ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮೊಬೈಲ್ ಫೋನ್ ಇಲ್ಲದ ಸಮಯದ ಫೋಟೋ ಹಂಚಿಕೊಂಡ ಯುವರಾಜ್ ಸಿಂಗ್

Yuvraj Singh Shares Old Picture On Social Media

ಕೊರೊನಾ ವೈರಸ್‌ನ ಕಾರಣದಿಂದಾಗಿ ಮನೆಯಲ್ಲೇ ಸಮಯ ಕಳೆಯುತ್ತಿರುವ ಕ್ರಿಕೆಟಿಗರು ಹಳೆಯ ನೆನಪುಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಅದೆಷ್ಟೋ ವಿಚಾರಗಳನ್ನು ಅಭಿಮಾನಿಗಳ ಜೊತೆಗೆ ಸಂವಹನವನ್ನು ನಡೆಸುತ್ತಾ ಹೇಳಿದ್ದಾರೆ. ಆದರೆ ಟೀಮ್ ಇಂಡಿಯಾ ಮಾಜಿ ಸ್ಪೋಟಕ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ ಹಾಕಿದ ಒಂದು ಫೋಟೋ ಅಭಿಮಾನಿಗಳಿಗೆ ರೋಮಾಂಚನಗೊಳ್ಳುವಂತೆ ಮಾಡಿದೆ.

ಆ ಫೋಟೋ ಯಾವುದೋ ಮ್ಯಾಚ್‌ನದ್ದಲ್ಲ. ಬದಲಾಗಿ ಸರಣಿಯೊಂದಕ್ಕೂ ಮುನ್ನ ಪ್ರವಾಸದ ಸಂದರ್ಭದಲ್ಲಿ ಫೋನ್‌ನಲ್ಲಿ ಮಾತನಾಡುತ್ತಿರುವ ದೃಶ್ಯ. ಆದರಲ್ಲೂ ವಿಶೇಷವೇನೆಂದರೆ ಟೀಮ್ ಇಂಡಿಯಾದ ಖ್ಯಾತ ಆಟಗಾರರು ಸಾರ್ವಜನಿಕ ದೂರವಾಣಿಯಲ್ಲಿ ಮಾತನಾಡುತ್ತ ಇರುವ ಫೋಟೋ ಇದು. ಹೀಗಾಗಿ ಈ ಅಪರೂಪದ ಫೋಟೋ ವಿಶೇಷವೆನಿಸಿದೆ.

ಸತ್ಯ ಮಾತನಾಡಿದ್ದಕ್ಕೆ ಹುಚ್ಚನೆನಿಸಿಕೊಂಡಿದ್ದೆ: ಪಾಕ್ ಮಾಜಿ ನಾಯಕಸತ್ಯ ಮಾತನಾಡಿದ್ದಕ್ಕೆ ಹುಚ್ಚನೆನಿಸಿಕೊಂಡಿದ್ದೆ: ಪಾಕ್ ಮಾಜಿ ನಾಯಕ

ಈ ಫೋಟೋಗೆ ಯುವರಾಜ್ ಸಿಂಗ್ ತಮಾಷೆಯ ಅಡಿಬರಹವನ್ನೂ ಹಾಕಿದ್ದಾರೆ. "ಹೆತ್ತವರು ನಿಮ್ಮ ಮೊಬೈಲ್ ಫೋನ್‌ ಬಿಲ್ಲ ಕಟ್ಟದಿದ್ದಾಗ" ಎಂದು ಫೋಟೊವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಟೀಮ್ ಇಂಡಿಯಾದ ಆಟಗಾರರಾದ ಆಶಿಶ್ ನೆಹ್ರಾ, ವೀರೇಂದ್ರ ಸೆಹ್ವಾಗ್, ವಿವಿಎಸ್ ಲಕ್ಷ್ಮಣ್ ಮತ್ತು ಯುವರಾಜ್ ಸಿಂಗ್ ಈ ಚಿತ್ರದಲ್ಲಿದ್ದಾರೆ.

2001ರಲ್ಲಿ ಶ್ರೀಲಂಕಾದಲ್ಲಿ ನಡೆದ ತ್ರಿಕೋನ ಸರಣಿಯ ಸಂದರ್ಭದ ಫೋಟೊಯಿದು. ಈ ನ್ಯೂಜಿಲೆಂಡ್ ಈ ತ್ರಿಕೋನ ಸರಣಿಯಲ್ಲಿ ಭಾಗಿಯಾಗಿದ್ದ ಮತ್ತೊಂದು ತಂಡ. ಬಳಿಕ ಶ್ರೀಲಂಕಾ ಜೊತೆಗೆ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲೂ ಭಾರತ ಪಾಲ್ಗೊಂಡಿತ್ತು. ಸನತ್ ಜಯಸೂರ್ಯ ನೇತೃತ್ವದ ಶ್ರೀಲಂಕಾ ಎರಡೂ ಸರಣಿಗಳನ್ನು ಗೆದ್ದುಕೊಂಡಿತ್ತು.

ಕುಂಬ್ಳೆಗೆ 'ಹತ್ತು ವಿಕೆಟ್' ದಾಖಲೆ ತಪ್ಪಿಸಲು ಮಾಡಿದ ತಂತ್ರ ಬಹಿರಂಗ ಪಡಿಸಿದ ವಾಸಿಮ್ ಅಕ್ರಮ್ಕುಂಬ್ಳೆಗೆ 'ಹತ್ತು ವಿಕೆಟ್' ದಾಖಲೆ ತಪ್ಪಿಸಲು ಮಾಡಿದ ತಂತ್ರ ಬಹಿರಂಗ ಪಡಿಸಿದ ವಾಸಿಮ್ ಅಕ್ರಮ್

ಈ ಫೋಟೋ ತೆಗೆದ ಮರುದಿನದ ಪಂದ್ಯದಲ್ಲಿ ವೀರೇಂದ್ರ ಸೆಹ್ವಾಗ್ ತಮ್ಮ ವೃತ್ತಿ ಜೀವನದ ಪ್ರಪ್ರಥಮ ಶತಕವನ್ನು ದಾಖಲಿಸಿದ್ದರು. ನ್ಯೂಜಿಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ವಿರೇಂದ್ರ ಸೆಹ್ವಾಗ್ ಈ ಸಾಧನೆಯನ್ನು ಮಾಡಿದ್ದರು.

Story first published: Monday, May 25, 2020, 18:13 [IST]
Other articles published on May 25, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X