ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮತ್ತೆ ಕ್ರಿಕೆಟ್ ಅಂಗಳಕ್ಕೆ ಸಿಕ್ಸರ್ ಕಿಂಗ್ ಯುವಿ! : ಬಿಗ್‌ಬ್ಯಾಷ್ ಲೀಗ್‌ನಲ್ಲಿ ಪಾಲ್ಗೊಳ್ಳುವ ಸಾಧ್ಯತೆ

Yuvraj Singh To Play Big Bash League? Cricketers Manager Confirms He Is Looking For An Australian Club

ಟೀಮ್ ಇಂಡಿಯಾದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿ ಒಂದು ವರ್ಷವೇ ಕಳೆದಿದೆ. ಆದರೆ ಅದಾದ ಬಳಿಕ ಯುವಿ ವಿದೇಶಿ ಲೀಗ್‌ಗಳಲ್ಲಿ ಕಣಕ್ಕಿಳಿದಿದ್ದರು. ಈಗ ಮತ್ತೊಂದು ಖ್ಯಾತ ಲೀಗ್‌ನಲ್ಲಿ ಯುವಿ ಕಣಕ್ಕಿಳಿಯುವ ಬಗ್ಗೆ ಮಹತ್ವದ ಬೆಳವಣಿಗೆಗಳು ನಡೆಯುತ್ತಿದೆ.

ಹೌದು ಯುವರಾಜ್ ಸಿಂಗ್ ಆಸ್ಟ್ರೇಲಿಯಾದ ಟಿ20 ಲೀಗ್ ಟೂರ್ನಿ ಬಿಗ್ ಬ್ಯಾಷ್‌ನಲ್ಲಿ ಪಾಲ್ಗೊಳ್ಳುವವತ್ತ ದೃಷ್ಠಿ ನೆಟ್ಟಿದ್ದಾರೆ. ಈ ಬಗ್ಗೆ ಯುವರಾಜ್ ಸಿಂಗ್ ಮ್ಯಾನೇಜರ್ ಪ್ರತಿಕ್ರಿಯಿಸಿದ್ದು ಆಸ್ಟ್ರೇಲಿಯಾ ಕ್ಲಬ್‌ಗಳತ್ತ ಯುವಿ ಗಮನ ನೀಡಿದ್ದಾರೆ ಎಂದು ಹೇಳಿದ್ದಾರೆ. ಅಂದುಕೊಂಡಂತೆಯೇ ನಡೆದರೆ ಈ ವರ್ಷದ ಆವೃತ್ತಿಯಲ್ಲೇ ಯುವಿ ಆಸಿಸ್ ಲೀಗ್‌ನಲ್ಲಿ ಕಣಕ್ಕಿಳಿಯುವುದು ಪಕ್ಕಾ ಎನ್ನಲಾಗಿದೆ.

ಐಪಿಎಲ್ ಆರಂಭಿಕ ಪಂದ್ಯಗಳಿಗೆ ಇಂಗ್ಲೆಂಡ್ ಸ್ಟಾರ್ ಬೆನ್ ಸ್ಟೋಕ್ಸ್ ಅಲಭ್ಯಐಪಿಎಲ್ ಆರಂಭಿಕ ಪಂದ್ಯಗಳಿಗೆ ಇಂಗ್ಲೆಂಡ್ ಸ್ಟಾರ್ ಬೆನ್ ಸ್ಟೋಕ್ಸ್ ಅಲಭ್ಯ

ವಿದೇಶಿ ಲೀಗ್‌ನಲ್ಲಿ ಪಾಲ್ಗೊಳ್ಳಲು ಯುವಿ ಅರ್ಹ

ವಿದೇಶಿ ಲೀಗ್‌ನಲ್ಲಿ ಪಾಲ್ಗೊಳ್ಳಲು ಯುವಿ ಅರ್ಹ

ಅಂತಾರಾಷ್ಟ್ರೀಯ ಕ್ರಿಕೆಟ್ ಹಾಗೂ ಭಾರತೀಯ ಕ್ರಿಕೆಟ್‌ಗೆ ಯುವರಾಜ್ ಸಿಂಗ್ ಸಂಪೂರ್ಣವಾಗಿ ನಿವೃತ್ತಿಯನ್ನು ಘೋಷಿಸಿದ್ದಾರೆ. ಹೀಗಾಗಿ ವಿದೇಶಿ ಲೀಗ್‌ನಲ್ಲಿ ಪಾಳ್ಗೊಳ್ಳಲು ಬೇಕಾದ ಅರ್ಹತೆಯನ್ನು ಯುವರಾಜ್ ಸಿಂಗ್ ಪಡೆದುಕೊಂಡಿದ್ದಾರೆ. ಈಗಾಗಲೇ ಯುವಿ ಗ್ಲೋಬಲ್ ಟಿ20 ಕೆನಡಾ ಹಾಗೂ ಅಬುದಾಬಿ ಟಿ10 ಲೀಗ್‌ನಲ್ಲಿ ಪಾಲ್ಗೊಂಡಿದ್ದರು. ಈ ಬಾರಿಯ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲೂ ಯುವರಾಜ್ ಸಿಂಗ್ ಪಾಳ್ಗೊಳ್ಳುವ ನಿರೀಕ್ಷೆಯಿತ್ತು. ಆದರೆ ಕೊರೊನಾ ವೈರಸ್ ಕಾರಣದಿಂದಾಗಿ ಯುವರಾಜ್ ಸಿಂಗ್ ಮನಸ್ಸು ಬದಲಿಸಿದ್ದರು.

ಸಚಿನ್‌ಗೂ ಬಂದಿತ್ತು ಆಹ್ವಾನ

ಸಚಿನ್‌ಗೂ ಬಂದಿತ್ತು ಆಹ್ವಾನ

2013/14ರ ಆವೃತ್ತಿಗೆ ಸಚಿನ್ ತೆಂಡೂಲ್ಕರ್ ಅವರಿಗೆ ಬಿಗ್ ಬ್ಯಾಷ್‌ನಲ್ಲಿ ಪಾಲ್ಗೊಳ್ಳಲು ಮೊದಲು ಆಹ್ವಾನ ಬಂದಿತ್ತು. ಸಿಡ್ನಿ ಥಂಡರ್ಸ್ ತೆಂಡೂಲ್ಕರ್ ಅವರನ್ನು ಸೇರಿಸಿಕೊಳ್ಳಲು ಸಾಕಷ್ಟು ಯತ್ನಿಸಿತ್ತು. ಆದರೆ ಅದು ಕಾರ್ಯ ರೂಪಕ್ಕೆ ಬರಲು ಯಶಸ್ವಿಯಾಗಿರಲಿಲ್ಲ. ಸಚಿನ್ ತೆಂಡೂಲ್ಕರ್ 2013 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯನ್ನು ಪಡೆದುಕೊಂಡಿದ್ದರು.

ಮೊದಲಿಗನಾಗುತ್ತಾರಾ ಯುವಿ?

ಮೊದಲಿಗನಾಗುತ್ತಾರಾ ಯುವಿ?

ಇದೀಗ ಯುವರಾಜ್ ಸಿಂಗ್ ಬಿಬಿಎಲ್‌ನಲ್ಲಿ ಪಾಲ್ಗೊಂಡರೆ ಆಸ್ಟ್ರೇಲಿಯಾ ಕ್ರಿಕೆಟ್ ಲೀಗ್‌ನಲ್ಲಿ ಪಾಲ್ಗೊಂಡರೆ ಈ ಟೂರ್ನಿಯಲ್ಲಿ ಪಾಲ್ಗೊಳ್ಳುವ ಮೊದಲ ಭಾರತೀಯ ಕ್ರಿಕೆಟಿಗ ಎಂಬ ಖ್ಯಾತಿಗೆ ಒಳಗಾಗದ್ದಾರೆ. ಕೆರಿಬಿಯನ್ ಪ್ರೀಮಿಯರ್ ಲೀಗ್‌ನ ಈ ಬಾರಿಯ ಆವೃತ್ತಿಯಲ್ಲಿ ಪ್ರವೀಣ್ ತಾಂಬೆ ಪಾಲ್ಗೊಂಡಿದ್ದು ಸಿಪಿಎಲ್‌ನಲ್ಲಿ ಭಾಗಿಯಾದ ಮೊದಲ ಭಾರತೀಯ ಕ್ರಿಕೆಟಿಗ ಎಂಬ ಖ್ಯಾತಿಗೆ ಒಳಗಾಗಿದ್ದಾರೆ.

ಬಿಸಿಸಿಐ ಕಠಿಣ ನಿಯಮ

ಬಿಸಿಸಿಐ ಕಠಿಣ ನಿಯಮ

ಭಾರತೀಯ ಕ್ರಿಕೆಟಿಗರು ಅಂತಾರಾಷ್ಟ್ರೀಯ ಕ್ರಿಕೆಟ್ ಹಾಗು ಭಾರತೀಯ ಕ್ರಿಕೆಟ್‌ಗೆ ನಿವೃತ್ತಿಯನ್ನು ಹೇಳದ ಹೊರತು ವಿದೇಶಿ ಲೀಗ್‌ಗಳಲ್ಲಿ ಪಾಲ್ಗೊಳ್ಳುವ ಅವಕಾಶವಿಲ್ಲ. ಹಾಗಿದ್ದೂ ಪಾಲ್ಗೊಂಡರೆ ಅಂತಾ ಆಟಗಾರರು ಮತ್ತೆ ಭಾರತದ ಎಲ್ಲಾ ರೀತಿಯ ಕ್ರಿಕೆಟ್‌ನಲ್ಲಿ ಪಾಳ್ಗೊಳ್ಳಲು ಅನರ್ಹರಾಗಿರುತ್ತಾರೆ. ಹೀಗಾಗಿ ಯುವರಾಜ್ ಸಿಂಗ್ ನಿವೃತ್ತಿಯನ್ನು ಹೇಳಿದ ಬಳಿಕ ವಿದೇಶಿ ಲೀಗ್‌ಗಳತ್ತ ಗಮನವನ್ನು ನೀಡಿದ್ದಾರೆ.

Story first published: Tuesday, September 8, 2020, 9:56 [IST]
Other articles published on Sep 8, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X