ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರೋಹಿತ್ ಕಾಲೆಳೆಯಲು ಯುಜಿ ಬಳಸಿದ ಫೋಟೋ ನೋಡಿ ಅಭಿಮಾನಿಗಳು ದಂಗು!

Yuzvendra Chahal Trolls Rohit Sharma By Posting A Hilarious Picture

ಟೀಮ್ ಇಂಡಿಯಾ ಉಪನಾಯಕ ಮತ್ತು ಸ್ಪಿನ್ನರ್ ಯುಜುವೇಂದ್ರ ಚಾಹಲ್ ಆತ್ಮೀಯ ಮಿತ್ರರು. ಪರಸ್ಪರ ಒಬ್ಬರಿಗೊಬ್ರು ಕಾಲೆಳೆದುಕೊಳ್ಳುವಲ್ಲಿ ಈ ಇಬ್ಬರೂ ಸಾಕಷ್ಟು ಸುದ್ದಿಯಾಗುತ್ತಾರೆ. ಸಿಕ್ಕ ಸಣ್ಣ ಅವಕಾಶವನ್ನೂ ಇಬ್ಬರೂ ಬಿಡದೆ ಪರಸ್ಪರರನ್ನು ಕಾಲೆಳೆದು ಸಾಮಾಜಿಕ ಜಾಲತಾಣದಲ್ಲಿ ತಮಾಷೆಯಾಗಿ ಕಾಲ ಕಳೆಯುತ್ತಾರೆ.

ಹೀಗೆ ಯುಜುವೇಂದ್ರ ಚಾಹಲ್ ಉಪನಾಯಕ ರೋಹಿತ್ ಶರ್ಮಾ ಅವರ ಕಾಲೆಳೆದ ರೀತಿ ಸಾಕಷ್ಟು ಗಮನ ಸೆಲೆಯುತ್ತಿದೆ. ಅಪ್ಲಿಕೇಶನ್ ಬಳಸಿ ರೋಹಿತ್ ಶರ್ಮಾ ಮುಖವನ್ನು ಹುಡುಗಿಯಂತೆ ಪರಿವರ್ತಿಸಿದ ಫೋಟೋವನ್ನು ಯುಜುವೇಂದ್ರ ಚಾಹಲ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿ ಮಜಾ ತೆಗೆದುಕೊಂಡಿದ್ದಾರೆ.

1 ಪಂದ್ಯ, 3 ತಂಡ ಮತ್ತು 36 ಓವರ್: ಕ್ರಿಕೆಟ್‌ ಲೋಕಕ್ಕೆ ಹೊಸ ಮಾದರಿ ಪರಿಚಯಿಸುತ್ತಿದೆ ದ.ಆಫ್ರಿಕಾ1 ಪಂದ್ಯ, 3 ತಂಡ ಮತ್ತು 36 ಓವರ್: ಕ್ರಿಕೆಟ್‌ ಲೋಕಕ್ಕೆ ಹೊಸ ಮಾದರಿ ಪರಿಚಯಿಸುತ್ತಿದೆ ದ.ಆಫ್ರಿಕಾ

'ತುಂಬಾ ಮುದ್ದಾಗಿ ಕಾಣಿಸುತ್ತಿದ್ದೀರಾ ರೋಹಿತಾ ಶರ್ಮಾ ಭಯ್ಯಾ' ಎಂದು ಚಾಹಲ್ ಈ ಫೋಟೋವನ್ನು ಟ್ವೀಟ್ ಮಾಡಿದ್ದಾರೆ. ರೋಹಿತ್ ಶರ್ಮಾ ಹೆಸರನ್ನು ಕೂಡ ಇಲ್ಲಿ ಬದಲಿಸಿರುವ ಯುಜುವೇಂದ್ರ ಚಾಹಲ್ ಟ್ರೋಲ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಟ್ವಟ್ಟರ್‌ನಲ್ಲಿ ವೈರಲ್ ಆಗಿದೆ.

ಚಾಹಲ್ ಮಾಡಿದ ಈ ಪೋಸ್ಟ್‌ಗೆ ಅಭಿಮಾನಿಗಳು ಮಾತ್ರವಲ್ಲದೆ ಅನುಭವಿ ಸ್ಪಿನ್ನರ್ ಹರ್ಭಜನ್ ಸಿಂಗ್, ದಕ್ಷಿಣ ಆಫ್ರಿಕಾದ ಹರ್ಷಲ್ ಗಿಬ್ಸ್ ಸೇರಿ ಹಲವು ಕ್ರಿಕೆಟಿಗರು ಕೂಡ ಪ್ರತಿಕ್ರಿಯಿಸಿದ್ದಾರೆ. ಲಾಕ್‌ಡೌನ್ ಸಂದರ್ಭದಲ್ಲಿ ಟೀಮ್ ಇಂಡಿಯಾ ಕ್ರಿಕೆಟಿಗರು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸಕ್ರಿಯವಾಗಿದ್ದರು.

ಕೇರಳ ರಣಜಿ ತಂಡದಲ್ಲಿ ವಿವಾದಾತ್ಮಕ ವೇಗಿ ಶ್ರೀಶಾಂತ್‌ಗೆ ಸ್ಥಾನ!ಕೇರಳ ರಣಜಿ ತಂಡದಲ್ಲಿ ವಿವಾದಾತ್ಮಕ ವೇಗಿ ಶ್ರೀಶಾಂತ್‌ಗೆ ಸ್ಥಾನ!

ಇನ್ನು ಯುಜುವೇಂದ್ರ ಚಾಹಲ್ ಟ್ವಿಟ್ಟರ್ ಮತ್ತು ಟಿಕ್‌ಟಾಕ್‌ನಲ್ಲಿ ಸಾಕಷ್ಟು ಆಕ್ಟಿವ್ ಆಗಿ ಅಭಿಮಾನಿಗಳನ್ನು ರಂಜಿಸಿದ್ದಾರೆ. ಸಾಕಷ್ಟು ಹಾಸ್ಯ ಪ್ರವೃತ್ತಿಯ ಚಾಹಲ್ ಅನೇಕ ಫನ್ನಿ ವಿಡಿಯೋಗಳನ್ನು ಟಿಕ್‌ಟಾಕ್‌ನಲ್ಲಿ ಹಂಚಿಕೊಂಡಿದ್ದಾರೆ. ಚಾಹಲ್ ಹಂಚಿಕೊಳ್ಳುವ ವಿಡಿಯೋಗಳಿಗೆ ಪ್ರತಿಕ್ರಿಯಿಸಿದ್ದ ಗೇಲ್ 'ನೀನೊಬ್ಬ ಅತ್ಯಂತ ಕಿರಿಕಿರಿ ಉಂಟುಮಾಡುವ ಮನುಷ್ಯ' ಎಂದು ತಮಾಷೆಯಾಗಿಯೇ ಲೈವ್‌ನಲ್ಲಿ ಹೇಳಿಕೊಂಡಿದ್ದರು.

Story first published: Friday, June 19, 2020, 10:41 [IST]
Other articles published on Jun 19, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X