ದುಬೈನಲ್ಲಿ ಯುಜವೇಂದ್ರ ಚಹಾಲ್‌ಗೆ ಸಪ್ರೈಸ್ ನೀಡಿದ ಭಾವೀ ಪತ್ನಿ ಧನಶ್ರೀ ವರ್ಮಾ

ರಾಯಲ್​ ಚಾಲೆಂಜರ್ಸ್ ತಂಡದ ಆಟಗಾರ ಯಜುವೇಂದ್ರ ಚಹಲ್​​ ಅಕ್ಟೋಬರ್​ 17ರಂದು ರಾಜಸ್ಥಾನ್ ರಾಯಲ್ಸ್‌ ವಿರುದ್ಧದ ಪಂದ್ಯಕ್ಕೂ ಮುನ್ನ ತಮ್ಮ ಸಂಗಾತಿ ಧನಶ್ರೀ ವರ್ಮಾರಿಂದ ಸಪ್ರ್ರೈಸ್​ ಒಂದನ್ನ ಪಡೆದಿದ್ದಾರೆ.

ತನ್ನ ಭಾವೀ ಪತಿಯನ್ನ ಭೇಟಿಯಾಗಲೆಂದೇ, ಆರ್‌ಸಿಬಿಗೆ ಚಿಯರ್ ಅಪ್ ಮಾಡಲು ಧನಶ್ರೀ ಅಕ್ಟೋಬರ್​ 11ರಂದು ಯುಎಇಗೆ ಬಂದಿಳಿದಿದ್ರು. ಆದರೆ ಕ್ವಾರಂಟೈನ್​ ನಿಯಮಾವಳಿಗಳಿಂದ ಅವರು ಒಂದು ವಾರಗಳ ಕಾಲ ಚಹಲ್ ​ರನ್ನ ಭೇಟಿಯಾಗದೇ ಇರಬೇಕಾಯ್ತು. ಆದರೆ ಕ್ವಾರಂಟೈನ್​ ಮುಗೀತಾ ಇದ್ದಂತೆ ಚಹಲ್​​ರನ್ನ ಭೇಟಿಯಾಗೋ ಮೂಲಕ ಅವರಿಗೆ ಸಪ್ರ್ರೈಸ್​ ನೀಡಿದ್ದಾರೆ.

ಈ ಕುರಿತು ವೀಡಿಯೋವೊಂದನ್ನು ಪೋಸ್ಟ್ ಮಾಡಿರುವ ಆರ್‌ಸಿಬಿಯ ಅಧಿಕೃತ ಟ್ವಿಟರ್ ಖಾತೆಯು ಯುಜಿ ಸಂತೋಷದ ಹಿಂದಿನ ಸೀಕ್ರೆಟ್ ಬಹಿರಂಗಪಡಿಸಿದ್ದಾರೆ. ಧನಶ್ರೀ, ಚಹಾಲ್​​ ವಾಸವಿದ್ದ ಹೋಟೆಲ್​ ರೂಮ್​ ಮುಂದೆ ನಿಂತು ಚಹಲ್‌ಗಾಗಿ ಕಾಯ್ತಿರುವ ವಿಡಿಯೋವನ್ನ ಆರ್​ಸಿಬಿ ತನ್ನ ಟ್ವಿಟರ್​ನಲ್ಲಿ ಪೋಸ್ಟ್ ಮಾಡಿದ್ದು ಯುಜಿಯ ಹರ್ಷಕ್ಕೆ ಇದೇ ಕಾರಣ ಅಂತಾ ಬರೆದಿದೆ.

ಧನಶ್ರೀ ಪಂದ್ಯ ಮುಗಿದ ಬಳಿಕ ಚಹಲ್​ರನ್ನ ಭೇಟಿಯಾಗೋದು ಅಂತಾ ನಿರ್ಧಾರವಾಗಿತ್ತಂತೆ. ಆದರೆ ಚಹಲ್​ರಿಗೆ ಸಪ್ರ್ರೈಸ್​ ಕೊಡಬೇಕು ಅಂತಾ ಪಂದ್ಯದ ಆರಂಭಕ್ಕೂ ಮುನ್ನವೇ ತಮ್ಮ ಭಾವೀ ಪತಿಯನ್ನು ಭೇಟಿ ಮಾಡಿದ್ದಾರೆ.

For Quick Alerts
ALLOW NOTIFICATIONS
For Daily Alerts
 

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Saturday, October 24, 2020, 8:46 [IST]
Other articles published on Oct 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X