ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೆಸ್ಟ್ ತಂಡಕ್ಕೆ ನಾಯಕನಾಗಲು ಈತ ಸೂಕ್ತ: ಯುವ ಆಟಗಾರನ ಹೆಸರು ಸೂಚಿಸಿದ ಯುವಿ

Yuvraj Singh said Rishabh Pant is the best candidate to lead India in Tests in future

ಇಂಡಿಯನ್ ಪ್ರೀಮಿಯರ್ ಲೀಗ್‌ನ 15ನೇ ಆವೃತ್ತಿ ಭರ್ಜರಿಯಾಗಿ ನಡೆಯುತ್ತಿದೆ. 10 ತಮಡಗಳ ನಡುವಿನ ಕದನ ರೋಚಕವಾಗಿ ಸಾಗುತ್ತಿದ್ದು ಪ್ಲೇಆಫ್ ಹಂತಕ್ಕೇರಲು ಎಲ್ಲಾ ತಂಡಗಳು ಕೂಡ ಎಲ್ಲಾ ಸರ್ವ ಪ್ರಯತ್ನಗಳನ್ನು ನಡೆಸುತ್ತಿದೆ. ಈ ಹಂತದಲ್ಲಿ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಟೀಮ್ ಇಂಡಿಯಾ ಟೆಸ್ಟ್ ತಂಡದ ನಾಯಕತ್ವದ ಬಗ್ಗೆ ಮಾತನಾಡಿ ಸುದ್ದಿಯಾಗಿದ್ದಾರೆ. ಟೀಮ್ ಇಂಡಿಯಾದ ಟೆಸ್ಟ್ ತಂಡಕ್ಕೆ ಭವಿಷ್ಯದ ನಾಯಕನನ್ನು ಯುವರಾಜ್ ಸಿಂಗ್ ಹೆಸರಿಸಿದ್ದಾರೆ.

ಕುತೂಹಲಕಾರಿ ಸಂಗತಿಯೆಂದರೆ ಯುವರಾಜ್ ಸಿಂಗ್ ಟೀಮ್ ಇಂಡಿಯಾ ಟೆಸ್ಟ್ ತಂಡಕ್ಕೆ ಯುವರಾಜ್ ಸಿಂಗ್ ಯುವ ಆಟಗಾರನನ್ನು ಹೆಸರಿಸಿದ್ದಾರೆ. ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ ತಂಡವನ್ನು ಮುನ್ನಡೆಸುತ್ತಿರುವ ರಿಷಭ್ ಪಂತ್ ಟೆಸ್ಟ್ ತಂಡದ ಮುಂದಿನ ನಾಯಕನಾಗಲು ಸೂಕ್ತ ಅಭ್ಯರ್ಥಿ ಎಂದಿದ್ದಾರೆ ಯುವರಾಜ್ ಸಿಂಗ್. ರಿಷಭ್ ಪಂತ್ ಕ್ರಿಕೆಟ್‌ನ ಸುದೀರ್ಘ ಮಾದರಿಯಲ್ಲಿ ಉತ್ತಮವಾಗಿ ಮುನ್ನಡೆಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಹಾಗಾಗಿ ಅವರನ್ನು ಲೀಡರ್‌ಶಿಪ್ ಗ್ರೂಪ್‌ನಲ್ಲಿ ಸೇರಿಸಿಕೊಂಡು ಕಾಲಾವಕಾಶವನ್ನು ನೀಡಬೇಕು" ಎಂದಿದ್ದಾರೆ ಯುವರಾಜ್ ಸಿಂಗ್.

ಈ ಕಾಲ ಸರಿದು ಹೋಗಲಿದೆ: ಕೊಹ್ಲಿ ಫಾರ್ಮ್ ಬಗ್ಗೆ ಆಕಾಶ್ ಚೋಪ್ರ ಮಾತುಈ ಕಾಲ ಸರಿದು ಹೋಗಲಿದೆ: ಕೊಹ್ಲಿ ಫಾರ್ಮ್ ಬಗ್ಗೆ ಆಕಾಶ್ ಚೋಪ್ರ ಮಾತು

ಟೀಮ್ ಇಂಡಿಯಾ ಟೆಸ್ಟ್ ನಾಯಕನಾಗಿದ್ದ ವಿರಾಟ್ ಕೊಹ್ಲಿ ಕಳೆದ ದಕ್ಷಿಣ ಆಫ್ರಿಕಾ ಪ್ರವಾಸದ ಸಂದರ್ಭದಲ್ಲಿ ಸರಣಿ ಸೋತ ಬಳಿಕ ಟೆಸ್ಟ್ ನಾಯಕತ್ವವನ್ನು ಕೂಡ ತೊರೆದಿದ್ದರು. ಹೀಗಾಗಿ ನಂತರ ಸೀಮಿತ ಓವ್‌ಗಳ ನಾಯಕನಾಗಿದ್ದ ರೋಹಿತ್ ಶರ್ಮಾ ಅವರನ್ನೇ ಟೆಸ್ಟ್ ತಂಡಕ್ಕೂ ನಾಯಕನನ್ನಾಗಿ ನೇಮಕಗೊಳಿಸಲಾಗಿದೆ. ಆದರೆ 34ರ ಹರೆಯದ ರೋಹಿತ್ ಶರ್ಮಾ ಮೂರು ಮಾದರಿಯಲ್ಲಿಯೂ ನಾಯಕನಾಗಿ ಯಾವ ರೀತಿ ಮುನ್ನಡೆಸಲಿದ್ದಾರೆ ಎಂಬುದು ಕಾದು ನೋಡಬೇಕಿದೆ.

ಇನ್ನು ರೋಹಿತ್ ಶರ್ಮಾ ಅವರನ್ನು ಟೆಸ್ಟ್ ತಂಡದ ನಾಯಕನನ್ನಾಗಿ ನೇಮಕಗೊಳಿಸಿದ ಸಂದರ್ಭದಲ್ಲಿ ಆಯ್ಕೆ ಸಮಿತಿಯ ಮುಖ್ಯಸ್ಥ ಚೇತನ್ ಶರ್ಮಾ ಸ್ಪಷ್ಟವಾಗಿ ಒಂದು ಮಾತನ್ನು ಹೇಳಿದ್ದರು. ರೋಹಿತ್ ಶರ್ಮಾ ಅವರನ್ನು ಅಲ್ಪ ಕಾಲದ ನಾಯಕನನ್ನಾಗಿ ನೇಮಕಗೊಳಿಸಲಾಗಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಹಾಗಿದ್ದರೂ ಯುವರಾಜ್ ಸಿಂಗ್ ಯುವ ಆಟಗಾರ ರಿಷಭ್ ಪಂತ್ ಅವರನ್ನು ಭವಿಷ್ಯದ ನಾಯಕನನ್ನಾಗಿ ಬೆಳೆಸುವ ಅಗತ್ಯವಿದೆ ಎಂದು ಹೇಳಿಕೆ ನೀಡಿದ್ದಾರೆ. ಗಮನಾರ್ಹ ಸಂಗತಿಯೆಂದರೆ ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಜಸ್ಪ್ರೀತ್ ಬೂಮ್ರಾಗೆ ಉಪನಾಯಕನ ಜವಾಬ್ಧಾರಿ ನೀಡಲಾಗಿತ್ತು.

RCB vs RR: ಮೈದಾನದಲ್ಲೇ ಮಾತಿನ ಚಕಮಕಿ: ಹರ್ಷಲ್ ಹಾಗೂ ಪರಾಗ್ ವಾಗ್ವಾದಕ್ಕೆ ಕಾರಣವೇನು?RCB vs RR: ಮೈದಾನದಲ್ಲೇ ಮಾತಿನ ಚಕಮಕಿ: ಹರ್ಷಲ್ ಹಾಗೂ ಪರಾಗ್ ವಾಗ್ವಾದಕ್ಕೆ ಕಾರಣವೇನು?

"ನೀವು ಖಮಡಿತವಾಗಿಯೂ ಒಬ್ಬರನ್ನು ನಾಯಕನ್ನಾಗಿ ಸಿದ್ದಗೊಳಿಸಬೇಕಿದೆ. ಮಾಹಿ ಕೂಡ ನಾಯನಾಗಿ ಆಯ್ಕೆಯಾಗಿದ್ದಾಗ ಏನೂ ಆಗಿರಲಿಲ್ಲ. ಆತನನ್ನು ಕೂಡ ನಾಯಕನನ್ನಾಗಿ ಬೆಳೆಸಲಾಯಿತು. ಕೀಪರ್ ಯಾವಾಗಲೂ ಉತ್ತಮವಾಗಿ ಯೋಚಿಸುವವನಾಗಿರುತ್ತಾನೆ. ಯಾಕೆಂದರೆ ಮೈದಾನದ ಕೋನದ ನೋಟಗಳು ಆತನಿಗೆ ಸ್ಪಷ್ಟವಾಗಿರುತ್ತದೆ" ಎಂದಿದ್ದಾರೆ ಯುವರಾಜ್ ಸಿಂಗ್.

Umran Malik ಭವಿಷ್ಯದಲ್ಲಿ ಭಾರತಕ್ಕೆ ದೊಡ್ಡ ಶಕ್ತಿ | Oneindia Kannada

"ನೀವು ಯುವ ಆಟಗಾರನನ್ನು ಭವಿಷ್ಯದ ನಾಯಕನ ದೃಷ್ಟಿಯಿಂದ ಆಯ್ಕೆ ಮಾಡಬೇಕಿದೆ. ಆತನಿಗೆ ಸಮಯಾವಕಾಶವನ್ನು ನೀಡಬೇಕಿದ್ದು ಮೊದಲ ಆರು ತಿಂಗಳು ಅಥವಾ ಒಂದು ವರ್ಷಗಳ ಕಾಲ ಆತನಿಂದ ಪವಾಡವನ್ನು ನಿರೀಕ್ಷಿಸುವುದು ಸರಿಯಲ್ಲ. ಯುವ ಆಟಗಾರರ ಮೇಲೆ ನಂಬಿಕೆಯನ್ನು ಇರಿಸಿಕೊಳ್ಳಬೇಕು ಎಂಬುದು ನನ್ನ ಭಾವನೆ" ಎಂದಿದ್ದಾರೆ ಯುವರಾಜ್ ಸಿಂಗ್.

Story first published: Thursday, April 28, 2022, 9:59 [IST]
Other articles published on Apr 28, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X