ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಆಸೀಸ್: ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಚಾಹಲ್ ಕಮಾಲ್!

Yuzvendra Chahal scalps six wickets in Melbourne ODI, scripts history

ಮೆಲ್ಬರ್ನ್, ಜನವರಿ 18: ರಿಸ್ಟ್ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಅವರು ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಭಾರತ-ಆಸ್ಟ್ರೇಲಿಯಾ ನಡುವಿನ 3ನೇ ಮತ್ತು ಕೊನೆಯ ಏಕದಿನ ಪಂದ್ಯದಲ್ಲಿ ಮಾರಕ ಬೌಲಿಂಗ್ ದಾಳಿ ನಡೆಸಿದ್ದ ಚಾಹಲ್ ಇತಿಹಾಸ ನಿರ್ಮಿಸಿದರು.

ಹದಿಹರೆಯದ ಮುಂಬೈ ಕ್ರಿಕೆಟರ್ ಮುಷೀರ್ ಖಾನ್‌ಗೆ 3 ವರ್ಷಗಳ ನಿಷೇಧ!ಹದಿಹರೆಯದ ಮುಂಬೈ ಕ್ರಿಕೆಟರ್ ಮುಷೀರ್ ಖಾನ್‌ಗೆ 3 ವರ್ಷಗಳ ನಿಷೇಧ!

ಶುಕ್ರವಾರ (ಜನವರಿ 18) ಎಂಸಿ ಸ್ಟೇಡಿಯಂನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಯುಜುವೇಂದ್ರ ಚಾಹಲ್ ಭರ್ಜರಿ 6 ವಿಕೆಟ್ ಉರುಳಿಸಿದರು. ಈ ಸಾಧನೆಯಿಂದ ಚಾಹಲ್ ಎಂಸಿಜಿಯಲ್ಲಿ ನಡೆದ ಏಕದಿನ ಇನ್ನಿಂಗ್ಸ್‌ ಒಂದರಲ್ಲಿ ಅಧಿಕ ವಿಕೆಟ್ ಪಡೆದ ಸಾಧಕರಲ್ಲಿ ಮೊದಲ ಸ್ಥಾನಕ್ಕೇರಿದ್ದಾರೆ.

ಶುಕ್ರವಾರದ ಪಂದ್ಯದಲ್ಲಿ ಯುಜುವೇಂದ್ರ ಕ್ರಮವಾಗಿ ಉಸ್ಮಾನ್ ಖವಾಜಾ, ಶಾನ್ ಮಾರ್ಷ್, ಪೀಟರ್ ಹ್ಯಾಂಡ್ಸ್‌ಕಾಂಬ್, ಮಾರ್ಕಸ್ ಸ್ಟೋಯ್ನಿಸ್, ಜೀಯೆ ರಿಚರ್ಡ್ಸನ್ ಮತ್ತು ಆದಮ್ ಝಂಪಾ ವಿಕೆಟ್ ಬಲಿ ಪಡೆದರು. ಹೀಗಾಗಿ ಎಂಸಿಜಿಯಲ್ಲಿ ಈ ಸಾಧನೆ ಮೆರೆದ ಅಗ್ರ ಐವರು ಆಟಗಾರಲ್ಲಿ ಚಾಹಲ್ ಮೊದಲ ಸ್ಥಾನ ಆವರಿಸಿಕೊಂಡಿದ್ದಾರೆ.

ರಣಜಿ ಟ್ರೋಫಿ: ಮನೀಶ್-ಕರುಣ್ ಆಕರ್ಷಕ ಆಟ, ಕರ್ನಾಟಕ ಸೆಮಿಫೈನಲ್‌ಗೆರಣಜಿ ಟ್ರೋಫಿ: ಮನೀಶ್-ಕರುಣ್ ಆಕರ್ಷಕ ಆಟ, ಕರ್ನಾಟಕ ಸೆಮಿಫೈನಲ್‌ಗೆ

42 ರನ್ನಿಗೆ 6 ವಿಕೆಟ್ ಕೆಡವಿ ಮೊದಲ ಸ್ಥಾನದಲ್ಲಿರುವ ಚಾಹಲ್, ಹಿಂದೆ ಬ್ರಾಡ್ ಹಾಗ್ (ಆಸ್ಟ್ರೇಲಿಯಾ-ವೆಸ್ಟ್ ಇಂಡೀಸ್ ವಿರುದ್ಧ) ಅವರ 32/5, ಅಬ್ದುಲ್ ಖಾದಿರ್ (ಪಾಕಿಸ್ತಾನ-ಆಸೀಸ್ ವಿರುದ್ಧ) 53/5, ಶೇನ್ ವಾರ್ನ್ (ಆಸೀಸ್-ನ್ಯೂಜಿಲ್ಯಾಂಡ್ ವಿರುದ್ಧ) 19/4, ಪೀಟರ್ ಟೇಲರ್ (ಆಸೀಸ್-ಶ್ರೀಲಂಕಾ ವಿರುದ್ಧ) 38/4 ವಿಕೆಟ್ ಸಾಧನೆಯನ್ನು ಮೀರಿಸಿದ್ದಾರೆ.

Story first published: Friday, January 18, 2019, 13:49 [IST]
Other articles published on Jan 18, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X