ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ವಿಂಡೀಸ್: ಟೀಮ್ ಇಂಡಿಯಾದ ಮೇಲೆ ಗುಡುಗಿದ ಯುವರಾಜ!

Yuvraj Singh slams India’s fielding effort against West Indies in first T20I

ಹೈದರಾಬಾದ್, ಡಿಸೆಂಬರ್ 7: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿನ ಭಾರತದ ಫೀಲ್ಡಿಂಗ್‌ಗೆ ಭಾರತದ ಮಾಜಿ ಆಟಗಾರ ಯುವರಾಜ್ ಸಿಂಗ್ ಗುಡುಗಿದ್ದಾರೆ. ಭಾರತ ಇವತ್ತು ಫೀಲ್ಡಿಂಗ್‌ನಲ್ಲಿ ಭಾರೀ ಬಡವಾಗಿತ್ತು,' ಎಂದು ಯುವಿ ಟೀಕಿಸಿದ್ದಾರೆ.

ಸೈನ್ ಮಾಡಿ ಕೆಣಕಿದ ಕೆಸ್ರಿಕ್‌ಗೆ ಬ್ಯಾಟ್‌ನಿಂದಲೇ ಉರಿಸಿದ ಕೊಹ್ಲಿ: ವಿಡಿಯೋಸೈನ್ ಮಾಡಿ ಕೆಣಕಿದ ಕೆಸ್ರಿಕ್‌ಗೆ ಬ್ಯಾಟ್‌ನಿಂದಲೇ ಉರಿಸಿದ ಕೊಹ್ಲಿ: ವಿಡಿಯೋ

ಹೈದರಾಬಾದ್‌ನ ರಾಜೀವ್‌ ಗಾಂಧಿ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಶುಕ್ರವಾರ (ಡಿಸೆಂಬರ್ 6) ಭಾರತ vs ವೆಸ್ಟ್ ಇಂಡೀಸ್ 1ನೇ ಟಿ20ಯಲ್ಲಿ ಟೀಮ್ ಇಂಡಿಯಾ, 6 ವಿಕೆಟ್ ರೋಚಕ ಗೆಲುವನ್ನಾಚರಿಸಿತು. ಆದರೆ ವಿಂಡೀಸ್ ಭರ್ಜರಿ ಆಟದ ಪರಿಣಾಮ, ಭಾರತಕ್ಕೆ ಗೆಲುವು ಭಾರೀ ಸವಾಲಿನದ್ದು ಆಗಿತ್ತು ಕೂಡ. ಭಾರತ ತಂಡದ ವಿರುದ್ಧ ಯುವರಾಜ್ ಗುಡುಗಾಡಿದ್ದು ಇದೇ ಕಾರಣಕ್ಕೆ.

ಭಾರತ vs ವೆಸ್ಟ್‌ ಇಂಡೀಸ್ ಟಿ20: ರೋಚಕ ಕಾದಾಟದಲ್ಲಿ ಭರ್ಜರಿಯಾಗಿ ಗೆದ್ದ ಟೀಂ ಇಂಡಿಯಾಭಾರತ vs ವೆಸ್ಟ್‌ ಇಂಡೀಸ್ ಟಿ20: ರೋಚಕ ಕಾದಾಟದಲ್ಲಿ ಭರ್ಜರಿಯಾಗಿ ಗೆದ್ದ ಟೀಂ ಇಂಡಿಯಾ

ಭಾರತ ಕ್ರಿಕೆಟ್‌ ತಂಡದ ಬಗ್ಗೆ ಅಪಾರ ಪ್ರೀತಿ-ಕಾಳಜಿ ಇರುವ ಯುವಿ, ತಂಡಕ್ಕೆ ಆಗೀಗ ಸಲಹೆಗಳನ್ನು ಕೊಡುತ್ತಾ ಬರುತ್ತಿದ್ದಾರೆ. ಶುಕ್ರವಾರದ ವಿಂಡೀಸ್-ಭಾರತ ಟಿ20 ಕುರಿತೂ ಯುವಿ ಟ್ವೀಟ್ ಮಾಡಿದ್ದಾರೆ.

ಸೋಲನ್ನು ಸಮೀಪಕ್ಕೆ ಸೆಳೆದುಕೊಂಡಿದ್ದ ಭಾರತ

ಸೋಲನ್ನು ಸಮೀಪಕ್ಕೆ ಸೆಳೆದುಕೊಂಡಿದ್ದ ಭಾರತ

ನಾಯಕ ವಿರಾಟ್ ಕೊಹ್ಲಿ (94 ರನ್), ಕೆಎಲ್ ರಾಹುಲ್ (62) ಸ್ಫೋಟಕ ಅರ್ಧ ಶತಕದ ನೆರವಿನಿಂದ ಭಾರತ ತಂಡ, ವಿಂಡೀಸ್‌ ನೀಡಿದ್ದ 208 ರನ್ ಗುರಿಯನ್ನು ತಲುಪಿ ಸಂಭ್ರಮಿಸಿದ್ದು ನಿಜ. ಆದರೆ ವಿಂಡೀಸ್ ಇನ್ನಿಂಗ್ಸ್‌ನಲ್ಲಿ ಭಾರತ ಬಹಳಷ್ಟು ಕ್ಯಾಚ್‌ಗಳನ್ನು ಕೈಚೆಲ್ಲಿ ಸೋಲನ್ನು ಸಮೀಪಕ್ಕೆ ಸೆಳೆದುಕೊಂಡಿದ್ದೂ ಅಷ್ಟೇ ನಿಜ.

ರನ್ ಕೊಟ್ಟಿದ್ದೀರಿ, ರನ್ ಹೊಡೀಲೇಬೇಕು

ರನ್ ಕೊಟ್ಟಿದ್ದೀರಿ, ರನ್ ಹೊಡೀಲೇಬೇಕು

'ಭಾರತ (ತಂಡ) ಇವತ್ತು ಫೀಲ್ಡಿಂಗ್ ವಿಚಾರದಲ್ಲಿ ತುಂಬಾ ದುರ್ಬಲವಾಗಿತ್ತು! ಯುವ ಆಟಗಾರರು ಚೆಂಡನ್ನು ಕೊಂಚ ತಡವಾಗಿ ತಲುಪುತ್ತಿದ್ದಾರೆ. ಇಲ್ಲಿ ಕೊಟ್ಟ ರನ್‌ಗಳೆಲ್ಲ ಯುವ ಆಟಗಾರರಿಂದ ಬರಲಿ,' ಎಂದು ವಿಂಡೀಸ್ ಇನ್ನಿಂಗ್ಸ್‌ ವೇಳೆ ಯುವರಾಜ್ ಟ್ವೀಟ್ ಮಾಡಿದ್ದರು. ಆದರೆ ಭಾರತ ಗೆದ್ದ ಬಳಿಕ ತಂಡದ ಹೋರಾಟವನ್ನು ಶ್ಲಾಘಿಸಿ ಯುವಿ ಮತ್ತೊಂದು ಟ್ವೀಟ್ ಮಾಡಿದ್ದರು.

ಕ್ಯಾಚ್ ಕೈಚೆಲ್ಲಿದ ಸುಂದರ್, ಶರ್ಮಾ

ಕ್ಯಾಚ್ ಕೈಚೆಲ್ಲಿದ ಸುಂದರ್, ಶರ್ಮಾ

ಅಂದ್ಹಾಗೆ, ಕೆರಿಬಿಯನ್ ಇನ್ನಿಂಗ್ಸ್‌ನ 16ನೇ ಓವರ್‌ನಲ್ಲಿ ಶಿಮ್ರಾನ್ ಹೆಟ್ಮೈಯರ್ 44 ರನ್‌ ಗಳಿಸಿದ್ದಾಗ ವಾಷಿಂಗ್ಟನ್ ಸುಂದರ್ ಕ್ಯಾಚ್ ಬಿಟ್ಟಿದ್ದರು. ಅನಂತರ ಹೆಟ್ಮೈಯರ್ 56 ರನ್ ಕೊಡುಗೆಯಿತ್ತರು. ಅದೇ ಓವರ್‌ನಲ್ಲಿ ರೋಹಿತ್ ಶರ್ಮಾ ಕೂಡ 24 ರನ್ ಮಾಡಿದ್ದ ಕೀರನ್ ಪೊಲಾರ್ಡ್ ಕ್ಯಾಚ್ ಕೈಚೆಲ್ಲಿದರು. ಪೊಲಾರ್ಡ್ 19 ಎಸೆತಗಳಿಗೆ 37 ರನ್ ಚಚ್ಚಿದರು.

ರನ್ ಒತ್ತಡ ಹೇರಿದ್ದ ಕೆರಿಬಿಯನ್ನರು

ರನ್ ಒತ್ತಡ ಹೇರಿದ್ದ ಕೆರಿಬಿಯನ್ನರು

ಕೊಹ್ಲಿ ಕೂಡ ಕ್ಯಾಚೊಂದನ್ನು ಡ್ರಾಪ್ ಮಾಡಿದ್ದರು. ಅಲ್ಲದೆ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಮಿಸ್ ಫೀಲ್ಡಿಂಗ್‌ಗಾಗಿ ಎದುರಾಳಿ ವಿಂಡೀಸ್‌ಗೆ ಒಂದಿಷ್ಟು ರನ್ ಕೊಡುಗೆಯಿತ್ತಿತ್ತು. ಇವೆಲ್ಲದರ ಪರಿಣಾಮ ಮೊದಲ ಇನ್ನಿಂಗ್ಸ್‌ನಲ್ಲಿ ವೆಸ್ಟ್ ಇಂಡೀಸ್ 207 ರನ್‌ ಬಾರಿಸಿ ಆತಿಥೇಯರಿಗೆ ಒತ್ತಡ ಹೇರುವಲ್ಲಿ ಯಶಸ್ವಿಯಾಗಿತ್ತು.

Story first published: Saturday, December 7, 2019, 16:19 [IST]
Other articles published on Dec 7, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X