ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಗ್ಲೋಬಲ್ ಟಿ20: ಔಟಾಗದೆಯೂ ಮೈದಾನದಿಂದ ನಡೆದ ಯುವಿ-ವಿಡಿಯೋ

Yuvraj Singh walks off despite being not out in first match since retirement

ಒಟ್ಟಾವಾ, ಜುಲೈ 26: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ನೀಡಿದ ಬಳಿಕ ಮೊದಲ ಕ್ರಿಕೆಟ್ ಪಂದ್ಯವನ್ನಾಡಿದ ಭಾರತದ ಸ್ಫೋಟಕ ಬ್ಯಾಟ್ಸ್ಮನ್ ಯುವರಾಜ್ ಸಿಂಗ್ ಪಂದ್ಯವೊಂದರಲ್ಲಿ ಔಟಾಗದೆಯೂ ಔಟ್ ಅನ್ನಿಸಿದರು. ಗ್ಲೋಬಲ್ ಟಿ20 ಕೆನಡಾದಲ್ಲಿ ಯುವಿ ದುರದೃಷ್ಟ ರೀತಿಯಲ್ಲಿ ಔಟಾಗಿದ್ದಾರೆ.

ಸೆಪ್ಟೆಂಬರ್‌ನಿಂದ ಟೀಮ್ ಇಂಡಿಯಾ ಜೆರ್ಸಿಯಲ್ಲಿ ಮಹತ್ವದ ಬದಲಾವಣೆ!ಸೆಪ್ಟೆಂಬರ್‌ನಿಂದ ಟೀಮ್ ಇಂಡಿಯಾ ಜೆರ್ಸಿಯಲ್ಲಿ ಮಹತ್ವದ ಬದಲಾವಣೆ!

ಅಂತಾರಾಷ್ಟ್ರೀಯ ನಿವೃತ್ತಿ ಬಳಿಕ ಮೊದಲ ಪಂದ್ಯವಾಗಿ ಗ್ಲೋಬಲ್ ಟಿ20 ಕೆನಡಾ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಯುವಿ, ಟೊರೊಂಟೋ ನ್ಯಾಷನಲ್ಸ್ ಪರ ಮೈದಾನಕ್ಕಿಳಿದಿದ್ದರು. ರಿಝ್ವಾನ್ ಚೀಮಾ ಅವರ ಸ್ವಿಂಗ್ ಎಸೆತಕ್ಕೆ ಬ್ಯಾಟ್ ಬೀಸಲು ಯುವಿ ಮುಂದಾದಾಗ ಚೆಂಡು ಕೀಪರ್ ಟೋಬಿಯಾಸ್ ವೈಸಿ ಕೈ ತಾಗಿ ಸ್ಟಂಪ್‌ಗೆ ತಾಗಿತು. ಸ್ಕ್ವಾರ್ ಲೆಗ್‌ ಅಂಪೈರ್ ಔಟ್ ತೀರ್ಪು ನೀಡಿದರು.

ಏಷ್ಯಾ XI vs ವರ್ಲ್ಡ್ XI ಟಿ20ಐ ಪಂದ್ಯಗಳಿಗೆ ಬಾಂಗ್ಲಾದೇಶ ಆತಿಥ್ಯ ಏಷ್ಯಾ XI vs ವರ್ಲ್ಡ್ XI ಟಿ20ಐ ಪಂದ್ಯಗಳಿಗೆ ಬಾಂಗ್ಲಾದೇಶ ಆತಿಥ್ಯ

ಅಷ್ಟರಲ್ಲಾಗಲೇ ಯುವಿ ಮೈದಾನದಿಂದ ಹೊರ ನಡೆದರು. ಆಗ ಸಿಕ್ಸರ್ ಕಿಂಗ್ ಯುವಿ 27 ಎಸೆತಗಳಿಗೆ 14 ರನ್ ಬಾರಿಸಿದ್ದರು. ಆದರೆ ಯುವರಾಜ್ ನಿಜಕ್ಕೂ ಔಟ್ ಆಗಿರಲಿಲ್ಲ. ಯುವಿ ಬ್ಯಾಟ್ ತಪ್ಪಿಸಿಕೊಂಡ ಚೆಂಡು ಕೀಪರ್ ಕೈ ತಾಗಿ ಸ್ಟಂಪ್‌ಗೆ ತಾಗುವಾಗ, ಯುವಿ ಇನ್ನೂ ಕ್ರೀಸ್‌ನಲ್ಲೇ ಇದ್ದರು. ಆದರೆ ರಿವ್ಯೂಗಾಗಿ ಕಾಯುವ ಬದಲು ಯುವಿ ಔಟ್ ಎಂದು ತಾನೇ ನಿರ್ಧರಿಸಿ ಮೈದಾನದಿಂದ ಹೊರನಡೆದಾಗಿತ್ತು.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಟೊರೊಂಟೋ ನ್ಯಾಷನಲ್ಸ್, ರೊಡ್ರಿಗೋ ಥಾಮಸ್ 41, ಕ್ಯಾಲಮ್ ಮ್ಯಾಕ್ಲಿಯೋಡ್ 17, ನಾಯಕ ಯುವರಾಜ್ 14, ಹೆನ್ರಿಕ್ ಕ್ಲಾಸೆನ್ 41, ಕೀರನ್ ಪೊಲಾರ್ಡ್ ಅಜೇಯ 30 ರನ್ ಕೊಡುಗೆಯೊಂದಿಗೆ 20 ಓವರ್‌ಗೆ 5 ವಿಕೆಟ್ ನಷ್ಟದಲ್ಲಿ 159 ರನ್ ಮಾಡಿತ್ತು.

ಟಿ20 ಸರಣಿಯಲ್ಲಿ ಭಾರತಕ್ಕೆ ವಿಂಡೀಸ್‌ನ ಈ ಆಟಗಾರರಿಂದ ಅಪಾಯ!ಟಿ20 ಸರಣಿಯಲ್ಲಿ ಭಾರತಕ್ಕೆ ವಿಂಡೀಸ್‌ನ ಈ ಆಟಗಾರರಿಂದ ಅಪಾಯ!

ಗುರಿ ಬೆನ್ನಟ್ಟಿದ ವ್ಯಾಂಕೋವರ್ ನೈಟ್ಸ್‌ಗೆ ನಾಯಕ ಕ್ರಿಕೆಟ್‌ ಗೇಲ್ 12, ಟೋಬಿಯಾಸ್ ವೈಸಿ 20, ಚಾಡ್ವಿಕ್ ವಾಲ್ಟನ್ ಅಜೇಯ 59, ರಾಸ್ಸಿ ವ್ಯಾನ್ ಡೆರ್ ಡುಸೆನ್ ಅಜೇಯ 65 ರನ್‌ ನೆರವಿತ್ತರು. ವ್ಯಾಂಕೋವರ್ 17.2 ಓವರ್‌ಗೆ 2 ವಿಕೆಟ್ ನಷ್ಟದಲ್ಲಿ 162 ರನ್ ಮಾಡಿತು.

Story first published: Friday, July 26, 2019, 11:27 [IST]
Other articles published on Jul 26, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X