭಯ

ಇಂಗ್ಲೆಂಡ್‌ ವೇಗಿ ಸ್ಟುವರ್ಟ್ ಬ್ರಾಡ್‌ ಓವರ್‌ನಲ್ಲಿ ತಾನು ಸಿಕ್ಸ್ ಸಿಕ್ಸ್ ಚಚ್ಚಿದ್ದನ್ನು ಯುವರಾಜ್ ಸಿಂಗ್ ಸ್ಮರಿಸಿಕೊಂಡಿದ್ದಾರೆ. ವಿಶ್ವವೇ ಭಾರತ ಕ್ರಿಕೆಟ್ ತಂಡದತ್ತ ಬೆರಗಿನಿಂದ ದಿಟ್ಟಿಸುವಂತೆ ನಡೆದು ಹೋಗಿದ್ದ ಆವತ್ತಿನ ದಿನ ಅಸಲಿಗೆ ನಡೆದಿದ್ದೇನು ಅನ್ನೋದನ್ನು ಸ್ವತಃ ಯುವಿ ಹೇಳಿಕೊಂಡಿದ್ದಾರೆ.

ಆರ್‌ಸಿಬಿ ಬಗ್ಗೆ ಭಾವನಾತ್ಮಕ ಮಾತುಗಳನ್ನಾಡಿದ ನಾಯಕ ವಿರಾಟ್ ಕೊಹ್ಲಿ!ಆರ್‌ಸಿಬಿ ಬಗ್ಗೆ ಭಾವನಾತ್ಮಕ ಮಾತುಗಳನ್ನಾಡಿದ ನಾಯಕ ವಿರಾಟ್ ಕೊಹ್ಲಿ!

ಐಸಿಸಿ ಟಿ20 ವಿಶ್ವಕಪ್‌ 2007ರಲ್ಲಿ ಭಾರತ ಮತ್ತು ಇಂಗ್ಲೆಂಡ್ ಮುಖಾಮುಖಿಯಾಗಿದ್ದ ಪಂದ್ಯದ ಬಗ್ಗೆ ಯುವಿ ಕೆಲ ಕುತೂಹಲಕಾರಿ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

ಉರಿಸಿದ್ದು ಆ್ಯಂಡ್ರ್ಯೂ ಫ್ಲಿಂಟಾಫ್

ಉರಿಸಿದ್ದು ಆ್ಯಂಡ್ರ್ಯೂ ಫ್ಲಿಂಟಾಫ್

ಆವತ್ತಿನ ಪಂದ್ಯದಲ್ಲಿ ಯುವರಾಜ್ ಸಿಂಗ್ ರೌದ್ರಾವತಾರ ತಾಳಲು ಕಾರಣ ಇಂಗ್ಲೆಂಡ್ ಆಲ್ ರೌಂಡರ್ ಆ್ಯಂಡ್ರ್ಯೂ ಫ್ಲಿಂಟಾಫ್. ಯುವಿಯನ್ನು ಕೆಣಕಿ ಯುವಿ ಸಿಟ್ಟುಗಳ್ಳುವಂತೆ ಮಾಡಿದ್ದರು. ಅದಾಗಿ ಸ್ಟುವರ್ಟ್ ಬ್ರಾಡ್‌ ಓವರ್‌ನಲ್ಲಿ ಯುವಿ ಒಂದೂ ಎಸೆತವನ್ನೂ ಬಿಡದೆ ಎಲ್ಲದನ್ನೂ ಸಿಕ್ಸ್‌ ಲೈನ್‌ನತ್ತ ಅಟ್ಟಿದ್ದರು.

ಫೈವ್ ಸಿಕ್ಸ್‌ಗೆ ಪ್ರತೀಕಾರ ಸಿಕ್ಸ್ ಸಿಕ್ಸ್

ಫೈವ್ ಸಿಕ್ಸ್‌ಗೆ ಪ್ರತೀಕಾರ ಸಿಕ್ಸ್ ಸಿಕ್ಸ್

ಘಟನೆ ಬಗ್ಗೆ ವಿವರಿಸಿ ಬಿಬಿಸಿ ಜೊತೆ ಮಾತನಾಡಿದ ಯುವರಾಜ್ ಸಿಂಗ್, 'ಇಂಗ್ಲೆಂಡ್ ವಿರುದ್ಧವೇ ಸಿಕ್ಸ್ ಸಿಕ್ಸ್ ಬಾರಿಸಿದ್ದಕ್ಕೆ ಖುಷಿಯಿದೆ. ಯಾಕೆಂದರೆ ಅದಕ್ಕೂ ಕೆಲ ವಾರಗಳ ಹಿಂದೆ ಏಕದಿನ ಪಂದ್ಯದಲ್ಲಿ ನನ್ನ ಓವರ್‌ನಲ್ಲಿ ಡಿಮಿಟ್ರಿ ಮಸ್ಕರೇನ್ಹಾಸ್ ಐದು ಸಿಕ್ಸ್ ಬಾರಿಸಿದ್ದರು,' ಎಂದರು.

ಸಿಕ್ಸ್ ಸಿಕ್ಸ್ ಬಳಿಕ ಏನಾಯಿತು?

ಸಿಕ್ಸ್ ಸಿಕ್ಸ್ ಬಳಿಕ ಏನಾಯಿತು?

ಸಿಕ್ಸ್ ಸಿಕ್ಸ್ ಬಾರಿಸಿದ ಮೇಲೆ ಏನಾಯಿತು ಅನ್ನೋದನ್ನು ಯುವಿ ಹೇಳಿಕೊಂಡಿದ್ದಾರೆ. ಸತತ ಆರು ಸಿಕ್ಸ್‌ ಬಾರಿಸಿದ್ದ ಪಂದ್ಯದ ಬಳಿಕ ಸ್ಟುವರ್ಟ್ ತಂದೆ ಕ್ರಿಸ್ ಬ್ರಾಡ್ ಅವರು ಸಿಂಗ್ ಜೊತೆ ಮಾತನಾಡಿದ್ದರಂತೆ. 'ಮ್ಯಾಚ್ ರೆಫರೀ ಆಗಿದ್ದ ಸ್ಟುವರ್ಟ್ ತಂದೆ ಕ್ರಿಸ್ ಬ್ರಾಡ್ ಮರು ದಿನ ನನ್ನ ಬಳಿ ಬಂದು 'ನೀನು ನನ್ನ ಮಗನ ವೃತ್ತಿ ಬದುಕನ್ನು ಬಾಗಶಃ ಮುಗಿಸಿದ್ದೀಯ. ಆದ್ದರಿಂದ ನೀನು ಅವನಿಗಾಗಿ ಈ ಟಿ ಶರ್ಟ್‌ಗೆ ಸಹಿ ಹಾಕಬೇಕು' ಎಂದಿದ್ದರು ಎಂದು ಯುವಿ ಆಗಿನ ಘಟನೆ ವಿವರಿಸಿದರು.

ಬ್ರಾಡ್‌ಗೆ ಯುವಿ ಮೆಸೇಜ್

ಬ್ರಾಡ್‌ಗೆ ಯುವಿ ಮೆಸೇಜ್

ಕ್ರಿಸ್ ಬ್ರಾಡ್ ಕೇಳಿಕೊಂಡಂತೆ ಯುವಿ ಜೆರ್ಸಿ ಮೇಲೆ ಸಹಿ ಹಾಕಿದ್ದರಂತೆ. 'ನಾನು ನನ್ನ ಭಾರತದ ಜೆರ್ಸಿ ಕೊಟ್ಟು ಅದರಲ್ಲಿ, 'ನನ್ನ ಓವರ್‌ನಲ್ಲಿ ಐದು ಸಿಕ್ಸ್‌ಗಳು ಬಿದ್ದಿದ್ದವು. ಹಾಗಾಗಿ ನನಗೆ ಗೊತ್ತು ಅದರ ನೋವೇನು ಅಂತ. ಇಂಗ್ಲೆಂಡ್ ಕ್ರಿಕೆಟ್‌ನ ಭವಿಷ್ಯಕ್ಕೆ ನನ್ನ ಶುಭಹಾರೈಕೆಗಳು' ಎಂದು ಬರೆದಿದ್ದೆ,' ಅಂತ ಯುವಿ ಹೇಳಿದ್ದಾರೆ.

ಭಾರತಕ್ಕೆ ರೋಚಕ ಗೆಲುವು

ಭಾರತಕ್ಕೆ ರೋಚಕ ಗೆಲುವು

ಆವತ್ತು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಭಾರತ, ಗೌತಮ್ ಗಂಭೀರ್ 58, ವೀರೇಂದ್ರ ಸೆಹ್ವಾಗ್ 68, ಎಂಎಸ್ ಧೋನಿ ಅಜೇಯ 10, ಯುವರಾಜ್ ಸಿಂಗ್ 58 ರನ್‌ನೊಂದಿಗೆ (16 ಎಸೆತ) 20 ಓವರ್‌ಗೆ 4 ವಿಕೆಟ್ ಕಳೆದು 218 ರನ್ ಮಾಡಿತ್ತು. ಇಂಗ್ಲೆಂಡ್ 20 ಓವರ್‌ಗೆ 6 ವಿಕೆಟ್ ನಷ್ಟದಲ್ಲಿ 200 ರನ್ ಬಾರಿಸಿ 18 ರನ್‌ನಿಂದ ಸೋತಿತ್ತು.

Story first published: Monday, April 27, 2020, 16:43 [IST]
Other articles published on Apr 27, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X