ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಮ್ ಇಂಡಿಯಾದಲ್ಲಿ ಅವಕಾಶ ನೀಡದೇ ಕಡೆಗಣಿಸಿದ್ದರ ಬಗ್ಗೆ ಮೌನ ಮುರಿದ ಯುವರಾಜ್ ಸಿಂಗ್

Yuvraj Singh takes a dig at Indian team management over limited opportunities in Test cricket

ಯುವರಾಜ್ ಸಿಂಗ್ ಭಾರತ ಕ್ರಿಕೆಟ್ ಕಂಡ ಸಾರ್ವಕಾಲಿಕ ಶ್ರೇಷ್ಠ ಆಲ್‌ರೌಂಡರ್ ಆಟಗಾರರಲ್ಲಿ ಒಬ್ಬರು. ಟೀಮ್ ಇಂಡಿಯಾ ಪರ ಹಲವಾರು ಅತ್ಯುತ್ತಮ ಇನ್ನಿಂಗ್ಸ್‌ ಆಡಿರುವ ಯುವರಾಜ್ ಸಿಂಗ್ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ. 2007ರ ಟಿ ಟ್ವೆಂಟಿ ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್‌ ಟ್ರೋಫಿಗಳನ್ನು ಟೀಮ್ ಇಂಡಿಯಾ ಜಯಗಳಿಸುವಲ್ಲಿ ಯುವರಾಜ್ ಸಿಂಗ್ ಮಹತ್ವದ ಪಾತ್ರ ನಿರ್ವಹಿಸಿದರು. ಈ ಎರಡೂ ಟೂರ್ನಿಗಳಲ್ಲಿಯೂ ಸಹ ಯುವರಾಜ್ ಸಿಂಗ್ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡರು.

ಯುವಿ ನೋವಿನ ಮಾತು ಕೇಳಿ ಅಭಿಮಾನಿಗಳಿಗೆ ಬೇಸರ | Oneindia Kannada

ಐಪಿಎಲ್ ಇತಿಹಾಸದಲ್ಲಿ ಕೋಟಿ ಕೋಟಿ ಪಡೆದು ಕಳಪೆ ಪ್ರದರ್ಶನ ನೀಡಿದ 5 ಆರ್‌ಸಿಬಿ ಆಟಗಾರರುಐಪಿಎಲ್ ಇತಿಹಾಸದಲ್ಲಿ ಕೋಟಿ ಕೋಟಿ ಪಡೆದು ಕಳಪೆ ಪ್ರದರ್ಶನ ನೀಡಿದ 5 ಆರ್‌ಸಿಬಿ ಆಟಗಾರರು

ಇಷ್ಟೆಲ್ಲಾ ಕೊಡುಗೆ ನೀಡಿರುವ ಯುವರಾಜ್ ಸಿಂಗ್ 2019ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಹೇಳಿದರು. ಏಕದಿನ ಮತ್ತು ಟಿ ಟ್ವೆಂಟಿ ಕ್ರಿಕೆಟ್‍ನಲ್ಲಿ ಹೆಚ್ಚಾಗಿ ಮಿಂಚಿರುವ ಯುವರಾಜ್ ಸಿಂಗ್ ಟೆಸ್ಟ್ ಜರ್ಸಿ ತೊಟ್ಟಿದ್ದು ತೀರಾ ಕಡಿಮೆ. ಹೌದು ಯುವರಾಜ್ ಸಿಂಗ್ ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲಿ ಟೀಮ್ ಇಂಡಿಯಾ ಪರ ಆಡಿರುವ ಒಟ್ಟು ಟೆಸ್ಟ್ ಪಂದ್ಯಗಳ ಸಂಖ್ಯೆ ಕೇವಲ 40. ಈ 40 ಟೆಸ್ಟ್ ಪಂದ್ಯಗಳ ಪೈಕಿ ಯುವರಾಜ್ ಸಿಂಗ್ 3 ಶತಕಗಳು ಮತ್ತು 11 ಅರ್ಧಶತಕಗಳನ್ನೊಳಗೊಂಡಂತೆ 1900 ರನ್ ಗಳಿಸಿದ್ದಾರೆ. ಯುವರಾಜ್ ಸಿಂಗ್ ಟೆಸ್ಟ್ ತಂಡಕ್ಕೆ ಆಯ್ಕೆಯಾದರು ಸಹ ಪಂದ್ಯ ಆಡಿದ್ದಕ್ಕಿಂತ ಅಧಿಕ ಆಟಗಾರನಾಗಿ ಉಳಿದಿದ್ದೇ ಹೆಚ್ಚು.

ಬೀಳ್ಕೊಡುಗೆ ಗೌರವ ಸಿಗದೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾದ 5 ಮಹಾನ್ ಕ್ರಿಕೆಟಿಗರುಬೀಳ್ಕೊಡುಗೆ ಗೌರವ ಸಿಗದೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾದ 5 ಮಹಾನ್ ಕ್ರಿಕೆಟಿಗರು

ಇತ್ತೀಚೆಗೆ ತಮ್ಮ ಟೆಸ್ಟ್ ಕ್ರಿಕೆಟ್ ಜೀವನದ ಕುರಿತು ಮಾತನಾಡಿರುವ ಯುವರಾಜ್ ಟೀಮ್ ಇಂಡಿಯಾದಲ್ಲಿ ಸರಿಯಾದ ಅವಕಾಶ ಸಿಗದೇ ಇರುವುದರ ಕುರಿತು ಪರೋಕ್ಷವಾಗಿ ಹೇಳಿಕೊಂಡಿದ್ದಾರೆ. 'ಬಹುಶಃ ಮುಂದಿನ ಜನ್ಮದಲ್ಲಿ 7 ವರ್ಷಗಳ ಕಾಲ ತಂಡದಲ್ಲಿ ಅಧಿಕ ಆಟಗಾರನಾಗಿ ಇರದಿದ್ದರೆ ಟೀಮ್ ಇಂಡಿಯಾ ಪರ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡುವ ಅವಕಾಶ ಬರಬಹುದು' ಎಂದು ಯುವರಾಜ್ ಸಿಂಗ್ ಟೆಸ್ಟ್ ಕ್ರಿಕೆಟ್‍ನಲ್ಲಿ ಹೆಚ್ಚಿನ ಅವಕಾಶ ಸಿಗದಿದ್ದ ವಿಷಯವನ್ನು ವ್ಯಂಗ್ಯ ರೀತಿಯಲ್ಲಿ ಹೇಳಿಕೊಂಡಿದ್ದಾರೆ.

Story first published: Monday, May 24, 2021, 8:20 [IST]
Other articles published on May 24, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X