ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಗೇಲ್ ಹಿಂದಿಯಲ್ಲಿ 'ಖಡಕ್' ಡೈಲಾಗ್: ಫನ್ನಿ ವೀಡಿಯೋ ಶೇರ್ ಮಾಡಿದ ಯುವಿ

Yuvraj Singh Shares Funny Video Of Chris Gayles Failed Attempt At Hindi

ವೆಸ್ಟ್‌ ಇಂಡೀಸ್‌ನ ದಿಗ್ಗಜ ಆಟಗಾರ ಕ್ರಿಸ್‌ ಗೇಲ್ ಮೈದಾನದ ಒಳಗೆ ತಮ್ಮ ಅಬ್ಬರದಾಟಕ್ಕೆ ಯಾವಾಗಲು ಸುದ್ದಿಯಾಲ್ಲಿರುತ್ತಾರೆ. ಅದೇ ರೀತಿ ತಮ್ಮ ತಮಾಷೆಯ ವ್ಯಕ್ತಿತ್ವದಿಂದ ಮೈದಾನದ ಆಚೆಗೂ ಸದ್ದು ಮಾಡುತ್ತಿರುತ್ತಾರೆ. ಅದಕ್ಕೆ ಪೂರಕವಾಗಿ ಯುವರಾಜ್ ಸಿಂಗ್ ಗೇಲ್ ಅವರ ಫನ್ನಿ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ.

ಯುವರಾಜ್ ಸಿಂಗ್ ಮತ್ತು ಗೆಳೆಯರು ಈ ವೀಡಿಯೋದಲ್ಲಿ ಕ್ರಿಸ್‌ ಗೇಲ್‌ಗೆ ಒಂದು ಹಿಂದಿ ಡೈಲಾಗ್‌ಅನ್ನು ನೀಡುತ್ತಾರೆ. ಈ ಡೈಲಾಗ್‌ಅನ್ನು ಕ್ರಿಸ್‌ಗೇಲ್ ತಮ್ಮದೇ ಶೈಲಿಯಲ್ಲಿ ಹೇಳಿ ಸುತ್ತಲಿನ ಗೆಳೆಯರನ್ನು ನಗಿಸುತ್ತಾರೆ.

ಕಾಮೆಂಟರಿ ಪ್ಯಾನೆಲ್‌ನಿಂದ ಕಿಕ್‌ಔಟ್: ಟ್ವಿಟ್ಟರ್‌ನಲ್ಲಿ ಮಂಜ್ರೇಕರ್ ಭಾವುಕ ಸಂದೇಶಕಾಮೆಂಟರಿ ಪ್ಯಾನೆಲ್‌ನಿಂದ ಕಿಕ್‌ಔಟ್: ಟ್ವಿಟ್ಟರ್‌ನಲ್ಲಿ ಮಂಜ್ರೇಕರ್ ಭಾವುಕ ಸಂದೇಶ

ಟೀಮ್ ಇಂಡಿಯಾದ ಮಾಜಿ ಸ್ಪೋಟಕ ಆಟಗಾರ ಯುವರಾಜ್ ಸಿಂಗ್ ಕ್ರಿಸ್‌ಗೇಲ್‌ಗೆ 'ಕಾನ್ಫಿಡೆನ್ಸ್ ಪೇರಾ, ಕಬರ್ ಬನೇಗಿ ತೇರಿ' ಎಂಬ ಡೈಲಾಗ್‌ ಅನ್ನು ನೀಡಿದ್ದರು. ಈ ಡೈಲಾಗ್‌ಅನ್ನು ಅಬ್ಬರಿಸಿಕೊಂಡು ಆರಂಭ ಮಾಡಿದ ಕ್ರಿಸ್‌ಗೇಲ್ ಕೊನೆಗೆ ತಡವರಿಸಿ ತಮಾಷೆಗೀಡಾದರು.

ಈ ಸನ್ನಿವೇಶವನ್ನು ಯುವರಾಜ್ ಸಿಂಗ್ ಜೊತೆಗೆ ಸ್ವತಃ ಕ್ರಿಸ್‌ಗೇಲ್ ಕೂಡ ನಕ್ಕು ಆನಂದಿಸಿದ್ದಾರೆ. ಐಪಿಎಲ್ ಹಿನ್ನೆಲೆಯಲ್ಲಿ ಕ್ರಿಸ್ ಗೇಲ್ ಭಾರತಕ್ಕೆ ಆಗಮಿಸಿದ್ದರು. ಐಪಿಎಲ್‌ನಲ್ಲಿ ಕ್ರಿಸ್‌ ಗೇಲ್ ಕಿಂಗ್ಸ್‌ ಇಲವೆನ್ ಪಂಜಾಬ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಸದ್ಯ ಐಪಿಎಲ್ ಅನ್ನು ಏಪ್ರಿಲ್ 15ರ ವರೆಗೆ ಮುಂದೂಡಲಾಗಿದೆ.

ಮತ್ತೊಂದೆಡೆ ಯುವರಾಜ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯವನ್ನು ಹೇಳಿದ್ದರು. ಇದೀಗ ರೋಡ್ ಸೇಫ್ಟಿ ಚಾಂಪಿಯನ್‌ಷಿಪ್‌ನಲ್ಲಿ ಇಂಡಿಯಾ ಲೆಜೆಂಡ್ಸ್‌ ತಂಡದ ಭಾಗವಾಗಿದ್ದಾರೆ ಯುವರಾಜ್ ಸಿಂಗ್. ಕೊರೊನಾ ಭೀತಿ ಹಿನ್ನೆಲೆಯಲ್ಲಿ ಈ ಟೂರ್ನಿಯನ್ನು ಕೂಡ ಸದ್ಯ ಮುಂದೂಡಲಾಗಿದೆ.

Story first published: Monday, March 16, 2020, 14:05 [IST]
Other articles published on Mar 16, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X