ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಯುಜ್ವೇಂದ್ರ ಚಹಾಲ್ ವೃತ್ತಿಜೀವನದ ಗ್ರಾಫ್ ಏರಲು ಕಾರಣ ಈ ನಾಯಕ; ಮಾಜಿ ಕ್ರಿಕೆಟಿಗ

Yuzvendra Chahals Career Graph Rises Because Of Virat Kohli; Former Cricketer Laxman Sivaramakrishnan

ಭಾರತ ಕ್ರಿಕೆಟ್ ತಂಡದ ಸದ್ಯ ಪ್ರಮುಖ ಲೆಗ್ ಸ್ಪಿನ್ನರ್‌ಗಳಲ್ಲಿ ಯುಜ್ವೇಂದ್ರ ಚಹಾಲ್ ಒಬ್ಬರು. ಈತ ತನ್ನ ಟೀಮ್ ಇಂಡಿಯಾದಲ್ಲಿ ಹಲವು ಏರಿಳಿತಗಳನ್ನು ಕಂಡ ಆಟಗಾರ. ಒಂದು ಪಂದ್ಯದಲ್ಲಿ ವಿಕೆಟ್‌ಗಳ ಮೂಲಕ ಮಿಂಚಿದರೆ, ಮತ್ತೊಂದು ಪಂದ್ಯದಲ್ಲಿ ದುಬಾರಿಯಾಗುತ್ತಾರೆ.

ಹೀಗಾಗಿ, ಬಾಂಗ್ಲಾದೇಶ ಪ್ರವಾಸ ಕೈಗೊಂಡಿರುವ ಭಾರತ ತಂಡದಲ್ಲಿ ಚಹಾಲ್ ಹೆಸರು ಇಲ್ಲ. ಆದರೆ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಆಡುತ್ತಿದ್ದಾರೆ.

IPL 2023: ಎಂಎಸ್ ಧೋನಿ ನಂತರ ಈತ ಸಿಎಸ್‌ಕೆ ನಾಯಕನಾಗಬೇಕು; ಮೈಕಲ್ ಹಸ್ಸಿಯಿಂದ ಅಚ್ಚರಿ ಹೆಸರು!IPL 2023: ಎಂಎಸ್ ಧೋನಿ ನಂತರ ಈತ ಸಿಎಸ್‌ಕೆ ನಾಯಕನಾಗಬೇಕು; ಮೈಕಲ್ ಹಸ್ಸಿಯಿಂದ ಅಚ್ಚರಿ ಹೆಸರು!

ಇದೇ ವೇಳೆ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಅವರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆರಂಭಿಕ ಯಶಸ್ಸಿಗೆ ಮಾಜಿ ನಾಯಕ ವಿರಾಟ್ ಕೊಹ್ಲಿಯೊಂದಿಗಿನ ಅವರ ಬಾಂಧವ್ಯ ಕಾರಣ ಎಂದು ಭಾರತದ ಮಾಜಿ ಕ್ರಿಕೆಟಿಗ ಲಕ್ಷ್ಮಣ್ ಶಿವರಾಮಕೃಷ್ಣನ್ ಅಭಿಪ್ರಾಯಪಟ್ಟಿದ್ದಾರೆ.

ಆರ್‌ಸಿಬಿ ತಂಡಕ್ಕಾಗಿ ಒಟ್ಟಿಗೆ ಆಡಿರುವ ಕೊಹ್ಲಿ-ಚಹಾಲ್

ಆರ್‌ಸಿಬಿ ತಂಡಕ್ಕಾಗಿ ಒಟ್ಟಿಗೆ ಆಡಿರುವ ಕೊಹ್ಲಿ-ಚಹಾಲ್

ವಿರಾಟ್ ಕೊಹ್ಲಿ ಮತ್ತು ಯುಜ್ವೇಂದ್ರ ಚಹಾಲ್ ಇವರಿಬ್ಬರು ಭಾರತ ತಂಡ ಹಾಗೂ ಐಪಿಎಲ್‌ನಲ್ಲಿ ಈ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಕ್ಕಾಗಿ ಒಟ್ಟಿಗೆ ಆಡಿದ್ದರು. ಆರ್‌ಸಿಬಿಯ ನಾಯಕನಾಗಿ ವಿರಾಟ್ ಕೊಹ್ಲಿ ಆಗಾಗ್ಗೆ ಚಹಾಲ್ ಅವರಿಂದ ಉತ್ತಮ ಪ್ರದರ್ಶನ ಹೊರತರಲು ನೆರವಾದರು. ಇದು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿಯೂ ಅವಕಾಶ ಸಿಗುವಂತೆ ಮಾಡಿತು ಮತ್ತು ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡಿದರು.

ಆದರೆ, ಕಾಲಾನಂತರದಲ್ಲಿ ಎದುರಾಳಿ ತಂಡಗಳು ಯುಜ್ವೇಂದ್ರ ಚಹಾಲ್ ಅವರ ಸ್ಪಿನ್ ಬೌಲಿಂಗ್‌ ಅನ್ನು ಅರ್ಥಮಾಡಿಕೊಂಡರು ಮತ್ತು ಅವರ ಬೌಲಿಂಗ್ ಮೇಲೆ ಪ್ರಾಬಲ್ಯ ಸಾಧಿಸಲು ಹಲವು ಮಾರ್ಗಗಳನ್ನು ರೂಪಿಸಿಕೊಂಡರು ಎಂದು ಮಾಜಿ ಭಾರತೀಯ ಕ್ರಿಕೆಟಿಗ ಲಕ್ಷ್ಮಣ್ ಶಿವರಾಮಕೃಷ್ಣನ್ ಹೇಳಿದರು.

ಭಾರತ ತಂಡದಲ್ಲಿ ಚಹಾಲ್ ಸ್ಥಾನದ ಬಗ್ಗೆ ಹಲವು ಪ್ರಶ್ನೆ

ಭಾರತ ತಂಡದಲ್ಲಿ ಚಹಾಲ್ ಸ್ಥಾನದ ಬಗ್ಗೆ ಹಲವು ಪ್ರಶ್ನೆ

ಇಂದಿನ ಭಾರತ ತಂಡದಲ್ಲಿ ಚಹಾಲ್ ಸ್ಥಾನದ ಬಗ್ಗೆ ಹಲವು ಪ್ರಶ್ನೆಗಳೆದ್ದಿದ್ದು, ಲೆಗ್ ಸ್ಪಿನ್ನರ್ ಗಮನ ಹರಿಸಬೇಕಾದ ವಿಷಯ ಎಂದು ಮಾಜಿ ಕ್ರಿಕೆಟಿಗ ಲಕ್ಷ್ಮಣ್ ಶಿವರಾಮಕೃಷ್ಣನ್ ತಿಳಿಸಿದ್ದು, ಅವರ ಹೇಳಿಕೆ ಈ ಕೆಳಗಿದೆ.

"ಯುಜ್ವೇಂದ್ರ ಚಾಹಲ್ ವೃತ್ತಿಜೀವನದ ಗ್ರಾಫ್ ಆರಂಭದಲ್ಲಿ ಏರಿತು, ಕಾರಣ ವಿರಾಟ್ ಕೊಹ್ಲಿ. ಭಾರತ ತಂಡ ಮತ್ತು ಆರ್‌ಸಿಬಿ ನಾಯಕರಾಗಿ ಚಹಾಲ್‌ನ ಮನಸ್ಥಿತಿಯನ್ನು ಅರ್ಥಮಾಡಿಕೊಂಡಿದ್ದರು. ಆದರೆ ಯಾವುದೇ ಆಟಗಾರನ ವೃತ್ತಿಜೀವನದ ಪರೀಕ್ಷೆಯ ಭಾಗವೆಂದರೆ ಅವರು ಎದುರಾಳಿ ಆಟಗಾರನಿಂದ ವಿಶ್ಲೇಷಣೆಗೆ ಒಳಪಟ್ಟಾಗ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು".

"ಟಿ20 ಪಂದ್ಯಗಳಲ್ಲಿ ಎದುರಾಳಿ ಬ್ಯಾಟರ್‌ಗಳು ಪ್ರತಿ ಬಾಲ್‌ಗೆ ಹೊಡೆಯಲು ಪ್ರಯತ್ನಿಸುತ್ತಿರುವುದರಿಂದ ಅವರು ಔಟ್ ಆಗುವ ಹೆಚ್ಚಿನ ಅವಕಾಶಗಳಿವೆ. ಆದರೆ 50 ಓವರ್‌ಗಳ ಪಂದ್ಯಗಳಲ್ಲಿ ಎದುರಾಳಿಗಳ ಕೈಯಲ್ಲಿ ವಿಕೆಟ್‌ಗಳಿದ್ದರೆ ಕೊನೆಯ 10 ಓವರ್‌ಗಳಲ್ಲಿ ರನ್ ವೇಗವನ್ನು ಹೆಚ್ಚಿಸಬಹುದು ಎಂದು ಅವರಿಗೆ ತಿಳಿದಿದೆ," ಎಂದು ಲಕ್ಷ್ಮಣ್ ಶಿವರಾಮಕೃಷ್ಣನ್ ಅಭಿಪ್ರಾಯಪಟ್ಟರು.

ಏಕೆ ಸುಲಭವಾಗಿ ಹೊಡೆಯುತ್ತಾರೆಂದು ಸಮಾಲೋಚನೆ ಮಾಡಬೇಕು

ಏಕೆ ಸುಲಭವಾಗಿ ಹೊಡೆಯುತ್ತಾರೆಂದು ಸಮಾಲೋಚನೆ ಮಾಡಬೇಕು

ಬೌಲಿಂಗ್ ತಂತ್ರವು ಆಟದ ಒಂದು ನಿರ್ಣಾಯಕ ಭಾಗವಾಗಿದೆ. ಬೌಲರ್‌ಗಳು ತಮ್ಮನ್ನು ತಾವು ಸುಧಾರಿಸಿಕೊಳ್ಳಲು ಪಿಚ್ ಬಗ್ಗೆ ವಿವರವಾದ ಮಾಹಿತಿ ತಿಳಿದುಕೊಂಡಿರಬೇಕಿ. ಭಾರತದ ತಂಡದ ಮ್ಯಾನೇಜ್‌ಮೆಂಟ್ ಯುಜ್ವೇಂದ್ರ ಚಹಾಲ್ ಅವರೊಂದಿಗೆ ಕುಳಿತು ಬ್ಯಾಟರ್‌ಗಳು ಅವರ ಎಸೆತಗಳನ್ನು ಏಕೆ ಸುಲಭವಾಗಿ ಹೊಡೆಯುತ್ತಾರೆಂದು ಸಮಾಲೋಚನೆ ಮಾಡಬೇಕು ಎಂದು ಲಕ್ಷ್ಮಣ್ ಶಿವರಾಮಕೃಷ್ಣನ್ ತಿಳಿಸಿದರು.

ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ತನ್ನ ಬೌಲಿಂಗ್‌ನಲ್ಲಿ ಹೊಸ ಮಾರ್ಪಾಡುಗಳನ್ನು ಅಳವಡಿಸಿಕೊಳ್ಳಬೇಕೆಂದು ಬಯಸುತ್ತೇನೆ. ಇದರಿಂದಾಗಿ ಚಹಾಲ್ ಭಾರತ ತಂಡಕ್ಕಾಗಿ ವಿಕೆಟ್-ಟೇಕರ್ ಆಗಿ ಮರಳುತ್ತಾನೆ ಎಂದು ಮಾಜಿ ಸ್ಪಿನ್ನರ್ ಹೇಳಿಕೆ ನೀಡಿದ್ದಾರೆ:

ಕಳೆದ ಐಪಿಎಲ್ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಟೇಕರ್ ಬೌಲರ್

ಕಳೆದ ಐಪಿಎಲ್ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಟೇಕರ್ ಬೌಲರ್

ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್‌ಗೆ ಭಾರತ ತಂಡದಲ್ಲಿ ಆಯ್ಕೆಯಾಗಿದ್ದರೂ, ಒಂದೂ ಪಂದ್ಯವಾಡದೆ ಮರಳಿದರು. ಅವರ ಬದಲಿಗೆ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಸ್ಥಾನ ಪಡೆದರು. ಇನ್ನು ನ್ಯೂಜಿಲೆಂಡ್ ವಿರುದ್ಧದ ಇತ್ತೀಚಿನ ಏಕದಿನ ಸರಣಿಯಲ್ಲಿ ಚಹಾಲ್ ಕೇವಲ ಒಂದು ಪಂದ್ಯದಲ್ಲಿ ಬೌಲಿಂಗ್ ಮಾಡಿದರು ಮತ್ತು 10 ಓವರ್‌ಗಳಲ್ಲಿ 67 ರನ್‌ಗಳನ್ನು ವಿಕೆಟ್ ರಹಿತರಾದರು.

ಕಳೆದ ಐಪಿಎಲ್ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಟೇಕರ್ ಬೌಲರ್ ಆಗಿ ಮಿಂಚಿದರು. ಆದರೂ ಬಾಂಗ್ಲಾದೇಶ ವಿರುದ್ಧದ ಏಕದಿನ ತಂಡದಲ್ಲಿ ಯುಜ್ವೇಂದ್ರ ಚಹಾಲ್ ಅವರ ಹೆಸರಿಲ್ಲ. ಹೀಗೆ ಕಡೆಗಣಿಸಿದರೆ ಭವಿಷ್ಯದಲ್ಲಿ ಈ ಲೆಗ್ ಸ್ಪಿನ್ನರ್‌ ಕಥೆ ಏನು ಎಂಬುದು ಕುತೂಹಲವಾಗಿದೆ.

Story first published: Saturday, December 3, 2022, 15:10 [IST]
Other articles published on Dec 3, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X