ಕಮ್‌ಬ್ಯಾಕ್‌ ಬಳಿಕ ಧೋನಿ, ಕೊಹ್ಲಿ ಬೆಂಬಲ ಹೇಗಿತ್ತು: ವಿವರವಾಗಿ ಬಿಚ್ಚಿಟ್ಟ ಯುವರಾಜ್ ಸಿಂಗ್

ಟೀಮ್ ಇಂಡಿಯಾ ಕಂಡ ಶ್ರೇಷ್ಠ ಆಲ್‌ರೌಂಡರ್ ಯುವರಾಜ್ ಸಿಂಗ್ ಭಾರತ ಟಿ20 ಹಾಗೂ ಏಕದಿನ ವಿಶ್ವಕಪ್ ಗೆಲ್ಲಲು ಪ್ರಮುಖ ಕಾರಣಕರ್ತರಲ್ಲಿ ಒಬ್ಬರು. ಆದರೆ 2011ರಲ್ಲಿ ವಿಶ್ವಕಪ್ ಗೆದ್ದ ಬಳಿಕ ಯುವಿ ಮತ್ತೊಂದು ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುವ ಅವಕಾಶ ದೊರೆಯಲಿಲ್ಲ. 2017ರಿಂದ ತಂಡದಿಂದ ಹೊರಬಿದ್ದ ಎರಡು ವರ್ಷಗಳ ಬಳಿಕ ಕಳೆದ ವರ್ಷ ಯುವಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿಯನ್ನು ಹೇಳಿದ್ದರು.

2011ರ ವಿಶ್ವಕಪ್‌ ಗೆಲುವಿನ ನಂತರ ಯುವರಾಜ್ ಸಿಂಗ್ ಕ್ಯಾನ್ಸರ್‌ನಿಂದ ಬಳಲುತ್ತಿರುವುದು ಪತ್ತೆಯಾಗಿ ಚಿಕಿತ್ಸೆಯ ನಂತರ ಗುಣಮುಖರಾಗಿ ಹೊರಬಂದರು. ಆದರೆ ಆ ಬಳಿಕ ಯುವಿ ಪ್ರದರ್ಶನ ಹಿಂದಿನ ಶ್ರೇಷ್ಠ ಪ್ರದರ್ಶನದಂತಿರಲಿಲ್ಲ. ಹೀಗಾಗಿ ತಂಡದಿಂದ ಯುವರಾಜ್ ಸಿಂಗ್ ಹಲವು ಬಾರಿ ಹೊರಬಿದ್ದಿದ್ದರು.

ವಿಂಡೀಸ್ ವಿರುದ್ಧದ ಟಿ20 ಸರಣಿ ಮುಂದೂಡಿರುವ ನಿರ್ಧಾರ ಪ್ರಕಟಿಸಿದ ಕ್ರಿಕೆಟ್ ಆಸ್ಟ್ರೇಲಿಯಾ

ಆದರೆ ತಂಡಕ್ಕೆ ಮತ್ತೆ ಸೇರ್ಪಡೆಗೊಂಡ ಬಳಿಕ ನಾಯಕ ವಿರಾಟ್ ಕೊಹ್ಲಿ ಹೇಗೆ ತಮ್ಮನ್ನು ಬೆಂಬಲಿಸಿದರು, ಧೋನಿ ಸಹಕಾರ ಹೇಗಿತ್ತು ಎಂಬ ಬಗ್ಗೆ ಯುವಿ ಇದೇ ಮೊದಲ ಬಾರಿಗೆ ತುಟಿಬಿಚ್ಚಿದ್ದಾರೆ.

ಹಿಂದಿನ ಯುವಿಯಾಗಿರಲಿಲ್ಲ

ಹಿಂದಿನ ಯುವಿಯಾಗಿರಲಿಲ್ಲ

ಯುವರಾಜ್ ಸಿಂಗ್ ಕ್ಯಾನ್ಸರ್‌ ಚಿಕಿತ್ಸೆ ಪಡೆದು ಗುಣಮುಖರಾಗಿ ಬಂದ ನಂತರ ಹಿಂದಿನ ತಮ್ಮ ಲಯವನ್ನು ಹೊಂದಿರಲಿಲ್ಲ. ಹಾಗಿದ್ದರೂ ಯುವರಾಜ್ ಸಿಂಗ್ ಇಂಗ್ಲೆಂಡ್ ವಿರುದ್ಧ ತಮ್ಮ ಜೀವನ ಶ್ರೇಷ್ಠ 150 ರನ್ ಸಿಡಿಸಿ ಮಿಂಚಿದ್ದರು. ಆದರೆ 2017ರಲ್ಲಿ ತಮ್ಮ ಕೊನೆಯ ಅಂತಾರಾಷ್ಟ್ರೀಯ ಏಕದಿನ ಪಂದ್ಯವನ್ನು ಆಡಿದ ಬಳಿಕ ತಂಡಕ್ಕೆ ಮತ್ತೆ ಆಯ್ಕೆಯಾಗಲಿಲ್ಲ. ಹೀಗಾಗಿ ಎರಡು ವರ್ಷಗಳ ಕಾಯುವಿಕೆಯ ನಂತರ ಯುವಿ ನಿವೃತ್ತಿ ಘೋಷಿಸಿದರು.

ವಿರಾಟ್ ಇಲ್ಲದೆ ಕಮ್‌ಬ್ಯಾಕ್ ಸಾಧ್ಯವಿರಲಿಲ್ಲ

ವಿರಾಟ್ ಇಲ್ಲದೆ ಕಮ್‌ಬ್ಯಾಕ್ ಸಾಧ್ಯವಿರಲಿಲ್ಲ

ಈ ಸಂದರ್ಭದಲ್ಲಿ ಯುವರಾಜ್ ಸಿಂಗ್ ಕಮ್‌ಬ್ಯಾಕ್ ಸಂದರ್ಭದಲ್ಲಿ ತನ್ನನ್ನು ಬೆಂಬಲಿಸಿದ ನಾಯಕ ವಿರಾಟ್ ಕೊಹ್ಲಿಯನ್ನು ಹೊಗಳಿದ್ದಾರೆ. ವಿರಾಟ್ ಕೊಹ್ಲಿಯ ಬೆಂಬವಿಲ್ಲದಿದ್ದರೆ ನಾನು ಕಮ್‌ಬ್ಯಾಕ್ ಮಾಡಲು ಸಾಧ್ಯವಿರಲಿಲ್ಲ. ಆತನ ಬೆಂಬಲ ನನಗೆ ಸಂಪೂರ್ಣವಾಗಿತ್ತು ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.

ಧೋನಿಯಿಂದ ದೊರೆಯಿತು ಸಂಪೂರ್ಣ ಚಿತ್ರಣ

ಧೋನಿಯಿಂದ ದೊರೆಯಿತು ಸಂಪೂರ್ಣ ಚಿತ್ರಣ

ಆದರೆ ಧೋನಿಯಿಂದ 2019ರ ವಿಶ್ವಕಪ್‌ಗೆ ನನ್ನ ಕ್ರಿಕೆಟ್ ಭವಿಷ್ಯದ ಚಿತ್ರಣ ನನಗೆ ದೊರೆಯಿತು ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ. ಆಯ್ಕೆಗಾರರು ಮುಂದಿನ ವಿಶ್ವಕಪ್‌ಗೆ ನಿನ್ನತ್ತ ಗಮನಿಸುತ್ತಿಲ್ಲ ಎಂದು ಧೋನಿ ತಿಳಿಸಿದ್ದರು. ಆತನಿಂದ ಎಷ್ಟು ಸಾಧ್ಯವೋ ಅದನ್ನು ಆತ ಮಾಡಿದ್ದ ಎಂದು ಧೋನಿಯ ಕುರಿತಾಗಿ ಯುವಿ ಹೇಳಿದ್ದಾರೆ.

ಧೋನಿ ಸಾಕಷ್ಟು ಆತ್ಮವಿಶ್ವಾಸ ತುಂಬಿದ್ದರು

ಧೋನಿ ಸಾಕಷ್ಟು ಆತ್ಮವಿಶ್ವಾಸ ತುಂಬಿದ್ದರು

ಇದೇ ಸಂದರ್ಭದಲ್ಲಿ ಯುವರಾಜ್ ಸಿಂಗ್ 2011ರ ವಿಶ್ವಕಪ್‌ಗೂ ಮುನ್ನ ಧೋನಿ ನನ್ನಲ್ಲಿ ಸಾಕಷ್ಟು ಆತ್ಮವಿಶ್ವಾಸವನ್ನು ತುಂಬದ್ದರು ಎಂದು ಹೇಳಿದ್ದಾರೆ. ನೀನು ನನ್ನ ಪ್ರಮುಖ ಆಟಗಾರ ಎಂದು ಧೋನಿ ಹೇಳುತ್ತಿದ್ದರು. ಆದರೆ ಬಳಿಕ ಖಾಯಿಲೆಯಿಂದ ವಾಪಾಸ್ಸಾದ ಬಳಿಕ ಆಟ ಬದಲಾಯಿತು. ತಂಡದಲ್ಲೂ ಸಾಕಷ್ಟು ಬದಲಾವಣೆಗಳು ಆಯಿತು ಎಂದು ಯುವರಾಜ್ ಸಿಂಗ್ ಹೇಳಿಕೆಯನ್ನು ನೀಡಿದ್ದಾರೆ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Tuesday, August 4, 2020, 19:35 [IST]
Other articles published on Aug 4, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X